ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).
ಈ ಸಂಚಿಕೆಯ ಸ್ಯಾಂಪಲ್:
ಕತ್ತೆ ಜನ್ಮ
ಬೀಚಿಯವರ ಆತ್ಮಕಥನ ‘ನನ್ನ ಭಯಾಗ್ರಫಿ’ಯಲ್ಲಿನ ರಸಪ್ರಸಂಗ:
ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡಾ ಸ್ಮಾರ್ತ ಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುತ್ತಿದ್ದರು. ನಮ್ಮೂರಲ್ಲಿ ಗೋಕರ್ಣೇಶ್ವರ ಗುಡಿ ಎಂದು ಒಂದಿದೆ. ಎಲ್ಲ ಮಾಧ್ವರೊಟ್ಟಿಗೆ ನಾನೂ ಒಂದು ಬಾರಿ ಹೋಗಿದ್ದೆ. ಕೊಬ್ಬರಿ ತಿಂದು ಬಂದಿದ್ದೆ.
“ಎಂದೂ ಹೋಗದೆ ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಏಕೆ ಹೋಗಬೇಕು?” ಎಂದು ನನ್ನ ಸೋದರತ್ತೆಯ ಗಂಡನನ್ನು ಕೇಳಿದ್ದೆ.
“ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ.”
ನಮ್ಮ ಮಾವ ಹೇಳಿದ ಸಮ್ಜಾಯಿಸಿ ಇದು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಪಾಪ! ಇದು ಹಿಂದಿನ ಜನ್ಮದಲ್ಲಿ ಮಾಧ್ವ ಬ್ರಾಹ್ಮಣ ಆಗಿತ್ತು ಎಂದಂದುಕೊಳ್ಳುತ್ತಿದ್ದೆ. ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ.
ಇತ್ತೀಚಿನ ಪ್ರಜಾ ಉವಾಚ