………………………………………………………………….
ಸತ್ಯ ಹೇಳಬಹುದಾದ
ಸಂದರ್ಭದಲ್ಲಿ ಸುಳ್ಳನ್ನು
ವ್ಯರ್ಥವಾಗಿ ಬಳಸಬೇಡಿ.
-ಜಾಕ್ ಕ್ಲಾನ್ಸಿ
………………………………………………………………….
………………………………………………………………….
ಸತ್ಯ ಹೇಳಬಹುದಾದ
ಸಂದರ್ಭದಲ್ಲಿ ಸುಳ್ಳನ್ನು
ವ್ಯರ್ಥವಾಗಿ ಬಳಸಬೇಡಿ.
………………………………………………………………….
…………………………………………………………..
ನಿಮ್ಮ ಮಕ್ಕಳೊಂದಿಗೆ
ಸ್ನೇಹದಿಂದ ನಡೆದುಕೊಳ್ಳಿ.
ಏಕೆಂದರೆ ಅವರೇ ನಿಮ್ಮ
ನರ್ಸಿಂಗ್ ಹೋಮನ್ನು ಆಯ್ಕೆ ಮಾಡುವವರು!
…………………………………………………………..
ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!
ಈ ಸಂಚಿಕೆಯ ಸ್ಯಾಂಪಲ್:
ನಗೆ ಸಾಮ್ರಾಟರು ದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದರು. ಅವರು ಕುಳಿತಿದ್ದದ್ದು ಕೊನೆಯ ಡಬ್ಬಿಯಲ್ಲಿ. ಆ ರೈಲೋ ಮೈಲುದ್ದದ್ದು. ನಿಲ್ದಾಣದಲ್ಲಿ ರೈಲು ನಿಂತಾಗಲೆಲ್ಲಾ ಅವನ ಡಬ್ಬಿ ಪ್ಲಾಟ್ ಫಾರಮ್‌ನಿಂದ ಬಹುದೂರವಿರುತ್ತಿತ್ತು. ಇವನಿಗೆ ಟೀ ಕಾಫಿ ಸಿಕ್ಕುವುದೂ ಕಷ್ಟವಾಗುತ್ತಿತ್ತು.
ಅಂತೂ ಇಂತೂ ಬೆಂಗಳೂರು ತಲುಪಿದ್ದಾಯ್ತು. ನಗೆ ಸಾಮ್ರಾಟರಿಗೆ ಹಸಿವು. ತಿಂಡಿ ತಿನ್ನುವುದಕ್ಕೂ ಮೊದಲು ಸ್ಟೇಷನ್ ಮಾಸ್ಟರರ ಕೊಠಡಿಗೆ ನುಗ್ಗಿದ ಕಂಪ್ಲೆಂಟ್ ಪುಸ್ತಕ ಕೇಳಿದ. ಮಾಸ್ಟರ್ ಕೊಟ್ಟರು. ನಗೆ ಸಾಮ್ರಾಟರು ಪರಪರನೆ ಬರೆದರು, “ಇಂಥ ಉದ್ದದ ರೈಲಿನಲ್ಲಿ ಕೊನೆಯ ಡಬ್ಬಿ ಇರಲೇ ಕೂಡದು.” ಹೀಗೆ ಬರೆದರೆ ಯಾರಾದರೂ ತನ್ನನ್ನು ಗಾಂಪ ಅನ್ನಬಹುದು ಅಂತ ಅವನಿಗೆ ತಕ್ಷಣ ಅನ್ನಿಸಿ ಮತ್ತೆ ಮುಂದುವರೆಸಿದ: “ಒಂದು ವೇಳೆ ಕೊನೆಯ ದಬ್ಬಿ ಇರಬೇಕಾದರೆ ಮಧ್ಯದಲ್ಲಿ ಇರಲಿ!”
ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!
ಈ ಸಂಚಿಕೆಯ ಸ್ಯಾಂಪಲ್:
ಭಾರತೀಯರೊಬ್ಬರು ಅಮೇರಿಕನ್ ಮಹಿಳೆಯೊಬ್ಬರ ಮನೆಗೆ ಊಟಕ್ಕೆ ಹೋಗಿದ್ದರು. ಅವರಿಗೆ ಅಲ್ಲಿ ಒಂದಕ್ಕೆ ಹೋಗಬೇಕಾಯಿತು. ಅವರು ಮನೆಯೊಡತಿಯನ್ನು ಕುರಿತು, “ಇಲ್ಲಿ ಬಾತ್‍ರೂಮ್ ಎಲ್ಲಿದೆ, ನಾನು ಒಂದಕ್ಕೆ ಹೋಗಬೇಕು” ಎಂದು ಕೇಳಿದರು.
ಆಕೆಗೆ ಈ ಮಾತು ಕೇಳಿ ಶಾಕ್ ಆಯಿತು. ಆಕೆ ಹೇಳಿದರು, “ನೋಡಿ, ಈ ದೇಶದಲ್ಲಿ ಹಾಗೆ ಹೋಗಬೇಕಾದಾಗ ‘ನಾನು ಕೈ ತೊಳೆಯಬೇಕು’ ಎಂದು ಹೇಳಿ” ಎಂದು ಹೇಳಿಕೊಟ್ಟರು.
ಈತ ಸರಿ ಎಂದರು.
ಒಮ್ಮೆ ಈತ ಭಾರತೀಯ ಮಿತ್ರರೊಬ್ಬರ ಮನೆಗೆ ಊಟಕ್ಕೆ ಹೋದರು. ಅವರು ಬಹಳ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದವರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಾಗ ಅವರು ಈ ಮಿತ್ರರನ್ನು, “ಊಟಕ್ಕೇಳಿ, ಕೈ ತೊಳೆಯುತ್ತೀರಾ?” ಎಂದು ಕೇಳಿದರು. ಈತ ಹೇಳಿದರು, “ಇಲ್ಲ, ನಿಮ್ಮ ಮನೆಯೊಳಕ್ಕೆ ಬರುವುದಕ್ಕೆ ಮುಂಚೆಯೇ ಆಚೆ ಲೈಟ್ ಕಂಬದ ಹತ್ತಿರ ಕೈ ತೊಳೆದುಕೊಂಡೆ.”
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
[ಬೀಟು ಹಾಕಲು ಹೋದ ಸಾಮ್ರಾಟರಿಗೆ ಈ ಬಾರಿ ಜನರು ತುಂಬಾ ಗಂಭೀರವಾಗಿದ್ದಾರೆ ಎಂದು ಗಾಬರಿಯಾಯ್ತು. ಬಹುಮಂದಿ ಮಾಧ್ಯಮವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ, ಕೆಲವರು ಬಾಂಬುಗಳ ಬಗ್ಗೆ ಬರೆಯುತ್ತಿದ್ದಾರೆ, ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಗಂಭೀರವಾಗಿ ಆಚರಿಸುತ್ತಿದ್ದಾರೆ. ಹೀಗಾಗಿ ನಗಾರಿಯ ಬೀಟಿಗೆ ಸಿಕ್ಕಿದ್ದು ಇಷ್ಟೇ]
ಮಜಾವಾಣಿ
ಕರ್ನಾಟಕದಲ್ಲಿ ರೈತನೋರ್ವ ತನ್ನ ತೊಂಭತ್ತೆಂಟನೆಯ ವಯಸ್ಸಿನಲ್ಲಿ ನೈಸರ್ಗಿಕ ಸಾವಿನಿಂದ ಸತ್ತಿದ್ದು ರಾಜ್ಯದಲ್ಲಿ ತೀವ್ರವಾದ ಸಂಚಲನವನ್ನು ಹುಟ್ಟು ಹಾಕಿದೆ. ಮುಖ್ಯ ಮಂತ್ರಿಗಳು ನಮ್ಮ ರಾಜ್ಯದಲ್ಲಿ ನೈಸರ್ಗಿಕ ಸಾವು ಬಂದು ಸಾಯುವ ರೈತರೂ ಇದ್ದಾರೆ ಎಂದು ಖುಶಿಯಾಗಿದ್ದಾರಂತೆ ಎಂದು ವರದಿ ಮಾಡಿದೆ ‘ಮಜಾವಾಣಿ’ ಪತ್ರಿಕೆ.
ಬೊಗಳೆ ರಗಳೆ
ಸ್ವಾತಂತ್ರ್ಯ ದಿನಾಚರಣೆಯ ದಿನ ಅನೇಕಾನೇಕರು ಸ್ವತಂತ್ರವಾಗಿ ಕನಸು ಕಾಣುತ್ತಾರೆ. ಹಾಗೆಯೇ ನಮ್ಮ ಬೊಗಳೆ ಸೊಂಪಾದಕರು ದೇಶದ ಪ್ರಧಾನಿಯಾದಂತೆ ಕನಸು ಕಂಡಿದ್ದಾರೆ. ಆದರೆ ಇದು ನಮ್ಮ ನಿಮ್ಮಂತೆ ಕೇವಲ ಅಸ್ಪಷ್ಟ ಕನಸಲ್ಲ. ಪ್ರಧಾನಿಯಾದ ಯಶೋಗಾಥೆಯೇ ಕನಸಿನಲ್ಲಿ ಮೂಡಿಬಂದಿದೆ.
ಈ ದೇಶವನ್ನು ಕಾಪಾಡಲು ಆ ದೇವರಿಂದಲೇ ಸಾಧ್ಯವಿಲ್ಲ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದನ್ನು ವರದಿ ಮಾಡಿರುವ ಬೊಗಳೆ ಆ ಹೇಳಿಕೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದೆ.
ಕೆಂಡಸಂಪಿಗೆಯ ಸುದ್ದಿ ಕ್ಯಾತ
‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಅನ್ನೋ ಮಾತಿದೆ. ಕೇವಲ ಮಾತಾಡುವುದು ಮಾತ್ರ ಅಲ್ಲ ಅರ್ಥವಾಗದ ಹಾಗೇ ಮಾತನಾಡಿದರೆ ಎಂತೆಂಥ ಅನಾಹುತ ಆದೀತು, ದಂಡ ತೆರಬೇಕಾದೀತು ಅನ್ನುತ್ತಾನೆ ಸುದ್ದಿ ಕ್ಯಾತ ಯಾಕೆ ಅಂತ ತಿಳೀಬೇಕಾ? ಈ ಕ್ಯಾತೆ ಓದಿ.
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
ಸಾಮ್ರಾಟರ ಬೀಟಿನ ಏಟಿಗೆ ಬಲಿಯಾದ ಮಿಕಗಳ್ಯಾವುವು ನೋಡೋಣ ಬನ್ನಿ…
‘ಕೆಂಡ ಸಂಪಿಗೆ’ಯ ಸುದ್ದಿಕ್ಯಾತ
ಕೃತಕ ಪ್ಲಾಸ್ಟಿಕ್ ಹೂವು ಕೇಳಿದ್ದೀರಿ, ಕೃತಕ ಹಣ್ಣು ಕೇಳಿದ್ದೀರಿ, ಕೃತಕ ಮಗು ಕೇಳಿದ್ದೀರಿ, ಕೃತಕ ಹೃದಯವನ್ನೂ ಕೇಳಿದ್ದೀರಿ ಆದರೆ ಕೃತಕ ಲೇಖಕ ಕಾದಂಬರಿ ಬರೆದದ್ದನ್ನು ಕೇಳಿದ್ದೀರಾ? ಇಂಥದ್ದೊಂದು ಸುದ್ದಿಯನ್ನು ಬೀಟಿನಲ್ಲಿ ಹಿಡಿದು ತಂದಿದ್ದಾನೆ ಸುದ್ದಿ ಕ್ಯಾತ. ಕಾಲ್ಪನಿಕ ಲೇಖಕ ಬರೆದ ಕಾಲ್ಪನಿಕ ಕೃತಿಗಳು ಪಡೆದ ಮನ್ನಣೆ, ಕೊನೆಗೆ ಅಸಲು ಲೇಖಕ ಬೆಳಕಿಗೆ ಬಂದು ತೆರಬೇಕಾದ ದಂಡದ ಬಗ್ಗೆ ಇಲ್ಲಿ ಮಾಹಿತಿಯಿದೆ.
ಆದರೆ ಬಾಟಮ್ ಕೆಳಗಿನ ಲೈನರ್‌ನಲ್ಲಿ ಕ್ಯಾತ “ಭೈರಪ್ಪನವರ ಆವರಣ ಕಾದಂಬರಿಯ ನಾಯಕಿ ಲಕ್ಷ್ಮಿ/ರಜಿಯಾ ಬರೆದ ಕಾದಂಬರಿ ಪ್ರಕಾಶನಗೊಂಡರೆ ಅದು ಆವರಣಕ್ಕಿಂತ ಹೆಚ್ಚು ಮಾರಾಟವಾಗುವುದೇ?” ಎನ್ನುವ ಮೂಲಕ ಕ್ಯಾತೆ ತೆಗೆಯುವುದನ್ನು ಮಾತ್ರ ಮರೆಯಲಿಲ್ಲ!
ಕೋಮುವಾದದ ಸದ್ದಡಗಿಸುವ ಮಾತನ್ನು ಮಾಡುತ್ತಿದ್ದಾರೆ ಎಲ್ಲರೂ. ಆದರೆ ಕೋಮುವಾದವನ್ನು ಅಳಿಸಿ ಮಾನವೀಯತೆಯನ್ನು ಉಳಿಸುವುದು ಎಷ್ಟು ಸುಲಭ ಎಂದು ಪಂಚಿಸಿದ್ದಾರೆ ಗಣೇಶ್.
ಬೊಗಳೂರು ಚುನಾವಣಾ ಬ್ಯೂರೋ ‘ಬೊಗಳೆ ಚುನಾವಣಾ ಪ್ರಣಾಳಶಿಶು ಬಿಡುಗಡೆ’ಮಾಡಿದೆ. ತನ್ನ ವಿರೋಧಿ ಪತ್ರಿಕೆಯಲ್ಲಿ ಪ್ರಕಟವಾಗಬೇಕಾದ ಜಾಹೀರಾತನ್ನು ಕದ್ದು, ಕೆರೆದು ಪ್ರಕಟಿಸಿದ್ದಾರೆ. ಅವರ ‘ಪ್ರಣಾಳಶಿಶು’ವಿನ ಸ್ಯಾಂಪಲ್ ನೋಡಿ ಇಲ್ಲಿ:
ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.
ಇಂಥ ಪ್ರಣಾಳಶಿಶುವನ್ನು ಕೊಟ್ಟರೆ ಮತದಾರರು ಅನಾಥರನ್ನಾಗಿ ಮಾಡುವುದಿಲ್ಲ ಎಂಬ ನಂಬಿಕೆ ಬರತೊಡಗಿದೆ. ಮರದ ಮೇಲಿನಿಂದ ಆಪಲ್ ಬಿದ್ದು ನ್ಯೂಟನ್ನನಿಗೆ ಗುರುತ್ವಾಕರ್ಷಣೆಯ ಬಗ್ಗೆ ಹೊಳೆದಂತೆ ಮುಂದೊಂದು ದಿನ ನಗೆ ಸಾಮ್ರಾಟರ ತಲೆಯ ಮೇಲೆ ತೆಂಗಿನ ಮರದಿಂದ ತೆಂಗಿನ ಕಾಯಿ ಬಿದ್ದು ಜ್ಞಾನೋದಯವಾಗಿ ಅವರು ಚುನಾವಣೆಯಲ್ಲಿ ನಿಲ್ಲುವ ತೀರ್ಮಾನ ಕೈಗೊಂಡರೆ ಇಂಥ ಭರ್ಜರಿ ‘ಪ್ರಣಾಳಶಿಶು’ಗಳಿಗೆ ಜನ್ಮ ನೀಡಲು ಬೊಗಳೆಯ ಕಿರಿಕಿರಿ ಸಂಪಾದಕನನ್ನು ಎತ್ತಿಹಾಕಿಕೊಂಡು ಬರಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದಾರೆ.
“ಅಳತೆ ಮೀರಿದರೆ ಆಪತ್ತು ಅಂತ ತಿಳಿದು ‘ಮದ್ಯಸಾರ’ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!”
ಎಂದು ಹೇಳಿ ನಮ್ಮಂತಹ ಅಸಂಖ್ಯ ಮದ್ಯಾಭಿಮಾನಿಗಳನ್ನು ಸಾರದಿಂದ ಮಂಚಿಸುವ ತೀರ್ಮಾನ ಮಾಡಿರುವ ಅಪಾರ ‘ಮದ್ಯಸಾರ’ ಪುಸ್ತಕವಾಗುತ್ತಿದೆ ಎಂದು ಹೇಳುವ ಮೂಲಕ ಹೊಸ ‘ಕಿಕ್’ ಕೊಟ್ಟಿದ್ದಾರೆ.
ಕಮೆಂಟಿಗಾಗಿ ಕಾದು ಕುಳಿತ ಸೋಸಿಲಿ ಚುನಾವಣೆಯ ಭರಾಟೆಯನ್ನು ಬಿಟ್ಟ ಕಣ್ಣುಗಳಿಂದ ಕಂಡು ಕಮೆಂಟ್ ಮಾಡಿದ್ದಾಳೆ. ಅದರದೊಂದು ಸ್ಯಾಂಪಲ್ಲು ಹೊತ್ತು ತಂದಿದ್ದಾರೆ ಬೀಟಿಗೆ ಹೋದ ಸಾಮ್ರಾಟರು:
ಇದೇ ವೇಳೆ ಜನರನ್ನು ತಮ್ಮ ಹಾಸ್ಯ’ಸುಧೆ’ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!
(ಕಳೆದ ವಾರದ ಬ್ಲಾಗ್ ಬೀಟ್)
(ನಗಾರಿ ಸಿನಿ-ಸಿನಿ ಬ್ಯೂರೋ)
ಅವ್ರನ್ನ ಉದಯ್ ಅಂದರೆ ಯಾರು ಉದಯ್ ಕುಮಾರಾ ಅಂತ ಕೆಲವರು ಕೇಳಬಹುದು. ಆದರೆ ಉದಯ್ ಜಾದೂಗಾರ್ ಅಂದರೆ ಯಾರಿಗೂ ಕನ್ ಫೂಸ್ ಆಗೋದಿಲ್ಲ. ಜಾದೂಗಾರ್ ಮ್ಯಾಜಿಕ್ ಮಾಡಿದ್ರು, ಜನ ಚಪ್ಪಾಳೆ ತಟ್ಟಿದ್ರು. ಮ್ಯಾಜಿಕ್ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆ ಮಾಡಿದರೆ ಜನ ಹಣ ಸುರಿದು ಮೋಡಿ ಕಲಿತರು. ಅವರು ಸುಡೋಕು ಹಿಡಿದರು, ಅದನ್ನ ಬಿಡಿಸಲಿಕ್ಕೆ ಅಂತಲೇ ಒಂದು ಡಬ್ಬಿ ಮಾಡಿದರು ಜನ ಭಲೇ ಮೆಚ್ಚಿಕೊಂಡರು. ಈಗವರು ಎಲ್ಲಾ ಬಿಟ್ಟು ದರೋಡೆ ಮಾಡೋಕೆ ನಿಂತಿದ್ದಾರೆ, ಬಹುಪಾಲು ಅದು ಮುಗಿದೂ ಆಗಿದೆಯಂತೆ!
ಜಾದೂಗಾರ ದರೋಡೆ ಮಾಡೋಕೆ ನಿಂತರೆ ಸಾಮಾನ್ಯರ ಪಾಡೆನು ಅಂತ ಬುದ್ಧಿಜೀವಿಯ ಫೋಸಿನಲ್ಲಿ ನಾಲ್ಕೈದು ಉದ್ಗಾರ, ಕೊನೆಗೊಂದು ನಿಟ್ಟುಸಿರು ಬಿಟ್ಟು ಎದ್ದುನಿಲ್ಲಲು ರೆಡಿಯಾಗಬೇಕಿಲ್ಲ. ಉದಯ್ ‘ದರೋಡೆ’ ಹೆಸರಿನ ಸಿನೆಮಾವೊಂದನ್ನು ಮಾಡಿ ಪ್ರೇಕ್ಷಕರ ಜಾದೂಗಾಗಿ ಕಾಯುತ್ತಾ ಕುಳಿತಿದ್ದಾರೆ.
ನಮ್ಮ ರೆಗ್ಯುಲರ್ ದಿನಪತ್ರಿಕೆಗಳಿಂದ ಹಿಡಿದು, ಇರ್ರೆಗ್ಯುಲರ್ ಟ್ಯಾಬ್ಲಾಯ್ಡ್‌ಗಳ ವರೆಗೂ ಯಾರೂ ಜಾದೂಗಾರರನ್ನು ಸೀರಿಯಸ್ಸಾಗಿ ನೋಡುತ್ತಲೇ ಇಲ್ಲ. ‘ಪಾಪ ಅವರು ಸಿನೆಮಾ ಮಾಡಿದ್ದಾರಂತೆ, ತುಂಬಾ ಚೆನ್ನಾಗಿದೆ- ಗೆದ್ದೇ ಗೆಲ್ಲುತ್ತೆ ಅಂತ ಅವರೇ ಹೇಳ್ತಿದ್ದಾರೆ. ಪಾಪ ಅವರಿಗ್ಯಾಕೆ ಬೇಜಾರು ಮಾಡ್ತೀರಿ, ಗೆಲ್ಲಿಸಿಬಿಡಿ..’ ಎಂದು ಮಣಗಟ್ಟಲೆ ಸಿಂಪಥಿ ಬೆರೆಸಿ ಗೀಚುತ್ತಿದ್ದಾರೆ. ಯಾರೂ ಜಾದೂಗಾರ್ ಎಂಬ ಹೊಸ ಆಶಾ-ಕೋಶಾ ಕಿರಣ ‘ಉದಯ’ವಾಗ್ತಿದೆ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ.
ಈ ಮಧ್ಯೆ ಜಾದೂಗಾರರು ನಮ್ಮ ನಗೆ ಸಾಮ್ರಾಟರನ್ನು ಯಕ್ಷಿಣಿಯ ಮೂಲಕ ತಮ್ಮ ಸ್ವಸ್ಥಾನದಿಂದ ಎತ್ತಿ ಹಾಕಿಕೊಂಡು ತಮ್ಮಲ್ಲಿಗೆ ಕರೆಸಿಕೊಂಡು ಮೂರು ತಾಸಿನ ಸಿನೆಮಾ ಬಗ್ಗೆ ಕೇವಲ ನಾಲ್ಕು ತಾಸು ಕೊರೆದು ಏನಾದರೂ ಪ್ರಶ್ನೆಗಳಿದ್ದರೆ ಕೇಳುವಂಥವರಾಗಿ ಎಂದರು. ನಾಲ್ಕು ತಾಸು ಭರ್ಜರಿ ನಿದ್ದೆಯಿಂದ ಎದ್ದ ಸಾಮ್ರಾಟರು, ನಾಸ್ತಿಕರು ಸತ್ಯ ಸಾಯಿ ಬಾಬಾಗೆ ಚಾಲೆಂಜ್ ಮಾಡಿದ ಹಾಗೆ, ‘ತಾಕತ್ತಿದ್ದರೆ, ನಿಮ್ಮ ಜಾದೂ ಮೂಲಕ ನನ್ನ ಪ್ರಶ್ನೆ ಏನೆಂದು ನೀವೇ ತಿಳಿದುಕೊಂಡು ಉತ್ತರಿಸಿ’ ಎನ್ನಬೇಕಂದುಕೊಂಡಿದ್ದರಾದರೂ, ಹಾಗಂದರೆ ಇರುವ ಒಂದು ಪ್ರಶ್ನೆಯ ಜಾಗಕ್ಕೆ ನೂರು ಪ್ರಶ್ನೆಗಳನ್ನು ಊಹಿಸಿಕೊಂಡು ಮತ್ತೆ ಕೊರೆಯಲು ಶುರುಮಾಡಿದರೆ ಎಂಬ ಭಯದಿಂದ ‘ಸಿನೆಮಾ ಗೆಲ್ಲುತ್ತಾ?’ ಎಂಬ ಮರ್ಮಾಘಾತದ ಪ್ರಶ್ನೆಯನ್ನೇ ಕೇಳಿಬಿಟ್ಟರು. ಆ ಡೆವಿಲ್ಲು ಲಾಯರ್ ಕರ್ರನೆ ಥಾಪರ್‍ಥರ ಎದುರಿಗೆ ಕುಂಡ್ರಿಸಿಕೊಂಡವರು ಮಾತಾಡೋದಕ್ಕಿಂತ ತಾನೇ ಹೆಚ್ಚು ಮಾತಾಡುವ ವಿಧಾನ ನಗೆ ಸಾಮ್ರಾಟರಿಗೆ ಅಷ್ಟಾಗಿ ಮೆಚ್ಚಿಗೆಯಾಗದು.
ಜಾದೂಗಾರ್ ಉತ್ತರಿಸುತ್ತಾ, ‘ಗ್ಯಾರಂಟಿ ನನ್ನ ಸಿನೆಮಾ ಗೆದ್ದೇ ಗೆಲ್ಲುತ್ತೆ. ಸಿನೆಮಾ ನೋಡಿದ ಮಂದಿಗೆ ಖುಸಿಯಾಗದಿದ್ದರೆ ಥೇಟರ್ ಹೊರಗೆ ನಿಂತು ಅವರ ಕಾಸು ವಾಪಸ್ ಮಡಗ್ತೀನಿ’ ಅಂದ್ರು ಖಡಾಖಂಡಿತವಾಗಿ.
ಮೊದಲೇ ನ್ಯೂಸ್ ಪೇಪರು, ಕಚಡಾ ಸುಟ್ಟು ನೋಟು ತೆಗೆಯುವ ಜಾದೂಗಾರರು ಇವರು, ಥಿಯೇಟರ್ ಮುಂದೆ ನಿಂತು ಇಂಥದ್ದೇ ಜಾದೂ ಮಾಡಲು ಶುರುಮಾಡಿದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಕ್ಕಪಕ್ಕದಿಂದ ಕಥೆ ಕದ್ದು ಕಾದಂಬರಿ ಬರೆಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನೆಮಾ ಸುತ್ತಿದವರು ಕಲಾಸಿಪಾಳ್ಯದ ಫುಟ್ ಪಾತ್ ಮೇಲೆ ದಬಾಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ‘ನಗೆ ಸಾಮ್ರಾಟ’ರು ಗಾಂಧೀ ನಗರಕ್ಕೆ ಫೀ-ಮೇಲು, ಅಲ್ಲಲ್ಲ ಇ-ಮೇಲು ಮೂಲಕ ರವಾನಿಸಿದ್ದಾರೆ.
ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು ‘ಮೂರ್ಖ’ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ. ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ. ‘ವ್ಯಾಲೆಂಟೈನ್ಸ್ ಡೇ’ ಅಂತೆ, ‘ಮದರ್ಸ್ ಡೇ’ ಅಂತೆ, ‘ಫಾದರ್ಸ್ ಡೇ’ (ಇದನ್ನು Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ ತಪ್ಪಿಲ್ಲವಾದರೂ ‘ವ್ಯಾವಹಾರಿಕ’ವಾಗಿ ನಿಷಿದ್ಧ!), ‘ವುಮನ್ಸ್ ಡೇ’ ಇವೆಲ್ಲಾ ಇರಲಿ, ಅಂಥಾ ಮಹಾಮಾರಿ ಏಡ್ಸ್‌ಗೂ ಸಹ ಒಂದು ‘ಏಡ್ಸ್ ಡೇ’ ಎಂಬುದಿದೆ. ಅದೂ ಹೋಗಲಿ ಎಂದುಕೊಳ್ಳೋಣ ಎಂದರೆ Every dog has its day ಎನ್ನುತ್ತಾರೆ. ಹಂಗಾದರೆ ಪ್ರತಿಯೊಂದು ನಾಯಿಗೂ ಒಂದು ದಿನವಿದೆ, ಗಂಡಂದಿರಿಗೂ ಇದೆ!
ಹೀಗೆ ಜಗತ್ತಿನ ಸಣ್ಣ ಸಣ್ಣ ಗುಂಪುಗಳಿಗಾಗಿ ಎಂದೇ ಒಂದೊಂದು ದಿನವಿರುವಾಗ ಜಗತ್ತಿನ ಬಹುಸಂಖ್ಯಾತರ, majority ಜನರ ಹೆಸರಿನಲ್ಲಿ ವರ್ಷಕ್ಕೆ ಒಂದೇ ಒಂದು ದಿನವಾದರೂ ಬೇಡವೇ? ಜಗತ್ತಿನಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠವಾದ ಪ್ರಭುತ್ವ ಎಂದು ನಮ್ಮನ್ನು ಮುನ್ನೂರು ಚಿಲ್ಲರೆ ವರ್ಷ ಆಳಿದ ಬ್ರಿಟೀಷರು ಹೇಳಿಕೊಟ್ಟದ್ದನ್ನು ಅವರಿಗಿಂತ ಚೆನ್ನಾಗಿ ನಂಬಿರುವ ಹಾಗೂ ಅದರ ಫಲವಾಗಿ ಪ್ರಸ್ತುತ ರಾಜಕಾರಣಿಗಳನ್ನು ಆರಿಸಿ ನಮ್ಮದು ಪ್ರಜಾಪ್ರಭುತ್ವ, ಪ್ರಭುತ್ವದಲ್ಲಿರುವವರ ಹಾಗೆಯೇ ನಮ್ಮ ದೇಶದ ಪ್ರಜೆಗಳೂ ಇರುವುದು ಎಂಬುದನ್ನು ಸಾರುತ್ತಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರಿಗೇ ಮೊದಲ ಮಣೆ. ನೂರು ಮಂದಿಯಲ್ಲಿ ತೊಂಭತ್ತು ಮಂದಿ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಎಂದರೆ ಅದೇ ಸತ್ಯ. ಹೀಗಿರುವಾಗ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮೂರ್ಖರಿಗಾಗಿ ಮುನ್ನೂರ ಅರವತ್ತೈದು ಕಾಲು ದಿನಗಳಲ್ಲಿ ಅಟ್‌ಲೀಸ್ಟ್ ಒಂದು ದಿನವಾದರೂ ಬೇಡವೇ?
ಏಪ್ರಿಲ್ ಒಂದು ನಿಜಕ್ಕೂ ಮಹತ್ವದ ದಿನ. ಜಗತ್ತಿನಲ್ಲಿರುವ ಬಹುತೇಕರ ಪ್ರತಿಭೆಯನ್ನು ಗುರುತಿಸುವ ದಿನ. ತನ್ನ ಮೈಯಲ್ಲೇ ಕಸ್ತೂರಿಯಿದ್ದರೂ ಅದರ ಪರಿಮಳವನ್ನು ಹುಡುಕಿಕೊಂಡು ಕಸ್ತೂರಿ ಮೃಗ ಕಾಡೆಲ್ಲಾ ಸುತ್ತಿ ಕಂಗಾಲಾಗುತ್ತ, ಈ ಪರಿಮಳ ಅಗೋಚರವಾದದ್ದು ಸರ್ವವ್ಯಾಪಿಯಾದದ್ದು ಎಂಬ ನಿರ್ಧಾರಕ್ಕೆ ಬಂದಂತೆ ಜಗತ್ತಿನ ಜನರು ತಮ್ಮ ಕಿವಿಗಳೆರಡರ ಮಧ್ಯದೊಳಗೇ ಅಡಗಿರುವ ಮೂರ್ಖತನವನ್ನು ಕಾಣಲಾರದೆ ಹೊರಜಗತ್ತಿನಲ್ಲಿ ಮೂರ್ಖತನದ ಕೆಲಸಗಳನ್ನು ಗುರುತಿಸುತ್ತಾ, ಮೂರ್ಖರು ಯಾರು, ಮೂರ್ಖತನ ಎಲ್ಲಿದೆ ಅಂತ ಹುಡುಕುತ್ತಾ ಜಗತ್ತಿನೆಲ್ಲೆಡೆ ಅಲೆಯುತ್ತಿದ್ದಾನೆ. ತನ್ನೊಳಗಂತೂ ಇಲ್ಲ ಎಂದು ನೆಮ್ಮದಿಯಾಗಿರುತ್ತಾನೆ. ಕೆಲವೊಮ್ಮೆ ಅಪರೂಪಕ್ಕೆ ಜ್ಞಾನೋದಯವಾಗಿ ನನ್ನೊಳಗೇ ಅದು ಇದ್ದಿರಬಹುದಲ್ಲವಾ ಎಂಬ ಸಂಶಯ ನುಸುಳಿದರೂ ಕೂಡಲೇ ಆತನ ‘ಅಹಂ’ ಎಂಬ ಕಾವಲುಗಾರ ಅದನ್ನು ಹೊರಗಟ್ಟಿಬಿಡುತ್ತಾನೆ. ”ಮಗು ನೀನು ಮೂರ್ಖನಲ್ಲ. ನೀನು ಇಡೀ ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ. ಇಡೀ ಜಗತ್ತು ಹಗಲು ರಾತ್ರಿಯೆನ್ನದೆ ಕಾಯುತ್ತಿರುವ ಶ್ರೇಷ್ಠ ವ್ಯಕ್ತಿ ನೀನು. ನೀನು ಮೂರ್ಖನಾಗಲಿಕ್ಕೆ ಹೇಗೆ ಸಾಧ್ಯ? ಅದೋ ನೋಡು ಅಲ್ಲಿ ಕಾಣಿಸ್ತಾ ಇದ್ದಾನಲ್ಲ ಅವನು ಮೂರ್ಖ.” ಎನ್ನುತ್ತಾ ನೆತ್ತಿ ಸವರುತ್ತಾನೆ.
ಈ ನಮ್ಮ ನೆಮ್ಮೆಲ್ಲರ ಹೆಮ್ಮೆಯ ‘ಮೂರ್ಖರ ದಿನ’ ಆಗಮಿಸುತ್ತಿರುವ ಶುಭ ಮುಹೂರ್ತದಲ್ಲಿ ಜಗತ್ತಿನಲ್ಲಿ ನಮ್ಮ ನಿಮ್ಮೆಲ್ಲರ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪ ವಿಶ್ಲೇಷಿಸೋಣ. ಇಡೀ ಭೂಮಿಯ ಏಳುನೂರು ಕೋಟಿ ಜನ ಸಂಖ್ಯೆಯಲ್ಲಿ ಮೂರ್ಖರು ಎಷ್ಟು ಮಂದಿ ಎಂಬುದನ್ನು ಮೊದಲು ಪತ್ತೆ ಹಚ್ಚೋಣ. ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ ಹಾಗಾಗಿ ನಮ್ಮ ಪತ್ತೇದಾರಿಕೆಯನ್ನು ಮನೆಯಿಂದಲೇ ಪ್ರಾರಂಭಿಸೋಣ. ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ ಮಗನನ್ನು “ಕತ್ತೆ ಮಗನೇ” ಎನ್ನುತ್ತಾನೆ. ಮನುಷ್ಯ ಎಸಗುತ್ತಿರುವ ಕ್ಷಮೆ ಇಲ್ಲದ ಅಪರಾಧಗಳಲ್ಲಿ ಇದೂ ಒಂದು. ತನ್ನಲ್ಲಿರುವ ಮೂರ್ಖತನವನ್ನು ಮರೆ ಮಾಚಲಿಕ್ಕೆ ಪ್ರಕೃತಿ ವಹಿಸಿದ ಪಾತ್ರವನ್ನು ಅನೂಚಾನವಾಗಿ ನಿರ್ವಹಿಸುತ್ತಿರುವ ಗಾರ್ಧಭ ಮಹಾಶಯನನ್ನು ಮೂರ್ಖ ಎಂದು ಬಿಂಬಿಸುತ್ತಿರುವುದು ಹಾಗೂ ಅಪರೂಪಕ್ಕೆ ಒಮ್ಮೆ ತನ್ನಂಥವನೇ ಆದ ಮಾನವನಲ್ಲಿ ಗೋಚರಿಸುವ ಮೂರ್ಖತನವನ್ನು ಹೆಸರಿಸಲಿಕ್ಕೆ ಗಾರ್ಧಭ ಮಹಾಶಯನ ಹೆಸರನ್ನೇ ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಇರಲಿ, ಅಪ್ಪ ತನ್ನ ಮಗನನ್ನು “ಕತ್ತೆ ಮಗನೇ” ಎಂದು ಸಂಬೋಧಿಸುತ್ತಾನೆ. ಅಂದರೆ ಆತನ ಮಗ ಮೂರ್ಖನ ಮಗ ಎಂದಾಯಿತು. ಆ ಮಗನಿಗೆ ತಾನೇ ನಿಜವಾದ ಅಪ್ಪ ಎಂಬ ನಂಬಿಕೆ ಇದ್ದರೆ, ಅಪ್ಪ ತನ್ನನ್ನೇ ಕತ್ತೆ ಎಂದು ಕರೆದುಕೊಂಡಂತಾಯಿತು. ಆ ಮೂಲಕ ತನ್ನ ಹೆಂಡತಿಯೂ ಕತ್ತೆ ಎಂದು ಸಾಬೀತು ಪಡಿಸಿದಂತಾಯಿತು. ಈ ‘ಕತ್ತೆಗಳಿಬ್ಬರ’ ಮಗ ಅಥವಾ ಮಗಳು ಮುಂದೆ ತಂದೆ ಅಥವಾ ತಾಯಿಯ ಪಾತ್ರವನ್ನು ಅಲಂಕರಿಸಿದಾಗ ಇದೇ ರೀತಿಯಾಗಿ ತಮ್ಮ ಮಕ್ಕಳನ್ನು ಸಂಬೋಧಿಸುವುದರಿಂದ ಅವರೂ ಮೂರ್ಖ ಮಹಾಸಭೆಯ ಸದಸ್ಯರಾಗುತ್ತಾರೆ.
ಇನ್ನು ಮನೆಯೆಂಬ ಮೊದಲ ಪಾಠ ಶಾಲೆಯಿಂದ ನಂತರದ ಪಾಠಶಾಲೆಯೆಂಬ ಮನೆಗೆ ಬರೋಣ. ತಿಂಗಳ ಮುವ್ವತ್ತು ದಿನಗಳಲ್ಲಿ ನಾಲ್ಕು ಭಾನುವಾರಗಳು, ನಾಲ್ಕು ಹಾಫ್ ಡೇ ಶನಿವಾರಗಳನ್ನು ಬಿಟ್ಟರೆ ಸಿಕ್ಕುವ ೨೨ ದಿನಗಳಲ್ಲಿ ಎರಡು ಸರಕಾರಿ ರಜೆಗಳು, ಒಂದು ರೀಜನಲ್ ರಜಾ ಸೇರಿಸಿ ಉಳಿದ ೧೯ ದಿನಗಳಲ್ಲಿ ಮೂರು ದಿನ ಟೆಸ್ಟು, ನಾಲ್ಕೈದು ದಿನ ಸ್ವಯಂ ಘೋಷಿತ ರಜೆಗಳನ್ನು ಕಳೆದರೆ ಮಿಕ್ಕುವ ಹನ್ನೊಂದು ದಿನಗಳಲ್ಲಿ ಒಂದು ತಾಸಿನ ಪಿರಿಯಡ್ ನಲ್ಲಿ ಕಾಲುಘಂಟೆ ಹಾಜರಾತಿಗಾಗಿ, ಇನ್ನರ್ಧ ಘಂಟೆ ಶಿಸ್ತಿನ ಬಗೆಗಿನ, ಸಮಯ ಪಾಲನೆ ಬಗೆಗಿನ ಭಾಷಣಕ್ಕಾಗಿ ವ್ಯಯವಾಗಿ ಇನ್ನುಳಿದ ಕಾಲುಘಂಟೆಯಲ್ಲಿ ಮಾಡಿದ ಪಾಠವನ್ನು ಮಕ್ಕಳು ತಪ್ಪಾಗಿ ಒಪ್ಪಿಸಿದರೆ ಶಿಕ್ಷಕರು ಮಕ್ಕಳನ್ನು ಬೈಯುತ್ತಾರೆ, “ಯಾವ ಕತ್ತೆ ನಿನಗೆ ಹೇಳಿ ಕೊಟ್ಟನೋ”. ಈ ಸ್ವಯಂ ಸಂಬೋಧನೆಯಿಂದಾಗಿ ಶಿಕ್ಷಕರು ಹಾಗೂ ಅವರ ಶಿಷ್ಯ ಶಿರೋಮಣಿಗಳಿಗೆ ಮೂರ್ಖ ಸಂಘದ ಸದಸ್ಯತ್ವ ನೀಡಲು ಅಡ್ಡಿಯಿಲ್ಲ.
ಹೀಗೇ ಸಾಗುತ್ತಾ, ಆಫೀಸಿಗೆ ಬನ್ನಿ… “ನಿನ್ನಂಥ ಮೂರ್ಖನನ್ನ ಕೆಲಸಕ್ಕೆ ಇಟ್ಟುಕೊಂಡಿದ್ದೀನಲ್ಲಾ, ನನಗೆ ಬುದ್ಧಿಯಿಲ್ಲ” ಎಂದು ಬಾಸೂ, “ನಿನ್ನ ಹತ್ರ ಕೆಲ್ಸ ಮಾಡ್ತಿದ್ದೀನಲ್ಲಾ, ನನ್ನಂಥ ಮೂರ್ಖ ಬೇರೊಬ್ಬನಿಲ್ಲ” ಅಂತ ಕೆಲಸಗಾರರೂ ಹೇಳುವುದರಿಂದ ಅವರೂ ಗಾಂಪರ ಗುಂಪಿನ ಹೆಮ್ಮೆಯ ಪ್ರಜೆಗಳಾಗುತ್ತಾರೆ. “ಈ ನಾಡಿನಲ್ಲಿ ಹುಟ್ಟಿದೆನಲ್ಲಾ, ನನಗೆ ಬುದ್ಧಿಯಿಲ್ಲ” ಎನ್ನುವ ಜನನಾಯಕರು, “ನಿಮ್ಮ ಮುಂದೆ ಅರಚುತ್ತಿದ್ದೇನಲ್ಲಾ, ಕತ್ತೆ ಮುಂದೆ ಕಿಂದರಿ ಬಾರಿಸಿದ ಹಾಗೆ” ಎನ್ನುವ ಸ್ವಯಂ ಘೋಷಿತ ಸಂಗೀತಗಾರ, “ಕತ್ತೇಗೇನು ಗೊತ್ತು ಕಸ್ತೂರಿ ಪರಿಮಳ” ಎನ್ನುವ ಕವಿಗಳು ಸಂಬೋಧಿಸುವ ಜನಸಮೂಹವೆಲ್ಲಾ ಮೂರ್ಖರ ಗಣತಿಯ ಲೆಕ್ಕದಲ್ಲಿ ಸೇರುತ್ತಾರೆ.
ಇನ್ನು, “ಪ್ರೀತಿ ಕುರುಡು. ಪ್ರೀತಿಗೆ ಕಣ್ಣಿಲ್ಲ… ಪ್ರೀತಿಸುವವರನ್ನು ಹೀಗಳೆಯುವ ಜಗತ್ತು ಮೂರ್ಖ” ಎನ್ನುವ ಅಮರ ಪ್ರೇಮಿಯ ಪ್ರಕಾರ ತಮ್ಮ ಜೋಡಿಯನ್ನು ಬಿಟ್ಟು ಉಳಿದ ಜಗತ್ತೆಲ್ಲಾ ‘ಮೂರ್ಖ’ ಲೇಬಲ್ಲಿಗೆ ಅರ್ಹ. “ಪ್ರೀತಿಗೆ ಕಣ್ಣು ಮಾತ್ರವಲ್ಲ ಅದಕ್ಕೆ ಮೂಗೂ ಇಲ್ಲ, ಕಿವಿಯೂ ಇಲ್ಲ, ಮೆದುಳಂತೂ ಮೊದಲೇ ಇಲ್ಲ, ಅದಕ್ಕಿರುವುದು ಬರೀ ಬಾಯಿ, ಹೊಟ್ಟೆ ಹಾಗೂ ಅವೆರಡರೊಳಗಿರುವ ಅಗಾಧ ಹಸಿವು ಮಾತ್ರ. ಈ ಪ್ರೇಮಿಗಳು ಭ್ರಾಂತುಗಳು” ಎನ್ನುವವರ ಪ್ರಕಾರ ಪ್ರೇಮದಲ್ಲಿ ಬಿದ್ದಿರುವವರು, ಎದ್ದಿರುವವರು ಎಲ್ಲರೂ ಮೂರ್ಖರು.
ಅವರನ್ನು ಮೊದಲಿಗೆ ಇಡೀ ಜಗತ್ತೇ ಹುಚ್ಚರು ಅಂತ ಕರೆದಿತ್ತು. ಲಿಯನಾರ್ಡೋ ಡವಿಂಚಿ, ಗೆಲಿಲಿಯೋ, ಐನ್ ಸ್ಟೈನ್ ಮುಂತಾದ ಕನಸುಗಾರ ಜೀನಿಯಸ್ಸುಗಳನ್ನು ಜಗತ್ತು ಮೂರ್ಖರು ಎಂದಿತ್ತು. ಗೆಲಿಲಿಯೋನನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿತು ಚರ್ಚು. ಜಗತ್ತೇ ಅಂತಹ ಜೀನಿಯಸ್ಸುಗಳನ್ನು ಹುಚ್ಚರು ಅಂತ ಕರೆದಿತು. ಅನಂತರ ಇಡೀ ಜಗತ್ತಿನ ಕಣ್ಣು ತೆರೆದ ಮೇಲೆ ಅವರನ್ನು ಮಹಾನ್ ಬುದ್ಧಿವಂತರು ಎಂದು ಕರೆದು ಪ್ರಾಯಶ್ಚಿತ ಮಾಡಿಕೊಂಡಿತು. ಆ ಮೂಲಕ ಹುಚ್ಚರು ಅವರಲ್ಲ, ಜಗತ್ತು ಎಂದು ಒಪ್ಪಿಕೊಂಡಿತು. ತಾವು ಮೂರ್ಖರು ಅವರು ಜೀನಿಯಸ್ಸುಗಳು ಎಂದು ಜಗತ್ತೇ ಹೆಮ್ಮೆಯಿಂದ ಹೇಳಿಕೊಂಡಿತು.
ಇನ್ನು ನಿಮ್ಹಾನ್ಸ್ ನಿವಾಸಿಗಳನ್ನು ಹುಚ್ಚರು, ಮೂರ್ಖರು ಅನ್ನುತ್ತದೆ ಜಗತ್ತು. ಅಲ್ಲಿರುವ ಯಾರಿಗೂ ಬುದ್ಧಿ ಸರಿಯಿಲ್ಲ ಎನ್ನುತ್ತದೆ ಹೊರಗಿರುವ ಜನ ಸಮೂಹ. ಹೊರಗೆ ನಿಂತು ನೋಡುವವರಿಗೆ ಹುಚ್ಚಾಸ್ಪತ್ರೆಯ ಒಳಗಿರುವವರೆಲ್ಲರೂ ಮೂರ್ಖರಾಗಿ ಕಾಣುತ್ತಾರೆ, ಅದೃಷ್ಟವಶಾತ್ ಡಾಕ್ಟರ್, ನರ್ಸುಗಳನ್ನು ಹೊರತು ಪಡಿಸಿ. ಆದರೆ ಆಸ್ಪತ್ರೆಯ ಒಳಗಿರುವ so called ಮೂರ್ಖರು ಹೇಳುವ ಪ್ರಕಾರ ತಾವು ಸಾಚಾಗಳು, ತಮ್ಮನ್ನು ಇಲ್ಲಿ ಕೂಡಿ ಹಾಕಿರುವ ಜಗತ್ತೇ ಹುಚ್ಚು. ಈ ಆಸ್ಪತ್ರೆಯ ಹೊರಗಿರುವವರೆಲ್ಲರೂ ಹುಚ್ಚರು. ಐನ್ ಸ್ಟೀನ್‍ನ ರಿಲೇಟಿವಿಟಿ ಸಿದ್ಧಾಂತದ ಪ್ರಕಾರ ಬೇರೆ ಬೇರೆ ನೆಲೆಗಳಲ್ಲಿ ನೋಡುವಾಗ ಸತ್ಯ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತದೆ. ಹಾಗಾದರೆ ಎಲ್ಲವೂ ಸತ್ಯವೇ!
ಈ ಎಲ್ಲಾ ವಿಶೇಷ ಸಂಶ್ಲೇಷಣೆ-ವಿಶ್ಲೇಷಣೆಗಳನ್ನು ಪರಿಶೀಲಿಸಿದಾಗ ಏಪ್ರಿಲ್ ಒಂದು ಎಷ್ಟು ಮಹತ್ವದ ದಿನ ಎಂಬುದರ ಅರಿವಾಗದಿರದು. ಇದು ಎಲ್ಲರ ದಿನ ಆದರೂ ಯಾರ ದಿನವೂ ಅಲ್ಲ. ಎಲ್ಲರಿಗೂ ಏಪ್ರಿಲ್ ಒಂದು ಅಂದರೆ ಒಳಗೊಳಗೇ ಖುಶಿ ಆದರೆ ಯಾರೂ ತಮ್ಮನ್ನು ತಾವು ವಿಶ್ ಮಾಡಿಕೊಳ್ಳಲಾರರು. ಆದರೆ ನಗೆ ಸಾಮ್ರಾಟರಿಗೆ ಆ ಚಿಂತೆ ಇಲ್ಲ, ಅವರು ಸಂತೋಷವಾಗಿ, ಹೆಮ್ಮೆಯಿಂದೊಡಗೂಡಿ ವಿಶ್ ಮಾಡಿಕೊಳ್ಳುತ್ತಿದ್ದಾರೆ, ‘happy April First’!
-ನಗೆ ಸಾಮ್ರಾಟ್
ಇತ್ತೀಚಿನ ಪ್ರಜಾ ಉವಾಚ