ಕನ್ನಡ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ ಹೆಸರಾಂತ ಬ್ಲಾಗಿಗರೊಬ್ಬರ ಸಂದರ್ಶನ ಶೀಘ್ರವೇ ನಗೆ ನಗಾರಿಯಲ್ಲಿ ಮೂಡಿಬರಲಿದೆ!
ಈ ಅತಿ ಸೂಕ್ಷ್ಮ ಸಂದರ್ಶನವನ್ನು ಖುದ್ದು ಸಾಮ್ರಾಟರೇ ಮಾಡಿಕೊಂಡು ಬಂದಿದ್ದಾರೆ!
ಬ್ಲಾಗ್ ಅಂಗಳದಲ್ಲಿ ಕೋಲಾಹಲ ಹುಟ್ಟಿಸುವಂತಹ ಅಂಶಗಳು ಈ ಸಂದರ್ಶನದಲ್ಲಿ ಅಡಗಿವೆ!
ಸ್ಪೋಟಕ ಸತ್ಯಗಳು ಇದರಲ್ಲಿ ಬಯಲಾಗಿವೆ!
ಈ ಅಪರೂಪದ ಸಂದರ್ಶನಕ್ಕಾಗಿ ನಗೆ ನಗಾರಿಯನ್ನು ತಪ್ಪದೇ ಓದುತ್ತಿರಿ.
(ಒರಿಜಿನಲ್ ಸಂದರ್ಶನ ಪ್ರಕಟವಾಗುವ ಮುನ್ನವೇ ಚೀನಾ ಮಾರ್ಗವಾಗಿ ಚಲಿಸಿ ಪ್ರಕಟವಾಗುವ ಅಗ್ಗದ ನಕಲಿ ಸಂದರ್ಶನವನ್ನು ಓದಿ ಮರುಳಾಗದಿರಿ!)
- ನಗೆ ಸಾಮ್ರಾಟ್
Posts Tagged ‘ಸಂದರ್ಶನ’
2 Oct
ಸ್ಪೋಟಕ ಸಂದರ್ಶನಕ್ಕೆ ತಯಾರಾಗಿ!
31 Mar
ಖ್ಯಾತ ನಟಿ ‘ಬಂದ್ರೆ ತಾರೇ’ರೊಂದಿಗೆ ‘ಸಂ’‘ದರ್ಶನ’
(ಖ್ಯಾತ ನಟಿ ಬಂದ್ರೆ ತಾರೇ ಸಂದರ್ಶನಕ್ಕೆ ಹೋಗಿದ್ದ ಸಾಮ್ರಾಟರ ಆಲ್ಟರ್ ಈಗೋ ಕಳೆದ ಕೆಲವು ದಿನಗಳು ನಾಪತ್ತೆಯಾಗಿದ್ದು ನಮ್ಮ ಅನೇಕ ನಿಷ್ಠಾವಂತ ಓದುಗರಲ್ಲಿ ಆತಂಕವನ್ನೂ, ಸಂಶಯವನ್ನೂ ಮೂಡಿಸಿತ್ತು. ಸಾಮ್ರಾಟರ ಆಲ್ಟರ್ ಈಗೋದ ಆರೋಗ್ಯದ ಕಾಳಜಿ ಹೊಂದಿರುವವರಿಗೆ ಆತಂಕ ಉಂಟಾಗಿದ್ದರೆ, ಆ ಈಗೋದ ‘ಚಾರಿತ್ರ್ಯ’ದ ಮೇಲೆ ಕಾಳಜಿ ಇದ್ದವರಿಗೆ ಸಂಶಯ ಮೂಡಿತ್ತು. ಕಡೆಗೆ ಸಾಮ್ರಾಟರು ಈ ಆತಂಕ, ಸಂಶಯಗಳ ಮುಸುಕನ್ನು ಸರಿಸಲು ನಿರ್ಧರಿಸಿ ತಮ್ಮ ಚೇಲ ಕುಚೇಲನನ್ನು ಅಟ್ಟಿದರು. ಕುಚೇಲ ನಗೆ ಸಾಮ್ರಾಟರ ಆಲ್ಟರ್ ಈಗೋವನ್ನೂ, ಅದರ ಸಂದರ್ಶನವನ್ನೂ [...]
24 Feb
ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ
(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’ ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ [...]
3 Feb
ನಗಾರಿ ರೆಕಮಂಡೇಶನ್ಸ್ 17
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
……………………………………
ಟಿವಿ ಶೋಗಳು ಹಾಗೂ ಶೋ ಆಂಕರ್‌ಗಳು ಅಮೇರಿಕಾದ ಟಿವಿ ಜಗತ್ತಿನಲ್ಲಿ ಸ್ಥಾಪಿಸಿರುವ ಸ್ಥಾನವು ಬಹಳ ಪ್ರಮುಖವಾದದ್ದು. ಒಬ್ಬೊಬ್ಬ ಟಿವಿ ಆಂಕರ್ ಪ್ರಸಿದ್ಧಿಯಲ್ಲಿ ಸಹ ಹಾಲಿವುಡ್ ಹಿರೋನ ಎತ್ತರ ಏರಿರುವುದು, ಅವರೂ ಸಹ ಸೆಲೆಬ್ರಿಟಿಗಳಾಗಿರುವುದು ಕಂಡು ಬರುತ್ತದೆ. ಭಾರತದ ಟಿವಿ ಚಾನೆಲ್ಲುಗಳಲ್ಲೂ ಸಹ ಇಂತಹ ಕೆಲವು ಉದಾಹರಣೆಗಳಿವೆಯಾದರೂ ಆಸಕ್ತರು [...]
12 Nov
ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2
(ಇಲ್ಲಿಂದ ಮುಂದುವರೆದದ್ದು)
ನ.ಸಾ: ಅಲ್ಲ ಗುರುಗಳೇ, ದೇವರು ಇದ್ದಾನೆ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡುವುದು ನಿಮ್ಮ ಕರ್ತವ್ಯವಲ್ಲವೇ? ಜನರು ಪ್ರಶ್ನಿಸಲೇ ಬಾರದು ಎಂದರೆ ವೈಜ್ಞಾನಿಕ ಮನೋಭಾವೆನೆ ಹೇಗೆ ಬೆಳೆಯಲು ಸಾಧ್ಯ?
ಧರ್ಮಶ್ರೀ: ದೇವರು ಇದ್ದಾನೆ ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ಸಾಕ್ಷಾತ್ ಆ ಪರಮಾತ್ಮನೇ ತಾನು ಈ ಜಗತ್ತನ್ನು ಸೃಷ್ಟಿಸಿದ್ದೇನೆ, ತಾನೇ ಈ ಜಗತ್ತನ್ನು ನಡೆಸುವವನು, ನಾಶ ಮಾಡುವವನು ಎಂದು ಹೇಳಿಲ್ಲವೇ? ಆತನಿಂದ ಬಂದ ಧಾರ್ಮಿಕ ಗ್ರಂಥಗಳಂತಹ ಸಾಕ್ಷಿಗಳು ಸಾಕಾಗುವುದಿಲ್ಲವೇ? ವೈಜ್ಞಾನಿಕ ಮನೋಭಾವ ಎಂಬ ಹೆಸರಿನಲ್ಲಿ ಸೈತಾನ ಆಳ್ವಿಕೆ ನಡೆಸುತ್ತಾನೆ. [...]
11 Nov
ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ
ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು ಎಂಬ ವದಂತಿಗಳನ್ನು ಹರಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಾಮ್ರಾಟರನ್ನು ದೇವಲೋಕದಿಂದ ಒದ್ದೋಡಿಸಿದಾಗ ಅವರು ನಗೆ ನಗಾರಿಯ ಡ್ರೈವರ್ ಸೀಟಿಗೆ ಬಂದು ಕುಳಿತು ತಮ್ಮ alter ego ಎಲ್ಲಿ ಎಂದು ಹುಡುಕಿದರು. ಆತ ಎಲ್ಲೂ ಕಾಣಲಿಲ್ಲ. ಕಡೆಗೆ ತಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಅಟ್ಟಿ ಆತನ ಇಹಪರಗಳನ್ನು ಪತ್ತೆ ಹಚ್ಚಲು ಓಡಿಸಿದರು. ಆಗ ತಿಳಿಯಿತು, ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡ [...]
15 Sep
ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗೆ
ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು. ತಮ್ಮ ಚೇಲ ಕುಚೇಲನನ್ನೂ ತಮ್ಮ ಆಲ್ಟರ್ ಈಗೋವನ್ನೂ ವಿನಾಯಕನ ಸಂದರ್ಶನಕ್ಕೆ ಅಟ್ಟಿದರು. ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಕೊಟ್ಟ. ಸಂದರ್ಶನದ ಪೂರ್ಣ ಪಾಠ [...]
10 Sep
ವಿನಾಯಕನ ಸಂದರ್ಶನ- ಶೀಘ್ರದಲ್ಲಿ!
ಗಜಾನನ, ಗಣಪತಿ, ವಿನಾಯಕನಿಂದ ನಗೆ ನಗಾರಿಯ ಕಛೇರಿಗೆ ಬಂದಿದ್ದ ಇಮೇಲಿನ ಬಗ್ಗೆ ಬಂದ ವರದಿಯನ್ನು ಓದಿದ್ದೀರಿ. ಆ ಇ-ಮೇಲನ್ನು ಓದಿ ನಗೆ ಸಾಮ್ರಾಟರು ವಿನಾಯಕನೊಂದಿಗೆ ಸಂದರ್ಶನವನ್ನು ಏರ್ಪಡಿಸಲು ಹೆಣಗುತ್ತಿದ್ದಾರೆ ಎಂದು ಹೇಳಿದ್ದೆವು. ಸಾಮ್ರಾಟರು ತಮ್ಮೆಲ್ಲಾ ಪ್ರಭಾವ ಹಾಗೂ ಯಾರಿಗೂ ತಿಳಿಯದ ಪ್ರಸಿದ್ಧಿ ಜೊತೆಗೆ ತೃಣ ಮಾತ್ರವಾದ ಆಸ್ತಿಕತೆಯ ಬಲದಿಂದ ಕೆಲಸವನ್ನು ಸಾಧಿಸಿಕೊಂಡು ಬಂದಿದ್ದಾರೆ.
ಹೌದು, ಲಾರ್ಡ್ ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೋಸಿವ್ ಆಗಿ ಸಂದರ್ಶನ ನೀಡಿದ್ದಾನೆ. ಶೀಘ್ರದಲ್ಲಿಯೇ ಗಣೇಶನೊಂದಿಗಿನ ಸಂದರ್ಶನ ನಗೆ ನಗಾರಿ ಡಾಟ್ ಕಾಮ್ ನಲ್ಲಿ ಪ್ರಕಟವಾಗಲಿದೆ. [...]
13 Aug
ಯುವ ಬ್ಲಾಗಿಗನ ಸಂದರ್ಶನ(2)
(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)
ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ [...]
9 Jul
ನಿರೀಕ್ಷಿಸಿ, ಯುವ ಬ್ಲಾಗಿಗನ ಸಂದರ್ಶನ
ನಗೆ ಸಾಮ್ರಾಟರ ತದ್ರೂಪು ಭಾರಿ ಹುರುಪಿನಲ್ಲಿದ್ದಾನೆ. ಮಾಧ್ಯಮ ಪ್ರತಿನಿಧಿಯೊಂದಿಗೆ ಮಾಡಿದ ಕಳೆದ ಸಂದರ್ಶನವನ್ನು ಕಂಡು ಮನಸಾರೆ ಕೊಂಡಾಡಿದ ನಗೆ ಸಾಮ್ರಾಟರು ಹೀಗೇ ಮುಂದುವರೆಯಲು ಸೂಚಿಸಿರುವುದು ಆತನಿಗೆ ನೆಲದ ಮೇಲೆ ಕಾಲು ನಿಲ್ಲದ ಹಾಗೆ ಮಾಡಿದೆ.
ಮುಂದಿನ ಸಂಚಿಕೆಗಾಗಿ ಈತ ಯುವ ಬ್ಲಾಗಿಗನೊಬ್ಬನನ್ನು ಸಂದರ್ಶಿಸಿ ಬಂದಿದ್ದಾನೆ. ಬ್ಲಾಗು ಎಂಬ ಅಮೂರ್ತ ಜಗತ್ತು ನಡೆಯುವುದು ಹೇಗೆ? ಬ್ಲಾಗುಗಳಿಗೆ ಬರೆಯುವುದು ಹೇಗೆ? ನೂರಾರು ಪ್ರತಿಕ್ರಿಯೆ ಪಡೆಯುವುದರ ಹಿಂದಿನ ರಹಸ್ಯವೇನು? ಬ್ಲಾಗು ಜಗತ್ತಿನ ಅಂತರಾಳದ ಗುಸು ಗುಸು ಪಿಸಪಿಸ ಏನು? ಎಂದೆಲ್ಲಾ ರೋಚಕವಾದ [...]
Recent Comments