17
Dec
Posted by Nage samrat in ರಾಜಕೀಯ. Tagged: ಅರುಂಧತಿ ರಾಯ್, ಫಿದಾಯೆ, ಬುದ್ಧಿಜೀವಿ, ಭಯೋತ್ಪಾದನೆ, ಮುಂಬೈ, ಸುದ್ದಿಜೀವಿ, mumbai. 2 Comments
– ನಗೆ ಸಾಮ್ರಾಟ್
ತುಂಬಾ ದಿನಗಳಿಂದ ನಮ್ಮ ಕನ್ನಡದ ಪತ್ರಿಕಗಳನ್ನು, ಸುದ್ದಿ ವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದರೂ ಒಂದೇ ಒಂದು ಕ್ಷಣಕ್ಕಾದರೂ ಬೆಳಕಿನ ಕಿರಣಗಳು ಮೂಡಬಹುದೇನೋ ಎಂದು!
ಇಡೀ ದೇಶವೇ ಸಮೂಹ ಸನ್ನಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು,ನಮ್ಮ ಸುತ್ತ ಮುತ್ತಲಿನ ಜನರೆಲ್ಲರೂ ಯಾವುದೋ ಹಿಪ್ನಾಟಿಸಂಗೆ ಒಳಗಾದವರಂತೆ ವರ್ತಿಸುತ್ತಿರುವಾಗ ಈ ಭೂಮಿಯ ಮೇಲೆ ಆ ದೇವರು ಸ್ಯಾಂಪಲ್ಲಿಗಾಗಿಯಾದರೂ ಇರಲಿ ಎಂದು ಸೃಷ್ಟಿಸಿದ ವಿವೇಕಿಗಳು ಎಲ್ಲಿಹೋದರು ಎಂದು ಹುಡುಕುತ್ತಿದ್ದೆವು. ಸಮೂಹ [...]
Continue reading »
14
Nov
Posted by Nage samrat in ಸೀರಿಯಸ್ಲೀ ಸೀರಿಯಸ್ಸು. Tagged: ನಗೆ ಸಾಮ್ರಾಟ್, ಪತ್ರಿಕೆ, ಬುದ್ಧಿಜೀವಿ, ಭಯೋತ್ಪಾದನೆ, ರಾಜಕಾರಣ, ಸೀರಿಯಸ್ಸು. Leave a Comment
‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: [...]
Continue reading »
13
Nov
Posted by Nage samrat in ರಾಜಕೀಯ. Tagged: ಒಬಾಮ, ಬುದ್ಧಿಜೀವಿ, ಯುವಕರು, ರಾಜಕಾರಣಿ, ರಾಜಕೀಯ. 1 Comment
(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)
ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು [...]
Continue reading »
6
Nov
Posted by Nage samrat in ಆಧ್ಯಾತ್ಮ. Tagged: ಐಕ್ಯತೆ, ಕರುಣಾನಿಧಿ, ತಿಲಕ, ಬುದ್ಧಿಜೀವಿ, ರಾಜಕಾರಣಿ, ವಿಭೂತಿ. Leave a Comment
(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)
ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾಡೆಂಬ ಭೂಲೋಕದ ಸ್ವರ್ಗದ ರಾಜಧಾನಿಯಲ್ಲಿ ಕರುಣಾಜನಕ ವಿಧಿಯವರು ‘ಬುದ್ಧಿಜೀವಿಯಾಗುವುದು ಹೇಗೆ?’ ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಾಗಾರದಲ್ಲಿ ಸಾಮಾನ್ಯರಲ್ಲಿ ಅತೀ ಸಾಮಾಯರಾದವರು ಕೂಡ ಹೇಗೆ ಕೆಲವೇ ಕೆಲವು ಪರಿಣಾಮಕಾರಿ ಹಾಗೂ ಸತ್ವಯುತ ಉಪಾಯಗಳನ್ನು ಬಳಸುವ ಮೂಲಕ ಖ್ಯಾತಿವೆತ್ತ ಬುದ್ಧಿಜೀವಿಯಾಗಿ ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಮಿಂಚಬಹುದು [...]
Continue reading »
Recent Comments