ಹಾರುವ ತಟ್ಟೆಯೇ?
ಹಾರುವ ತಟ್ಟೆಯೊಂದರ ಇಂಧನ ತೀರಿಹೋಗುತ್ತಿತ್ತು. ಹತ್ತಿರದಲ್ಲೇ ಕಂಡ ದೇವೇಗೌಡ ಪೆಟ್ರೋಲ್ ಬಂಕಿನ ಬಳಿ ಅನ್ಯಗ್ರಹ ಜೀವಿಗಳು ಅದನ್ನು ಇಳಿಸಿದರು.
ಇಂಧನ ತುಂಬುವಾಗ ಕೆಲಸಗಾರ ಆ ವಾಹನವನ್ನು ಗಮನಿಸಿದ ಅದರ ಒಂದು ಪಕ್ಕದಲ್ಲಿ ದೊಡ್ಡ ಅಕ್ಷರಗಳಲ್ಲಿ UFO ಎಂದು ಬರೆದಿತ್ತು. ಕುತೂಹಲ ತಾಳಲಾರದೆ ಆತ ಪ್ರಶ್ನಿಸಿದ.
“ಸಾರ್, ಹಾಗಂದ್ರೆ Unidentified Flying Object ಎಂದೇ?”
“ಅಲ್ಲ”, ಅನ್ಯಗ್ರಹ ಜೀವಿಯೊಬ್ಬ ಹೇಳಿದ, “ಅದು Unleaded Fuel Only”.
ನಾವೇನು ಮಾಡಬೇಕು?
ಧಾರ್ಮಿಕ ಬೋಧನೆಯ ತರಗತಿಯಲ್ಲಿ ಪಾದ್ರಿಗಳು ಮಕ್ಕಳನ್ನು ಕೂರಿಸಿಕೊಂಡು ವಿವೇಕ ಹೇಳುತ್ತಿದ್ದರು.
“ದೇವರು ದಯಾಮಯ, ನಮ್ಮೆಲ್ಲಾ ಪಾಪಗಳನ್ನು ಉದಾರ ಮನಸ್ಸಿನಿಂದ ಕ್ಷಮಿಸುವನು.
“ಆತ ನಮ್ಮ ಪಾಪಗಳನ್ನು ಕ್ಷಮಿಸಬೇಕೆಂದರೆ ಮೊದಲು ನಾವು ಏನು ಮಾಡಬೇಕು ಹೇಳಿ…?” ಪಾದ್ರಿ ಕೇಳಿದರು.
ಮುಂದಿನ ಸಾಲಲ್ಲಿ ಕೂತಿದ್ದ ಸಾಮ್ರಾಟ್ ಎದ್ದು ನಿಂತ, “ಮಹಾಸ್ವಾಮಿಗಳೇ ಮೊದಲು ನಾವು ಪಾಪ ಮಾಡಬೇಕು”
ಆಯ್ಕೆ ಇದೆಯಾ?
ಕಾವಿಧಾರಿ ಸ್ವಾಮಿ ಹಾಗೂ ಸೂಟ್ ಧಾರಿ ವ್ಯಾಪಾರಿಗಳು ವಿಮಾನದಲ್ಲಿ ಅಕ್ಕ ಪಕ್ಕದ ಸೀಟಿನಲ್ಲಿ ಕೂತಿದ್ದರು.
ಗಗನಸಖಿ ವ್ಯಾಪಾರಿಯ ಬಳಿಗೆ ಬಂದು ಪಾನೀಯ ಬೇಕೆ ಎಂದು ಕೇಳಿದಾಗ ವ್ಯಾಪಾರಿ ವಿಸ್ಕಿ ಎಂದನು.
ಆತನಿಗೆ ವಿಸ್ಕಿಯನ್ನು ಸುರಿದು ಕೊಟ್ಟು ಸ್ವಾಮಿಜಿಗಳೆಡೆಗೆ ತಿರುಗಿ ಆಕೆ ಪಾನೀಯ ಬೇಕೆ ಎಂದಳು.
ಸ್ವಾಮೀಜಿ ಅಸಹ್ಯದಿಂದ, “ಹತ್ತು ಮಂದಿ ಹೆಂಗಸರನ್ನು ಕ್ರೂರವಾಗಿ ಕೆಡಿಸಬಲ್ಲೆನೇ ಹೊರತು ನನ್ನ ತುಟಿಗಳಿಗೆ ಮದ್ಯವನ್ನು ಮುಟ್ಟಿಸುವುದಿಲ್ಲ” ಎಂದರು.
ಕೂಡಲೇ ವ್ಯಾಪಾರಿಯು ತನ್ನ ಮದ್ಯದ ಗಾಜನ್ನು ಹಿಂದಿರುಗಿಸುತ್ತ, “ಓ ಈ ಆಯ್ಕೆ ಇದೆಯೆಂದು ನನಗೆ ತಿಳಿದೇ ಇರಲಿಲ್ಲ” ಎಂದನು.
ನಾನು ನೋಡಿಲ್ಲ
ಡಕಾಯಿತನೊಬ್ಬ ಬ್ಯಾಂಕ್ ಲೂಟಿ ಮಾಡಿದ ನಂತರ ನೆರೆದಿದ್ದ ಗ್ರಾಹಕರಲ್ಲಿ ಒಬ್ಬನೆಡೆಗೆ ಗನ್ ತೋರಿಸಿ ಕೇಳಿದ,
“ನಾನು ದುಡ್ಡು ಕದ್ದಿದ್ದನ್ನು ನೀನು ನೋಡಿದೆಯಾ?”
ಆ ವ್ಯಕ್ತಿ ಗಾಬರಿಯಿಂದಲೇ ಹೇಳಿದ, “ಹು… ಹೌದು”
ಡಕಾಯಿತ ಗನ್ನನ್ನು ಆತನ ಹಣೆಗೆ ಇಟ್ಟು ಗುಂಡು ಹಾರಿಸಿಬಿಟ್ಟ.
ಮುಂದಿನ ಗ್ರಾಹಕನ ಬಳಿಗೆ ಹೋಗಿ ಮತ್ತೆ ಅದೇ ಪ್ರಶ್ನೆ ಕೇಳಿದ,
“ನಾನು ಈ ಬ್ಯಾಂಕ್ ದರೋಡೆ ಮಾಡಿದ್ದನ್ನು ನೀನು ನೋಡಿದೆಯಾ?”
ಆ ಮನುಷ್ಯ ಸಾವಧಾನದಿಂದ ಉತ್ತರಿಸಿದ, “ಇಲ್ಲ, ಆದರೆ ನನ್ನ ಹೆಂಡತಿ ನೋಡಿದಳು.”
ಸೀಟು
ಇಬ್ಬರು ತರುಣಿಯರು ಕಿಕ್ಕಿರಿದು ತುಂಬಿದ್ದ ಬಸ್ಸನ್ನು ಏರಿದರು.
ತನ್ನ ಸೀಟಿನಲ್ಲಿ ಕೂತಿದ್ದ ಅಮಾಯಕ ಗಂಡಸನ್ನು ತೋರಿಸುತ್ತ ಒಬ್ಬಾಕೆ ಹೇಳಿದಳು, “ಈಗ ನೋಡು ಮಜಾ, ಆತ ತಾನಾಗಿ ನನಗೆ ಸೀಟು ಬಿಟ್ಟು ಕೊಡುವಂತೆ ಮಾಡುತ್ತೇನೆ.”
ಕೂತಿದ್ದ ಗಂಡಸನ್ನು ಉದ್ದೇಶಿಸಿ ಆತ ತೀರಾ ಪರಿಚಿತನಿರುವಂತೆ ಹೇಳಿದಳು, “ಮಿಸ್ಟರ್ ಮೂರ್ತಿ…ಓಹ್ ನೀವಾ? ಇದೇನು ಇಲ್ಲಿ? ಯಾಕೆ ನಾನು ಪರಿಚಯವಿಲ್ಲದವಳ ಹಾಗೆ ನೋಡ್ತಿದೀರಿ? ಅಬ್ಬ ಸಿಕ್ಕಾಪಟ್ಟೆ ದಣಿವಾಗಿದೆ!”
ಗಲಿಬಿಲಿಯಿಂದ ಆಕೆಯ ಮುಖ ನೋಡಿದ ಆ ಗಂಡಸು ತುಸು ವಿಶ್ರಮಿಸಿಕೊಂಡು ಮುಖದಲ್ಲಿ ಪ್ರಸನ್ನತೆಯನ್ನು ತಂದುಕೊಂಡು ಎದ್ದು ನಿಂತು ಆಕೆಗೆ ಸೀಟು ಬಿಟ್ಟುಕೊಟ್ಟ.
“ಓಹ್ ಬನ್ನಿ ಕುಳಿತುಕೊಳ್ಳಿ ರಾಧ. ಭಾನುವಾರ ಸಾಮಾನ್ಯ ನಿಮ್ಮನ್ನು ಕಾಣುವುದಿಲ್ಲ. ಇವತ್ತೇನು? ಗರ್ಭಿಣಿಯಾಗಿದ್ದೀರಿ ಎಂದ ಮೇಲೆ ದಣಿವು ಇದ್ದದ್ದೇ. ನೀವೇನು ಚಿಂತಿಸಬೇಡಿ ನನ್ನ ಹೆಂಡತಿ ಎಲ್ಲಾ ವ್ಯವಸ್ಥೆ ಮಾಡಿದ್ದಾಳೆ. ಜೈಲಿಗೆ ಹೋದ ನಿಮ್ಮ ಗಂಡನಿಗೆ ಶೀಘ್ರವೇ ಬಿಡುಗಡೆಯಾಗುವುದಂತೆ.”
…………………………………………
ಔಷಧಿ
ಮುಖ ಬೆನ್ನುಗಳ ಮೇಲೆ ಬಾಸುಂಡೆ ಎದ್ದಿದ್ದ ಹೆಂಗಸು ಡಾಕ್ಟರ್ ಕಾಣಲು ಬಂದಳು.
ಡಾಕ್ಟರ್ ಕೇಳಿದ “ಏನಾಯಿತು?”
ಹೆಂಗಸು ಹೇಳಿದಳು, “ಡಾಕ್ಟರ್, ನನಗೇನು ಮಾಡ್ಬೇಕು ಅಂತ ತೋಚ್ತಿಲ್ಲ. ನನ್ನ ಗಂಡ ಕುಡಿದು ಮನೆಗೆ ಬಂದಾಗಲೆಲ್ಲ ನನ್ನು ದನಕ್ಕೆ ಬಡಿದ ಹಾಗೆ ಬಡಿಯುತ್ತಾನೆ.”
“ಹೌದಾ ಅದಕ್ಕೆ ನನ್ನ ಬಳಿ ಒಳ್ಳೇ ಔಷಧಿ ಇದೆ. ನಿನ್ನ ಗಂಡ ಮನೆಗ ಬಂದಾಗ ಈ ದ್ರವವನ್ನು ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸುತ್ತಿರು. ಹತ್ತಾರು ಬಾರಿಯಾದರೂ ಇದನ್ನು ಮಾಡು.”
ಎರಡು ವಾರಗಳ ನಂತರ ಲವಲವಿಕೆಯಿಂದ ಕೂಡಿದ್ದ ಆಕೆ ಡಾಕ್ಟರ್ ಕಾಣಲು ಬಂದಳು.
“ಡಾಕ್ಟರ್, ನಿಮ್ಮ ಔಷಧಿ ತುಂಬಾ ಚೆನ್ನಾಗಿ ಕೆಲಸ ಮಾಡಿತು. ನನ್ನ ಗಂಡ ಕುಡಿದು ಬಂದಾಗಲೆಲ್ಲಾ ನಾನು ಆ ಔಷಧಿಯನ್ನು ಬಾಯಿಗೆ ಹಾಕಿ ಮುಕ್ಕಳಿಸುತ್ತಲೇ ಇದ್ದೆ. ಅವನು ನನ್ನ ಹೊಡೆಯುವುದಿರಲಿ, ಮುಟ್ಟಲೂ ಇಲ್ಲ.”
“ನೋಡಿದ್ಯಾ, ನೀನು ಬಾಯಿ ಮುಚ್ಚಿಕೊಂಡಿದ್ದರೆ ಎಷ್ಟೆಲ್ಲಾ ಸಮಸ್ಯೆಗಳು ಪರಿಹಾರವಾಗ್ತವೆ ಅಂತ!”
ನಾಸ್ತಿಕ ಬಾಯ್ ಫ್ರೆಂಡ್
ತನ್ನ ಬಾಯ್ ಫ್ರೆಂಡ್ನನ್ನು ಕಾಣಲು ಹೋಗಿದ್ದ ಯುವತಿ ಸಪ್ಪೆ ಮುಖ ಹೊತ್ತು ಮನೆಗೆ ಹಿಂದಿರುಗಿದ್ದಳು.
ಅವರಮ್ಮನಿಗೆ ಹೇಳಿದಳು, “ರಂಜಿತ್ ನನಗೆ ಪ್ರೊಪೋಸ್ ಮಾಡಿದ.”
“ಅದಕ್ಕ್ಯಾಕೆ ನೀನು ಬೇಜಾರಾಗಿದ್ದೀಯಾ?”
“ಯಾಕಂದ್ರೆ ಅವನು ನಾಸ್ತಿಕನಂತೆ. ನರಕ ಇದೆ ಎನ್ನುವುದಕ್ಕೆ ಅವನಿಗೆ ನಂಬಿಕೆಯಿಲ್ಲವಂತೆ.”
ತಾಯಿ ಹೇಳಿದಳು, “ಯೋಚಿಸಬೇಡ ಬೇಬಿ, ಅವನನ್ನ ಮದುವೆಯಾಗು ಆಮೇಲೆ ತನ್ನ ನಂಬಿಕೆ ಸುಳ್ಳು ಎಂದು ಅವನಿಗೇ ಅರಿವಾಗುತ್ತೆ.”
ಶಾಕ್ ಆಯ್ತಾ?
ತನ್ನ ಗಂಡ ಮನೆಯ ಅಡುಗೆಯವಳ ಜೊತೆ ಸರಸವಾಡುತ್ತಿರಬಹುದು ಎಂಬ ಸಂಶಯ ಹೆಂಡತಿಗೆ ಬಂತು.
ಆತನನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿಯಬೇಕೆಂದು ಆಕೆ ತೀರ್ಮಾನಿಸಿ ಅಡುಗೆಯವಳಿಗೆ ರಜೆ ನೀಡಿ ಕಳಿಸಿದಳು. ಅಂದು ರಾತ್ರಿ ಆಕೆಯ ರೂಮಿನಲ್ಲಿ ತಾನು ಹೋಗಿ ಲೈಟುಗಳನ್ನು ಆರಿಸಿ ತಾನು ಹೋಗಿ ಮಲಗಿದಳು.
ಸರಿಯಾಗಿ ಮಧ್ಯರಾತ್ರಿಯಲ್ಲಿ ಗಂಡಸೊಬ್ಬ ಒಳಗೆ ಬಂದು ಹಾಸಿಗೆಯೇರಿದ. ಆಕೆಯನ್ನು ಕೆಲಕಾಲ ಮುದ್ದಿಸಿದ.
ಕೂಡಲೇ ದೀಪ ಹಾಕಿದ ಹೆಂಡತಿ, “ಶಾಕ್ ಆಯ್ತಾ?” ಎಂದಳು.
“ಓಹ್, ನಿಜಕ್ಕೂ ಆಯ್ತು ಮೇಡಂ” ಎಂದ ಮನೆಯ ಡ್ರೈವರ್!
ಜಾರಿಕೊಂಡದ್ದು ನನ್ನ ಗಂಡನಲ್ಲ
ಜಗ್ಗ ಹಾಗೂ ಶೀಲ ಒಳ್ಳೆಯ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದರು. ಇನ್ನೊಂದು ಟೇಬಲಿನಲ್ಲಿ ಆರ್ಡರ್ ಪಡೆಯುತ್ತಿದ್ದ ವೇಟ್ರೆಸ್ ಜಗ್ಗ ಬಲುನಿಧಾನವಾಗಿ, ಸದ್ದಿಲ್ಲದೆ ತನ್ನ ಚೇರಿನಿಂದ ಕೆಳಗೆ ಜಾರಿಕೊಂಡು ಟೇಬಲ್ ಕೆಳಕ್ಕೆ ತೂರಲು ತೊಡಗಿದ. ಶೀಲ ಇದನ್ನು ಕಂಡರೂ ಕಾಣದ ಹಾಗೆ ಕೂತಿದ್ದಳು.
ವೇಟ್ರೆಸ್ ನೋಡುತ್ತಿದ್ದ ಹಾಗೇ ಜಗ್ಗ ಸಂಪೂರ್ಣವಾಗಿ ಟೇಬಲ್ ಕೆಳಗೆ ಅವಿತುಕೊಂಡ.ಆದರೂ ಶೀಲ ಏನು ಆಗದವಳಂತೆ ತನ್ನ ಪ್ಲೇಟಲ್ಲಿದ್ದ ಊಟವನ್ನು ಖಾಲಿ ಮಾಡುವುದರಲ್ಲಿ ಮಗ್ನಳಾಗಿದ್ದಳು.
ಆರ್ಡರ್ ಪಡೆದು ಮುಗಿಸಿದ ವೇಟ್ರೆಸ್ ಇವರಿಬ್ಬರ ಟೇಬಲ್ ಬಳಿಗೆ ಬಂದಳು. ಶೀಲಳ ಕುರಿತು, “ಕ್ಷಮಿಸಿ ಮೇಡಂ, ನಿಮ್ಮ ಗಂಡ ಟೇಬಲ್ ಕೆಳಗೆ ಅವಿತುಕೊಂಡರು.” ಎಂದಳು.
ಶೀಲ ಅವಳನ್ನು ದಿಟ್ಟಿಸಿ ಹೇಳಿದಳು, “ಓಹ್, ಇಲ್ಲ. ನನ್ನ ಗಂಡ ಇದೀಗ ತಾನೆ ಮುಂಭಾಗದ ಬಾಗಿಲಿನಿಂದ ಹೊರಗೆ ಹೋದರು.”
………………………………………
ಹಾರುವ ತಟ್ಟೆಯೇ?
ಹಾರುವ ತಟ್ಟೆಯೊಂದರ ಇಂಧನ ತೀರಿಹೋಗುತ್ತಿತ್ತು. ಹತ್ತಿರದಲ್ಲೇ ಕಂಡ ದೇವೇಗೌಡ ಪೆಟ್ರೋಲ್ ಬಂಕಿನ ಬಳಿ ಅನ್ಯಗ್ರಹ ಜೀವಿಗಳು ಅದನ್ನು ಇಳಿಸಿದರು.
ಇಂಧನ ತುಂಬುವಾಗ ಕೆಲಸಗಾರ ಆ ವಾಹನವನ್ನು ಗಮನಿಸಿದ ಅದರ ಒಂದು ಪಕ್ಕದಲ್ಲಿ ದೊಡ್ಡ ಅಕ್ಷರಗಳಲ್ಲಿ UFO ಎಂದು ಬರೆದಿತ್ತು. ಕುತೂಹಲ ತಾಳಲಾರದೆ ಆತ ಪ್ರಶ್ನಿಸಿದ.
“ಸಾರ್, ಹಾಗಂದ್ರೆ Unidentified Flying Object ಎಂದೇ?”
“ಅಲ್ಲ”, ಅನ್ಯಗ್ರಹ ಜೀವಿಯೊಬ್ಬ ಹೇಳಿದ, “ಅದು Unleaded Fuel Only”.
ನಾವೇನು ಮಾಡಬೇಕು?
ಧಾರ್ಮಿಕ ಬೋಧನೆಯ ತರಗತಿಯಲ್ಲಿ ಪಾದ್ರಿಗಳು ಮಕ್ಕಳನ್ನು ಕೂರಿಸಿಕೊಂಡು ವಿವೇಕ ಹೇಳುತ್ತಿದ್ದರು.
“ದೇವರು ದಯಾಮಯ, ನಮ್ಮೆಲ್ಲಾ ಪಾಪಗಳನ್ನು ಉದಾರ ಮನಸ್ಸಿನಿಂದ ಕ್ಷಮಿಸುವನು.
“ಆತ ನಮ್ಮ ಪಾಪಗಳನ್ನು ಕ್ಷಮಿಸಬೇಕೆಂದರೆ ಮೊದಲು ನಾವು ಏನು ಮಾಡಬೇಕು ಹೇಳಿ…?” ಪಾದ್ರಿ ಕೇಳಿದರು.
ಮುಂದಿನ ಸಾಲಲ್ಲಿ ಕೂತಿದ್ದ ಸಾಮ್ರಾಟ್ ಎದ್ದು ನಿಂತ, “ಮಹಾಸ್ವಾಮಿಗಳೇ ಮೊದಲು ನಾವು ಪಾಪ ಮಾಡಬೇಕು”
ಆಯ್ಕೆ ಇದೆಯಾ?
ಕಾವಿಧಾರಿ ಸ್ವಾಮಿ ಹಾಗೂ ಸೂಟ್ ಧಾರಿ ವ್ಯಾಪಾರಿಗಳು ವಿಮಾನದಲ್ಲಿ ಅಕ್ಕ ಪಕ್ಕದ ಸೀಟಿನಲ್ಲಿ ಕೂತಿದ್ದರು.
ಗಗನಸಖಿ ವ್ಯಾಪಾರಿಯ ಬಳಿಗೆ ಬಂದು ಪಾನೀಯ ಬೇಕೆ ಎಂದು ಕೇಳಿದಾಗ ವ್ಯಾಪಾರಿ ವಿಸ್ಕಿ ಎಂದನು.
ಆತನಿಗೆ ವಿಸ್ಕಿಯನ್ನು ಸುರಿದು ಕೊಟ್ಟು ಸ್ವಾಮಿಜಿಗಳೆಡೆಗೆ ತಿರುಗಿ ಆಕೆ ಪಾನೀಯ ಬೇಕೆ ಎಂದಳು.
ಸ್ವಾಮೀಜಿ ಅಸಹ್ಯದಿಂದ, “ಹತ್ತು ಮಂದಿ ಹೆಂಗಸರನ್ನು ಕ್ರೂರವಾಗಿ ಕೆಡಿಸಬಲ್ಲೆನೇ ಹೊರತು ನನ್ನ ತುಟಿಗಳಿಗೆ ಮದ್ಯವನ್ನು ಮುಟ್ಟಿಸುವುದಿಲ್ಲ” ಎಂದರು.
ಕೂಡಲೇ ವ್ಯಾಪಾರಿಯು ತನ್ನ ಮದ್ಯದ ಗಾಜನ್ನು ಹಿಂದಿರುಗಿಸುತ್ತ, “ಓ ಈ ಆಯ್ಕೆ ಇದೆಯೆಂದು ನನಗೆ ತಿಳಿದೇ ಇರಲಿಲ್ಲ” ಎಂದನು.
ನಾನು ನೋಡಿಲ್ಲ
ಡಕಾಯಿತನೊಬ್ಬ ಬ್ಯಾಂಕ್ ಲೂಟಿ ಮಾಡಿದ ನಂತರ ನೆರೆದಿದ್ದ ಗ್ರಾಹಕರಲ್ಲಿ ಒಬ್ಬನೆಡೆಗೆ ಗನ್ ತೋರಿಸಿ ಕೇಳಿದ,
“ನಾನು ದುಡ್ಡು ಕದ್ದಿದ್ದನ್ನು ನೀನು ನೋಡಿದೆಯಾ?”
ಆ ವ್ಯಕ್ತಿ ಗಾಬರಿಯಿಂದಲೇ ಹೇಳಿದ, “ಹು… ಹೌದು”
ಡಕಾಯಿತ ಗನ್ನನ್ನು ಆತನ ಹಣೆಗೆ ಇಟ್ಟು ಗುಂಡು ಹಾರಿಸಿಬಿಟ್ಟ.
ಮುಂದಿನ ಗ್ರಾಹಕನ ಬಳಿಗೆ ಹೋಗಿ ಮತ್ತೆ ಅದೇ ಪ್ರಶ್ನೆ ಕೇಳಿದ,
“ನಾನು ಈ ಬ್ಯಾಂಕ್ ದರೋಡೆ ಮಾಡಿದ್ದನ್ನು ನೀನು ನೋಡಿದೆಯಾ?”
ಆ ಮನುಷ್ಯ ಸಾವಧಾನದಿಂದ ಉತ್ತರಿಸಿದ, “ಇಲ್ಲ, ಆದರೆ ನನ್ನ ಹೆಂಡತಿ ನೋಡಿದಳು.”
ಸೀಟು
ಇಬ್ಬರು ತರುಣಿಯರು ಕಿಕ್ಕಿರಿದು ತುಂಬಿದ್ದ ಬಸ್ಸನ್ನು ಏರಿದರು.
ತನ್ನ ಸೀಟಿನಲ್ಲಿ ಕೂತಿದ್ದ ಅಮಾಯಕ ಗಂಡಸನ್ನು ತೋರಿಸುತ್ತ ಒಬ್ಬಾಕೆ ಹೇಳಿದಳು, “ಈಗ ನೋಡು ಮಜಾ, ಆತ ತಾನಾಗಿ ನನಗೆ ಸೀಟು ಬಿಟ್ಟು ಕೊಡುವಂತೆ ಮಾಡುತ್ತೇನೆ.”
ಕೂತಿದ್ದ ಗಂಡಸನ್ನು ಉದ್ದೇಶಿಸಿ ಆತ ತೀರಾ ಪರಿಚಿತನಿರುವಂತೆ ಹೇಳಿದಳು, “ಮಿಸ್ಟರ್ ಮೂರ್ತಿ…ಓಹ್ ನೀವಾ? ಇದೇನು ಇಲ್ಲಿ? ಯಾಕೆ ನಾನು ಪರಿಚಯವಿಲ್ಲದವಳ ಹಾಗೆ ನೋಡ್ತಿದೀರಿ? ಅಬ್ಬ ಸಿಕ್ಕಾಪಟ್ಟೆ ದಣಿವಾಗಿದೆ!”
ಗಲಿಬಿಲಿಯಿಂದ ಆಕೆಯ ಮುಖ ನೋಡಿದ ಆ ಗಂಡಸು ತುಸು ವಿಶ್ರಮಿಸಿಕೊಂಡು ಮುಖದಲ್ಲಿ ಪ್ರಸನ್ನತೆಯನ್ನು ತಂದುಕೊಂಡು ಎದ್ದು ನಿಂತು ಆಕೆಗೆ ಸೀಟು ಬಿಟ್ಟುಕೊಟ್ಟ.
“ಓಹ್ ಬನ್ನಿ ಕುಳಿತುಕೊಳ್ಳಿ ರಾಧ. ಭಾನುವಾರ ಸಾಮಾನ್ಯ ನಿಮ್ಮನ್ನು ಕಾಣುವುದಿಲ್ಲ. ಇವತ್ತೇನು? ಗರ್ಭಿಣಿಯಾಗಿದ್ದೀರಿ ಎಂದ ಮೇಲೆ ದಣಿವು ಇದ್ದದ್ದೇ. ನೀವೇನು ಚಿಂತಿಸಬೇಡಿ ನನ್ನ ಹೆಂಡತಿ ಎಲ್ಲಾ ವ್ಯವಸ್ಥೆ ಮಾಡಿದ್ದಾಳೆ. ಜೈಲಿಗೆ ಹೋದ ನಿಮ್ಮ ಗಂಡನಿಗೆ ಶೀಘ್ರವೇ ಬಿಡುಗಡೆಯಾಗುವುದಂತೆ.”
ಹೊಟ್ಟೆ ಹುಣ್ಣಾಗುವಮ್‌ಂತೆ ನಗು ಬರಿಸುವ ಜೋಕ್ಸ್ ಓದಿ ಅದು ಹೇಗೆ ಸಿರಿಯಸ್ಫ್ ಅಗಬೇಕು?
ಸೀರಿಯಸ್ಸು ಆಗ್ಬೇಕು ಕಣ್ರೀ, ನಮ್ಮ ಹಾಗೆ ಲೂಸ್ ಆದರೆ ಹೆಂಗೆ?
ಸೀರಿಯಸ್ಸಾಗಿ ಜೋಕ್ಸ್ ಮಾಡಬೇಕು. ಅಂದ್ರೆ ಏನ್ಮಾಡುದ್ರೂ ಸೀರಿಯಸ್ಸಾಗೆ ಮಾಡ್ಬೇಕು ಅಂತನೋ ನೀವ್ಹೇಳೋದು. ಅದಕ್ಕೆ ಜೋಕ್ಸ್ ಯಾಕೆ ಓದ್ಬೇಕು?
Tumba channagidave bhayya intaha jokugalanna avakasha shikkagalella nanu odatairteni
Hage Nannallu kuda hashyya pravartiyanna belesikoltaideni i like your jok