ಈ ವೈಫು ಇಷ್ಟೇನೇ…

6 ಸೆಪ್ಟೆಂ

(ಪಂಚರಂಗಿಯ ಭರ್ಜರಿ ಯಶಸ್ವಿ ಜನಪದ ಗೀತೆ ‘ಲೈಫು ಇಷ್ಟೇನೇ’ ಸ್ಪೂರ್ತಿಯಲ್ಲಿ ಸಾಮ್ರಾಟರು ದಿನವೂ ಗಂಡಂದಿರ ಅಂತರಂಗದ ಗ್ರಾಮಾಫೋನಿನಲ್ಲಿ ನುಡಿಯುವ ಭಾವವನ್ನು ಎತ್ತಿಕೊಂಡು ಹಾಡು ಕಟ್ಟಿದ್ದಾರೆ. ಭವಿಗಳು, ಅನುಭವಿಗಳು ಹೆಚ್ಚು ಸಾಲುಗಳನ್ನು ಸೇರಿಸಬಹುದು)

ಲವ್ವು ಗಿವ್ವು ಮಾಡಿ ಕಟ್ಕೋ
ಅಮ್ಮ ತೋರ್ಸಿದ್ ಹೆಣ್ಣೇ ಒಪ್ಕೋ
ಫಾರಿನಲ್ಲೇ ಮದ್ವೆ ಮಾಡ್ಕೋ
ವೈಫು ಇಷ್ಟೇನೇ!

ಕುಳ್ಳಗಿದ್ರೂ ಅಡ್ಜಸ್ಟ್ ಮಾಡ್ಕೋ
ದಪ್ಪ ಹೊಟ್ಟೇನ್ ಇಗ್ನೋರ್ ಮಾಡು
ಉಬ್ಬು ಹಲ್ಲನು ನೋಡಲೇ ಬೇಡ
ವೈಫು ಇಷ್ಟೇನೇ

ಗಂಡ ನೀನು ಡ್ರೈವರ್ ಆಗು
ಅಡುಗೆ ಮಾಡಿ ಇಸ್ತ್ರೀ ಹಾಕು
ಮುಸುರೆ ತೊಳೆದು ಕೆಲ್ಸಕ್ ಹೋಗು
ವೈಫು ಇಷ್ಟೇನೆ

ಅಮ್ಮ ಬೇರೆ ಮನೆಯ ಮಾಡ್ಲಿ
ಇಂಗ್ಲೀಷ್ ಕಲಿತ ಆಯಾ ಬರ್ಲಿ
ಕೆಲಸದ ಹೆಣ್ಣು ಹೇಗೆ ಇರ್ಲಿ
ವೈಫು ಇಷ್ಟೇನೇ

ಪ್ರೀತಿ ಪ್ರೇಮ ಎಲ್ಲಾ ಮರ್ತು
ವರ್ಷಕ್ಕೊಮ್ಮೆ ಕಾಲು ತೊಳೆದು
ತಾಳಿ ದೇವರು ಆಗಿ ಹೋಯ್ತು
ವೈಫು ಇಷ್ಟೇನೇ

ಸಿಗರೇಟ್ ಮನೆಯ ಹೊರಗೆ ಸೇದು
ಮಕ್ಕಳ ಸ್ಕೂಲು ಫೀಸು ತುಂಬು
ಜೊತೇಲಿ ಕೂತು ಸೀರಿಯಲ್ ನೋಡು
ವೈಫು ಇಷ್ಟೇನೆ

ಅತ್ತೆ ಮಾವ ದೇವರು ಅನ್ನು
ತವರಿಗೆ ಕಳಿಸಿ ಪಾರ್ಟಿ ಮಾಡು
ನೆನೆಪು ಮಾಡ್ಕಂಡು ಫೋನು ಮಾಡು
ವೈಫು ಇಷ್ಟೇನೇ

ಶರ್ಟಿನ ಒಳಗೆ ಹೊಟ್ಟೆ ಎಳ್ಕೋ
ಪಕ್ದಲ್ ನಿಂತು ಫೋಟೊ ತೆಗೆಸ್ಕೋ
ಮಗಳ ಫ್ರೆಂಡು ಅಂಕಲ್ ಅನ್ನಲಿ
ವೈಫು ಇಷ್ಟೇನೇ

ಮದ್ವೆ ಮೊದ್ಲು ಸೀರೆ ಕೊಡ್ಸು
ಮದ್ವೆ ಆದ್ಮೇಲ್ ಒಡವೆ ತೊಡ್ಸು
ದಿನವೂ ಮಲ್ಲಿಗೆ ಹೂನ ಮುಡ್ಸು
ವೈಫು ಇಷ್ಟೇನೇ

ಗಂಡ ಹೆಂಡತಿ ಸಿನೆಮಾಗೆ ಹೋಗ್ರಿ
ಒಂದೇ ಗ್ಲಾಸಲ್ಲಿ ಜ್ಯೂಸು ಕುಡೀರಿ
ಮೊದಲ ಮಗನಿಗೆ ಹೆಸ್ರು ಇಡ್ರಿ
ವೈಫು ಇಷ್ಟೇನೇ

ದಿನವೂ ತಪ್ಪದೆ ಆಫೀಸ್ಗೋಗು
ರಾತ್ರೀ ವರ್ಗೂ ಕೆಲಸ ಇಟ್ಕೋ
ಸಂಡೇ ಕೂಡ ಓಟಿ ಮಾಡು
ವೈಫು ಇಷ್ಟೇನೇ

ಬೆಳ್ಳಿ ವಜ್ರ ಎಲ್ಲಾ ಕೊಡ್ಸು
ಅವ್ಳ ಹೆಸರಲ್ಲಿ ಬಂಗ್ಲೆ ಕಟ್ಸು
ತಾಜ್ ಮಹಲಿಗೆ ಪಾಯ ಹಾಕು
ವೈಫು ಇಷ್ಟೇನೇ

ಹೆಂಡತಿ ಹೆಸರು ಹಿಟ್ಲರ್ ಆಗಿ
ಹೆಂಡತಿ ಆನೇ ಸೈಜೇ ಆಗ್ಲಿ
ತಿಂಗಳ ಕೊನೇಲಿ ಪಾಪರ್ ಆಗು
ವೈಫು ಇಷ್ಟೇನೇ….
ವೈಫು ಇಷ್ಟೇನೇ…

8 Responses to “ಈ ವೈಫು ಇಷ್ಟೇನೇ…”

 1. ಪ್ರದೀಪ್ ಸೆಪ್ಟೆಂಬರ್ 6, 2010 at 1:24 ಅಪರಾಹ್ನ #

  ಹ್ಹಾ.. ಹ್ಹಾ.. ಹ್ಹಾ.. 🙂 🙂 ಚೆನ್ನಾಗಿದೆ ಸಾಮ್ರಾಟರೇ! ಇವು ತಮ್ಮ ಸ್ವಂತ ಅನುಭವದ ನುಡಿಗಳೋ??? 😉

 2. soorya ಸೆಪ್ಟೆಂಬರ್ 7, 2010 at 1:28 ಅಪರಾಹ್ನ #

  ಹ್ಹ ಹ್ಹ ಹ್ಹ….ಚೆನ್ನಾಗಿದೆ, ಮಜವಾಗಿಯೂ ಇದೆ…ಅನುಭವದಿಂದ ಬರೆದಂತಿದೆ!!!

  • Nage samrat ಸೆಪ್ಟೆಂಬರ್ 7, 2010 at 4:42 ಅಪರಾಹ್ನ #

   ನಮ್ಮ ಒಬ್ಬರ ಅನುಭವವಲ್ಲ ಗುರು…

 3. veena ಸೆಪ್ಟೆಂಬರ್ 7, 2010 at 5:19 ಅಪರಾಹ್ನ #

  ಗಂಡಸ್ರೆಲ್ಲಾ ಇಂಗೇ ಕಣ್ರಿ
  ಹೆಂಡ್ತಿರ್ ಮುಂದೆ ಹೊಗಾಳ್ತಾರೆ
  ಹಿಂದಿನಿಂದ ತೆಗಳ್ತಾರೆ
  ಅವರ ಟೈಪು ಇಷ್ಟೇನೇ…

  • Nage samrat ಸೆಪ್ಟೆಂಬರ್ 7, 2010 at 10:39 ಅಪರಾಹ್ನ #

   ಮುಂದೆ ಹೊಗಳಿ ಅಟ್ಟಕೇರ್ಸು
   ಬಾರಲ್ ನೆನೆದು ದೇವತೆ ಅನ್ನು
   ಗೆಳತಿ ಹೆಸ್ರಲ್ಲಿ ಪಾಸ್ವರ್ಡ್ ಇಟ್ಕೋ
   ಗಂಡಿನ್ ಟೈಪು ಇಷ್ಟೇನೇ!

   ಹೇಗಿದೆ ಮೇಡಂ?

 4. Manasa ಸೆಪ್ಟೆಂಬರ್ 7, 2010 at 7:33 ಅಪರಾಹ್ನ #

  ಮುಂದೆ ಹೊಗಳಿ.. ಅಟ್ಟಕ್ಕೆ ಎರಸಿ
  ಬಿಳಿಸೋ ಗಂಡಸರು ಇಸ್ಟೇನೆ
  ಇವರ ಲೆವೆಲು ಅಸ್ಟೆನೆ

  • Nage samrat ಸೆಪ್ಟೆಂಬರ್ 7, 2010 at 10:42 ಅಪರಾಹ್ನ #

   ಧನ್ಯವಾದ ಮೇಡಂ, ಗಂಡಸಿನ ಜನ್ಮ ಇಷ್ಟೇನೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: