2
Oct
Posted by Nage samrat in ಆಧ್ಯಾತ್ಮ. Tagged: ಅಧ್ಯಾತ್ಮ, ಅಧ್ಯಾತ್ಮಾನಂದ ಸ್ವಾಮೀಜಿ, ಬ್ಲಾಗು, spirituality. 5 Comments
ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಾವು ನಾಡಿನ ಅನೇಕ ಗಣ್ಯರನ್ನು ಖಾಸಗಿಯಾಗಿ ಸಂದರ್ಶಿಸಿದೆವು. ತಾವು ನೋಡಿರದ ನಗೆ ನಗಾರಿಯಲ್ಲಿ ಕಂಡು ಬಂದ ಕೊರತೆಗಳನ್ನು, ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಲು ಬೇಡಿಕೊಂಡೆವು. ನಮ್ಮ ಬೇಡಿಕೆಯ ಮೇರೆಗೆ ಅವರು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೊದಲ ಕಂತಿನ ಭಾಗವಾಗಿ ಈ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.
- ನಗೆ ಸಾಮ್ರಾಟ್
ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ [...]
Continue reading »
13
Aug
Posted by Nage samrat in ಸಂದರ್ಶನ. Tagged: ನಗೆ ಸಾಮ್ರಾಟ್, ಬರವಣಿಗೆ, ಬ್ಲಾಗು, ಮಾತು, ಸಂದರ್ಶನ. 2 Comments
(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)
ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ [...]
Continue reading »
8
Aug
Posted by Nage samrat in ಸಂದರ್ಶನ. Tagged: ಬ್ಲಾಗು, ಯುವ ಬ್ಲಾಗಿಗ, ಸಾಮಾಜಿಕ ಜವಾಬ್ದಾರಿ. Leave a Comment
ನಗೆ ಸಾಮ್ರಾಟರ alter ego ಕಳೆದ ಬಾರಿಯ ಸಂದರ್ಶನದಿಂದ ಉತ್ಸಾಹಗೊಂಡು ಈ ಸಂಚಿಕೆಯ ನಗೆ ನಗಾರಿಗಾಗಿ ಒಬ್ಬ ಯುವ ಹಾಗೂ ಯಶಸ್ವೀ ಬ್ಲಾಗಿಗನನ್ನು ಸಂದರ್ಶಿಸಿದೆ. ಈ ಸಾಮ್ರಾಟರ ಮಾನಸ ಪುತ್ರ ಸಾಮ್ರಾಟರ ಬೆನ್ತಟ್ಟುವಿಕೆಗಾಗಿ ಕಾಯುತ್ತಾ ನಿಂತಿದ್ದಾನೆ.
ಸಂದರ್ಶನ ನಿಮ್ಮ ಮುಂದಿದೆ:
ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?
ಯುವ ಬ್ಲಾಗಿಗ: Fine dude. How are you?
ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.
ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ [...]
Continue reading »
13
Jul
Posted by Nage samrat in ಸೀರಿಯಸ್ಲೀ ಸೀರಿಯಸ್ಸು. Tagged: ಅಸಡ್ಡೆ, ನಗೆ ಸಾಮ್ರಾಟ್, ಪ್ರತಿಕ್ರಿಯೆ, ಬ್ಲಾಗು, ಹಾಸ್ಯ. 6 Comments
ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಗೆ ನಗಾರಿಯ ತಾಣಕ್ಕೆ ದಿನವೊಂದಕ್ಕೆ ಐವತ್ತರಿಂದ ನೂರು ಮಂದಿ ಮೌಸು ಚಿಟುಕಿಸಿ ಹೋಗುತ್ತಾರೆ. ಇಲ್ಲಿನ ಹಾಸ್ಯದ ಅಬ್ಬರಕ್ಕೆ ನವಿರಾಗಿ ನಲುಗಿ ಮನಸಾರೆ ನಗುತ್ತಾರೆ. ಆದರೆ ಕೆಲವೇ ಕೆಲವರು ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆ. ಧ್ವನಿಗೆ ಪ್ರತಿಧ್ವನಿಯನ್ನು ಸೇರಿಸುತ್ತಾರೆ. ಯಾಕೆ ಹೀಗೆ?
ಇದಕ್ಕೆ ಮುಖ್ಯ ಕಾರಣ ನಮ್ಮ ‘ನಗೆ ಸಾಮ್ರಾಟ್’ ಎಂಬ ಅವತಾರ ಎನ್ನುತ್ತಾರೆ ನಮ್ಮ ಹಿತೈಷಿಗಳು. ನಮ್ಮ ಅ‘ನಾಮ’ಧೇಯತೆಯೇ ಓದುಗರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುವಂತೆ ಮಾಡುತ್ತಿದೆ. ನಮ್ಮ ಗುರುತಿಲ್ಲದ, ಪರಿಚಯವಿಲ್ಲದ ವಿವರವೇ ಪ್ರತಿಸ್ಪಂದನೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ [...]
Continue reading »
9
Jul
Posted by Nage samrat in ಇತರೆ. Tagged: ನಗೆ ಸಾಮ್ರಾಟ್, ಬ್ಲಾಗಿಗ, ಬ್ಲಾಗು, ಸಂದರ್ಶನ. 2 Comments
ನಗೆ ಸಾಮ್ರಾಟರ ತದ್ರೂಪು ಭಾರಿ ಹುರುಪಿನಲ್ಲಿದ್ದಾನೆ. ಮಾಧ್ಯಮ ಪ್ರತಿನಿಧಿಯೊಂದಿಗೆ ಮಾಡಿದ ಕಳೆದ ಸಂದರ್ಶನವನ್ನು ಕಂಡು ಮನಸಾರೆ ಕೊಂಡಾಡಿದ ನಗೆ ಸಾಮ್ರಾಟರು ಹೀಗೇ ಮುಂದುವರೆಯಲು ಸೂಚಿಸಿರುವುದು ಆತನಿಗೆ ನೆಲದ ಮೇಲೆ ಕಾಲು ನಿಲ್ಲದ ಹಾಗೆ ಮಾಡಿದೆ.
ಮುಂದಿನ ಸಂಚಿಕೆಗಾಗಿ ಈತ ಯುವ ಬ್ಲಾಗಿಗನೊಬ್ಬನನ್ನು ಸಂದರ್ಶಿಸಿ ಬಂದಿದ್ದಾನೆ. ಬ್ಲಾಗು ಎಂಬ ಅಮೂರ್ತ ಜಗತ್ತು ನಡೆಯುವುದು ಹೇಗೆ? ಬ್ಲಾಗುಗಳಿಗೆ ಬರೆಯುವುದು ಹೇಗೆ? ನೂರಾರು ಪ್ರತಿಕ್ರಿಯೆ ಪಡೆಯುವುದರ ಹಿಂದಿನ ರಹಸ್ಯವೇನು? ಬ್ಲಾಗು ಜಗತ್ತಿನ ಅಂತರಾಳದ ಗುಸು ಗುಸು ಪಿಸಪಿಸ ಏನು? ಎಂದೆಲ್ಲಾ ರೋಚಕವಾದ [...]
Continue reading »
Recent Comments