Tag Archives: ಪ್ರತಿಕ್ರಿಯೆ

ಉತ್ತರ ಕುಮಾರ: ತಿಳಿದಿಲ್ಲವೇ, ನಾವು ಪತ್ರಕರ್ತರು!

22 ಆಕ್ಟೋ

ಸಾಮ್ರಾಟರು ಉತ್ತರ ಕುಮಾರ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಇವರ ಪೌರುಷವೆಲ್ಲಾ ಕೀಬೋರ್ಡ್ ಮುಂದೆ. ಚಿಕ್ಕವರಿದ್ದಾಗ ಇವರು ಕೇಳುತ್ತಿದ್ದ ಪ್ರಶ್ನೆಗಳಿಗೂ ಈಗವರು ಕೊಡುವ ಉತ್ತರಗಳಿಗೂ ಅಂತಹ ವ್ಯತ್ಯಾಸವೇನಿಲ್ಲ ಎಂದು ಮಂಗಳೂರು ವಿವಿಯ ವಿದ್ಯಾರ್ಥಿಯೊಬ್ಬ ಸಂಶೋಧನಾ ಪ್ರಬಂಧವನ್ನು ಬರೆದು ಅಲ್ಲಿಂದ ಗಡೀಪಾರಾಗಿದ್ದಾನೆ. ನಮ್ಮ ಪತ್ರಿಕೆಯ ಸಂಚಿಕೆಯೊಂದರಲ್ಲಿ ನಗೆ ಸಾಮ್ರಾಟರ ಉತ್ತರ ಪರಾಕ್ರಮವನ್ನು ಬಿಂಬಿಸುವ ಪ್ರತಿಕ್ರಿಯೆಗಳನ್ನು ಆಯ್ದು ಈ ಅಂಕಣದಲ್ಲಿ ಪ್ರಕಟಿಸಲಾಗುವುದು. ಈ ಉತ್ತರ ಕುಮಾರನಿಗೆ ಸಾರಥಿಯಾಗಿ ಯಾವ ಅರ್ಜುನನೂ ಇಲ್ಲವೆಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ!

uttara kumara

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

ranjit adiga:

ನೋಬೆಲ್ ನೋರಿಗೆ “ಒಸಾಮಾ” ಅಂತ ಹಾಕುವ ಬದಲು “ಒಬಾಮಾ” ಅಂತ ಸ್ಪೆಲ್ಲಿಂಗ್ ಮಿಷ್ಟೇಕು ಆಗಿರ್ಬೋದಾ ಸಾಮ್ರಾಟರೇ?

ನಿಮ್ಮನ್ನೂ ಸೇರಿಸಿ ಜನರ ರಿಯಾಕ್ಷನ್ನು , ಇಬ್ಬರಲ್ಲಿ ಯಾರಿಗೆ ದೊರೆತರೂ ಒಂದೇ ರೀತಿ ಆಗಿರಬಹುದು ಅನ್ನಿಸಿತು.

Nage samrat

ಒಸಾಮಾಗೆ ಶಾಂತಿ ನೋಬೆಲ್ ಬಹುಮಾನ ಕೊಡಲೇಬೇಕು ಎಂಬ ನಿಮ್ಮ ಆಗ್ರಹಕ್ಕೆ ನಮ್ಮ ಸಮ್ಮತಿಯಿದೆ. ಬಹುಮಾನವನ್ನು ಸ್ವೀಕರಿಸಲು ವೇದಿಕೆಗೆ ಬಂದಾಗಲಾದರೂ ಅವನನ್ನು ಹಿಡಿಯಲು ಸಾಧ್ಯವಾಗಬಹುದು!

ರಿಯಾಕ್ಷನ್ನು ಕೊಡುವುದೇ ಪತ್ರಿಕೆಯ ಕೆಲಸ. ಗಾಂಧಿಗೆ ನೊಬೆಲ್ ಸಿಕ್ಕದಿರುವಾಗ ‘ಗಾಂಧಿಗೇ ದೊರಕದ ನೊಬೆಲ್ ಅದೆಷ್ಟು ನೊಬೆಲ್?’ ಎಂದು ಮೂಗೆಳೆಯುತ್ತೇವೆ. ಗಾಂಧಿಗೆ ನೊಬೆಲ್ ಸಿಕ್ಕಿದ್ದಿದ್ದರೆ ಹಿಂದೂ ಮುಸ್ಲೀಂ ಗಲಭೆ, ಪಾಕಿಸ್ತಾನದ ಸೃಷ್ಟಿ ಎಲ್ಲವನ್ನೂ ಎಳೆದುತಂದು ಗಾಂಧಿಗೆ ಕೊಟ್ಟ ಮೇಲೆ ಅದೆಷ್ಟು ನೊಬೆಲ್? ಎಂದು ಕೇಳುತ್ತೇವೆ! ನಾವು ಪತ್ರಕರ್ತರು ನಿಮಗೆ ತಿಳಿದಿಲ್ಲವೇ?

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

Richard shitkins:

Hi Your Holiness Swami Hadhyatmanand,

Pardon me for not writing in your holy tongue as I am yet to get to know it well enough to be able to write in it.

I am visiting your country as part of my research project into
all kinds of shit versus the famous spirituality of your country of holy cows and bullshit which you guys worship.

May I seek to get some enlightenment from your holiness?

Thanks. Different religions and isms of the world have interpreted shit according to the tenets of their own beliefs. For your ready reference, I have reproduced them in a separate mail.

May I seek your indulgence in explaining how you view your own shit?

 

Adhyatmananda swamiji

Dear shitkins,
Accept my blessings.
I wish you all the very best for your research, i hope it goes on very well. you can find too much of shit for free in India. Finding it very easy here. If you do the same in other countries you would be robbed of your precious possessions.

our understanding about shitology is simple. You get what you seek, it may be shit or sat-chit-ananda. Knowing your interest and indulgence , i assure you you`ll get it enough!!

I bow to HIM present in you..

ನಗಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಸುರಿಮಳೆ!

6 ಫೆಬ್ರ

ನಗೆ ನಗಾರಿ ಡಾಟ್ ಕಾಮ್‌ನ ವಾರ್ಷಿಕೋತ್ಸವ ಸಮಾರಂಭದ ಬಗ್ಗೆ ಸವಿರವಾದ ವರದಿಯನ್ನು ನೀಡಬೇಕಿದ್ದ ತೊಣಚಪ್ಪ ಹಾಗೂ ಕುಚೇಲರು ಪಾರ್ಟಿಯಲ್ಲಿನ ಪ್ರಸಾದ, ತೀರ್ಥದಿಂದ ‘ಸಮಾಧಿ’ ಸ್ಥಿತಿಯನ್ನು ತಲುಪುವುದರಿಂದ ಸಾಮ್ರಾಟರಾದ ನಾವೇ ಕುದುರೆಗಳ ಲಗಾಮು ಹಿಡಿಯಬೇಕಿದೆ. ಹೀಗಾಗಿ ವರದಿ ಕೊಂಚ ತಡವಾಗಲಿದೆ. ಆದರೆ ನಮ್ಮಹಾಗೂ ನಮ್ಮ ಪತ್ರಿಕೆಯ ಹುಟ್ಟು ಹಬ್ಬಕ್ಕೆ ನಮ್ಮ ಭಕ್ತ ವೃಂದವು ಪ್ರತಿಕ್ರಿಯಿಸಿರುವ ರೀತಿಯನ್ನು ನೆನೆಯದಿದ್ದರೆ ನಮಗೆ ಮನಃಶಾಂತಿ ಲಭ್ಯವಾಗುವುದಿಲ್ಲ.

ಗಣೇಶ್.ಕೆ

mareyabahudemba bhayadinda eegale abhinandisuttiddene.
aadare neevu nageyanna nandisabedi anta kelikolluttene.

ಪ್ರಸಾದ್

ನೂರ್ಕಾಲ ಬೆಳಗಲಿ ನಗೆಯ ದೀವಿಗೆ
ಅನುಗಾಲವೂ ಹರಿಯಲಿ ಸಾಮ್ರಾಟರ ಕಿರುನಗೆ
ಅಭಿಮಾನಿಗಳ ಎದೆಯಲ್ಲಿ ಸಂಭ್ರಮವು ಬಗೆಬಗೆ.
“ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು”

ಹೇಮಾ ಪವಾರ್

ಸಾಮ್ರಾಟರೇ ವರ್ಷವಿಡೀ ನಗೆ ನಗಾರಿಯ ರಥ ಸುಗಮವಾಗಿ ನಡೆಸಿಕೊಂಡು ಬಂದಿದ್ದೀರಿ. ಅದರ ರಹಸ್ಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನೂ ಮುಗಿಸಿದ್ದೀರಿ. ನಿಮ್ಮ ಚೇಲ ಕುಚೇಲನ ಭಯಂಕರ ವಿರೋಧವಿದ್ದರೂ, ನಮ್ಮೆಲ್ಲರ ಪರವಾಗಿ ನಿಮಗೊಂದು ಸನ್ಮಾನ ಸಮಾರಂಭ ಏರ್ಪಡಿಸಬೇಕೆಂದಿದ್ದೇವೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು??

ವಿ. ಸುಮಂತ ಶ್ಯಾನುಭಾಗ್

ಸಾಮ್ರಾಟರೆ .. ಸನ್ಮಾನವೆಂದರೆ ಯಾರ ಬಳಿ ಏನು ಇಲ್ಲವೋ ಅದನ್ನು ಕೊಡುವುದು ಎಂದರ್ಥ .. ಹೇಮಾ ಅವರಿಗೆ ಎಷ್ಟು ಸೊಕ್ಕು ನೋಡು ನಿಮಗೆ ಮಾನ ಮರ್ಯಾದೆ ಕೊಡುತ್ತೇನೆ ಅಂಥಾ ಇದ್ದಾರೆ

ಏನೇ ಇರಲಿ ಸಮಸ್ತ ಕನ್ನಡಿಗರಿಗೆ ದಿನವೂ ಹಾಸ್ಯರಸದ ಭೂರಿಭೋಜನ ಬಡಿಸುತ್ತಿರುವ , ಸ್ವಯಂಘೋಷಿತ ನಗೆಸಾಮ್ರಾಟ್ , ಕಲಿಯುಗದ ಆಸ್ಥಾನ ವಿದೂಷಕ , ಒಂದು ವರುಷದ ಮಗು “ನಗೆನಗಾರಿ ” ಮತ್ತದರ ಚಮಚಾಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ .
ಶ್ರೀ ದೇವರು ತಮಗೆ ದೀರ್ಘಾಯುಷ್ಯ ,ಆರೋಗ್ಯ ,ಸುಖ ಶಾಂತಿ ನೆಮ್ಮದಿಗಳನ್ನು ಕರುಣಿಸಲೆಂದು ಆತನ ಚರಣಕಮಲಗಳಲ್ಲಿ ಪ್ರಾರ್ಥಿಸುತ್ತೇನೆ . ನಿಮ್ಮ ನಗಾರಿಯ ಶಬ್ದ ಕನ್ನಡನಾಡಿನಾದ್ಯಂತ ಮಾರ್ದನಿಸಲಿ ,ನಿಮ್ಮ ನಗೆಗಡಲಲ್ಲಿ ಇನ್ನೊ ದೊಡ್ಡ ದೊಡ್ಡ ನಗುವಿನ ಅಲೆಗಳು ಏಳಲಿ ಹಾಗೋ ನಮ್ಮಂಥ ನಿಮ್ಮ ಅಭಿಮಾನಿಗಳು ಆ ನಗೆಗಡಲಲ್ಲಿ ತೇಲುವಂತಾಗಲಿ ಎಂದು ಹಾರೈಸುತ್ತೇನೆ .

ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳೊಂದಿಗೆ

ರಂಜಿತ್ ಅಡಿಗ

“ಸೋಮಾರಿ ಮಿತ್ರ”ನೆಂದು ಉಲ್ಲೇಖಿಸಿ, ನಿಮ್ಮ ಅಸಂಖ್ಯ ಓದುಗರೆದುರು ನನ್ನನ್ನು ನೆನೆದುದ್ದಕ್ಕೆ ಕಣ್ತುಂಬಿ ಬಂತು.

ಅಂದ ಹಾಗೆ ಫೆಬ್ರವರಿ ೧೪ ಹತ್ತಿರ ಬಂತು, ಸಾಮ್ರಾಟರ ಪ್ರೇಮ ಕತೆಗಳನ್ನು ಓದುವ ಸೌಭಾಗ್ಯ ದೊರಕೀತೆ??

ನಗಾರಿಯಲ್ಲಿ ಪ್ರತಿಕ್ರಿಯೆಗಳೇಕಿಲ್ಲ?

13 ಜುಲೈ

ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಗೆ ನಗಾರಿಯ ತಾಣಕ್ಕೆ ದಿನವೊಂದಕ್ಕೆ ಐವತ್ತರಿಂದ ನೂರು ಮಂದಿ ಮೌಸು ಚಿಟುಕಿಸಿ ಹೋಗುತ್ತಾರೆ. ಇಲ್ಲಿನ ಹಾಸ್ಯದ ಅಬ್ಬರಕ್ಕೆ ನವಿರಾಗಿ ನಲುಗಿ ಮನಸಾರೆ ನಗುತ್ತಾರೆ. ಆದರೆ ಕೆಲವೇ ಕೆಲವರು ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆ. ಧ್ವನಿಗೆ ಪ್ರತಿಧ್ವನಿಯನ್ನು ಸೇರಿಸುತ್ತಾರೆ. ಯಾಕೆ ಹೀಗೆ?

ಇದಕ್ಕೆ ಮುಖ್ಯ ಕಾರಣ ನಮ್ಮ ‘ನಗೆ ಸಾಮ್ರಾಟ್’ ಎಂಬ ಅವತಾರ ಎನ್ನುತ್ತಾರೆ ನಮ್ಮ ಹಿತೈಷಿಗಳು. ನಮ್ಮ ಅ‘ನಾಮ’ಧೇಯತೆಯೇ ಓದುಗರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುವಂತೆ ಮಾಡುತ್ತಿದೆ. ನಮ್ಮ ಗುರುತಿಲ್ಲದ, ಪರಿಚಯವಿಲ್ಲದ ವಿವರವೇ ಪ್ರತಿಸ್ಪಂದನೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ ಎಂಬುದು ಅವರ ವಾದ.

ಜನರು ಅಗೋಚರವಾದ ದೇವರಿಗೆ ಪೂಜೆ ಮಾಡುತ್ತಾರೆ, ನೈವೇದ್ಯ ತೋರಿಸುತ್ತಾರೆ, ಕೈ ಮುಗಿಯುತ್ತಾರೆ ಆದರೆ ಆತನೊಂದಿಗೆ ಕಷ್ಟ ಸುಖ ಮಾತನಾಡುತ್ತಾ ಹರಟೆಗೆ ಕೂರುವುದಿಲ್ಲ. ಕೆಲವರು ದೆವ್ವ, ಭೂತಗಳಿಗೂ ಮರ್ಯಾದೆ ಕೊಡುತ್ತಾರೆ, ಹೆದರುತ್ತಾರೆ, ಪ್ರಾಣಿ ಬಲಿ ಕೊಟ್ಟು ಉಂಡು ಮಲಗುತ್ತಾರೆ. ಅವುಗಳನ್ನು ಹರಟೆ ಕಟ್ಟೆಗೆ ಎಳೆದುಕೊಂಡು ಬರುವುದಿಲ್ಲ. ಹಾಗೆಯೇ ನಗೆ ಸಾಮ್ರಾಟ್ ಎಂಬ ಮುಖವಿಲ್ಲದ ಗುರುತನ್ನು ಓದುಗರು ಮೆಚ್ಚುತ್ತಾರೆ, ಇಷ್ಟಪಡುತ್ತಾರೆ ಆದರೆ ಅದರೊಂದಿಗೆ ಸಂವಾದಕ್ಕೆ ತೊಡಗುವುದಿಲ್ಲ. ಅವರಿಗೇನಿದ್ದರೂ ತಮ್ಮ ಹಾಗೆ ಗುರುತಿರುವ ಜನರು ಬೇಕು ಮಾತಿಗೆ, ಹರಟೆಗೆ, ಪ್ರತಿಸ್ಪಂದನಕ್ಕೆ. ಹೀಗಾಗಿ ನಗೆ ಸಾಮ್ರಾಟರು ಹರಟಲಾಗದೆ ಒದ್ದಾಡುತ್ತಿದ್ದಾರೆ.

ಇನ್ನೂ ಕೆಲವು ಸುದ್ದಿ ಮೂಲಗಳ ಪ್ರಕಾರ. ನಗೆ ನಗಾರಿ ಡಾಟ್ ಕಾಮಿಗೆ ಬಂದು ನಗುನಗುತ್ತಾ ಜನರು ಎದ್ದು ಹೋಗಿಬಿಡುತ್ತಾರೆ. ಅವರಿಗೆ ನಾಲ್ಕು ಮಾತು ಆಡಬೇಕು ಎನ್ನುವುದೂ ಮರೆತುಹೋಗುವಷ್ಟು ನಗುಬಂದಿರುತ್ತದೆ. ಅವರಿಗೆ ನಗೆ ತರಿಸದ ವಿಚಾರವಿದ್ದರೆ ಅಲ್ಲಿ ಪ್ರತಿಕ್ರಿಯೆ ನೀಡಿರುತ್ತಾರೆ. ಈ ಸುದ್ದಿ ಮೂಲವನ್ನು ನಾವು ಮಾನ್ಯ ಮಾಡಿದ್ದು ಪ್ರತಿಕ್ರಿಯೆಗಳು ಅಷ್ಟಾಗಿ ಸಿಕ್ಕದ ದಿನ ಅದನ್ನು ನಾವು ಪುನಃ ಪುನಃ ಓದಿ ಖುಶಿ ಪಡುತ್ತೇವೆ.

ಒಂದು ವರ್ಗದ ಜನರಿಗೆ ಇಂಥಾ ‘ಸಿಲ್ಲಿ’ ಬ್ಲಾಗ್‌ಗಳಲ್ಲಿ ತಮ್ಮ ಹೆಸರಿನಲ್ಲಿ ಪ್ರತಿಕ್ರಿಯೆ ಹಾಕಿದರೆ ತಮ್ಮ ‘ಇಮೇಜಿಗೆ’ ಘಾಸಿಯಾಗುತ್ತದೆ ಎಂಬ ಭಯವಿರುತ್ತದೆ. ಗಂಭೀರ ಓದುಗರು, ಪ್ರಜ್ಞಾವಂತ ಬ್ಲಾಗಿಗರು ಎಲ್ಲಾದರೂ ಜೋಕು ಹೇಳಿಕೊಂಡು, ಜೋಕು ಓದಿಕೊಂಡು ಕಾಲ ಕಳೆಯಲು ಸಾಧ್ಯವಾಗುತ್ತದೆಯೇ? ಹಾಗೆ ಅಲ್ಲರ ಹಾಗೆ ಸದಾ ನಗುತ್ತಲೇ ಇದ್ದರೆ ನಮ್ಮನ್ನು ಜನ ‘ಗಂಭೀರ ಚಿಂತಕ’ರು ಎಂದು ಪರಿಗಣಿಸುವುದೇ ಇಲ್ಲ ಎಂಬುದು ಅವರ ವಾದ. ಹೀಗಾಗಿ ಅಂಥವರಿಗಾಗಿ ನಾವು ನಗೆ ನಗಾರಿಯಲ್ಲಿ ‘ನಗ ಬಾರದು’ ಅಂಕಣವನ್ನು ಶುರು ಮಾಡುವ ಆಲೋಚನೆ ಮಾಡಿದ್ದೇವೆ. ಆ ಅಂಕಣವನ್ನು ಓದಿ ಯಾರೂ ನಗಬಾರದೆಂದೂ, ಒಂದು ವೇಳೆ ಇಡೀ ಅಂಕಣವನ್ನು ಓದಿಯೂ ಯಾರು ನಗುವುದಿಲ್ಲವೋ ಅವರನ್ನು ‘ಶ್ರೇಷ್ಠ ಗಂಭೀರ ಚಿಂತಕ’ ಎಂದು ಘೋಷಿಸಲಾಗುವುದೆಂದೂ ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ.

ನಗೆ ನಗಾರಿಗೆ ಪ್ರತಿಕ್ರಿಯೆಗಳು ಏಕಿಲ್ಲ? ಇದಕ್ಕಾದರೂ ಪ್ರತಿಕ್ರಿಯಿಸಿ!

– ನಗೆ ಸಾಮ್ರಾಟ್