ವರ್ಷವೊಂದು ಗೋಡೆಯ ಮೇಲಿನ ಕ್ಯಾಲಂಡರ್ ಮಗುಚಿಕೊಂಡಷ್ಟೇ ಸಲೀಸಾಗಿ ಮಗುಚಿಕೊಳ್ಳುವಾಗ ಮಾಡಲು ಉಪಯುಕ್ತ ಕೆಲಸವಿಲ್ಲದವರು ವರ್ಷವಿಡೀ ಮಾಡಿದ ಮಾಡದ ಕೆಲಸಗಳೇನು ಎಂದು ತವಡು ಕುಟ್ಟುತ್ತ ಕುಳಿತುಕೊಳ್ಳುವುದು ಸಂಪ್ರದಾಯ. ಭೂತಗನ್ನಡಿ ಹಿಡಿದು ಜೀವಮಾನವನ್ನೇ ತಡಕಾಡಿದರೂ ಒಂದೇ ಉಪಯುಕ್ತವಾದ ಕೆಲಸ ಮಾಡದ ಜನರೂ ಸಹ ವರ್ಷದಂತ್ಯಕ್ಕೆ ಪುಣ್ಯ ಸಂಚಯದ ಬ್ಯಾಲೆನ್ಸ್ ಶೀಟ್ ಹಾಕುವುದರಲ್ಲಿ ಬ್ಯುಸಿಯಾಗುವುದು ವಾಡಿಕೆ.
ಈ ಸತ್ಸಂಪ್ರದಾಯವನ್ನು ಮುನ್ನಡೆಸುವ ಉದ್ದೇಶದಿಂದ ನಾವು ವರ್ಷಾಂತ್ಯದ ಕಡೇ ದಿನದಲ್ಲಿ ಕೂತು ನಗೆ ನಗಾರಿಯಲ್ಲಿ ವರ್ಷವಿಡೀ ನಡೆದ ವಿದ್ಯಮಾನಗಳನ್ನು ಅವಲೋಕಿಸಿದೆವು. ಈ ವರ್ಷದ ಬೆಸ್ಟ್ ಎನ್ನಬಹುದಾದಂತಹ ನಗಾರಿಯ ಐದು ಐಟಮುಗಳನ್ನು ಹೆಕ್ಕಿ ತಂದು ಇಲ್ಲಿ ಹರವಿದ್ದೇವೆ. ಹೊಸ ವರ್ಷದ ಪಾರ್ಟಿಗೆ ಆಹ್ವಾನಿತರಾಗದವರು, ಕೆಇಬಿ ಬ್ರಾಡ್ ಬ್ಯಾಂಡುಗಳ ಒಲುಮೆಯಿದ್ದ ಪುಣ್ಯವಂತರು ಅವುಗಳನ್ನು ಪುನಃ ಪಠಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಬಹುದು.
ನಂಬರ್ ಒನ್
ಗವಿ ಬಿಳಿಗೆರೆ ಲೇಖನ: ಸಿಗರೇಟಿನ ಮೊನೆಗೆ ಬೆಂಕಿ ತಾಗಿಸುವ ಹೊತ್ತಲ್ಲಿ ಕಂಡ ಮುಖದ ಕುರಿತು…
ನಂಬರ್ ಟೂ
ಅನಾಮಿಕ ಬ್ಲಾಗ್ ಜೀವಿಯ ವಿಶೇಷ ಸಂದರ್ಶನ!
ನಂಬರ್ ಥ್ರೀ
ಚರ್ಚೆ: ಡರ್ಟಿ ಜೋಕೆಂಬ ಬೇಲಿ ಹಾರುವ ಹುಮ್ಮಸ್ಸು!
ನಂಬರ್ ಫೋರ್
ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!
ನಂಬರ್ ಫೈವ್
ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು
ನಂಬರ್ ಫೈವ್
ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!
ವಿಸೂ: ಈ ಬರಹದ ಮೊದಲ ಡ್ರಾಫ್ಟ್ ಓದಿದ ಯುಕೆಜಿ ವಿದ್ಯಾರ್ಥಿನಿಯಾದ ನಮ್ಮ ಮಗಳು ಐದು ಐಟಂ ಎಂದು ಆರು ಪಟ್ಟಿ ಮಾಡಿರುವುದು ಗಮನಕ್ಕೆ ತಂದಳು. ಹೀಗಾಗಿ ಹೊಸ ವರ್ಷದ ನಮ್ಮ ಮೊದಲ ರೆಸೊಲ್ಯೂಶನ್: ಎಣಿಕೆ ಕಲಿಯುವುದು!
ಇತ್ತೀಚಿನ ಪ್ರಜಾ ಉವಾಚ