Posts Tagged ‘ನಗೆ ನಗಾರಿ’

‘ಅವಧಿ’ಯಲ್ಲಿ ಪ್ರತಿಧ್ವನಿಸಿದ ನಗಾರಿ ಸದ್ದು!

 
ನಗೆ ಸಾಮ್ರಾಟರಾದ ನಾವು ಸನ್ಮಾನ ಅವಮಾನಗಳನ್ನು ಸಮಾನವಾಗಿ ಕಾಣುವವರು, ನಮಗೆ ಹೊಗಳಿಗೆ ತೆಗಳಿಕೆಗಳಲ್ಲಿ ಯಾವುದೇ ಹೆಗ್ಗಳಿಕೆ ಕಾಣುವುದಿಲ್ಲ.  ಒಂದು ವರ್ಷಗಳಿಂದ ನಮ್ಮ ಅನುಯಾಯಿಗಳಾಗಿರುವ ನಿಮಗೂ ಇದು ತಿಳಿದದ್ದೇ. ಆದರೆ ನಮ್ಮ ಏಕಸದಸ್ಯ ಸಂಸ್ಥೆಯ ಇನ್ನುಳಿದ ಸಿಬ್ಬಂದಿಗಳು ನಿಮ್ಮಷ್ಟೇ ಹುಲುಮಾನವರು. ಅವರಿಗೆ ತಮ್ಮ ಕೆಲಸವನ್ನು ಯಾರಾದರೂ ಗುರುತಿಸಿ ಬೆನ್ನು ತಟ್ಟಿದರೆ ಇಲ್ಲವೇ ಬೆನ್ನಿಗೆ ಗುದ್ದು ಹಾಕಿದರೆ ಇನ್ನಷ್ಟು ಮುಂದೆ ತೆವಳುವುದಕ್ಕೆ ಸಹಾಯವಾಗುತ್ತದೆ.
ನಗೆ ನಗಾರಿಯ ವಾರ್ಷಿಕೋತ್ಸವ ಸಾಂಗವಾಗಿ ಜರುಗಿದ ಬಗ್ಗೆ ಸಂತಸ ವ್ಯಕ್ತ ಪಡಿಸಿ ನಮ್ಮನ್ನು ಅಭಿನಂದಿಸಿ ಅವಧಿಯಲ್ಲಿ [...]

Continue reading »

ನಗೆ ಉಕ್ಕಿಸುತ್ತವೆ ಚಿತ್ರಗಳು

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:

ಈ ಕೆಲಸದ ಮುಂದೆ ನಿಮ್ಮದ್ಯಾವ ಲೆಕ್ಕ ಬಿಡ್ರಿ…

Continue reading »

ಮೂರು ದಿನ ರಜೆ!

ನಗೆ ನಗಾರಿಯ ಏಕ ಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಕಳೆದ ವರ್ಷ ಜನವರಿ ಇಪ್ಪತ್ನಾಲ್ಕರಿಂದ  ಮುನ್ನೂರ ಅರವತ್ತೈದು ದಿನವೂ ಅವಿರತವಾಗಿ ದುಡಿದಿದ್ದಾರೆ. ತಮ್ಮ ಸುಖ, ದುಃಖಗಳನ್ನು, ಸಂಕಟಗಳನ್ನು ಮರೆತು ನಗೆ ನಗಾರಿಯೆಂಬ ಯಾಗದಲ್ಲಿ ತಮ್ಮ ಸಮಯವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ನಗದವರನ್ನು ನಗಿಸುವ ಯತ್ನದಲ್ಲಿ ದುಡಿದು ದಣಿದಿದ್ದಾರೆ. ಬರುವ ಇಪ್ಪತ್ತೇಳಕ್ಕೆ ನಗೆ ನಗಾರಿ ಡಾಟ್ ಕಾಮಿನ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಲಿದೆ. ಕಾರ್ಯಕ್ರಮ ನಡೆಯುವ ಜಾಗ, ಸಮಯ, ಅದಕ್ಕೆ ಆಹ್ವಾನಿತರಾದವರ ವಿವರ, ಕಾರ್ಯಕ್ರಮದ ರೂಪು ರೇಷೆಗಳೆಲ್ಲ ಗುಪ್ತವಾಗಿಡಲು [...]

Continue reading »

ನಮ್ಮ ಸಂಗೀತವಿರುವುದು ಪ್ರಜೆಗಳಿಗಾಗಿ!

 
(ನಗೆ ನಗಾರಿ ಪಾಪ್ ಸಂಗೀತ ಬ್ಯೂರೋ)
 
ಸಂಗೀತದ ನಾನಾ ಉಪಯೋಗಗಳ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದರೆ, ಇನ್ನು ಮುಂದೆ ನಮ್ಮ ಹೈಸ್ಕೂಲು, ಪ್ರೈಮರಿ ಸ್ಕೂಲುಗಳ ಮಕ್ಕಳು ತಾವು ಉರು ಹೊಡೆದ ಹತ್ತಾರು ಉಪಯೋಗಗಳ ಜೊತೆಗೆ ಇದನ್ನೂ ಸೇರಿಸಬಹುದು. ಸಂಗೀತದ ಸಾಮಾಜಿಕ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿ ತಮ್ಮ ಹೆಸರನ್ನು ಒಂದಕ್ಷರ ಉದ್ದ ಮಾಡಿಕೊಳ್ಳಲಿಚ್ಚಿಸುವವರಿಗೆ(‘ಡಾ’ ಸೇರಿಸಿಕೊಂಡು!) ಬಿಸಿ ಬಿಸಿ ವಿಷಯವಾಗಿಯೂ ಇದು ಬಳಕೆಯಾಗಬಲ್ಲದು. ಹಾಗೆ ನೋಡಿದರೆ ಪಾಪ್, ಹಿಪ್ ಹಾಪ್ ಹಾಗೂ ರಾಕ್ ಸಂಗೀತಗಳಿಂದ ಹಾಗೂ ಕೆಲವು ಸ್ವದೇಶಿ ಪ್ರತಿಭೆಗಳ [...]

Continue reading »

‘ಜೋಕು’ಮಾರ ಸ್ಪರ್ಧೆ

ನಗೆ ನಗಾರಿ ಡಾಟ್ ಕಾಮ್ ಎಂಬ ವಿಶ್ವದ ನಂಬರ್ ಒನ್ ಕನ್ನಡ ಹಾಸ್ಯ ಬ್ಲಾಗಿನ ಮೊದಲ ವಾರ್ಷಿಕೋತ್ಸದ ಅಂಗವಾಗಿ ನಾವು ಅನೇಕ ಸ್ಪರ್ಧೆಗಳನ್ನು, ವಿಶೇಷಗಳನ್ನು ಹಮ್ಮಿಕೊಂಡಿರುವುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಈ ಪ್ರಕ್ರಿಯೆಯ ಮೊದಲ ಭಾಗವಾಗಿ ನಾವು ಶುರು ಮಾಡಿದ ವಿತ್ರ ಗುಪ್ತ ಸ್ಪರ್ಧೆಯಲ್ಲಿ ನಾವು ಎಣಿಸಿದ್ದಕ್ಕಿಂತ ಸರಿಯಾಗಿ ನಾಲ್ಕೂವರೆ ಪಟ್ಟು ಸ್ಪರ್ಧಿಗಳು ಭಾಗವಹಿಸಿ ನಮಗೆ ಅಚ್ಚರಿ ಮೂಡಿಸಿದ್ದಾರೆ. ಹಾಗೆಯೇ ಈ ಸ್ಪರ್ಧೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ  ಓದುಗರು ಭಾಗವಹಿಸಿ ಸಾಮ್ರಾಟರಿಗೆ ಹೃದಯಾಘಾತ ಉಂಟು ಮಾಡಬೇಕಾಗಿ ವಿನಂತಿ!
‘ಜೋಕು’ಮಾರ ಸ್ಪರ್ಧೆ
ದಿನವೊಂದರಲ್ಲಿ [...]

Continue reading »

ನಗೆಯ ಚಿತ್ರ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:

ಈ ಪ್ರಪಂಚದ ಬಗ್ಗೆ ತಲೆ ಕೆಡಿಸ್ಕೊಂಡು ಸಾಕಾಗೋಯ್ತು!

Continue reading »

ಇದು ಪ್ರತಿ ಕ್ಷಣದ ಅಚ್ಚರಿ!

(ನಗೆ ನಗಾರಿ ವೈಯಕ್ತಿಕ ಬ್ಯೂರೋ)
ನಾಡಿನ ಹೆಸರಾಂತ ಸಂಪಾದಕರು ನಡೆಸುವ ನೂರಾರು ಸಂಗತಿಗಳಲ್ಲಿ ಒಂದಾದ ಅದ್ಭುತ, ಅಮೋಘ ಟ್ಯಾಬ್ಲಾಯ್ಡ್‌‍ವೊಂದರ ಸಂದರ್ಶನಕ್ಕೆ ನಗೆ ಸಾಮ್ರಾಟರ ಛೇಲ ಕುಚೇಲ ಹಾಜರಾಗಿದ್ದ ಆಘಾತಕಾರಿ ಸಂಗತಿ ಇದೀಗ ತಾನೆ ಬಯಲಾಗಿದೆ. ನಗೆ ನಗಾರಿಯಲ್ಲಿನ ಸಂ-ಚೋದನೆಯಿಂದ ಬೋರು ಹೊಡೆದು ವಾರದ ಅಚ್ಚರಿಯಲ್ಲಿ ಪಾಲ್ಗೊಳ್ಳಲು ಆತ ಆತ ಸಂದರ್ಶನಕ್ಕೆ ಓಡಿದ್ದ ಎಂದು ತಿಳಿದುಬಂದಿದೆ.
ಸಂದರ್ಶನಕ್ಕೆ ಹಾಜರಾದ ನೂರು ಪ್ಲಸ್ ಅಭ್ಯರ್ಥಿಗಳಲ್ಲಿ ಕುಚೇಲನನ್ನು ಹೊರತು ಪಡಿಸಿದರೆ ಮತ್ತೆಲ್ಲರೂ ಶಿಫಾರಸ್ಸು ಪತ್ರಗಳನ್ನು ಕಿಸೆಯಲ್ಲಿ ಸಿಕ್ಕಿಸಿಕೊಂಡು ಬಂದಿದ್ದರು. ಕುಚೇಲ ಒಂದೊಂದೇ ಪತ್ರವನ್ನು ಇಣುಕಿಣುಕಿ [...]

Continue reading »

ತುಟಿಯರಳಲು ನಾಲ್ಕು ಗೆರೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:

ಅಯ್ಯೋ ಮತ್ತೆ ಸೋಮವಾರನಾ…?

Continue reading »

ವಾರದ ವಿವೇಕ 13

………………………………………………………………
ಕಾರಣವಿರಲಿ,
ಕಾರಣವಿಲ್ಲದೆ ಇರಲಿ,
ನಗಿ, ಆಗ ನಿಮ್ಮನ್ನು ನೋಡಿ
ಇತರರೂ ನಗುತ್ತಾರೆ.
- ಟಿ.ಪಿ.ಕೈಲಾಸಂ
………………………………………………………………

Continue reading »

ನಗಾರಿಯ ಸಂಚಿಕೆ ಹೇಗಿತ್ತು?

ಅಸಲಿಗೆ ನಗೆ ನಗಾರಿ ಡಾಟ್ ಕಾಮ್ ಎಂಬ ವಿಚಿತ್ರ ಹೆಸರಿನ ಬ್ಲಾಗನ್ನು ತೆರೆದು ಹತ್ತಿರ ಆರು ತಿಂಗಳುಗಳು ಕಳೆದಿವೆ. ಆದರೂ ಪೂರ್ಣ ಪ್ರಮಾಣದ ಸಂಚಿಕೆಯನ್ನು ರೂಪಿಸಲು ಸಾಧ್ಯವಾಗಿರಲಿಲ್ಲ. ಎಲ್ಲಾ ವಿಭಾಗಗಳಲ್ಲೂ ಬರಹಗಳನ್ನು ದಾಖಲಿಸಲು ನಮ್ಮಿಂದ ಆಗಿರಲಿಲ್ಲ. ಮೊದಲು ಇದನ್ನು ವಾರಕ್ಕೊಮ್ಮೆ ಅಪ್‌ಡೇಟ್ ಮಾಡುವ ಇರಾದೆ ನಮ್ಮದಾಗಿತ್ತಾದರೂ ಅದು ಸುಲಭದ ಕೆಲಸವಲ್ಲ ಎಂದುಕೊಂಡು ಸುಮ್ಮನಾದೆವು. ಆದರೆ ಈಗ ಹದಿನೈದು ದಿನಕ್ಕೊಮ್ಮೆ ಬ್ಲಾಗಿನ ಸಂಚಿಕೆಯನ್ನು ರೂಪಿಸಬಹುದು ಎಂಬ ಧೈರ್ಯ ಬಂದಿದೆ. ಅದಕ್ಕೇ ಪ್ರಾಯೋಗಿಕವಾಗಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಹಿಂದಿನ [...]

Continue reading »