Tag Archives: ವಾರದ ವಿವೇಕ

ವಾರದ ವಿವೇಕ

20 ಆಗಸ್ಟ್

ಪರನಿಂದೆಯಲಿ ಪರಮಸುಖ ಅರಸುವ ಪಡಪೋಶಿ ಎಂಬ ಕುಶಾಲಿನ ಪಟ್ಟ ಬೇಕೆ? ನಿಮ್ಮ ಹೆಸರು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಬೇಕೆ?

ಹಾಗಿದ್ದರೆ ನಿಮ್ಮ ಕುಶಾಲು ಹರಟೆಯಲ್ಲಿ ,ಅನ್ನಿಸಿದ್ದನ್ನು ಎಗ್ಗಿಲ್ಲದೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ, ದೊಡ್ಡವರ ದಡ್ಡತನದ ಬಗ್ಗೆ ಉಡಾಫೆ ಮಾಡುವಾಗ ತುಸು ದೊಡ್ಡ ದನಿಯಲ್ಲಿ ಕನ್ನಡ ಪ್ರಭ ಸಂಪಾದಕರನ್ನು ಬೈದು ಬಿಡಿ.

– ನಗೆ ಸಾಮ್ರಾಟ್

ವಾರದ ವಿವೇಕ 44

18 ಸೆಪ್ಟೆಂ

…………………………………………………………………

ಪ್ರಗತಿಪರರು ತಲೆಮಾರಿನ ಹಿಂದೆ

ಯಾವುದಕ್ಕಾಗಿ ಹೋರಾಡಿದ್ದರೋ ಅದನ್ನು

ಉಳಿಸಿಕೊಳ್ಳಬೇಕೆಂದು ಇಂದು ಹೋರಾಡುವವನು

ಸಂಪ್ರದಾಯವಾದಿ!

…………………………………………………………………

ವಾರದ ವಿವೇಕ 43

20 ಆಗಸ್ಟ್

……………………………………….

ದೇಹದ ಎರಡೂ ತುದಿಯಲ್ಲಿ ಬೆಳವಣಿಗೆ ನಿಲ್ಲಿಸಿ

ಮಧ್ಯದಲ್ಲಷ್ಟೇ ಮುಂದುವರಿಸಿದವನು

ಮಧ್ಯವಯಸ್ಕ!

……………………………………….

ವಾರದ ವಿವೇಕ 42

15 ಮೇ

………………………

ಸಾವಿರಾರು ಮಂದಿ

ಒಬ್ಬಂಟಿಗಳು ಒಟ್ಟಿಗೇ

ಬದುಕುವ ಜಾಗಕ್ಕೆ

ನಗರ ಎನ್ನುವರು!

………………………

ವಾರದ ವಿವೇಕ 41

15 ಏಪ್ರಿಲ್

……………………………………

ಶ್ರೀಮಂತರಿಂದ ಹಣ ಪಡೆದು

ಬಡವರಿಂದ ಓಟು ಪಡೆದು

ಒಬ್ಬರಿಂದ ಇನ್ನೊಬ್ಬರನ್ನು ಕಾಪಾಡುವ

ಕೆಲಸ ಮಾಡುವವನಿಗೆ ರಾಜಕಾರಣಿ ಎನ್ನಬಹುದು!
…………………………………….

ವಾರದ ವಿವೇಕ 39

17 ಮಾರ್ಚ್

………………………………………………….

ಒಳಗೆ ಕೂತಿರುವುದಕ್ಕಿಂತ

ಎರಡು ಪಟ್ಟು ವೇಗದಲ್ಲಿ

ನೀವು ಹಿಂದೆ ಓಡುವಾಗ

ಚಲಿಸುವ ವಸ್ತುವನ್ನು ಬಸ್ಸು ಎನ್ನಬಹುದು.

………………………………………………….

ವಾರದ ವಿವೇಕ 39

8 ಮಾರ್ಚ್

……………………………………………………………

ಜೀವನವೆಲ್ಲ ಗುರುತಿಸಲ್ಪಡುವುದಕ್ಕಾಗಿ

ಒದ್ದಾಡಿ ಅನಂತರ ಗುರುತು ಸಿಗಬಾರದೆಂದು

ಕೂಲಿಂಗ್ ಗ್ಲಾಸ್ ಹಾಕಿ

ಓಡಾಡುವವರನ್ನು ಸೆಲೆಬ್ರಿಟಿ ಎನ್ನುವರು.
……………………………………………………………

ವಾರದ ವಿವೇಕ 38

1 ಮಾರ್ಚ್

…………………………………………………….

ಹಣವನ್ನಲ್ಲದೇ

ಬೇರೇನನ್ನೂ

ಕೊಡದ ವ್ಯಾಪಾರ

ಕಳಪೆ.

– ಹೆನ್ರಿ ಫೋರ್ಡ್

…………………………………………………….

ವಾರದ ವಿವೇಕ 37

16 ಫೆಬ್ರ

…………………………………………………….

ಖರ್ಚು ಮಾಡುವ

ಮೊದಲು ಹಾಗೂ ಮಾಡಿದ ನಂತರ

ಪರಿತಪಿಸುವ ಕಾರ್ಯಕ್ರಮಕ್ಕೆ

ಬಜೆಟ್ ಎನ್ನುವರು.

…………………………………………………….

ವಾರದ ವಿವೇಕ 36

15 ಜನ

…………………………………………………

ನನ್ನ ಬುದ್ಧಿಶಕ್ತಿಯನ್ನು ಹೊರತು ಪಡಿಸಿ
ಘೋಷಿಸುವುದಕ್ಕೆ ಬೇರೇನೂ
ನನ್ನ ಬಳಿ ಇಲ್ಲ.
ಆಸ್ಕರ್ ವೈಲ್ಡ್ (ಅಮೇರಿಕಾಗೆ ಬಂದಿಳಿದ ನಂತರ ಕಸ್ಟಮ್ಸ್ ಅಧಿಕಾರಿಗಳಿಗೆ ಹೇಳಿದ್ದು)

…………………………………………………