ಮತ್ತೊಂದು ಪರೋಡಿ: ಲೈಫು ಇಷ್ಟೇ ಅಲ್ಲ…

6 ಆಕ್ಟೋ

dh

(ದಿಲೀಪ್ ಹೆಗಡೆ ಬರೆದಿರುವ ‘ಪಂಚರಂಗಿ ಹಾಡುಗಳು’ ಸಾಂಗಿನ ಪರೋಡಿ ನಗಾರಿಯಲ್ಲಿ…)

 

ಕಾಲೇಜು ಕ್ಯಾಂಪಸ್ಸಿನ ತುಂಬಾ
ಕಲರ್ ಕಲರ್ ಚಿಟ್ಟೆಗಳು
ಮಚ್ಚಾ, ಸಿಸ್ಯಾ.. ಸದಾ
ಗಿಜಿಗುಟ್ಟುವ ಪಡ್ಡೆಗಳ ಹರಟೇ ಕಟ್ಟೆಗಳು
ಹುಡುಗಿಯರ ಹಿಂದಲೆದು
ಸವೆಯುವ ಚಪ್ಪಲಿಯ ಅಟ್ಟೆ ಗಳು
ಪರೀಕ್ಷೆ ಫಲಿತಾಂಶದಲ್ಲಿ
ನಿರೀಕ್ಷೆಯಂತೆ ದೊಡ್ಡ ಸಣ್ಣ ಮೊಟ್ಟೆಗಳು
ಬದುಕು ಅನಿವಾರ್ಯವಾದಾಗ
ದುಡಿದು ದಣಿವ ರಟ್ಟೆಗಳು

ಎಷ್ಟು ಮಾಡಿದರೂ ಸಾಲದೆಂಬ
ಬಾಸ್ ರೂಪದ ಕತ್ತೆಗಳು
ಸಿಗದ ಪ್ರಶಂಸೆ ಮುಂಬಡ್ತಿ
ವಿಶೇಷ ಭತ್ತೆಗಳು
ಮದುವೆಯ ಸಂಭ್ರಮದಲ್ಲಿ
ಅಪ್ಪ ಅಮ್ಮ ಮಾವ ಅತ್ತೆಗಳು
ಮೈ ತುಂಬಾ ಮಲ್ಲಿಗೆ ಮುಡಿದ
ಮೊದಲ ರಾತ್ರಿಯ ಮೆತ್ತೆಗಳು

ಅಂಕಲ್ ಆಗುತ್ತಲೇ
ಎದ್ದು ಕಾಣುವ ಹೊಟ್ಟೆಗಳು
ನಾಳೆ ಹುಟ್ಟುವ ಕೂಸಿಗೆ
ಇಂದೇ ಹೊಲಿದಿಡುವ ಬಟ್ಟೆಗಳು
ಕೂಸಿಗೆ ತುತ್ತುಣಿಸಿ
ಖಾಲಿಯಾಗುವ ಊಟದ ತಟ್ಟೆಗಳು
ಮಕ್ಕಳ ಭವಿಷ್ಯಕ್ಕೆ ತುಂಬಿಡುವ
ಧನ ಕನಕದ ಕೊಟ್ಟೆಗಳು
ಪರರ ಆಸರೆಯಲ್ಲಿ ನೊಂದು
ಬತ್ತುವ ಕಣ್ಣೀರ ಕಟ್ಟೆಗಳು

ಕೊನೆಗೊಮ್ಮೆ ಬೋರಾಗಿ
ಕರೆಸಿಕೊಳ್ಳುವ ಭಗವಂತನ ವ್ಯವಸ್ಥೆಗಳು …
ಲೈಫು ಇಷ್ಟೇ ಅಲ್ಲ…

2 Responses to “ಮತ್ತೊಂದು ಪರೋಡಿ: ಲೈಫು ಇಷ್ಟೇ ಅಲ್ಲ…”

  1. sitaram ಅಕ್ಟೋಬರ್ 6, 2010 at 3:21 ಅಪರಾಹ್ನ #

    ಚೆನ್ನಾಗಿದೆ.

  2. ವಿಷ್ಣು ಭಟ್ಟ, K.G.F. ಅಕ್ಟೋಬರ್ 24, 2010 at 7:42 ಫೂರ್ವಾಹ್ನ #

    ಭಲೇ ಚೆನ್ನಾಗಿದೆ ಜೀವನ ಚಿತ್ರಗಳು
    ಉರುಳುವುದೇ ಸರಿ ಗಾಲಿಯ ಚಕ್ರಗಳು
    ಮೇಲೆ ಕೆಳಗಾಗುವ ಸುಖ-ಕಷ್ಟಗಳು

    ಇಂತಹ ಕವನಗಳೇ ನನ್ನ ಇಷ್ಟಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: