ನಗೆ ನಗಾರಿಯ ಹುಟ್ಟು ಹಬ್ಬದ ಸಂಭ್ರಮಕ್ಕೆ ನಿನ್ನೆ ತಿಳಿಸಿದ ಹಾಗೆ ಕಾರ್ಯಕ್ರಮಗಳ ಆಯೋಜನೆ ಶುರುವಾಗಿದೆ.
ಮೊದಲ ಹಂತವಾಗಿ ‘ಚಿತ್ರ ಗುಪ್ತ’ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸುತ್ತಿದ್ದೇವೆ. ಇಲ್ಲಿ ಕೊಟ್ಟಿರುವ ಚಿತ್ರಕ್ಕೆ ಅತ್ಯಂತ ಮೊನಚಾದ, ಹಾಸ್ಯಯುಕ್ತವಾದ, ವ್ಯಂಗ್ಯೋಕ್ತಿಯೊಂದನ್ನು ನೀಡಬೇಕು. ನಿಮ್ಮ ಸಾಲು ಆದಷ್ಟು ಚಿಕ್ಕದಿರಲಿ, ಚಿಕ್ಕದಾಗಿರಲಿ.
ನಮ್ಮ ಹೆಸರಾಂತ ಅನಾಮಧೇಯ ತೀರ್ಪುಗಾರರು ನಿಮ್ಮ ಸಾಲುಗಳನ್ನು ಡಿಸೆಕ್ಟ್ ಮಾಡಲು ಸಿದ್ಧರಾಗಿ ನಿಂತಿದ್ದಾರೆ.
ನಿಮ್ಮ ಚಾಟೋಕ್ತಿಗಳನ್ನು ಈ ಬರಹಕ್ಕೆ ಕಮೆಂಟ್ ಹಾಕುವುದರ ಮೂಲಕ ತಿಳಿಸಬಹುದು. ಕಮೆಂಟು ಯಾವ ಹೆಸರಲ್ಲಾದರೂ ಬರೆಯಿರಿ ಆದರೆ ಸಂಪರ್ಕಕ್ಕಾಗಿ ನಿಮ್ಮ ಇಮೇಲ್ ವಿಳಾಸವನ್ನು nagesamrat@gmail.com ಗೆ ಕಳುಹಿಸಿದರೆ ಚೆನ್ನ. ಜನವರಿ ಇಪ್ಪತ್ತೈದರವರೆಗೆ ಸಮಯ ಉಂಟು… 🙂
– ನಗೆ ಸಾಮ್ರಾಟ್
ಇದುವರೆಗಿನ ಚಾಟೊಕ್ತಿಗಳು ಹಾಗು ಚಾಟಿ ಚತುರರು!
ಇನ್ಮೇಲೆ ಮಕ್ಕಳ ದಿನಾಚರಣೆಗೆ ಚಾಕ್ಲೇಟ್ ಬದಲು ಸಿಗರೇಟು ಬೆಂಕಿಪೊಟ್ಟಣಾನೇ ಕೊಡಬಹುದೇನೋಪ….
– ನವಿಲುಗರಿ ಸೋಮು
ಸ್ಮೋಕಿಂಗ್ ಈಸ್ ನಾಟ್ ಬ್ಯಾಡ್ ಅಂತ advertisement ಕೊಡಬಹುದು ಈ ಪಿಕ್ಚರ್ ಹಾಕಿ..
-ನಾಗರಾಜ್ ದೇವರಮನಿ
ಜವಾಹರ್ ಲಾಲ್ ಮೋಜುಗಾರ ಯೋಜನೆ
ಸುಟ್ಟಾ ಬಾಯೊಳಗಿರಲು ಪಟ್ಟದಲಿ ಕೂತಿರಲು
ಮೌಂಟ ಬ್ಯಾಟನನ ಪತ್ನಿ ಬದಿಗಿರಲು
ಸಿಗರೇಟಿಗೆ ಕಿಚ್ಚು ಹಚ್ಚೆಂದ -ಜವಾಹರ
-ಸುಮಂತ್ ಶಾನಭಾಗ್.ವಿ
”ಹಚ್ಚಿಕೊಳ್ಳಮ್ಮಬೇಗ ಗಾಂಧೀಜಿ ಬಂದ್ರೆ ನಮ್ಮನ್ನ ಸುಟ್ಟಾಕ್ತಾರೆ. ಆ ಸ್ವಾಮಿ ಸಿಗರೇಟ್ ಕಂಡ್ರೆ ಉರಿತಾರೆ.”
– ಸುಂದರ ನಾಡು
ಮೋಡಗಳು ತೇಲುತಿವೆ ಆಕಾಶದಲ್ಲಿ,
ಕನಸಿನಲ್ಲಿ ಮುಳುಗಿದೆ ಲೊಕವಿಡೀ,
ದೇಶಕ್ಕೋ ಸ್ವಾತಂತ್ರ್ಯದ ಹುಚ್ಚು,
ಗಾಂಧೀಜಿಗೆ ಉಪವಾಸ ಅಚ್ಚುಮೆಚ್ಚು,
ನೀ ತಲೆಕೆಡಿಸಿಕೊಳ್ಳಬೇಡ, ಸಿಮೋನ್ ಳ ಸಿಗರೇಟಿಗೆ ಬೆಂಕಿ ಹಚ್ಚು!!!
-ಹೇಮಾ ಪವಾರ್
“ಜನರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ನಾವು ನಿರ್ಧಾರ ಮಾಡಬೇಕಿದೆ. ಒಂದು ಕೈ ನೋಡಿಬಿಡೋಣ, ಅಲ್ವೇ ????”
–ಪ್ರಸಾದ್
ಸಿಗರೇಟ್ ಸೇದಲು ಆಸೆಯೆ ನಿನಗೆ
ಕಲಿಸುವೆ ನಾನು ಬಾ ಬಳಿಗೆ.
ಕಲಿಸುವ Coach ನಾನಿರಲು ಸಂಕೋಚವ ಬಿಡು ನೀನು
ಹ್ನಾ ಸೇದು, ಏನಾಗದು ನೋಡು ಜೊತೆ ಇರುವೆನು ನಾನು.
– ಕೆ.ಎ.ಭಟ್
(………ಬೇಗನೇ ನಿಮ್ಮ ಚಾಟೋಕ್ತಿ ಒಗಾಯಿಸಿ… ಕಾಲ ಕಳೆದ ಮೇಲೆ ಪರಿತಪಿಸಬೇಡಿ! )
ಇನ್ಮೇಲೆ ಮಕ್ಕಳ ದಿನಾಚರಣೆಗೆ ಚಾಕ್ಲೇಟ್ ಬದಲು ಸಿಗರೇಟು ಬೆಂಕಿಪೊಟ್ಟಣಾನೇ ಕೊಡಬಹುದೇನೋಪ….
ಸ್ಮೋಕಿಂಗ್ ಈಸ್ ನಾಟ್ ಬ್ಯಾಡ್ ಅಂತ advertisement ಕೊಡಬಹುದು ಈ ಪಿಕ್ಚರ್ ಹಾಕಿ..
ಜವಾಹರ್ ಲಾಲ್ ಮೋಜುಗಾರ ಯೋಜನೆ
ಸುಟ್ಟಾ ಬಾಯೊಳಗಿರಲು ಪಟ್ಟದಲಿ ಕೂತಿರಲು
ಮೌಂಟ ಬ್ಯಾಟನನ ಪತ್ನಿ ಬದಿಗಿರಲು
ಸಿಗರೇಟಿಗೆ ಕಿಚ್ಚು ಹಚ್ಚೆಂದ -ಜವಾಹರ
ಹುಟ್ಟು ಹಬ್ಬದ ಶುಭಾಶಯಗಳು.
”ಹಚ್ಚಿಕೊಳ್ಳಮ್ಮಬೇಗ ಗಾಂಧೀಜಿ ಬಂದ್ರೆ ನಮ್ಮನ್ನ ಸುಟ್ಟಾಕ್ತಾರೆ. ಆ ಸ್ವಾಮಿ ಸಿಗರೇಟ್ ಕಂಡ್ರೆ ಉರಿತಾರೆ.”
abhimani
rajanna.p@gmail.com
ಗುಡ್ ಗುಡ್ ಒಳ್ಳೆಯ ಪ್ರತಿಕ್ರಿಯೆಗಳು…
ಸ್ಪರ್ಧೆ ಹೀಗೇ ಬಿರುಸಾಗಿ ಸಾಗಲಿ… ಬಹುಮಾನಗಳ ವಿವರ ಓದಿದಿರಲ್ಲವೇ?
ನಗೆಸಾಮ್ರಾಟ್
ಮೋಡಗಳು ತೇಲುತಿವೆ ಆಕಾಶದಲ್ಲಿ,
ಕನಸಿನಲ್ಲಿ ಮುಳುಗಿದೆ ಲೊಕವಿಡೀ,
ದೇಶಕ್ಕೋ ಸ್ವಾತಂತ್ರ್ಯದ ಹುಚ್ಚು,
ಗಾಂಧೀಜಿಗೆ ಉಪವಾಸ ಅಚ್ಚುಮೆಚ್ಚು,
ನೀ ತಲೆಕೆಡಿಸಿಕೊಳ್ಳಬೇಡ, ಸಿಮೋನ್ ಳ ಸಿಗರೇಟಿಗೆ ಬೆಂಕಿ ಹಚ್ಚು!!!
(ನಗೆ ಸಾಮ್ರಾಟರು ಒಳ್ಳೆ ಕವಿಯಾಗಲು ತಿಳಿಸಿಕೊಟ್ಟ ಸೂತ್ರದನ್ವಯ ರಚಿತವಾದ ಕವನ)
ಹೇಮ ಪವಾರ್
ಮಾನನೀಯರೇ,
ತಾವು ನಮ್ಮ ‘ಯಶಸ್ವಿ ಕವಿಯಾಗುವ’ ಸೂತ್ರಗಳನ್ನು ಬಳಸಿ ಕವನವನ್ನು ರಚಿಸಿ ನಮ್ಮ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನಮಗೆ ಅತೀವ ಸಂತೋಷ ನೀಡಿದೆ.
ಈ ಸಂತೋಷವನ್ನು ನಾವು ತುಂಬಾ ದಿನಗಳ ಕಾಲ ಅನುಭವಿಸಲು ಇಚ್ಚಿಸುತ್ತೇವೆ.
ನಗೆ ಸಾಮ್ರಾಟ್
“ಜನರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ನಾವು ನಿರ್ಧಾರ ಮಾಡಬೇಕಿದೆ. ಒಂದು ಕೈ ನೋಡಿಬಿಡೋಣ, ಅಲ್ವೇ ????”
ಭಲೇ! ಭಲೇ! ಮುಂದುವರೆಸಿ….
ನಗೆ ಸಾಮ್ರಾಟ್
ನಗೆ ಸಾಮ್ರಾಟರೆ,
ಅದು ಸುಂದರ ನಂದು ಅಲ್ಲ. ಅದು ಸುಂದರನಾಡು.
ನಾವು ತಪ್ಪು ಮಾಡುವುದು ಅಪರೂಪ. ನಿಮ್ಮ ವಿಷಯದಲ್ಲಿ ತಪ್ಪು ಮಾಡಿದ್ದೇವೆ ನೀವು ಇದರ ಬಗ್ಗೆ ಹೆಮ್ಮೆ ಪಡಬೇಕು…
ಬದಲಾಯಿಸುತ್ತೇವೆ ಬಿಡಿ 🙂
ನಗೆ ಸಾಮ್ರಾಟ್
ಸಿಗರೇಟ್ ಸೇದಲು ಆಸೆಯೆ ನಿನಗೆ
ಕಲಿಸುವೆ ನಾನು ಬಾ ಬಳಿಗೆ.
ಕಲಿಸುವ Coach ನಾನಿರಲು ಸಂಕೋಚವ ಬಿಡು ನೀನು
ಹ್ನಾ ಸೇದು, ಏನಾಗದು ನೋಡು ಜೊತೆ ಇರುವೆನು ನಾನು.
ಸಕತ್!
ಭಲೇ ಭಲೇ…..
-ನಗೆ ಸಾಮ್ರಾಟ್
ಬಹುನಾಮ ಏನು ಮತ್ತು ಅದು ಅವರಿಗೆ ಕೊಟ್ಟಿರಾ ಎಂಬೆಲ್ಲಾ ಅನುನಾಮಗಳನ್ನು ಪರಿಹಾರಿಸುವಿರಾ?
ಎಲ್ಲರಿಗೂ ಸರ್ವನಾಮಗಳನ್ನು ಕರುಣಿಸಿದ್ದೇವೆ ಸಧ್ಯಕ್ಕೆ…
ಯಾವುದೆ ಇರಲಿ ಬಿಡು ಗೆಳತಿ
ನನ್ನ ನಿನ್ನ ಜಾತಿ
ಬಾ ನಾವಿಬ್ಬರು ಆಗೊಣ
ಸಿಗರೇಟು ಸಂಗಾತಿ 😊
ಆರತಿ ಘಟಿಕಾರ್