(ನಗೆ ನಗಾರಿ ನಗದು ಬ್ಯೂರೋ)
ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ ತ್ಯಾಗಗಳು ಅಪಾರ. ರಾಜ ಪ್ರಭುತ್ವವಿದ್ದಾಗಲೇ ಈ ಸಂಸ್ಕೃತಿಗೆ ಓನಾಮ ಹಾಕಿದವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ. ಡ್ರೈ ಕ್ಲೀನರ್ ಒಬ್ಬನ ಮಾತಿಗೆ ಮಡದಿಗೇ ಡೈವೋರ್ಸ್ ನೀಡುವ ಅತಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯದ ಮಾತೇ? ಈ ನಿರ್ಧಾರಕ್ಕೆ ಯಾವ ವಿಧದಲ್ಲೂ ಕನಿಷ್ಠವಲ್ಲದ ನಿರ್ಧಾರವನ್ನು ಕರ್ನಾಟಕವೆಂದ ರಾಜ್ಯದ ದೊರೆಯು ತೆಗೆದುಕೊಂಡಿದ್ದಾನೆ. ಜನತೆಯ ಆಶೋತ್ತರಗಳಿಗಾಗಿ ಹಿಂದೆ ಯಾರೂ ಮಾಡದ ತ್ಯಾಗವನ್ನು ನಾಡಿನ ಅಧಿಪತಿ ಮಾಡಲು ಮುಂದಾಗಿದ್ದಾನೆ. [...]
Posts Tagged ‘ನಗೆ ಸಾಮ್ರಾಟ್’
6 Nov
ದೊರೆ ನಗುವುದಕ್ಕೆ ಏನು ಮಾಡಬೇಕು?
4 Nov
ನಗೆ ಸಾಮ್ರಾಜ್ಯದಲ್ಲಿ ಕಾಡುತ್ತಿರುವ ಸಾಮ್ರಾಜ್ಞಿಯ ಕೊರತೆ!
ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು ವರದಿಯ ಸಂವಾದ ಮುಂದುವರೆದಿದೆ. ಸನ್ಮಾನ್ಯ ದರಿದ್ರ ನಾರಾಯಣ ಬಟಾಬತ್ತಲ್ ನಮ್ಮ ಅತ್ಯಾಪ್ತ ಚೇಲ ಕುಚೇಲನ ಮೇಲೆ ಗುರುತರವಾದ ಆರೋಪವನ್ನು ಮಾಡುವುದರ ಜೊತೆಗೆ ನಗೆ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯ ಅಗತ್ಯವಿದೆಯೆಂದು ಗಟ್ಟಿ ದನಿಯಲ್ಲಿ ಘೋಷಿಸಿದ್ದಾರೆ. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ. ಸಂವಾದಕ್ಕೆ ಹೊಸದಾಗಿ ಮುಖ ತೋರಿದವರು ಇಲ್ಲಿ ಹೋಗಿ ಬಂದರೆ ಇದರ ಹಿನ್ನೆಲೆ ತಿಳಿದೀತೆಂಬ ಧೈರ್ಯವನ್ನು ಹೊಂದಬಹುದು.
ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು [...]
23 Oct
ಅನಾಮಿಕ ಬ್ಲಾಗ್ ಜೀವಿಯ ವಿಶೇಷ ಸಂದರ್ಶನ!
(ವಿಶೇಷ ಅತಿಥಿಯೊಂದಿಗಿನ ಈ ವಿಶಿಷ್ಟ ಸಂದರ್ಶನಕ್ಕಾಗಿ ನಗೆ ಸಾಮ್ರಾಟರಾದ ನಾವು ಖುದ್ದು ವಹಿಸಿದ ಕಾಳಜಿಯನ್ನು, ಅನುಭವಿಸಿದ ಕಷ್ಟಗಳನ್ನು ಈಗಾಗಲೇ ನಮ್ಮ ನಾಡಿನ ಪ್ರಜೆಗಳ ಗಮನಕ್ಕೆ ತಂದಿದ್ದೇವೆ. ಈ ಅಪರೂಪದ ಅತಿಥಿ: ಅನಾಮಿಕ ಬ್ಲಾಗ್/ ಕಮೆಂಟ್ ಜೀವಿಯ ಸಂದರ್ಶನ ಇದೋ ನಿಮಗಾಗಿ!)
ನಗೆ ಸಾಮ್ರಾಟ್: ನಮಸ್ಕಾರ.
ಅನಾಮಿಕ: ಹು, ಹೇಳಿ ಏನಾಗ್ಬೇಕು?
ನ.ಸಾ: ನೀವು ಯಾವಾಗಲೂ ಹೀಗೇ ಇರುತ್ತೀರಾ?
ಅನಾಮಿಕ: ಹೇಗೆ?
ನ.ಸಾ: ಹೀಗೆ ಈ ಡಬ್ಬಿಯೊಳಗೆ ಕೂತು, ಬರೀ ನಿಮ್ಮ ಎರಡು ಕೈಗಳು ಹೊರಗೆ ಒಳಗೆ ಆಡುವಷ್ಟು ಸ್ಥಳಾವಕಾಶ ಮಾಡಿಕೊಂಡು ಹೀಗೇ ಕೂರುವಿರಾ? [...]
22 Oct
ಉತ್ತರ ಕುಮಾರ: ತಿಳಿದಿಲ್ಲವೇ, ನಾವು ಪತ್ರಕರ್ತರು!
ಸಾಮ್ರಾಟರು ಉತ್ತರ ಕುಮಾರ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಇವರ ಪೌರುಷವೆಲ್ಲಾ ಕೀಬೋರ್ಡ್ ಮುಂದೆ. ಚಿಕ್ಕವರಿದ್ದಾಗ ಇವರು ಕೇಳುತ್ತಿದ್ದ ಪ್ರಶ್ನೆಗಳಿಗೂ ಈಗವರು ಕೊಡುವ ಉತ್ತರಗಳಿಗೂ ಅಂತಹ ವ್ಯತ್ಯಾಸವೇನಿಲ್ಲ ಎಂದು ಮಂಗಳೂರು ವಿವಿಯ ವಿದ್ಯಾರ್ಥಿಯೊಬ್ಬ ಸಂಶೋಧನಾ ಪ್ರಬಂಧವನ್ನು ಬರೆದು ಅಲ್ಲಿಂದ ಗಡೀಪಾರಾಗಿದ್ದಾನೆ. ನಮ್ಮ ಪತ್ರಿಕೆಯ ಸಂಚಿಕೆಯೊಂದರಲ್ಲಿ ನಗೆ ಸಾಮ್ರಾಟರ ಉತ್ತರ ಪರಾಕ್ರಮವನ್ನು ಬಿಂಬಿಸುವ ಪ್ರತಿಕ್ರಿಯೆಗಳನ್ನು ಆಯ್ದು ಈ ಅಂಕಣದಲ್ಲಿ ಪ್ರಕಟಿಸಲಾಗುವುದು. ಈ ಉತ್ತರ ಕುಮಾರನಿಗೆ ಸಾರಥಿಯಾಗಿ ಯಾವ ಅರ್ಜುನನೂ ಇಲ್ಲವೆಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ!
ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ! [...]
2 Oct
ಸ್ಪೋಟಕ ಸಂದರ್ಶನಕ್ಕೆ ತಯಾರಾಗಿ!
ಕನ್ನಡ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ ಹೆಸರಾಂತ ಬ್ಲಾಗಿಗರೊಬ್ಬರ ಸಂದರ್ಶನ ಶೀಘ್ರವೇ ನಗೆ ನಗಾರಿಯಲ್ಲಿ ಮೂಡಿಬರಲಿದೆ!
ಈ ಅತಿ ಸೂಕ್ಷ್ಮ ಸಂದರ್ಶನವನ್ನು ಖುದ್ದು ಸಾಮ್ರಾಟರೇ ಮಾಡಿಕೊಂಡು ಬಂದಿದ್ದಾರೆ!
ಬ್ಲಾಗ್ ಅಂಗಳದಲ್ಲಿ ಕೋಲಾಹಲ ಹುಟ್ಟಿಸುವಂತಹ ಅಂಶಗಳು ಈ ಸಂದರ್ಶನದಲ್ಲಿ ಅಡಗಿವೆ!
ಸ್ಪೋಟಕ ಸತ್ಯಗಳು ಇದರಲ್ಲಿ ಬಯಲಾಗಿವೆ!
ಈ ಅಪರೂಪದ ಸಂದರ್ಶನಕ್ಕಾಗಿ ನಗೆ ನಗಾರಿಯನ್ನು ತಪ್ಪದೇ ಓದುತ್ತಿರಿ.
(ಒರಿಜಿನಲ್ ಸಂದರ್ಶನ ಪ್ರಕಟವಾಗುವ ಮುನ್ನವೇ ಚೀನಾ ಮಾರ್ಗವಾಗಿ ಚಲಿಸಿ ಪ್ರಕಟವಾಗುವ ಅಗ್ಗದ ನಕಲಿ ಸಂದರ್ಶನವನ್ನು ಓದಿ ಮರುಳಾಗದಿರಿ!)
- ನಗೆ ಸಾಮ್ರಾಟ್
30 Sep
ಕಳೆದು ಹೋಗಿದೆ ಹುಡುಕಿ ಕೊಡಿ…
(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)
ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು.
ಹುಡುಕುವುದರ ಕಷ್ಟ ಅದನ್ನು [...]
26 Sep
ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…
ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ [...]
11 Aug
ಅಪ್ಪ ಅಪ್ಪ ಬಿಜೆಪಿಗೆ ಓಟ್ ಹಾಕಪ್ಪ!
ನೊಣ ಹೊಡೆಯುವ ಕೆಲಸವನ್ನು ಶ್ರದ್ಧಾ ಭಕ್ತಿಗಳಿಂದ ಪೂರೈಸಿ ಆಫೀಸಿನ ಬಾಗಿಲು ಮುಚ್ಚಿಕೊಂಡು ಮನೆಗೆ ಬಂದು ಸೋಫಾದ ಮೇಲೆ ಕುಕ್ಕರಿಸಿ ‘ಮುಸ್ಸಂಜೆ ಮನೆಗೆ ಬಂದು ಯಾರ್ಯಾರ ಬಯ್ಯಲಿ’ ಎಂದು ಗುನುಗುತ್ತಾ ಅತ್ತಿತ್ತ ಕಣ್ಣಾಡಿಸುತ್ತಿದ್ದೆವು. ಮಗ ಶಾಲೆಯಿಂದ ಬಂದು ಸೈಕಲನ್ನು ಗೇಟಿನೊಳಗೆ ಇಟ್ಟುಕೊಂಡಿದ್ದ, ಶೂ ಸಾಕ್ಸುಗಳನ್ನು ಅವವುಗಳ ಜಾಗದಲ್ಲಿ ಇರಿಸಿದ್ದ, ಚೀಲವನ್ನು ಸೋಫಾದ ಮೇಲೆ ಎಸೆಯದೆ ನೀಟಾಗಿ ತನ್ನ ರೂಮಿನಲ್ಲಿಟ್ಟಿದ್ದ, ಹಾಳು ಕಾರ್ಟೂನು ನೋಡುತ್ತ ಬಿದ್ದಿರದೆ ಹೋಂ ವರ್ಕ್ ಮಾಡುತ್ತಿದ್ದ. ನಾವು ವಿಪರೀತ ಏಕಾಗ್ರತೆಯಿಂದ, ವಿರೋಧ ಪಕ್ಷದ ನಾಯಕನ ಚಾಲಾಕಿನಿಂದ [...]
29 Jul
ನಗೆಸಾಮ್ರಾಟರ ಸಚ್ ಕಾ ಸಾಮ್ನಾ!
ಮೊನ್ನೆ "ಸಚ್ ಕಾ ಸಾಮ್ನಾ" ಕಾರ್ಯಕ್ರಮಕ್ಕೆ ನಮ್ಮ ನಗೆಸಾಮ್ರಾಟರೂ ಹೋಗಿದ್ದರು.
ಅವರಿಗೆ ಕೇಳಲಾದ ಮೊದಲ ಪ್ರಶ್ನೆ "ಚಿತ್ರಮಂದಿರದ ಒಳಹೋಗುವ ಮುನ್ನ ನೀವೇನು ಮಾಡುತ್ತೀರಿ?
ಕೊಂಚವೂ ಗೊಂದಲವಿಲ್ಲದೇ ನಗೆಸಾಮ್ರಾಟರು "ನನ್ನ ಲಾಜಿಕ್ಕುಗಳನ್ನು ಜೇಬಿನಲ್ಲಿಡುತ್ತೇನೆ" ಎಂದಾಗ ನಿರೂಪಕ ಗಲಿಬಿಲಿ!
ಸುಧಾರಿಸಿಕೊಂಡು "ನಗೆಸಾಮ್ರಾಟರು ನೀಡಿದ ಉತ್ತರ ಸರಿಯೋ ತಪ್ಪೋ ನೋಡೋಣ" ಅಂತ ಪಾಲಿಗ್ರಾಫ್ ಮೆಶೀನ್ ನಲ್ಲಿ ಬಂದ ಉತ್ತರ ನೋಡಿದರೆ ಅದು ಸತ್ಯ ಎಂದಾಗಿತ್ತು!
ಮುಂದಿನ ಪ್ರಶ್ನೆ," ಶಿವರಾಜ್ ಕುಮಾರ್ ಅಭಿನಯದ "ಓಂ" ಚಿತ್ರಕ್ಕೂ ಅವರದೇ ಅಭಿನಯದ "ತವರಿಗೆ ಬಾ ತಂಗಿ" ಚಿತ್ರಕ್ಕೂ ಇರುವ ಸಾಮ್ಯತೆ ಏನು?"
ಅದರಲ್ಲಿ [...]
17 Jun
ಸಾಮ್ರಾಟರ ವಿದೇಶ ಯಾತ್ರೆ
ನಗೆ ನಗಾರಿಯ ವಿಶಾಲ ಸಾಮ್ರಾಜ್ಯದ ವಿಶಾಲ ಹೃದಯಿ ಪ್ರಜೆಗಳೆ, ಇಷ್ಟು ದಿನ ಸಾಮ್ರಾಟರು ಅವಿರತವಾಗಿ ತಮ್ಮ ಸಾಮ್ರಾಜ್ಯದ ಒಳಿತಿಗಾಗಿ ದುಡಿದಿದ್ದಾರೆ, ದಣಿದಿದ್ದಾರೆ. ನಮ್ಮ ದೇಶದ ಬೆನ್ನುಬು ರೈತನಾದರೆ, ಮೆದುಳು ವಿಜ್ಞಾನಿಯಾದರೆ, ಪೃಷ್ಠ ರಾಜಕಾರಣಿಗಳೇ ಆಗಿರುತ್ತಾರೆ ಎಂಬುದು ಸಾಮಾನ್ಯ ಜ್ಞಾನ.
ಇಂತಹ ರಾಜಕಾರಣಿ ಮಿತ್ರನೊಬ್ಬನ ಆಹ್ವಾನದ ಮೇರೆಗೆ ನಾವು ವಿದೇಶ ಪ್ರಯಾಣವನ್ನು ಕೈಗೊಳ್ಳುತ್ತಿದ್ದೇವೆ. ವಿದೇಶಗಳನ್ನು ಸುತ್ತಾಡಿಕೊಂಡು ನಮ್ಮ ಗೆಳೆಯನ ಆರೋಗ್ಯ ತಪಾಸಣೆ ಆತನ ಪತ್ನಿಯ ಶಾಂಪಿಂಗ್ ಭರಾಟೆಯನ್ನು ತೀರಿಸಿಕೊಂಡು ನಾವು ಒಂದು ತಿಂಗಳು ಕಳೆದು ನಮ್ಮ ಸಾಮ್ರಾಜ್ಯಕ್ಕೆ [...]
Recent Comments