ಕಾಪಾಡಿದ್ದು ಯಾರು?
ನೀವ್ ಅದೆಷ್ಟೇ ವಿನಯವಂತ್ರಾಗಿರ್ಬೋದು, ಆದ್ರೆ ಕೆಲ್ವೊಂದ್ಸಲ ನೀವ್ ಮಾಡಿದ ಕೆಲ್ಸಕ್ಕೆ ತಕ್ಕ ಕ್ರೆಡಿಟ್ಸು ಪಡೀಲೇಬೇಕಾಗುತ್ತೆ. ‘ಈ ಮಗುವಿನ ತಂದೆ ಯಾರು?’, ‘ಈ ಟೀ ಕಪ್ಪು ಒಡೆದದ್ದು ಯಾರು?’, ‘ನನ್ನ ಮಗಳಿಗೆ ಲವ್ ಲೆಟರ್ ಕೊಟ್ಟಿದ್ದು ಯಾರು?’, `ಬಹುಮಾನ ಬಂದ ಈ ಲಾಟರಿ ಟಿಕೆಟ್ ನಿಮ್ದಾ?’ ಅನ್ನೋ ಪ್ರಶ್ನೆಗಳೆದ್ದಾಗ ನಿಮ್ಮೆಲ್ಲಾ ವಿನಯವಂತಿಕೆ ಬಿಟ್ಟು ನಿಮ್ ಕೆಲ್ಸದ್ ಬಗ್ಗೆ ನೀವು ಕ್ರೆಡಿಟ್ಸ್ ತೆಗ್ದುಕೊಳ್ಳಬೇಕಾಗುತ್ತೆ.
ಪಾಪ ಈ ಸೀಕ್ರೇಟು ಆ ಹೆಲಿಕಾಪ್ಟರಿಗೆ ಗೊತ್ತಿರ್ಲಿಲ್ಲ! ವರ್ಷವಿಡೀ ನದಿ ಅನ್ನೋ ಬೋರ್ಡ್ ಹಾಕ್ಕಂಡಿದ್ದ ಬಯಲು ಮಂದಿರವಾಗಿದ್ದ ತುಂಗಾ ನದಿ ತುಂಬಾ ತುಂಬಿಕೊಂಡು ಮಂತ್ರಾಲಯವನ್ನೇ ಮುಳುಗ್ಸುವಾಗ ಮಂತ್ರಾಲಯ ಸ್ವಾಮಿಯವರ್ನ ಕಾಪಾಡಿದ್ದು ಸರಿಯಾದ್ ಸಮ್ಯಕ್ಕೆ ತಲುಪಿದ ಹೆಲೆಕಾಪ್ಟರು. ಮಾರ್ನೆಯ ದಿನ ಸ್ವಾಮ್ಗೋಳು ನಮ್ಮುನ್ ಕಾಪಾಡಿದ್ದು ಗುರುರಾಯ ಅನ್ವಾಗ ಆ ಹೆಲಿಕಾಪ್ಟರು ಮೋಸ್ಟ್ಲಿ ನನ್ ಪೈಲಟ್ ಹೆಸ್ರು ಗುರ್ರಾಯ ಅಂದ್ಕಂಡು ಸಮಾಧಾನ ಮಾಡ್ಕಂತೇನೋ!
ಹೆಲಿಕಾಪ್ಟರ್ ಬಗ್ಗೆ ನಾವ್ ಮಾತಾಡೋದು ಅವು ರಾಜ್ಯದ ಮುಖ್ಯಮಂತ್ರಿ ಸಮೇತ ಸ್ಪೋಟಗೊಂಡಾಗ್ ಮಾತ್ರ ಅನ್ಸುತ್ತೆ!
ಸುಳ್ ಮೆಣ್ಸಿನ್‌ಕಾಯ್!
ಪಾರ್ಟ್ ಟೈಮು ನ್ಯೂಸ್ ಪೇಪರ್ , ಫುಲ್ ಟೈಮ್ ಪೊಲಿಟಿಕಲ್ ಆಕ್ಟಿವಿಸ್ಟು ಆಗಿರೋ ವಿಜಯ ಕರ್ನಾಟಕವೆಂಬೋ ನಂಬ್ರ ಒನ್ ಪತ್ರಿಕೆಯಲ್ಲಿ ಬ್ಯಾಡ್ಗಿ ಖಾರದ ಮೆಣ್ಸಿನ್ ಕಾಯಿ ಪ್ರ‘ತಾಪ’ರ ಕಾಲಂ ಪಕ್ಕದಲ್ಲೇ ಕೆಂಪ್ ಮೆಣ್ಸಿನ್ ಕಾಯಿ ಮಿರ್ಚಿ ಮಾಡೋ ಮೋಹನ್‌ರು ತಮ್ ಅಂತರ್ಜಾಲದ ಬಗ್ಗೆ ಸ್ವಲ್ಪ್ ಗಮನ ಕೊಡೋದ್ ವಾಸಿ ಅನ್ನಿಸ್ತದೆ.
ಕಳೆದ ಶನಿವಾರದ ಅಂಕಣದಾಗೆ ಅಲ್ಲಾಡಿಸಿದ್ ಕೆಂಪ್ ಮೆಣಸಿನ್ಕಾಯ್‌ನಾಗೆ ಹೀಗಂತಾರೆ:
ಪತ್ರಿಕೋದ್ಯಮದ್ ಪಾಠಗಳಲ್ಲದಿದ್ರೂ ತೀಟೆಗಳನ್ ಸಾಮ್ರಾಟರ್ ತಾವ ಕಲ್ತಿರೋ ನಾನು ಗೂಗಲಿನ ಕೌಂಟರಿಗೆ ‘ಗಾಂಧಿ’ ಪದ ತಳ್ಳಿದ್ದೇ ತಡ ನಮ್ ದೇಶದ ತಂದೆ ಮಹಾತ್ಮ ಗಾಂಧಿಯವ್ರೇ ಕಂಡ್ರು. ಎರಡ್ರಾಗೆ ರಾಜೀವ್ ಕಂಡ್ರು, ಮೂರ್ನೇ ಪೇಜ್‌ನಾಗೆ ಸೋನಿಯಾ ಅಮ್ಮಾವ್ರು ಬಂದ್ರು.
ಅವ್ರೊಳಗಿನ ಹಾಡು ಕ್ಯೂಬಾ ಕೇಳಿದ್ಮೇಲೆ ಅವ್ರ ಇಂಟರ್ನೆಟ್ ಕನೆಕ್ಸನ್ನು ಕ್ಯೂಬಾದ್ದೇನಾ ಅಂಬೋ ಡೌಟು ನನ್ಗೆ ಬಂತು! ಯಾವ್ದಕ್ಕೂ ಮೊಹನ್ ಸಾಹೇಬ್ರು ವಸಿ ಚೆಕ್ ಮಾಡ್ಕಳದು ಒಳ್ಳೇದು!
ಸಖತ್…
ಆತ್ಮೀಯ ನಗೆ ನಗಾರಿ ಡಾಟ್ ಕಾಮ್ ಗೆಳೆಯರೇ
ನಿಮ್ಮ ಪುಟ್ಟ ಟಿಪ್ಪಣಿ ‘ಸುಳ್ ಮೆಣ್ಸಿನ್‌ಕಾಯ್!’ ಓದಿದೆ.
ನಾನು ಆ ಟಿಪ್ಪಣಿ ಓದಿದ್ದು ಈ ದಿನ. ಹಾಗಾಗಿ ನಾನು ಕಂಡದ್ದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಿಮ್ಮ ಬರಹಗಳು ಖುಷಿ ಕೊಡುವುದರಿಂದ, ಒಳ್ಳೆ ಪಾಠವೂ ಹೌದಾದ್ದರಿಂದ ನೀವು ಬೆರಳು ಮಾಡಿ ತೋರಿಸುತ್ತಿರುವುದರ ಬಗ್ಗೆ ಉತ್ತರಿಸಬೇಕಾದದ್ದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ
ನನ್ನ ಕೆಂಪ್ ಮೆಣ್ಸಿನ್‌ಕಾಯ್ ನಲ್ಲಿ ಗಾಂಧಿ ಕುರಿತ ಗೂಗಲ್ ಸರ್ಚ್ ನ ಬಗ್ಗೆ ಬರೆದಿದ್ದೆ ಹಾಗೂ ಹಾಗೆ ಸರ್ಚ್ ಮಾಡಿದಾಗ ಕಂಡು ಬಂದ ಇತರೆ ಗಾಂಧಿಗಳ ಬಗ್ಗೆ ಬರೆದಿದ್ದೆ. ನಿಮ್ಮ ಬರಹ ನಾನು ಅರ್ಥ ಮಾಡಿಕೊಂಡ ಪ್ರಕಾರ ಗೂಗಲ್ ಸರ್ಚ್ ಮಾಡಿದರೆ ಗಾಂಧಿ ಜೊತೆ ಸಿಗುವುದು ಸೋನಿಯಾ ಮತ್ತು ರಾಜೀವ್ ಗಾಂಧಿ ಉಳಿದದ್ದೆಲ್ಲಾ ಅಲ್ಲ ಎಂಬ ಅರ್ಥ ಬರುವಂತಿದೆ.
ಈ ಬಗ್ಗೆ ನನ್ನ ಕ್ಯೂಬಾ ರೆಫೆರೆನ್ಸ್ ತೆಗೆದುಕೊಂಡು ಗೇಲಿ ಕೂಡಾ ಮಾಡಿದ್ದೀರಿ
ಇರಲಿ ಆದರೆ ನನಗೆ ಸಿಕ್ಕ ಗಾಂಧಿಗಳ ಕೊಂಡಿ ನಿಮ್ಮ ಮುಂದಿಡುತ್ತಿದ್ದೇನೆ. ನೋಡಿ. ಮೊದಲ ಪೇಜ್ ನಲ್ಲೆ ಈ ಎಲ್ಲರೂ ಬಂದಿಲ್ಲ ಎನ್ನುವುದು ನಿಮ್ಮ ವಾದವಾದರೆ ನಾನೂ ಹಾಗೆ ಬರೆದಿಲ್ಲ ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ನಗೆ ನಗಾರಿಯನ್ನು ಎಂಜಾಯ್ ಮಾಡಲು ಮಾತ್ರ ಓದಬೇಕು ಎಂದಾದರೆ ನಾನು ನಿಮ್ಮ ಈ ಬರಹವನ್ನೂ ಎಂಜಾಯ್ ಮಾಡಿದ್ದೇನೆ. ಥ್ಯಾಂಕ್ಸ್
ಜಿ ಎನ್ ಮೋಹನ್
for indira and rajiv gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=36&ndsp=18
for indira and sonia gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=54&ndsp=18
for pooja gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=72&ndsp=18
for indira, sonia, sanjay, rahul, pooja gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=90&ndsp=18
for sonia, sanjay, pooja, indira gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=108&ndsp=18
for rahul, sonia gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=126&ndsp=18
for varun, sonia, rahul gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=144&ndsp=18
for menaka, sonia, pooja gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=162&ndsp=18
for priyanka gandhi-
http://images.google.co.in/images?hl=en&client=firefox-a&rls=org.mozilla:en-US:official&um=1&q=gandhi&sa=N&start=270&ndsp=18
ಆತ್ಮೀಯ ಮೋಹನರೇ,
ನಿಮಗೆ ಸಂಬಂಧಿಸಿದ ಬರಹಕ್ಕೆ ಪ್ರತಿಕ್ರಿಯಿಸಿರುವುದು ಕಂಡು ನಮಗೆ ಅತೀವ ಸಂತೋಷವಾಯಿತು. ಈ ರೀತಿಯ ಜವಾಬ್ದಾರಿಯುತ ವರ್ತನೆ ಅಂತರ್ಜಾಲದಲ್ಲಿ ಬೆಳೆಸುತ್ತಿರುವ ನಿಮಗೆ ಅಭಿನಂದನೆಗಳು. ಓವರ್ ಟು ತೊಣಚಪ್ಪ…
– ನಗೆ ಸಾಮ್ರಾಟ್
ನಮಸ್ಕಾರ ಮೋಹನರೇ,
ನನ್ನ ಹಾಸ್ಯವನ್ನು ಅತಿ ಗಂಭೀರವಾಗಿಯೂ, ಗಂಭೀರ ಮಾತನ್ನು ಹಾಸ್ಯವಾಗಿಯೂ ಪರಿಗಣಿಸುವುದು ಅತಿ ಸಾಮಾನ್ಯವಾದ ಸಂಗತಿ.
ನೀವು ಕೆಂಪ್ ಮೆಣಸಿನಕಾಯಿ ಅರೆಯುವುದು ಅದೆಷ್ಟು ಚುರುಕಾಗಿಯೋ, ನಾನು ಡೈರಿಗೀಚುವುದೂ ಅಷ್ಟೇ ಚುರುಕಾಗಿ ಹೀಗಾಗಿ ಆ ಚುರುಕನ್ನು ನಿಮ್ಮ ಎಂದಿನ ಸ್ಪೋರ್ಟೀವಿಟಿಯಿಂದ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು.
ಇನ್ನು ನಿಮ್ಮ ಜೋಕನ್ನು ಎಳೆದು ಚರ್ಚಿಸುವುದು ಅನವಶ್ಯಕವಾದರೂ ಸ್ಪಷ್ಟತೆ ದೃಷ್ಟಿಯಿಂದ ಹಾಗೆ ಮಾಡುವುದು ಉಚಿತವೆನಿಸುತ್ತದೆ. ಸರ್ಚ್ ಇಂಜಿನ್ನಿನಲ್ಲಿ ಗಾಂಧಿ ಎಂದು ಬರೆದರೆ ಅದರ ವ್ಯಾಲ್ಯೂ ಆಧಾರದ ಮೇಲೆ ಸರ್ಚ್ ಫಲಿತಾಂಶ ಬರುವುದು ಸಾಮಾನ್ಯ. ನಿಮಗೆ ಮೋಹನದಾಸ ಕರಮ ಚಂದ ಗಾಂಧೀ ಬೇಕಿದ್ದರೆ ಹಾಗೇ ಸರ್ಚ್ ಇಂಜಿನ್ನಿಗೆ ತಿಳಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ಕ್ಯೂಬಾ ಹಾಡನ್ನು ಗೇಲಿ ಮಾಡಿದ್ದರಲ್ಲಿ ಯಾವ ವಯಕ್ತಿಕ ನಂಜೂ ಇಲ್ಲವೆಂದು ತಿಳಿಸಲು ಇಚ್ಚಿಸುತ್ತೇನೆ.
ಸಣ್ಣ ಟಿಪ್ಪಣಿಗೆ ಇಷ್ಟುದ್ದದ ಸ್ಪಷ್ಟೀಕರಣ ಕೊಡಲು ಶುರು ಮಾಡಿದರೆ ನಾವು ಕನ್ನಡ ದಿನಪತ್ರಿಕೆ ಸಂಪಾದಕನಾಗುವ ಅಪಾಯವಿದೆ!
– ತೊಣಚಪ್ಪ
thanks
ನಾವಿಬ್ಬರೂ ಪರಸ್ಪರ ಮೆನ್ಸಿನ್ಕಾಯ್ ಇಟ್ಟುಕೊಂಡಿದ್ದೇವೆ.
ತ್ರೀ ಚೀರ್ಸ್ ಟು ಹಾಟ್ ಚಿಲ್ಲಿ
i really enjoyed the converation of both the nice writers,, ha ha,,