Posts Tagged ‘nage nagaari’

ನಗಾರಿ ರೆಕಮಂಡೇಶನ್ 20

ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್!
ಹ್ಹ! ನಿಲ್ಲಿ ನಾವು ಆತನ ಹೆಸರು, ಆತನ ಪೋಷಾಕು, ಆತನ ವಿಗ್ರಹ ಬಳಸಿ ಯಾವುದೇ ವಿವಾದ ಪಡೆಯುವ ಹುನ್ನಾರ ನಡೆಸುತ್ತಿಲ್ಲ. ಆ ರೀತಿಯ ವಿವಾದ ಸೃಷ್ಟಿಸಿ ಈಗಾಗಲೇ ನಿರ್ವಹಿಸಲಾಗದಷ್ಟು ಬೆಳೆದು ನಿಂತಿರುವ ನಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನೂ ಹೊಂದಿಲ್ಲ.
ಕರ್ನಾಟಕದಲ್ಲಿ ಹುಟ್ಟಿ ರಾಜ್ ಕುಮಾರ್ ಹೆಸರು ಕೇಳಿಲ್ಲ, ಭಾರತದಲ್ಲಿ ಹುಟ್ಟಿ ಗಾಂಧಿ ತಾತ ಗೊತ್ತಿಲ್ಲ ಎನ್ನುವವರನ್ನು ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ಜಾಗತಿಕ ‘ನಗೆ ಸಾಮ್ರಾಟ’ಚಾಪ್ಲಿನ್‌ನ ಬಗ್ಗೆ ಕೇಳದವರು ನಮಗೆ ಸಿಕ್ಕುವುದಿಲ್ಲ. [...]

Continue reading »

ನಗಾರಿ ರೆಕಮಂಡೇಶನ್ಸ್ 17

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
……………………………………

ಟಿವಿ ಶೋಗಳು ಹಾಗೂ ಶೋ ಆಂಕರ್‌ಗಳು ಅಮೇರಿಕಾದ ಟಿವಿ ಜಗತ್ತಿನಲ್ಲಿ ಸ್ಥಾಪಿಸಿರುವ ಸ್ಥಾನವು ಬಹಳ ಪ್ರಮುಖವಾದದ್ದು. ಒಬ್ಬೊಬ್ಬ ಟಿವಿ ಆಂಕರ್ ಪ್ರಸಿದ್ಧಿಯಲ್ಲಿ ಸಹ ಹಾಲಿವುಡ್ ಹಿರೋನ ಎತ್ತರ ಏರಿರುವುದು, ಅವರೂ ಸಹ ಸೆಲೆಬ್ರಿಟಿಗಳಾಗಿರುವುದು ಕಂಡು ಬರುತ್ತದೆ. ಭಾರತದ ಟಿವಿ ಚಾನೆಲ್ಲುಗಳಲ್ಲೂ ಸಹ ಇಂತಹ ಕೆಲವು ಉದಾಹರಣೆಗಳಿವೆಯಾದರೂ ಆಸಕ್ತರು [...]

Continue reading »

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…

 
ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ [...]

Continue reading »

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ ಪಡಬೇಕಿಲ್ಲ. ಉದಾಹರಣೆಗೆ ಎಸ್.ಎಸ್.ಎಸ್.ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದುಕೊಳ್ಳಿ. ನೀವು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದರೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿಕೊಂಡು ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಬಹುದು. ನಿಮ್ಮನ್ನು ವೈಯಕ್ತಿಕವಾಗಿ ಬಲ್ಲವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ಅದನ್ನು ಅಲ್ಲಗಳೆಯುವುದಿಲ್ಲ. ಒಂದು ವೇಳೆ ನೀವು ಪತ್ರಿಕೆಯನ್ನು ಹಿಡಿದು [...]

Continue reading »

ವಾರದ ವಿವೇಕ 15

……………………………………………………….
ಗಾಳಿಯಲ್ಲಿ ಮಹಲು ಕಟ್ಟಿ.
ಅದರಲ್ಲಿ ತಪ್ಪೇನಿಲ್ಲ.
ಆದರೆ ನೆಲದ ಮೇಲೆ ಅದಕ್ಕೆ
ಫೌಂಡೇಶನ್ ಹಾಕುವುದನ್ನು ಮರೆಯಬೇಡಿ!
- ಮದನ ಮೋಹನ ಮಾಳವೀಯ
……………………………………………………….

Continue reading »

ವಾರದ ವಿವೇಕ 14

…………………………………………………………………………………….
ಕಣ್ಣೀರು ಸುರಿಯುವುದೊಂದೇ ಹೆಣ್ಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು.
- ಬೀchi
…………………………………………………………………………………….

Continue reading »

ನಗಾರಿಯ ಸಂಚಿಕೆ ಹೇಗಿತ್ತು?

ಅಸಲಿಗೆ ನಗೆ ನಗಾರಿ ಡಾಟ್ ಕಾಮ್ ಎಂಬ ವಿಚಿತ್ರ ಹೆಸರಿನ ಬ್ಲಾಗನ್ನು ತೆರೆದು ಹತ್ತಿರ ಆರು ತಿಂಗಳುಗಳು ಕಳೆದಿವೆ. ಆದರೂ ಪೂರ್ಣ ಪ್ರಮಾಣದ ಸಂಚಿಕೆಯನ್ನು ರೂಪಿಸಲು ಸಾಧ್ಯವಾಗಿರಲಿಲ್ಲ. ಎಲ್ಲಾ ವಿಭಾಗಗಳಲ್ಲೂ ಬರಹಗಳನ್ನು ದಾಖಲಿಸಲು ನಮ್ಮಿಂದ ಆಗಿರಲಿಲ್ಲ. ಮೊದಲು ಇದನ್ನು ವಾರಕ್ಕೊಮ್ಮೆ ಅಪ್‌ಡೇಟ್ ಮಾಡುವ ಇರಾದೆ ನಮ್ಮದಾಗಿತ್ತಾದರೂ ಅದು ಸುಲಭದ ಕೆಲಸವಲ್ಲ ಎಂದುಕೊಂಡು ಸುಮ್ಮನಾದೆವು. ಆದರೆ ಈಗ ಹದಿನೈದು ದಿನಕ್ಕೊಮ್ಮೆ ಬ್ಲಾಗಿನ ಸಂಚಿಕೆಯನ್ನು ರೂಪಿಸಬಹುದು ಎಂಬ ಧೈರ್ಯ ಬಂದಿದೆ. ಅದಕ್ಕೇ ಪ್ರಾಯೋಗಿಕವಾಗಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಹಿಂದಿನ [...]

Continue reading »

ವಾರದ ವಿವೇಕ 9

………………………………………………………………………………………..
ಜೀವನದಲ್ಲಿ ಆಶಾಭಂಗವನ್ನು
ತಪ್ಪಿಸಬೇಕಾದರೆ ಇರುವ
ಒಂದೇ ಉಪಾಯ: ಯಾವುದನ್ನೂ ಆಶಿಸಲೇಬಾರದು.
-ಬೀchi
………………………………………………………………………………………..
(ಕಳೆದ ವಾರದ ವಾರದ ವಿವೇಕ)

Continue reading »