ನೊಣ ಹೊಡೆಯುವ ಕೆಲಸವನ್ನು ಶ್ರದ್ಧಾ ಭಕ್ತಿಗಳಿಂದ ಪೂರೈಸಿ ಆಫೀಸಿನ ಬಾಗಿಲು ಮುಚ್ಚಿಕೊಂಡು ಮನೆಗೆ ಬಂದು ಸೋಫಾದ ಮೇಲೆ ಕುಕ್ಕರಿಸಿ ‘ಮುಸ್ಸಂಜೆ ಮನೆಗೆ ಬಂದು ಯಾರ್ಯಾರ ಬಯ್ಯಲಿ’ ಎಂದು ಗುನುಗುತ್ತಾ ಅತ್ತಿತ್ತ ಕಣ್ಣಾಡಿಸುತ್ತಿದ್ದೆವು. ಮಗ ಶಾಲೆಯಿಂದ ಬಂದು ಸೈಕಲನ್ನು ಗೇಟಿನೊಳಗೆ ಇಟ್ಟುಕೊಂಡಿದ್ದ, ಶೂ ಸಾಕ್ಸುಗಳನ್ನು ಅವವುಗಳ ಜಾಗದಲ್ಲಿ ಇರಿಸಿದ್ದ, ಚೀಲವನ್ನು ಸೋಫಾದ ಮೇಲೆ ಎಸೆಯದೆ ನೀಟಾಗಿ ತನ್ನ ರೂಮಿನಲ್ಲಿಟ್ಟಿದ್ದ, ಹಾಳು ಕಾರ್ಟೂನು ನೋಡುತ್ತ ಬಿದ್ದಿರದೆ ಹೋಂ ವರ್ಕ್ ಮಾಡುತ್ತಿದ್ದ. ನಾವು ವಿಪರೀತ ಏಕಾಗ್ರತೆಯಿಂದ, ವಿರೋಧ ಪಕ್ಷದ ನಾಯಕನ ಚಾಲಾಕಿನಿಂದ [...]
Posts Tagged ‘ರಾಜಕೀಯ’
6 May
ಸಂತಾಪಕೀಯ: ಕೈ ತಪ್ಪಿದ ಪ್ರಧಾನಿ ಪಟ್ಟ ಹಾಗೂ ನಮ್ಮ ನಾಪತ್ತೆ ಪ್ರಸಂಗ!
‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ್ನೂ ಕರ್ನಾಟಕದಲ್ಲಿ ಮಾಡುತ್ತೇವೆ’ ಎನ್ನುವ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರ ಹೇಳಿಕೆ, ‘ಇವತ್ತೇ ಕೊನೆ ಇನ್ನು ಕುಡಿಯುವುದಿಲ್ಲ, ಎಡಗೈ ಕಿರು ಬೆರಳಲ್ಲೂ ಮದ್ಯದ ಬಾಟಲ್ ಮುಟ್ಟುವುದಿಲ್ಲ’ ಎನ್ನುವ [...]
22 Nov
ನಾನು ರಾಜಕೀಯ ಸೇರಬಹುದು: raw-ಹುಳ ಮಹಾಜನ್
(ನಗೆ ನಗಾರಿ ರಾಜಕೀಯ ಬ್ಯೂರೋ)
Patriotism is the last refuge of a scoundral ಉದ್ಘರಿಸಿದ ಸ್ಯಾಮುಯಲ್ ಜಾನ್ಸನ್ನನ ಹೇಳಿಕೆಯನ್ನು ಸಾರ್ವತ್ರಿಕ ಗೊಳಿಸಿ Politics is the last refuge of a scoundral ಎಂಬುದಾಗಿ ತಿರುಚಿ ಅದನ್ನು ಸಾಬೀತು ಪಡಿಸಲು ಶ್ರೀಯುತ raw-ಹುಳ ಮಹಾಜನ್ ಕಂಕಣ ಬದ್ಧರಾಗಿದ್ದಾರೆ ಎಂದು ನಮ್ಮ ಮೂಲಗಳು ಅರಚಿಕೊಂಡಿವೆ.
ನಮ್ಮ ಭವ್ಯ ದೇಶದಲ್ಲಿ ತಂದೆಯಿಂದ ಮಗನಿಗೆ ಕೇವಲ ಅರ್ಧ ಪಾಲು ಕ್ರೋಮೋಜೋನುಗಳಷ್ಟೇ ಅಲ್ಲದೆ ಸಂಪೂರ್ಣ ಆಸ್ತಿ, ಭವಿಷ್ಯ, ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ [...]
13 Nov
ಒಬಾಮ ಯುವಕರಿಗೆ ಆದರ್ಶವಾಗಬಾರದು!
(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)
ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು [...]
28 Jul
‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ
(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)
ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು ಕೆಮರಾದ ಫ್ಲಾಶುಗಳಿಗೆ ಫೋಸುಕೊಡುತ್ತಿದ್ದ ನಮ್ಮ ಸದಾನಂದ ಗೌಡರೆಂದರೆ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಅಚ್ಚುಮೆಚ್ಚು. ರಾಜಕಾರಣಿಗಳು ಎಂದರೆ ಮಾನ, ಮರ್ಯಾದೆ ಹಾಗೂ ಆತ್ಮ ಸಾಕ್ಷಿಯನ್ನು ಬಿಟ್ಟವರು ಎಂದು ಜನರು ಒಪ್ಪಿಕೊಂಡು ಆಗಿದೆ. ಆದರೆ ಅವರು ನಗುವನ್ನೂ ಬಿಟ್ಟು ಸರ್ವ ಪರಿತ್ಯಕ್ತರಾಗುತ್ತಿರುವ ಅನಾರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸದಾನಂದ ಗೌಡರು ಮುಖದ ಮೇಲೆ ಸದಾ ಸಾವಿರ ವೋಲ್ಟ್ ಬಲ್ಬಿನ ಕಾಂತಿಯನ್ನು ಹೊತ್ತು ಆಯಾಸವಿಲ್ಲದೆ ಓಡಾಡುತ್ತಿದುದು [...]
6 Jul
ಸೋಲಿನ ಪತ್ತೆಗಾಗಿ ಸಂಶೋಧನೆ
(ನಗೆ ನಗಾರಿ ರಾಜಕೀಯ ಬ್ಯೂರೊ)
ಚುನಾವಣೆಯೆಂಬ ಗೂಳಿ ನಾಡಿನ ರಾಜಬೀದಿಯಿಂದ ಹಿಡಿದು ಗಲ್ಲಿಗಲ್ಲಿಗಳಲ್ಲಿ ನುಗ್ಗಿ ಧೂಳೆಬ್ಬಿಸಿ ಓಡಿಹೋಗಿದೆ. ಆ ಗೂಳಿಯ ಬೆನ್ನನ್ನೇರಿದ ಅದೃಷ್ಟವಂತರು ಸವಾರಿ ಮಾಡುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಗೂಳಿಗೆ ಕಾಲಿಗೆ ಸಿಕ್ಕು ಗೊರಸಿನಿಂದ ಪಕ್ಕೆಗೆ ಒದೆಸಿಕೊಂಡವರು ಕುಯ್ಯೋ ಮರ್ರೋ ಎನ್ನುತ್ತಾ ಮೂಲೆ ಸೇರಿಕೊಂಡು ಗಾಯಗಳಿಗೆ ಇಲಾಜು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗಾಯಗಳಿಗೆ ತಕ್ಕ ಮಟ್ಟಿಗೆ ಇಲಾಜು ಮಾಡಿಕೊಂಡು ರೆಡಿಯಾದ ಪಂಟರುಗಳು ಹೊಸತೊಂದು ಸಂಶೋಶನೆ ಕೈ ಹಾಕಿರುವ ಸುದ್ದಿ ತಡವಾಗಿ ನಗೆ ನಗಾರಿಯನ್ನು ತಲುಪಿದೆ. ಈ ಸುದ್ದಿಯನ್ನು ಬೆನ್ನಟ್ಟಿ ನಗೆ ಸಾಮ್ರಾಟರು [...]
Recent Comments