ಹೌದು, ಇವು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….
ರೇಖೆಗಳ ಮೂಲಕ ಮಾತನಾಡುವ ಕಾರ್ಟೂನಿಸ್ಟುಗಳ ಖದರೇ ಬೇರೆ. ಒಂದೇ ಕ್ಷಣದಲ್ಲಿ ಓದುಗನ ಗಮನವನ್ನು ಸೆಳೆದು ಹೇಳಬೇಕಾದುದನ್ನೆಲ್ಲಾ ಹೇಳಿ ಮುಗಿಸಿಬಿಡುವ ಕಾರ್ಟೂ‘ನಿಷ್ಟ’ರ ಕೌಶಲ ನಿಜಕ್ಕೂ ಅದ್ಭುತ. ದಿನಪತ್ರಿಕೆಯೊಂದರಲ್ಲಿ ಸಂಪಾದಕ ಕೂಡ ತನ್ನ ಕೊರೆತ ಶುರುಹಚ್ಚಲು ಓದುಗನ ಅನುಮತಿ ಪಡೆಯಲು ಕಾದು ಮಧ್ಯದ ಪುಟದಲ್ಲಿ ವಿರಮಿರಿಸಬೇಕು, ಖ್ಯಾತ, ಪ್ರಖ್ಯಾತ ಅಂಕಣಕಾರರೂ ಕ್ಯೂನಲ್ಲಿ ಮೌನವಾಗಿ ನಿಂತಿರಬೇಕು. ಪ್ರಚಂಡ ಕವಿಯೂ ಸಹ ತನ್ನ ಸರದಿ ಬರುವವರೆಗೂ ಕಾಲ ಕ್ಷೇಪಮಾಡುತ್ತಿರಬೇಕು. ಓದುಗನ ಮೊದಲ ಪ್ರೀತಿ ಎಂದಿಗೂ ಪುಟ್ಟದಾದ ಆದರೆ ಹರಿತವಾದ ಪಾಕೆಟ್ ಕಾರ್ಟೂನುಗಳ ಮೇಲೆ. ಇಡೀ ಸಂಪಾದಕೀಯವೊಂದು ಮಾಡದ ಪರಿಣಾಮವನ್ನು ಈ ಹತ್ತಾರು ಓರೆ ಕೋರೆ ಗೆರೆಗಳು ಮಾಡಿಮುಗಿಸುತ್ತವೆಂದರೆ ಇದಕ್ಕಿಂತ ವಿಸ್ಮಯ ಬೇರೆಲ್ಲಿದೆ?
ಅಮೃತ್.ವಿ ಎನ್ನುವವರು ಹಲವು ಪಾಕೆಟ್ ಕಾರ್ಟೂನುಗಳನ್ನು ಬರೆದಿದ್ದಾರೆ. ಅವನ್ನು ತಮ್ಮ ಬ್ಲಾಗಿಗೂ ಹಾಕಿದ್ದಾರೆ. ಅದಕ್ಕೆ ಅಚ್ಚುಕಟ್ಟಾಗಿ ‘ಟೂನಂಗಡಿ’ ಎಂದು ನಾಮಕರಣ ಮಾಡಿದ್ದಾರೆ.
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
ಅವರ ಗೆರೆಗಳ ಜಾದೂವಿನ ಕೆಲವು ಸ್ಯಾಂಪಲ್ ಇಲ್ಲಿವೆ:
ಇತ್ತೀಚಿನ ಪ್ರಜಾ ಉವಾಚ