ಚರ್ಚೆ: ನಗದ ಜೀವಿ= ಬುದ್ಧಿ ಜೀವಿ?!

18 ಜುಲೈ

ಸಂಪಾದಕರು ಎಂದೊಡನೆಯೇ ಒಂದು ಚಿತ್ರಣ ನಮ್ಮೆದುರು ಬರುತ್ತದೆ. ಜೋಲು ಮುಖ ಹಾಕಿಕೊಂಡು ಕಣ್ಣುಗಳಲ್ಲಿ ಗಾಢ ಆಲೋಚನೆಯನ್ನು ನಟಿಸುತ್ತಾ ಸಿಗರೇಟನ್ನು ಸುಡುತ್ತಾ ಗಡ್ಡ ನೀವಿಕೊಳ್ಳುವ ವ್ಯಕ್ತಿ ಕಾಣುತ್ತಾನೆ. ಆತನಿಗೆ ಹಾಸ್ಯ, ನಗು ನಿಷಿದ್ಧ ಎಂಬುದು ಅಲಿಖಿತ ಶಾಸನವಾಗಿರುತ್ತದೆ. ಸಂಪಾದಕರುಗಳು, ಅದರಲ್ಲೂ ಬಹುದೊಡ್ಡ ದಿನಪತ್ರಿಕೆಯ ಸಂಪಾದಕರು ಕೇವಲ ‘ಬುದ್ಧಿ’ ಇಲ್ಲವೆ ‘ಸುದ್ದಿ’ ಜೀವಿಯಾಗಿರಬೇಕು ಎಂಬ ಅಭಿಪ್ರಾಯ ಜನಮಾನಸದಲ್ಲಿ ನೆಲೆ ನಿಂತಿದೆ. ಆತ ಹಾಸ್ಯ ಜೀವಿಯೂ, ರಸಿಕ ಜೀವಿಯೂ ಆಗಿರಬಹುದು ಎಂಬ ಸಾಧ್ಯತೆಯೇ ನಮ್ಮಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಗಂಭೀರವಲ್ಲದ ವ್ಯಕ್ತಿ ಕೊಡುವ ಮಾಹಿತಿಗೆ ವಿಶ್ವಾಸಾರ್ಹತೆ ಇರುತ್ತದೆಯೋ ಎಂದು ನಾವು ಯೋಚಿಸುತ್ತೇವೆ. ಬಹುತೇಕ ದಿನ ಪತ್ರಿಕೆಗಳ ಸಂಪಾದಕರು ಸಹ ಹೀಗೇ ಇರುತ್ತಾರೆ. ಜನರೂ ಸಹ ಅವರನ್ನು ಹಾಗೇ ಕಾಣಲು ಇಷ್ಟ ಪಡುತ್ತಾರೆ.

ಆದರೆ ಅಲ್ಲಲ್ಲಿ ಕೆಲವು ಅಪವಾದಗಳು ಬೆಟ್ಟದ ಹಾಗೆ ಬೆಳೆದು ನಿಂತು ಅಚ್ಚರಿಯನ್ನು ಉಂಟು ಮಾಡುತ್ತವೆ. ಕನ್ನಡ ಪ್ರಭಾದ ಸಂಪಾದಕರಾಗಿದ್ದ ವೈ.ಎನ್.ಕೆ ‘ಘಾ’ ಎಂದು ಹೂಂಕರಿಸುತ್ತಿದ್ದುದನ್ನು ನೆನೆಸಿಕೊಂಡರೆ ಸಂಪಾದಕ ಹೀಗೂ ಇರಬಹುದಾ ಎಂದು ಆಶ್ಚರ್ಯವಾಗುತ್ತದೆ. ನಮ್ಮ ನಡುವೆ ಇರುವ ಮತ್ತೊಬ್ಬ ಸಂಪಾದಕ ಸಹ ಇಂಥದ್ದೇ ಅಚ್ಚರಿಯನ್ನು ನಮ್ಮಲ್ಲಿ ಹುಟ್ಟಿಸುತ್ತಾರೆ. ಅವರು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ರು. ಸಂಪಾದಕರ ಅಂಕಣದ ತುಂಬಾ ಜೋಕುಗಳು ತುಂಬಿರಬಹುದು ಎಂದು ಕನಸಿನಲ್ಲೂ ನಾವು ಯೋಚಿಸಲು ಸಾಧ್ಯವಾಗದು. ಅಂಥ ಶಾಕ್ ಕೊಟ್ಟವರು ಭಟ್ಟರು. ಭಾನುವಾರದ ಕಾಲಮ್ಮಿನಲ್ಲೂ ಓದುಗರು ಕಳುಹಿಸಿದ ಜೋಕುಗಳನ್ನು ಹಾಕಿಕೊಂಡು ಕುಶ್ವಂತ್ ಸಿಂಗ್ ಸಂಪ್ರದಾಯ ಪಾಲಿಸುತ್ತಿರುವ ಭಟ್ಟರ ಹಾಗೂ ಅವರ ಪತ್ರಿಕೆಯ ವಿಶ್ವಾಸಾರ್ಹತೆಯ ಮೇಲೆ ಯಾರಿಗೂ ಸಂಶಯವಿಲ್ಲ.

ಹಾಗಾದರೆ ಬುದ್ಧಿ ಜೀವಿಯಾಗುವುದಕ್ಕೂ, ನಗದಿರುವುದಕ್ಕೂ (‘ನಗದು’ ಇಲ್ಲದಿರುವುದು ಎಂದು ಅರ್ಥೈಸಿಕೊಂಡರೆ ನಾವು ಜವಾಬ್ದಾರರಲ್ಲ) ಸಂಬಂಧವಿದೆಯೇ? ಜ್ಞಾನದ ಭಾರ ತಲೆಯಲ್ಲಿ ಹೆಚ್ಚಾದಷ್ಟೂ ನಗು ಮುಖದಲ್ಲಿ ಹೂತು ಹೋಗುತ್ತದೆಯೇ?

2 Responses to “ಚರ್ಚೆ: ನಗದ ಜೀವಿ= ಬುದ್ಧಿ ಜೀವಿ?!”

  1. hema ಜುಲೈ 19, 2008 at 2:46 ಅಪರಾಹ್ನ #

    ವಿಶ್ವೇಶ್ವರ ಭಟ್ರು ಜೋಕು ಬರೆಯೋದು ಬಿಟ್ಟು ಅವರ ಜೋಕನ್ನೇ ಓದಿ ನಗೋದು ಕಲೀಲಿ. ಬರವಣಿಗೆಯಲ್ಲಿರೋ ಹಾಸ್ಯ ಪ್ರಜ್ಞೆ ಜೀವನದಲ್ಲಿಯೂ ಇರಬೆಡವೇ? ಅದೇನೋ ಭಟ್ಟರು ನಗುತ್ತಿರುವ ಒಂದು ಫೋಟೋನು ಅವರದೇ ಪತ್ರಿಕೆಯಲ್ಲಾಗಲಿ ಬೇರೆ ಪತ್ರಿಕೆಯೆಲ್ಲಾಗಲಿ ನೋಡಲು ಸಿಕ್ಕಿಲ್ಲ. ನೀವೆನಾದ್ರೂ ನೋಡಿದ್ರೆ ನಿಮ್ಮ ಬ್ಲಾಗ್‌ನಲ್ಲಿ ಹಾಕಿ ಸಾಮ್ರಾಟ್ ರೇ, ನಿಮ್ಮ ಕೃಪೆ ಇಂದ ಅವರ ನಗುಮುಖ ದರ್ಶನವಾಗಲಿ….

  2. Nage samrat ಜುಲೈ 19, 2008 at 3:02 ಅಪರಾಹ್ನ #

    ಅಯ್ಯೋ ಭಟ್ಟರು ನಕ್ಕಿದ್ದನ್ನು ನೀವು ಕಂಡಿಲ್ವಾ? ಅವರ ಫೋಟೊ ತೆಗೆಯುವಾಗ ಫೋಟೊಗ್ರಾಫರ್ ‘ಅಯ್ಯೋ ಫೋಟೊ ತೆಗೀಬೇಕು, ಸಂಪಾದಕೀಯ ಪುಟಕ್ಕೆ ಸ್ವಲ್ಪ ಸೀರಿಯಸ್ಸಾಗಿ ಸರ್’ ಅಂತ ಗೋಗರೆಯುತ್ತಿರುತ್ತಾನೆ. ಗೊತ್ತೇ?

    ನಗೆ ಸಾಮ್ರಾಟ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: