ಪರಿಚಯ


ನಗುವುದರಿಂದ ನಿಮ್ಮ ಮುಖದ ಸ್ನಾಯುಗಳು ಸಡಿಲಾಗುತ್ತವೆ. ನಗುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ನಗೆಯು ಹೃದಯವನ್ನು ಆರೋಗ್ಯವಾಗಿಡುತ್ತದೆ. ನಕ್ಕರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎಂದೆಲ್ಲಾ ವ್ಯಾಪಾರಿಯ ಹಾಗೆ ನಗುವಿನ ಗುಣಗಾನ ಮಾಡುವುದೇ ದೊಡ್ಡ ಹಾಸ್ಯವಾಗಿ ನಮಗೆ ಕಂಡ ದಿನ ನಾವು ನಗೆ ನಗಾರಿ ಡಾಟ್ ಕಾಮ್ ಪ್ರಾರಂಭಿಸುವ ಮನಸ್ಸು ಮಾಡಿದ್ದು.

ನಗು ಎನ್ನುವುದು ಈಗಿನ ದಿಡೀರ್ ದೋಸೆಯ ಕಾಲದಲ್ಲಿ ಆರೋಗ್ಯವರ್ಧಕ  ಬಹುಪಯೋಗಿ ವಸ್ತುವಾಗಿದೆ. ಆದರೆ ನಿಜಕ್ಕೂ ನಗು ಎನ್ನುವುದು ಒಂದು ಮನೋಧರ್ಮ. ಅದು ಒಂದು ಚಿಂತನ ಕ್ರಮ. ತನ್ನಷ್ಟಕ್ಕೆ ತಾನೇ ಅದೊಂದು ಸ್ವತಂತ್ರವಾದ ತತ್ವಶಾಸ್ತ್ರ.

ಬಾಲಿಶವಾದ ಸಂಗತಿಗಳನ್ನು ಅವಹೇಳನ ಮಾಡುವುದು, ಕುರೂಪ, ವಿಕಾರ, ವಕ್ರತೆಗಳನ್ನು ಬಿಂಬಿಸಿ ನಗೆಯುಕ್ಕಿಸುವುದು ನಗುವಿನ ಏಣಿಯ ಪ್ರಾರಂಭದ  ಮೆಟ್ಟಿಲುಗಳೇ ಸರಿ. ಆದರೆ ನಗು ಎನ್ನುವುದು ಅಲ್ಲಿಗೇ ನಿಲ್ಲುವಂಥದ್ದಲ್ಲ. ಸುತ್ತಮುತ್ತಲಿನ ಜಗತ್ತಿನಲ್ಲಿನ ಅರಾಜಕತೆ, ಹಿಪಾಕ್ರಸಿ, ದಡ್ಡತನಗಳನ್ನು ಸೂಕ್ಷ್ಮವಾಗಿ ಕಂಡು ಮನಃಪೂರ್ವಕವಾಗಿ ನಗುವುದಕ್ಕೆ ಉತೃಷ್ಟವಾದ ಬುದ್ಧಿಮತ್ತೆ ಅತ್ಯವಶ್ಯಕ. ಹೊರಗಿನ ವಸ್ತು, ವ್ಯಕ್ತಿಗಳಿಗೆ ತಾಕಿಸಿದ ವ್ಯಂಗ್ಯ, ಹಾಸ್ಯ, ಲೇವಡಿಯ ಮೊನೆಗೆ ತನ್ನನ್ನು ತಾನೇ ಈಡು ಮಾಡಿಕೊಂಡು ಹೃದಯದಿಂದ ಉಕ್ಕಿ ಬಂದ ನಗೆಯೊಳಕ್ಕೆ ಮುಳುಗಿ ಹೋಗುವುದಕ್ಕೆ ಪರಿಶುದ್ಧವಾದ ಮನಸ್ಸು ಬೇಕು. ಒಂದರಲ್ಲಿ ಬುದ್ಧಿವಂತಿಕೆಯ ಅಹಂ ಹಾಸ್ಯದ ಸಲಕರಣೆಯಾದರೆ ಮತ್ತೊಂದರಲ್ಲಿ ಅಹಂಕಾರ ಮೀರಿದ ವಿನಯ ವಿನೋದದ ತಿರುಳಾಗುತ್ತದೆ.

ಇಂತಹ ಒಂದು ಜೀವನ ದೃಷ್ಟಿಯ, ಚಿಂತನ ಕ್ರಮದ ಅನ್ವೇಷಣೆಯಲ್ಲಿ ಸಾಗುವ ಮಹದಾಸೆಯಿರುವ, ಬುದ್ಧಿವಂತಿಕೆಯನ್ನು ಬಳಸಿ ಬುದ್ಧಿವಂತಿಕೆಯನ್ನೇ ಲೇವಡಿ ಮಾಡುತ್ತಾ ಬುದ್ಧಿವಂತರಾದವರನ್ನು ವ್ಯಂಗ್ಯಕ್ಕೆ ಈಡುಮಾಡಿ ಬುದ್ಧಿವಂತರಾಗುವ ಹುಚ್ಚುತನಕ್ಕೆ ಬೀಳುವ ನಾವುಗಳು ನಗೆಯ ನಗಾರಿಯನ್ನು ಬಾರಿಸುತ್ತಿದ್ದೇವೆ .

ನಮ್ಮ ತಂಡ ಹೀಗಿದೆ:

ಸಾಮ್ರಾಟ್

ಕುಚೇಲ

ಶ್ರೀ ತೊಣಚಪ್ಪ

ಶ್ರೀ ಶ್ರೀ ಶ್ರೀ ಅಧ್ಯಾತ್ಮಾನಂದ

ಕೋಮಲ್

ಈ ನಮ್ಮ ಹುಚ್ಚಾಟದಲ್ಲಿ ಭಾಗಿಯಾಗುವುದಕ್ಕೆ ಆಸಕ್ತಿಯಿದ್ದರೆ ನೀವು ಎರಡು ಕೆಲಸ ಮಾಡಬಹುದು. ನಮ್ಮ ಬ್ಲಾಗಿಗೆ ಚಂದಾದಾರರಾಗಬಹುದು (ಚಂದಾ ಇಲ್ಲದೆ!) ಜೊತೆಗೆ ನಮ್ಮ ತಾಣಕ್ಕೆ ನೀವೂ ಬರೆಯಬಹುದು (ಸಂಭಾವನೆ ಇಲ್ಲದೆ 🙂 )

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: nagesamrat@gmail.com

19 Responses to “ಪರಿಚಯ”

  1. Gopinatha Rao ಜನವರಿ 28, 2008 at 10:11 ಫೂರ್ವಾಹ್ನ #

    good try\

    keep it up.

  2. ರಾಂ ಜನವರಿ 28, 2008 at 12:06 ಅಪರಾಹ್ನ #

    ಇದು ತುಂಬ ಚೆನ್ನಾಗಿದೆ. ಒಳ್ಳೆಯ ಅಭಿರುಚಿಯ ಹಾಸ್ಯವನ್ನು ಉಣಬಡಿಸಿ

  3. nagenagaaridotcom ಜನವರಿ 28, 2008 at 1:01 ಅಪರಾಹ್ನ #

    ಗೋಪಿನಾಥ್, ರಾಂ
    ನಗೆ ನಗಾರಿ ಸದ್ದಿಗೆ ಒಕ್ಕೊರಲು ಕೂಡಿಸಿದ್ದಕ್ಕೆ ಧನ್ಯವಾದಗಳು.
    ಆಗಾಗ ಬಂದು ನಗಾರಿ ಬಾರಿಸುತ್ತಿರಿ… ನಿಮ್ಮ ಗೆಳೆಯರಿಗೂ ಸದ್ದನ್ನು ಕೇಳಿಸಿ…
    ಸಾಧ್ಯವಾದರೆ ನಗಾರಿ ಸದ್ದಿಗೆ ದನಿಸೇರಿಸಲು ನಿಮ್ಮ ಬರಹ, ಸಂಗ್ರಹಿಸಿದ ಜೋಕು, ಹನಿಗವನ, ನಗಿಸುವ ಚಿತ್ರಗಳನ್ನು ಕಳುಹಿಸಿ
    ಇಂತು
    ನಗೆ ಸಾಮ್ರಾಟ್

  4. bannadanavilu ಮಾರ್ಚ್ 3, 2008 at 11:56 ಫೂರ್ವಾಹ್ನ #

    ನಿಮ್ಮ ನಗೆನಗಾರಿ ತುಂಬಾ ಮುದ್ದಾಗಿದೆ…ನಮ್ಮ ಚೋಟ ಬ್ಲಾಗಿನಲ್ಲಿ ನಿಮ್ಮ ಅದ್ಭುತ ಬ್ಲಾಗನ್ನ ಬ್ಲಾಗ್ ರೋಲ್ ನಲ್ಲಿ ಸೇರಿಸಿದ್ದೇನೆ…

  5. k.p.nagaraja ಏಪ್ರಿಲ್ 13, 2008 at 4:45 ಅಪರಾಹ್ನ #

    changide… enu chanagi barli

  6. nagenagaaridotcom ಮೇ 11, 2008 at 12:48 ಅಪರಾಹ್ನ #

    ಬಣ್ಣದ ನವಿಲು,
    ನಮ್ಮ ಛೋಟಾ ಬ್ಲಾಗಿಗೆ ಬಡಾ ಮೊಹಬ್ಬತ್ ತೋರಿಸಿದ್ದಕ್ಕೆ ಧನ್ಯವಾದಗಳು…

    ನಗೆ ಸಾಮ್ರಾಟ್

  7. nagenagaaridotcom ಮೇ 11, 2008 at 12:49 ಅಪರಾಹ್ನ #

    ನಾಗರಾಜರೇ,
    ಧನ್ಯವಾದಗಳು. ಇನ್ನೂ ಚೆನ್ನಾಗಿ ನಗಾರಿ ನುಡಿಸಲು ಏನು ಮಾಡಬಹುದು… ನಿಮ್ಮ ಅಭಿಪ್ರಾಯ ದಾಖಲಿಸಿದ್ದರೆ ಚೆನ್ನಾಗಿರುತ್ತಿತ್ತು…

    ನಗೆ ಸಾಮ್ರಾಟ್

  8. suresh ನವೆಂಬರ್ 8, 2008 at 6:41 ಅಪರಾಹ್ನ #

    ಸ್ವಾಮಿ ನಾನು ಸುದ್ದಿಯನ್ನಷ್ಟೆ ತಿಳಿಸಿರುವೆ. ವಿಶ್ಲೇಷಣೆ, ವಿಮರ್ಶೆ, ನಿಮಗೆ ಬಿಟ್ಟಿದ್ದೇನೆ. ಏನಾದರೂ ,ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ, ನೀವು ಚೆನ್ನಾಗಿ ನಗಿಸ್ತೀರಿ…

    – ಗೋಸುಬಾ..

  9. Nage samrat ನವೆಂಬರ್ 8, 2008 at 11:38 ಅಪರಾಹ್ನ #

    ಸುರೇಶರೇ,
    ಸ್ವಲ್ಪ ಹರಿತವಾಗಿ ಪ್ರತಿಕ್ರಿಯೆ ಬರೆದ್ರೆ ಯಾವನಪ್ಪಾ ಇಂವ ಬಡ್ಡೀ ಮಗ ಅಂಥ ಎಲ್ಲರ ಗಮನ ಹರಿಯುತ್ತದೆ ಎಂಬ ಒಂದೇ ಕಾರಣಕ್ಕೆ ನಿಮ್ಮ ಬ್ಲಾಗಿನಲ್ಲಿ ಹರಿತವಾಗಿ ಕಮೆಂಟು ಕೊಂಕಿಸಿದೆ… ಉಳಿದಂತೆ no hard feelings!
    ನಗೆ ನಗಾರಿಗೆ ಸ್ವಾಗತ…
    ಸುಳ್ಳು ಬಸಿರು ಮಾಡಿದ ಗಂಡನ ಪಾಡು ಹೇಗಿರಬೇಕು ಊಹಿಸಿ 🙂

    ನಗೆ ಸಾಮ್ರಾಟ್

  10. parashuram ಏಪ್ರಿಲ್ 9, 2009 at 12:48 ಫೂರ್ವಾಹ್ನ #

    hai contect

  11. parashuram ಏಪ್ರಿಲ್ 9, 2009 at 12:56 ಫೂರ್ವಾಹ್ನ #

    gfhj

  12. parashuram ಏಪ್ರಿಲ್ 15, 2009 at 9:49 ಅಪರಾಹ್ನ #

    tumba chenagede banee node anadese

  13. Marthandarao ಏಪ್ರಿಲ್ 17, 2009 at 10:30 ಫೂರ್ವಾಹ್ನ #

    ನಿಮ್ಮ ನಗೆನಗಾರಿ ಆಕಸ್ಮಿಕವಾಗಿ ಇಂದು ನನ್ನ ಕಣ್ಣಿಗೆ ಬಿತ್ತು. ಇನ್ನು ನಿಮ್ಮ ನಗಾರಿ ನನ್ನನ್ನು ಬಾರಿಸಿಲ್ಲ, ನಗಾರಿಯ ಬಡಿತ ನನ್ನನ್ನು ಹಾಸ್ಯದಲ್ಲಿ ಉರುಳಾಡಿಸಿದ ಮೇಲೆ ತಿಳಿಸುತ್ತೇನೆ.
    ಧನ್ಯವಾದಗಳು.

  14. Marthandarao ಏಪ್ರಿಲ್ 17, 2009 at 10:36 ಫೂರ್ವಾಹ್ನ #

    ಅಂದ ಹಾಗೆ, ನಿಮ್ಮ ನಗೆನಗಾರಿಯಲ್ಲಿ ಜೋಕುಗಳನ್ನು ಕಳಿಸುವದು ಹೇಗೆ ? ತಿಳಿಸಿರಿ. ನಾನೂ ಪ್ರಯತ್ನಿಸುತ್ತೇನೆ.

    ಧನ್ಯವಾದಗಳು.

  15. rathan ಅಕ್ಟೋಬರ್ 28, 2009 at 8:57 ಅಪರಾಹ್ನ #

    good try…i miss my chinnu

  16. rathan ಅಕ್ಟೋಬರ್ 28, 2009 at 8:59 ಅಪರಾಹ್ನ #

    ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ.
    ‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ- ಒಳಗೊಳಗೇ ನಗುತ್ತ ಹೀಗೆಂದ: ‘ಗೊತ್ತಿದೆಯಲ್ವ ನಿಂಗೂ? ಆಷಾಢ ಶುರುವಾಗಿದೆ. ಅದೇ ಕಾರಣಕ್ಕೆ ಹೆಂಡತಿ ಹೋಗಿ ಅಣ್ಣನ ಮನೆ ಸೇರ್ಕೊಂಡಿದಾಳೆ. ಅವಳ ಜೊತೆ ದಿನಕ್ಕೆ ಒಂದೆರಡಲ್ಲ, ನಲವತ್ತೆಂಟು ಬಾರಿ ಫೋನ್ ಮಾಡಿ ಮಾತಾಡ್ತಿದ್ದೆ ನಿಜ. ಆದ್ರೂ ಸಮಾಧಾನ ಆಗ್ತಾ ಇರಲಿಲ್ಲ. ನಿನ್ನೆ ಸಂಜೆ ಸೀದಾ ಅವಳ […]

  17. rathan ಅಕ್ಟೋಬರ್ 28, 2009 at 9:01 ಅಪರಾಹ್ನ #

    i love u so much ashwine i reall miss u…pls call me…..i will be waiting ur call

  18. shiva ಜನವರಿ 30, 2010 at 11:24 ಫೂರ್ವಾಹ್ನ #

    very goood , nice

  19. ISHWARA BHAT K ಮಾರ್ಚ್ 18, 2010 at 10:50 ಫೂರ್ವಾಹ್ನ #

    Thank you .. chennagide 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: