ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).
………………………………………………….
ಸಂವಿಧಾನ
೧೯೭೧ ಹಾಗೂ ೭೨ರ ಚುನಾವಣೆಗಳಲ್ಲಿನ ಇಂದಿರಾ ಗಾಂಧಿಯವರ ಭರ್ಜರಿ ಜಯವನ್ನು ಹಲವರು ಗುಮಾನಿಯಿಂದ ಎದುರುಗೊಂಡರು, ಭಾರಿ ಪ್ರಮಾಣದ ಚುನಾವಣಾ ಅಕ್ರಮ ನಡೆದಿರುವ ಆರೋಪ ಮಾಡಿದರು. ೧೯೭೫ರಲ್ಲಿ ಇಂದಿರಾ ಸಂವಿಧಾನವನ್ನು ಅಮಾನತುಗೊಳಿಸಿ ತುರ್ತು ಪರಿಸ್ಥಿತಿಯನ್ನು ಹೇರಿದರು.
ಆಗ ದಿಲ್ಲಿಯ ದೊಡ್ಡ ಪುಸ್ತಕ ಮಳಿಗೆಯೊಂದರಲ್ಲಿ ಗ್ರಾಹಕನೊಬ್ಬ ಸಂವಿಧಾನದ ಪ್ರತಿಯನ್ನು ಖರೀದಿಸುವುದಕ್ಕೆ ಬಂದ. ಅಂಗಡಿಯ ಗುಮಾಸ್ತ ಸೂಕ್ಷ್ಮವಾಗಿ ಉತ್ತರಿಸಿದ, “ಕ್ಷಮಿಸಿ ಸಾರ್, ನಮ್ಮಲ್ಲಿ ನಿಯತಕಾಲಿಕೆಗಳ ದಾಸ್ತಾನು ಇಲ್ಲ.”
ಆಘಾತ
೨೨ ಮಾರ್ಚ್ ೧೯೭೯ರಂದು ಇಡೀ ರಾಷ್ಟ್ರವೇ ಶೋಕದಲ್ಲಿ ಮುಳುಗಿತ್ತು. ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ದೇಶ ಕಂಡ ಹಿರಿಯ ಮುತ್ಸದ್ಧಿ, ದೇಶಪ್ರೇಮಿ ಜಯಪ್ರಕಾಶ್ ನಾರಾಯಣರು ಬಾಂಬೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪಾರ್ಲಿಮೆಂಟಿನಲ್ಲಿ ಘೋಷಿಸಿದರು.
ಪ್ರಧಾನಿಯವರು ಮನಮುಟ್ಟುವ ಶ್ರದ್ಧಾಂಜಲಿಯನ್ನು ಓದಿದರು, ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲಾಯ್ತು. ರಾಷ್ಟ್ರಧ್ವಜವನ್ನು ಅರ್ಧದವರೆಗೆ ಇಳಿಸಿ ಗೌರವ ಸೂಚಿಸಲಾಯ್ತು. ಸುದ್ದಿಯು ಕಾಳ್ಗಿಚ್ಚಿನಂತೆ ಇಡೀ ರಾಷ್ಟ್ರಕ್ಕೆ ಹಬ್ಬಿತು. ಆಲ್ ಇಂಡಿಯಾ ರೇಡಿಯೋದಲ್ಲಿ ಶೋಕಗೀತೆಯ ಪ್ರಸಾರವಾಯಿತು. ಶಾಲೆಗಳು, ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಲಾಯ್ತು. ದೇಶ ಪೂರ್ತಿ ಒಂದು ಗಂಟೆಯ ಕಾಲ ಶೋಕವನ್ನಾಚರಿಸಿತು.
ಪ್ರತಿಯೊಬ್ಬರೂ ಈ ಸುದ್ದಿಯಿಂದ ತೀವ್ರವಾಗಿ ಘಾಸಿಗೊಂಡಿದ್ದರು. ಆದರೆ ಆ ವ್ಯಕ್ತಿಗೆ ಮಾತ್ರ ಎಲ್ಲರಿಗಿಂತ ಹೆಚ್ಚಿನ ಪ್ರಮಾಣದ ಆಘಾತವಾಗಿತ್ತು. ಅವರು ಮತ್ಯಾರೂ ಅಲ್ಲ, ಬಾಂಬೆ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಜಯಪ್ರಕಾಶ್ ನಾರಾಯಣ್!
ಶ್ರೀಮಂತರಾಗುವುದು ಹೇಗೆ?
ಮಾರ್ಚ್ ೨೦೦೪ ರಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವವರು How to Get Rich ಎನ್ನುವ ಪುಸ್ತಕವನ್ನು ಪ್ರಕಟಿಸಿದರು.
ಅದಾಗಿ ಕೇವಲ ಐದು ತಿಂಗಳುಗಳ ನಂತರ ಟ್ರಂಪ್ ಒಡೆತನದ ಹೊಟೇಲು, ರೆಸಾರ್ಟುಗಳು, ನಿರ್ಮಾಣ ಸಂಸ್ಥೆಗಳು ದಿವಾಳಿ ಘೋಷಿಸಿದವು!
ನಾನ್ಯಾರು
ನಾಟಕ ಆಸ್ಕರ್ ವೈಲ್ಡ್ ನಿಗೆ ತನ್ನ ನಾಟಕದಲ್ಲಿ ಹಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಯ್ತು.
ನಿರಾಕರಿಸಿದ ವೈಲ್ಡ್ ಹೀಗೆ ಮಾರುತ್ತರ ನೀಡಿದ, “ಈ ಮಾಸ್ಟರ್ ಪೀಸಿನಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ನಾನು ಯಾರು?”
ಸುಧಾರಣೆ
ಅಮೇರಿಕಾ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅಧಿಕಾರವಧಿಯ ಉತ್ತರಾರ್ಧ ಆರ್ಥಿಕ ಹಿಂಜರಿತದಿಂದ ಪೀಡಿತವಾಗಿತ್ತು. ರೊನಾಲ್ಡ್ ರೇಗನ್ ಅಧ್ಯಕ್ಷರಾಗುವವರೆಗೆ ಅಮೇರಿಕಾದ ಆರ್ಥಿಕತೆ ಸುಧಾರಿಸಲೇ ಇಲ್ಲ.
“ನೀವು ಕೆಲಸ ಕಳೆದುಕೊಂದರೆ ಅದು ಆರ್ಥಿಕ ಕುಸಿತ.” ಅಧಿಕಾರ ಸ್ವೀಕರಿಸಿ ರೇಗನ್ ಮಾತನಾಡಿದರು, “ನಿಮ್ಮ ನೆರೆಯ ಮನೆಯವನು ಕೆಲಸ ಕಳೆದುಕೊಂಡರೆ ಅದು ಆರ್ಥಿಕ ಹಿಂಜರಿತ.”
ಮತ್ತೆ ಸುಧಾರಣೆ? “ಜಿಮ್ಮಿ ಕಾರ್ಟರ್ ಕೆಲಸ ಕಳೆದುಕೊಂಡರೆ ಅದು ಸುಧಾರಣೆ!”
………………………………………………….
ಪ್ರಯೋಗಶೀಲ ತತ್ವಜ್ಞಾನಿ
ಇಟಾಲಿಯ ಮಹಿಳೆಯೊಬ್ಬಳು ಐಸಾಕ್ ನ್ಯೂಟನ್ ರನ್ನು ಕೇಳಿದಳಿ, ”ಆತ್ಮ ಅವಿನಾಶಿ ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?”
ನ್ಯೂಟನ್ , ”ಮೇಡಂ, ನಾನೊಬ್ಬ ಪ್ರಯೋಗಶೀಲ ತತ್ವಜ್ಞಾನಿ!”
ಕ್ಲಬ್
ಅಮೇರಿಕಾದ ಹಾಸ್ಯನಟ ಗ್ರೌಚೊ ಮಾರ್ಕ್ಸ್ ಹಾಲಿವುಡ್ಡಿನ ಪ್ರತಿಷ್ಟಿತ ಕ್ಲಬ್ ಒಂದಕ್ಕೆ ಹೀಗೆ ಟೆಲಿಪ್ರಾಮ್ ಕಳಿಸಿದ್ದರು: “ದಯವಿಟ್ಟು ನನ್ನ ರಾಜಿನಾಮೆಯನ್ನು ಒಪ್ಪಿಸಿಕೊಳ್ಳಿ. ನನ್ನನ್ನು ಸದಸ್ಯನನ್ನಾಗಿ ಸೇರಿಸಿಕೊಳ್ಳುವ ಯಾವುದೇ ಕ್ಲಬ್ಬಿಗೆ ನಾನು ಸೇರಯಸುವುದಿಲ್ಲ.”
ಕಾಲಿನ ಉದ್ದ
ಅಬ್ರಹಾಂ ಲಿಂಕನ್ ಇಬ್ಬರು ವ್ಯಕ್ತಿಗಳ ನಡುವಿನ ಒಂದು ವ್ಯಾಜ್ಯವನ್ನು ಪರಿಹರಿಸಲು ಒಪ್ಪಿಕೊಂಡಿದ್ದರು. ಮನುಷ್ಯನ ದೇಹಕ್ಕೆ ಆತನ ಕಾಲುಗಳು ಯಾವ ಅನುಪಾತದಲ್ಲಿರಬೇಕು ಎಂಬ ವಿಚಾರವಾಗಿ ಅವರಿಬ್ಬರೂ ಜಗಳವಾಡುತ್ತಿದ್ದರು. ಲಿಂಕನ್ ಪಕ್ಕ ನ್ಯಾಯಾಧೀಶನ ಹಾಗೆ ಕೂತು ಎರಡೂ ಕಡೆಯ ವಾದವನ್ನು ಆಲಿಸಿದರು.
ಅನಂತರ ಹೇಳಿದರು, ”ನನಗನ್ನಿಸುತ್ತದೆ, ಈ ವಿವಾದ ಸಾಮಾನ್ಯವಾದದ್ದಲ್ಲ. ಈ ಪ್ರಶ್ನೆಯಿಂದಗಿ ಹಿಂದೆ ರಕ್ತದ ಕೋಡಿಯೇ ಹರಿದಿದೆ, ಇದು ಪರಿಹಾರವಾಗದಿದ್ದರೆ ಮುಂದೆಯೂ ಹರಿಯುತ್ತದೆ ಎನ್ನುವುದಕ್ಕೆ ಸಂಶಯವಿಲ್ಲ. ಬಹು ಕಷ್ಟಕರವಾದ ಅವಲೋಕನದಿಂದ ನಾನು ಈ ತೀರ್ಪು ನೀಡುತ್ತಿದ್ದೇನೆ. ಎಲ್ಲಾ ವಾದಗಳನ್ನು ಬದಿಗಿಟ್ಟು ನೋಡಿದರೆ, ಮನುಷ್ಯನ ಕಾಲುಗಳು, ಆತನ ದೇಹದ ಸಮತೋಲನವನ್ನು ಕಾಪಾಡಬೇಕೆಂದಾದರೆ ಕನಿಷ್ಠ ಪಕ್ಷ ದೇಹದಿಂದ ಕೆಳಕ್ಕೆ ನೆಲ ಮುಟ್ಟುವಷ್ಟು ಉದ್ದವಾದರೂ ಇರಬೇಕು.”
ಲೆಕ್ಕಕ್ಕಿಲ್ಲದ ಚುಕ್ಕೆ
ಆಲ್ಬರ್ಟ್ ಐನ್ ಸ್ಟೀನ್ ಭಾಗವಹಿಸಿದ್ದ ವೈಜ್ಞಾನಿಕ ಸಮಾವೇಶವೊಂದರಲ್ಲಿ ಖಗೋಳಶಾಸ್ತ್ರಜ್ಞನೊಬ್ಬ ಘೋಷಿಸಿದ, ”ಒಬ್ಬ ಖಗೋಳ ಶಾಸ್ತ್ರಜ್ಞನಿಗೆ ಮನುಷ್ಯ ಈ ಅನಂತ ವಿಶ್ವದಲ್ಲಿ ಲೆಕ್ಕಕ್ಕಿಲ್ಲದ ಸಣ್ಣ ಚುಕ್ಕೆಯಷ್ಟೇ.”
”ನನಗೂ ಆಗಾಗ ಹಾಗೆ ಅನ್ನಿಸುತ್ತೆ,” ಐನ್ ಸ್ಟೀನ್ ಪ್ರತಿಕ್ರಿಯಿಸಿದರು, ”ಆದರೆ ಆಮೇಲೆ ಅರಿವಾಗುತ್ತೆ: ಲೆಕ್ಕಕ್ಕಿಲ್ಲದ ಆ ಮನುಷ್ಯ ಖಗೋಳ ಶಾಸ್ತ್ರಜ್ಞನೂ ಆಗಿದ್ದಾನಲ್ಲ!”
ಕತ್ತೆ ಜನ್ಮ
ಬೀಚಿಯವರ ಆತ್ಮಕಥನ ‘ನನ್ನ ಭಯಾಗ್ರಫಿ’ಯಲ್ಲಿನ ರಸಪ್ರಸಂಗ:
ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡಾ ಸ್ಮಾರ್ತ ಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುತ್ತಿದ್ದರು. ನಮ್ಮೂರಲ್ಲಿ ಗೋಕರ್ಣೇಶ್ವರ ಗುಡಿ ಎಂದು ಒಂದಿದೆ. ಎಲ್ಲ ಮಾಧ್ವರೊಟ್ಟಿಗೆ ನಾನೂ ಒಂದು ಬಾರಿ ಹೋಗಿದ್ದೆ. ಕೊಬ್ಬರಿ ತಿಂದು ಬಂದಿದ್ದೆ.
“ಎಂದೂ ಹೋಗದೆ ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಏಕೆ ಹೋಗಬೇಕು?” ಎಂದು ನನ್ನ ಸೋದರತ್ತೆಯ ಗಂಡನನ್ನು ಕೇಳಿದ್ದೆ.
“ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ.”
ನಮ್ಮ ಮಾವ ಹೇಳಿದ ಸಮ್ಜಾಯಿಸಿ ಇದು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಪಾಪ! ಇದು ಹಿಂದಿನ ಜನ್ಮದಲ್ಲಿ ಮಾಧ್ವ ಬ್ರಾಹ್ಮಣ ಆಗಿತ್ತು ಎಂದಂದುಕೊಳ್ಳುತ್ತಿದ್ದೆ. ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ.
……………………………………
ಸಂವಿಧಾನ
೧೯೭೧ ಹಾಗೂ ೭೨ರ ಚುನಾವಣೆಗಳಲ್ಲಿನ ಇಂದಿರಾ ಗಾಂಧಿಯವರ ಭರ್ಜರಿ ಜಯವನ್ನು ಹಲವರು ಗುಮಾನಿಯಿಂದ ಎದುರುಗೊಂಡರು, ಭಾರಿ ಪ್ರಮಾಣದ ಚುನಾವಣಾ ಅಕ್ರಮ ನಡೆದಿರುವ ಆರೋಪ ಮಾಡಿದರು. ೧೯೭೫ರಲ್ಲಿ ಇಂದಿರಾ ಸಂವಿಧಾನವನ್ನು ಅಮಾನತುಗೊಳಿಸಿ ತುರ್ತು ಪರಿಸ್ಥಿತಿಯನ್ನು ಹೇರಿದರು.
ಆಗ ದಿಲ್ಲಿಯ ದೊಡ್ಡ ಪುಸ್ತಕ ಮಳಿಗೆಯೊಂದರಲ್ಲಿ ಗ್ರಾಹಕನೊಬ್ಬ ಸಂವಿಧಾನದ ಪ್ರತಿಯನ್ನು ಖರೀದಿಸುವುದಕ್ಕೆ ಬಂದ. ಅಂಗಡಿಯ ಗುಮಾಸ್ತ ಸೂಕ್ಷ್ಮವಾಗಿ ಉತ್ತರಿಸಿದ, “ಕ್ಷಮಿಸಿ ಸಾರ್, ನಮ್ಮಲ್ಲಿ ನಿಯತಕಾಲಿಕೆಗಳ ದಾಸ್ತಾನು ಇಲ್ಲ.”
ಆಘಾತ
೨೨ ಮಾರ್ಚ್ ೧೯೭೯ರಂದು ಇಡೀ ರಾಷ್ಟ್ರವೇ ಶೋಕದಲ್ಲಿ ಮುಳುಗಿತ್ತು. ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ದೇಶ ಕಂಡ ಹಿರಿಯ ಮುತ್ಸದ್ಧಿ, ದೇಶಪ್ರೇಮಿ ಜಯಪ್ರಕಾಶ್ ನಾರಾಯಣರು ಬಾಂಬೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪಾರ್ಲಿಮೆಂಟಿನಲ್ಲಿ ಘೋಷಿಸಿದರು.
ಪ್ರಧಾನಿಯವರು ಮನಮುಟ್ಟುವ ಶ್ರದ್ಧಾಂಜಲಿಯನ್ನು ಓದಿದರು, ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲಾಯ್ತು. ರಾಷ್ಟ್ರಧ್ವಜವನ್ನು ಅರ್ಧದವರೆಗೆ ಇಳಿಸಿ ಗೌರವ ಸೂಚಿಸಲಾಯ್ತು. ಸುದ್ದಿಯು ಕಾಳ್ಗಿಚ್ಚಿನಂತೆ ಇಡೀ ರಾಷ್ಟ್ರಕ್ಕೆ ಹಬ್ಬಿತು. ಆಲ್ ಇಂಡಿಯಾ ರೇಡಿಯೋದಲ್ಲಿ ಶೋಕಗೀತೆಯ ಪ್ರಸಾರವಾಯಿತು. ಶಾಲೆಗಳು, ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಲಾಯ್ತು. ದೇಶ ಪೂರ್ತಿ ಒಂದು ಗಂಟೆಯ ಕಾಲ ಶೋಕವನ್ನಾಚರಿಸಿತು.
ಪ್ರತಿಯೊಬ್ಬರೂ ಈ ಸುದ್ದಿಯಿಂದ ತೀವ್ರವಾಗಿ ಘಾಸಿಗೊಂಡಿದ್ದರು. ಆದರೆ ಆ ವ್ಯಕ್ತಿಗೆ ಮಾತ್ರ ಎಲ್ಲರಿಗಿಂತ ಹೆಚ್ಚಿನ ಪ್ರಮಾಣದ ಆಘಾತವಾಗಿತ್ತು. ಅವರು ಮತ್ಯಾರೂ ಅಲ್ಲ, ಬಾಂಬೆ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಜಯಪ್ರಕಾಶ್ ನಾರಾಯಣ್!
ಶ್ರೀಮಂತರಾಗುವುದು ಹೇಗೆ?
ಮಾರ್ಚ್ ೨೦೦೪ ರಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವವರು How to Get Rich ಎನ್ನುವ ಪುಸ್ತಕವನ್ನು ಪ್ರಕಟಿಸಿದರು.
ಅದಾಗಿ ಕೇವಲ ಐದು ತಿಂಗಳುಗಳ ನಂತರ ಟ್ರಂಪ್ ಒಡೆತನದ ಹೊಟೇಲು, ರೆಸಾರ್ಟುಗಳು, ನಿರ್ಮಾಣ ಸಂಸ್ಥೆಗಳು ದಿವಾಳಿ ಘೋಷಿಸಿದವು!
ನಾನ್ಯಾರು
ನಾಟಕ ಆಸ್ಕರ್ ವೈಲ್ಡ್ ನಿಗೆ ತನ್ನ ನಾಟಕದಲ್ಲಿ ಹಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಯ್ತು.
ನಿರಾಕರಿಸಿದ ವೈಲ್ಡ್ ಹೀಗೆ ಮಾರುತ್ತರ ನೀಡಿದ, “ಈ ಮಾಸ್ಟರ್ ಪೀಸಿನಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ನಾನು ಯಾರು?”
ಸುಧಾರಣೆ
ಅಮೇರಿಕಾ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅಧಿಕಾರವಧಿಯ ಉತ್ತರಾರ್ಧ ಆರ್ಥಿಕ ಹಿಂಜರಿತದಿಂದ ಪೀಡಿತವಾಗಿತ್ತು. ರೊನಾಲ್ಡ್ ರೇಗನ್ ಅಧ್ಯಕ್ಷರಾಗುವವರೆಗೆ ಅಮೇರಿಕಾದ ಆರ್ಥಿಕತೆ ಸುಧಾರಿಸಲೇ ಇಲ್ಲ.
“ನೀವು ಕೆಲಸ ಕಳೆದುಕೊಂದರೆ ಅದು ಆರ್ಥಿಕ ಕುಸಿತ.” ಅಧಿಕಾರ ಸ್ವೀಕರಿಸಿ ರೇಗನ್ ಮಾತನಾಡಿದರು, “ನಿಮ್ಮ ನೆರೆಯ ಮನೆಯವನು ಕೆಲಸ ಕಳೆದುಕೊಂಡರೆ ಅದು ಆರ್ಥಿಕ ಹಿಂಜರಿತ.”
ಮತ್ತೆ ಸುಧಾರಣೆ? “ಜಿಮ್ಮಿ ಕಾರ್ಟರ್ ಕೆಲಸ ಕಳೆದುಕೊಂಡರೆ ಅದು ಸುಧಾರಣೆ!”
nijakku ‘bhaya’nkaravagide!
nijakku “bhaya”nkaravagide!