ನಗಾರಿ ಸದ್ದು ಮುಗಿಲು ಮುಟ್ಟುತ್ತಿದೆ!

28 ಜನ

ಅಬ್ಬಬ್ಬಾ! ನಗೆ ನಗಾರಿಯ ಸದ್ದು ಕಿವಿಗಡಕಿಚ್ಚುವಂತೆ ಮಾರ್ದನಿಸುತ್ತಿದೆ. ಕನ್ನಡದ ಬ್ಲಾಗಿಗರ ಹುಮ್ಮಸ್ಸು, ಅವರ ಆಸಕ್ತಿ, ಸಹೃದಯತೆಗೆ ನಗಾರಿ ‘ಮಿಡಿಯುತ್ತಿದೆ.’ ಈ ಬ್ಲಾಗಿನ ಬಾಗಿಲು ತೆರೆದದ್ದು ನಿನ್ನೆ(ಜನವರಿ ೨೭) ಒಂದೂ \ವರೆ ದಿನದಲ್ಲಿ ಹಿಟ್ಟುಗಳನ್ನು ಪಡೆದಿದೆ! ಇವತ್ತೊಂದೇ ದಿನ, ಈ ವರೆಗೆ ನೂರಾ ಹನ್ನೆರಡು ಮಂದಿ ಬ್ಲಾಗಿಲಿಗೆ ಬಂದು ನಗಾರಿ ನುಡಿಸಿದ್ದಾರೆ!7.png

ಆದರೆ ಅಷ್ಟು ಮಂದಿ ಬಂದು ಸುಮ್ಮನೆ ಕಣ್ಣು ಹೊಡೆದು ಹೋಗಿದ್ದಾರೆ. ಈ ಬ್ಲಾಗಿಲಿಗೆ ಬಂದ ಅತಿಥಿ ಗೂಡು ಹೇಗಿದೆ ಎಂದು ಒಂದೆರಡು ಸಾಲನ್ನಾದರೂ ಕಮೆಂಟ್ ಬಾಕ್ಸಿನಲ್ಲಿ ಗೀಚಿದರೆ ನಗಾರಿಗೆ ಸಂತೋಷ. ನಗಾರಿಯ ಸ್ವರೂಪ ಈಗ ಹೇಗಿದೆಯೋ ಅದು ನಿಮಗೆ ಮೆಚ್ಚುಗೆಯಾಯಿತೇ? ಇನ್ನು ಹೇಗೆ ಬೆಳೆಯಬಹುದು? ಏನೇನನ್ನು ಸೇರಿಸಿಕೊಳ್ಳಬಹುದು ಎಂಬ ನಿಮ್ಮ ಸಲಹೆಗಳಿಂದ ನಗಾರಿ ಸಮೃದ್ಧಗೊಳ್ಳಬೇಕು.

ಒಂದೇ ಒಂದು ನಲ್ಮೆಯ ಪತ್ರ ಬರೆಯುತ್ತೀರಾ, ಪ್ಲೀಸ್!


Technorati : , , ,

8 Responses to “ನಗಾರಿ ಸದ್ದು ಮುಗಿಲು ಮುಟ್ಟುತ್ತಿದೆ!”

 1. kaaloo ಜನವರಿ 28, 2008 at 10:19 ಅಪರಾಹ್ನ #

  ಸಾರಥಿ,

  ನಗೆಯ ರಥವನ್ನು ನಿರಂತರ ನಡೆಸಿಕೊಂಡು ಬನ್ನಿ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ!
  ಅಲ್ಲಲ್ಲಿ ವರ್ಡ್‌ಪ್ರೆಸ್ ಟೆಂಪ್ಲೇಟ್‌ನ ಓರೆಕೋರೆಗಳನ್ನು ಸರಿಪಡಿಸಿ, ನಿಮ್ಮನ್ನು ಸಂದರ್ಶಿಸುವ ಪ್ರತಿಯೊಬ್ಬರೂ ಓದುವಂತೆ ಬ್ಲಾಗಿರಲಿ.

  ಪುರುಸೊತ್ತು ಮಾಡಿಕೊಂಡು ಗಂಭೀರ ವಿಷಯಗಳನ್ನೂ ಓದುವುದ ಮರೆಯದಿದ್ದರೆ ಸಾಕು 🙂
  htttp://antaranga.blogspot.com

 2. ಮೋಟುಗೋಡೆ ಜನವರಿ 28, 2008 at 10:41 ಅಪರಾಹ್ನ #

  ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ, ಕನ್ನಡಕ್ಕೊಂದು ಹೊಸ ಸುಂದರ ಬ್ಲಾಗು ಬರಲಿ.

  ಆದರೆ, ಪ್ರಚಾರದ ಭರದಲ್ಲಿ ದಿನವೂ ಸಿಕ್ಕಸಿಕ್ಕ ಬ್ಲಾಗುಗಳಿಗೆ ಹೋಗಿ ಕಮೆಂಟುಗಳನ್ನು ಬರೆಯುವ ಜಾಗವನ್ನು ನಿಮ್ಮ “ಸ್ಪಾಮ್” ಮೇಸೇಜುಗಳನ್ನು “ಕಾಪಿ- ಪೇಸ್ಟ್” ಮಾಡಲು ಬಳಸಿಕೊಳ್ಳಬೇಡಿ. ಈಗ ನಿಮ್ಮ ಬ್ಲಾಗಲ್ಲೇ ಯಾವಾನೋ ಬಂದು, ನಿಮ್ಮ ಲೇಖನಕ್ಕೆ ರಿಪ್ಲೈ ಮಾಡದೇ ತನ್ನ ವೆಬ್ ಸೈಟ್ ಬಗ್ಗೆ ಬರೆದರೆ ಹೇಗನಿಸುತ್ತದೆ?

  ಇತರರ ಬ್ಲಾಗುಗಳಿಗೆ ಭೇಟಿ ನೀಡುವಾಗ, ಅಲ್ಲಿ ಬರೆದಿರುವ ಲೇಖನಗಳನ್ನೋ , ಕತೆ ಕವಿತೆಗಳನ್ನೋ ಓದುವ ಸಹೃದಯತೆ ಬೆಳೆಸಿಕೊಳ್ಳಿ. ಅವುಗಳಿಗೆ ಕಮೆಂಟಿಸಿ. ಆಗ ತಾನೇ ತಾನಾಗಿ ಜನ ಬಂದು ನಿಮ್ಮ ಬ್ಲಾಗು ಓದುತ್ತಾರೆ. ಇಲ್ಲದೇ ಹೋದರೆ ನೀವು ನಾಗಾರಿ ಬಾರಿಸಿದರೂ ಅಷ್ಟೇ, ಬೊಂಬಡಾ ಹೊಡಕೊಂಡರೂ ಅಷ್ಟೇ.

  ಕಳಕಳಿಯ ಮನವಿ .. ಬೇಸರಿಸಿಕೊಳ್ಳಬೇಡಿ.

 3. polihudga ಜನವರಿ 29, 2008 at 7:42 ಫೂರ್ವಾಹ್ನ #

  swami,
  nimma nageya nagaari saddu mugilu muttisalu, sikka sikka blog ge arthavillade comment hakidhirra.

  nimma prayatna janarige talupabeku yembudu sahaja adare, ee rithi alla. ee rithi maadidare baruva janaru baruvadilla.
  kannada blog andare kevala kathe-kavana-sahitya bagge maatra maatadabeku anno vargadalli nimmadu vibinnavagidarre kaMdita jana mannaNe kodutarre. aggada pracharavannu kaibidI.

  -PH

 4. nagenagaaridotcom ಜನವರಿ 29, 2008 at 10:40 ಫೂರ್ವಾಹ್ನ #

  ಕಾಲೂರವರೆ,
  ನಿಮ್ಮ ಪ್ರೀತಿಯ, ಹುಸಿ ಕೋಪದ ಬೆದರಿಕೆಗೆ ನಾವು ನಲುಗಿಹೋಗಿದ್ದೇವೆ. ನಿಮ್ಮ ‘ಅಂತರಂಗ’ದ ಸಲಹೆಗಳಿಗೆ ನಾವು ಮನ್ನಣೆ ಕೊಡುತ್ತೇವೆ.

  ‘ವರ್ಡ್ ಪ್ರೆಸ್ಸಿ’ನ ಓರೆಕೋರೆಯ ಬಗ್ಗೆ ಸ್ವಲ್ಪ ವಿವರಿಸಿ ಹೇಳಿ… ಈ ವಿಷಯದಲ್ಲಿ ನಾನು ಅಜ್ಞಾನಿ.

  ಅಗಾಗ ಬರುತ್ತಿರಿ….

  ನಗೆ ಸಾಮ್ರಾಟ್

 5. nagenagaaridotcom ಜನವರಿ 29, 2008 at 10:42 ಫೂರ್ವಾಹ್ನ #

  ಮೋಟುಗೋಡೆ,
  ನಿಮ್ಮ ಗದರಿಕೆಗೂ ನಾನು ಮನ್ನಣೆ ಕೊಡುತ್ತೇನೆ. ಇನ್ನು ಮುಂದೆ ಪ್ರತಿಯೊಂದು ಪೋಸ್ಟುಗಳನ್ನು ಸಹನೆಯಿಂದ ಓದುವ ಪ್ರಯತ್ನ ಮಾಡುತ್ತೇನೆ. ಪ್ರಾಮಾಣಿಕವಾಗಿ ಅನ್ನಿಸಿದ್ದನ್ನು ಅಲ್ಲಿ ಕಮೆಂಟಿಸುತ್ತೇನೆ.

  ನಗಾರಿಯ ಸದ್ದು ಎಷ್ಟೇ ಹೆಚ್ಚಾದರೂ ಅದು ಮತ್ತೊಬ್ಬರ ಕಿವಿಗೆ ಕಿರಿಕಿರಿಯಾಗಬಾರದು ಎಂಬ ಕಾಳಜಿಯನ್ನು ವಹಿಸುತ್ತೇನೆ.

  ಇಲ್ಲಿ ಬಂದು ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

  ನಗೆ ಸಾಮ್ರಾಟ್

 6. nagenagaaridotcom ಜನವರಿ 29, 2008 at 10:48 ಫೂರ್ವಾಹ್ನ #

  ಪೋಲಿ ಹುಡುಗ,
  ನಿಮ್ಮ ಸಿಟ್ಟು, ಕೋಪ ಸಕಾರಣವಾದದ್ದೇ.
  ‘ಅಗ್ಗದ ಪ್ರಚಾರ’ ಇಷ್ಟು ದುಬಾರಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲ.
  ಇದರಿಂದ ನಗಾರಿ ಸದ್ದು ಹೆಚ್ಚಾಗುವ ಬದಲು ಅದರ ಹೊದಿಕೆಯೇ ಹರಿದುಹೋಗಬಹುದು ಎಂಬ ನಿಮ್ಮ ಎಚ್ಚರಿಕೆ ನಮ್ಮನ್ನು ತಲುಪಿದೆ.
  ಧನ್ಯವಾದಗಳು

  ನಗೆ ಸಾಮ್ರಾಟ್

 7. ವಿಕಾಸ್ ಹೆಗಡೆ ಜನವರಿ 29, 2008 at 12:12 ಅಪರಾಹ್ನ #

  template ವಿನ್ಯಾಸ ಬದಲಾಯಿಸಿ ಸ್ವಲ್ಪ ಆಕರ್ಷಣೀಯವಾಗಿ ಮಾಡಿ. ವಿಭಿನ್ನ ಪ್ರಯತ್ನಗಳು ಜಾರಿಯಲ್ಲಿರಲಿ. ಖಂಡಿತ ಜನ ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಶುಭ ಹಾರೈಕೆಗಳು. ಚೆನ್ನಾಗಿ ಮೂಡಿಬರಲಿ ನಗೆನಗಾರಿ.

 8. nagenagaaridotcom ಜನವರಿ 29, 2008 at 8:22 ಅಪರಾಹ್ನ #

  ವಿಕಾಸರೇ,
  ವರ್ಡ್ ಪ್ರೆಸ್ಸಿನಲ್ಲಿ ಟೆಂಪ್ಲೇಟುಗಳ ಪಟ್ಟಿಯಲ್ಲಿ ಹುಡುಕಿದಾಗ ಸಿಕ್ಕ ಉತ್ತಮ ಟೆಂಪ್ಲೇಟ್ ಇದು. ಹೊರಗೆ ಬೇರೆ ಸೈಟುಗಳಲ್ಲಿ ಅನೇಕ ಒಳ್ಳೆಯ ಟೆಂಪ್ಲೇಟುಗಳನ್ನು ಕಂಡೆ ಆದರೆ ಅವನ್ನೇನೋ ಅಪ್ಲೋಡ್ ಮಾಡುವ ವಿಧಾನ ಅರ್ಥವಾಗಲಿಲ್ಲ ಅದಕ್ಕೇ ಕೈಬಿಟ್ಟೆ.
  ಈ ವಿಷಯದ ಬಗ್ಗೆ ನೀವು ನನಗೆ ಗೈಡ್ ಮಾಡುವುದಾದರೆ ಈ ವಿನ್ಯಾಸವನ್ನು ವಿಕಾಸಗೊಳಿಸಲು ನನಗೆ ಯಾವ ಅಭ್ಯಂತರವೂ ಇಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: