ಸಚಿನ್ ಪ್ಯಾಡ್ ದೋಷ – ಒಂದು ಪ್ರತಿಕ್ರಿಯೆ

6 ಫೆಬ್ರ

ನಮ್ಮ ‘ಸಚಿನ್‌ಗೆ ಪ್ಯಾಡು ದೋಷ’ ವರದಿಗೆ ಪೂರಕವಾದ ಮಾಹಿತಿಯನ್ನು ಮನಸ್ವಿ ಸಾಗರರವರು ಒದಗಿಸಿದ್ದಾರೆ. ಅವರು ತಮ್ಮ ಸಂಭಾವನೆಯನ್ನು ಅನಂತರ ಪಡೆದುಕೊಳ್ಳತಕ್ಕದ್ದು

ಹೌದು ಕೆಲವು ಅಂಪೈರುಗಳಿಗೆ ತೋರು ಬೆರಳಲ್ಲಿ ಕಂಟಕ ಇದೆ,ಒಟ್ಟು ಮೂರು ಬಾರಿ ಮಹಾನ್ ಆಟಗಾರನಿಗೆ ತೊಂದರೆ ಮಾಡಲು ಹೋಗಿ ತಮ್ಮ ಘನತೆ ಗೌರವ ಮಣ್ಣು ಪಾಲು ಮಾಡಿಕೊಂಡು ಆ ಮಹಾನ್ ಆಟಗಾರನ ಅಭಿಮಾನಿಗಳಿಂದ ಹಾಗೂ ಜನಸಾಮಾನ್ಯರಿಂದ ಛೀಮಾರಿ ಎಂದು ನಕಲಿಬಂಗಾರದ ಮಲೆಯಾಳಿಗಳ ಒಡೆತನದ ಕನ್ನಡ ಚಾನಲಿನಲ್ಲಿ ಮಹಾನ್ ಜೋತಿಷಿಯವರು ಅನೇಕ ತಿಂಗಳುಗಳ ಹಿಂದೆಯೇ ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದರು…!!
ಹೌದು ನವಗ್ರಹದ ಕನ್ನಡ ಚಾನಲ್ ನವರು ಸೆಹವಾಗ್ ಬೋಲ್ಡ್ ಆಗಿ ಔಟ್ ಆಗಿದ್ದರ ಬಗ್ಗೆ ಕೆಲವು ತಿಂಗಳ ಹಿಂದೆ ಬೌಂಡರಿ ಲೈನ್ ಎನ್ನುವ ಕಾರ್ಯಕ್ರಮದಲ್ಲಿ ವರದಿಗಾರರಿಂದ ಆಟದ ಮೈದಾನದಿಂದ ನೇರವಾದ ಆಂಕೋ ದೇಖಾ ಹಾಲ್!(ಇದು ಆಕಾಶವಾಣಿಯವರ ಕಣ್ಣಲ್ಲಿ ನೋಡಿದ್ದನ್ನು ಕೇಳುಗರಿಗೆ ಯತಾವತ್ ವಿವರಣೆ ನೀಡುವುದು) ನಂತೆ ಹೇಳಿದ

ಸ್ಟುಡಿಯೋ: ಬನ್ನಿ ಈಗ ನೇರವಾಗಿ ನಮ್ಮ ವರದಿಗಾರ ಮಣ್ಣಪ್ಪನವರಿಂದ ಸ್ಟೇಡಿಯಂ ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳೋಣ
ಮಣ್ಣಪ್ಪನವರೇ…….. ಅಲ್ಲಿ ಏನು ನೆಡಿತಾ ಇದೆ ಮಣ್ಣಪ್ಪನವರೇ ನನ್ನ ಧ್ವನಿ ಕೇಳ್ತಾ ಇದೆಯಾ(ಮತ್ತೆ ಅದೇ ಮೇಲೆ ಕೇಳಿದ ಪ್ರಶ್ನೆ ರಿಪೀಟ್!)

ವರದಿಗಾರ:(ನೇರ.. ಮೈದಾನದಿಂದ) ಹಾ.. ಕೇಳ್ತಾ ಇದೆ..ಸಣ್ಣಪ್ಪನವರೇ ಏನಾಗ್ತ ಇದೆ ಎಂದರೆ… ಆಟ ತುಂಬಾ ರೋಚಕ ಘಟ್ಟ ಕ್ಕೆ ಬಂದಿದೆ ನೋಡಿ ಸ್ಟೇಡಿಯಂ ನ ತುಂಬಾ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.. ಬಾರೀ ಸಂಖ್ಯೆಯಲ್ಲಿ ಕ್ರಿಕೆಟ್ ವೀಕ್ಷಕರು ಬಂದಿದ್ದಾರೆ

ಸ್ಟುಡಿಯೋ:(ಕ್ರಿಕೆಟ್ ವೀಕ್ಷಕರು ಬರದೇ ಇನ್ನು ಹಾಕಿ ವೀಕ್ಷಕರು ಬರುತ್ತಾರ ಎಂದು ಕೇಳುವಷ್ಟು ಸಿಟ್ಟು ಬರುತ್ತಿದೆ, ಅರ್ಧದಲ್ಲಿಯೇ ವರದಿಗಾರನ ಮಾತಿಗೆ ತಡೆಯೊಡ್ಡಲು ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟ ) ಸೆಹವಾಗ್ ಔಟ್ ಆಗಲು ಏನು ಕಾರಣ ಅವರು ಉತ್ತಮ ಫಾರಂ ನಲ್ಲಿ ಇದ್ರು??!! ಯಾಕೆ, ಯಾಕೆ ಹೀಗಾಯ್ತು ಅಂತೀರಿ?? ಚಂಡು ನೇರವಾಗಿ ಅವರ ವಿಕೇಟಿಗೆ ಬಡಿತಾ ಅಂತಾ? ಪ್ಯಾಡ್ ಅಡ್ಡಾ ಕೊಟ್ಟಿದ್ರೆ ಆಗ್ತಿರ್ಲಿಲ್ವಾ ಅಂತಾ?!!

ವರದಿಗಾರ(ನೇ.. ಮೈ, ಏರಿದ ಧ್ವನಿಯಲ್ಲಿ) ನೋಡಿ ಸಣ್ಣಪ್ಪನವರೆ ಅದೇನಾಯ್ತು ಅಂದ್ರೆ ಸೆಹವಾಗ್ ಉತ್ತಮ ಫಾರಂ ನಲ್ಲೇ ಇದ್ರೂ ಆದ್ರೆ ಅವರ ಬ್ಯಾಟು ಮತ್ತೆ ಪ್ಯಾಡಿನ ನಡುವೆ ಗ್ಯಾಪ್ ಜಾಸ್ತಿ ಇದ್ದಿದ್ರಿಂದ ಬೌಲ್ಡ್ ಆದ್ರೂ.. ಬೇಲ್ಸ್ ಗೆ ನೇರವಾಗಿ ಚಂಡು ಬಡೀತು…

ತಾಂತ್ರಿಕ ವರ್ಗ ಇವರ ಕರ್ಮಕಾಂಡ ನೋಡಲಾಗದೆ ಸಂಪರ್ಕ ಕಡಿತಗೊಳಿಸಿದರು…
ಸ್ಟುಡಿಯೋದವ: (ಉಸ್ಸಪ್ಪಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ…) ಸಂಪರ್ಕ ಕಡಿತಗೊಂಡಿದೆ ಸಂಪರ್ಕ ಸಾಧ್ಯವಾಗುತ್ತಿಲ್ಲ, ಇನ್ನು ಕೆಲ ನಿಮಿಷಗಳ ನಂತರ ಮತ್ತೆ ನಮ್ಮ ಮಣ್ಣಪ್ಪನವರಿಂದ ನೇರವಾದ ಮಾಹಿತಿ ಪಡೆಯೋಣ,ಈಗ ಸಣ್ಣದೊಂದು ಬ್ರೇಕ್…..

4 Responses to “ಸಚಿನ್ ಪ್ಯಾಡ್ ದೋಷ – ಒಂದು ಪ್ರತಿಕ್ರಿಯೆ”

  1. ಮನಸ್ವಿ ಸಾಗರ ಫೆಬ್ರವರಿ 7, 2009 at 9:31 ಅಪರಾಹ್ನ #

    ಹಹ್ಹ ಹ್ಹ ಧನ್ಯವಾದ, ಬೇಗ ಬರೆಯಿರಿ ಒಂಬತ್ತು ಟೀವಿಯವರ ಬಗ್ಗೆ, ಕಾಯ್ತಾ ಇರ್ತೀನಿ, ಸಂಭಾವನೆ ಎಷ್ಟು ಕೊಡ್ತೀರಾ, ಎಲ್ಲಿಗೆ ಬರಬೇಕು ಅಥವಾ ಚೆಕ್ ಕಳಸ್ತೀರೊ..ಡಿಡಿ ಕಳಸ್ತೀರೋ ಅಂತ ಹೇಳಲೇ ಇಲ್ಲಾ! 😉

    • Nage samrat ಫೆಬ್ರವರಿ 7, 2009 at 9:39 ಅಪರಾಹ್ನ #

      ಒಳ್ಳೆಯ ಭಾವನೆಯಿದ್ದರೆ some-ಭಾವನೆ ನಮ್ಮ ಕಡೆಯಿಂದ ಸಿಕ್ಕೇ ಸಿಗುತ್ತೆ. ಚೆಕ್ಕು, ಡಿಡಿ ತೊಂದರೆ ಏಕೆ?
      ಭಕ್ತಿಯಿಂದ ಕಣ್ಮುಚ್ಚಿ, ಬಾಯ್ಮುಚ್ಚಿ ಹೃದಯ ತೆರೆದು ನಿಮ್ ಪರ್ಸು ತೆಗೆಯಿರಿ ಇಲ್ಲಿಂದ ನಾವು ಸಂಭಾವನೆ ರವಾನಿಸುತ್ತೇವೆ. 😉
      ಪರ್ಸು ತುಂಬಿದ್ದರೆ ನಿಮ್ಮ ಭಕ್ತಿ ನೈಜವಾದದ್ದು, ಇಲ್ಲವಾದರೆ ಪೊಳ್ಳು!

      -ನಗೆ ಸಾಮ್ರಾಟ್

  2. ಮನಸ್ವಿ ಸಾಗರ ಫೆಬ್ರವರಿ 7, 2009 at 9:50 ಅಪರಾಹ್ನ #

    ಹಾಗೆಲ್ಲಾ some-ಭಾವನೆ ಪಡೆಯಲು ಪರ್ಸ್ ಯಾಕ್ರಿ ಬೇಕು, ಒಳ್ಳೆ ಮನಸ್ಸು ಇದ್ರೆ ಸಾಕಲ್ವ? ಹೌದು ಯಾರ ಮೇಲೆ ಭಕ್ತಿ ಬಂದಿದೆ ಅಂತಾನೆ ಗೊತ್ತಾಗ್ಲಿಲ್ಲ.. !! ಪರ್ಸು already ತುಂಬಿಯೇ ಇರೋದ್ರಿಂದ… ಪೊಳ್ಳೊ ಜೊಳ್ಳೋ ಗೊತ್ತಾಗ್ತಿಲ್ಲ.. ಎನಿ-ways… ಮುಂದುವರೆಯಲಿ ನಿಮ್ಮ ನಗೆ ನಗಾರಿ….:)

    • Nage samrat ಫೆಬ್ರವರಿ 7, 2009 at 10:03 ಅಪರಾಹ್ನ #

      ಒಳ್ಳೇ ಮನಸ್ಸು ಇರಲೇಬೇಕು ಬಿಡಿ ಅದಕ್ಕೇ ಬಹುಶಃ ನಿಮ್ಮ ಪರ್ಸು ತುಂಬಿರಬಹುದು!

      – ನಗೆ ಸಾಮ್ರಾಟ್

Leave a reply to ಮನಸ್ವಿ ಸಾಗರ ಪ್ರತ್ಯುತ್ತರವನ್ನು ರದ್ದುಮಾಡಿ