(ದಿಲೀಪ್ ಹೆಗಡೆ ಬರೆದಿರುವ ‘ಪಂಚರಂಗಿ ಹಾಡುಗಳು’ ಸಾಂಗಿನ ಪರೋಡಿ ನಗಾರಿಯಲ್ಲಿ…)
ಕಾಲೇಜು ಕ್ಯಾಂಪಸ್ಸಿನ ತುಂಬಾ
ಕಲರ್ ಕಲರ್ ಚಿಟ್ಟೆಗಳು
ಮಚ್ಚಾ, ಸಿಸ್ಯಾ.. ಸದಾ
ಗಿಜಿಗುಟ್ಟುವ ಪಡ್ಡೆಗಳ ಹರಟೇ ಕಟ್ಟೆಗಳು
ಹುಡುಗಿಯರ ಹಿಂದಲೆದು
ಸವೆಯುವ ಚಪ್ಪಲಿಯ ಅಟ್ಟೆ ಗಳು
ಪರೀಕ್ಷೆ ಫಲಿತಾಂಶದಲ್ಲಿ
ನಿರೀಕ್ಷೆಯಂತೆ ದೊಡ್ಡ ಸಣ್ಣ ಮೊಟ್ಟೆಗಳು
ಬದುಕು ಅನಿವಾರ್ಯವಾದಾಗ
ದುಡಿದು ದಣಿವ ರಟ್ಟೆಗಳು
ಎಷ್ಟು ಮಾಡಿದರೂ ಸಾಲದೆಂಬ
ಬಾಸ್ ರೂಪದ ಕತ್ತೆಗಳು
ಸಿಗದ ಪ್ರಶಂಸೆ ಮುಂಬಡ್ತಿ
ವಿಶೇಷ ಭತ್ತೆಗಳು
ಮದುವೆಯ ಸಂಭ್ರಮದಲ್ಲಿ
ಅಪ್ಪ ಅಮ್ಮ ಮಾವ ಅತ್ತೆಗಳು
ಮೈ ತುಂಬಾ ಮಲ್ಲಿಗೆ ಮುಡಿದ
ಮೊದಲ ರಾತ್ರಿಯ ಮೆತ್ತೆಗಳು
ಅಂಕಲ್ ಆಗುತ್ತಲೇ
ಎದ್ದು ಕಾಣುವ ಹೊಟ್ಟೆಗಳು
ನಾಳೆ ಹುಟ್ಟುವ ಕೂಸಿಗೆ
ಇಂದೇ ಹೊಲಿದಿಡುವ ಬಟ್ಟೆಗಳು
ಕೂಸಿಗೆ ತುತ್ತುಣಿಸಿ
ಖಾಲಿಯಾಗುವ ಊಟದ ತಟ್ಟೆಗಳು
ಮಕ್ಕಳ ಭವಿಷ್ಯಕ್ಕೆ ತುಂಬಿಡುವ
ಧನ ಕನಕದ ಕೊಟ್ಟೆಗಳು
ಪರರ ಆಸರೆಯಲ್ಲಿ ನೊಂದು
ಬತ್ತುವ ಕಣ್ಣೀರ ಕಟ್ಟೆಗಳು
ಕೊನೆಗೊಮ್ಮೆ ಬೋರಾಗಿ
ಕರೆಸಿಕೊಳ್ಳುವ ಭಗವಂತನ ವ್ಯವಸ್ಥೆಗಳು …
ಲೈಫು ಇಷ್ಟೇ ಅಲ್ಲ…
ಇತ್ತೀಚಿನ ಪ್ರಜಾ ಉವಾಚ