Posts Tagged ‘ನಗು’

ದೊರೆ ನಗುವುದಕ್ಕೆ ಏನು ಮಾಡಬೇಕು?

(ನಗೆ ನಗಾರಿ ನಗದು ಬ್ಯೂರೋ)
ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ ತ್ಯಾಗಗಳು ಅಪಾರ. ರಾಜ ಪ್ರಭುತ್ವವಿದ್ದಾಗಲೇ ಈ ಸಂಸ್ಕೃತಿಗೆ ಓನಾಮ ಹಾಕಿದವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ. ಡ್ರೈ ಕ್ಲೀನರ್ ಒಬ್ಬನ ಮಾತಿಗೆ ಮಡದಿಗೇ ಡೈವೋರ್ಸ್ ನೀಡುವ ಅತಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯದ ಮಾತೇ? ಈ ನಿರ್ಧಾರಕ್ಕೆ ಯಾವ ವಿಧದಲ್ಲೂ ಕನಿಷ್ಠವಲ್ಲದ ನಿರ್ಧಾರವನ್ನು ಕರ್ನಾಟಕವೆಂದ ರಾಜ್ಯದ ದೊರೆಯು ತೆಗೆದುಕೊಂಡಿದ್ದಾನೆ. ಜನತೆಯ ಆಶೋತ್ತರಗಳಿಗಾಗಿ ಹಿಂದೆ ಯಾರೂ ಮಾಡದ ತ್ಯಾಗವನ್ನು ನಾಡಿನ ಅಧಿಪತಿ ಮಾಡಲು ಮುಂದಾಗಿದ್ದಾನೆ. [...]

Continue reading »

ಚರ್ಚೆ: ನಗುವಿನ ಬಗೆ

ನಗುವಿನಲ್ಲಿರುವ ಬಗೆಗಳೆಷ್ಟು!
ಮುದ್ದು ಕಂದ ತುಟಿ ಅರಳಿಸಿ ನಕ್ಕ ನಗು, ಪುಂಡ ಪೋರನೊಬ್ಬ ತಪ್ಪು ಮಾಡಿ ಕ್ಷಮೆ ಕೋರುವಂತೆ ನಿಂತು ನಕ್ಕ ನಗು, ಬೊಚ್ಚ ಬಾಯಿಯ ಮುದುಕ ಅಪಾನವಾಯುವಿಗೆ ಮುಕ್ತಿ ನೀಡಿ ಮುಖದಲ್ಲಿ ಅರಳಿಸಿದ ನಗು, ಧ್ಯಾನದಲ್ಲಿ ಕುಳಿತವನ ಮುಖದಲ್ಲಿನ ಮಂದಸ್ಮಿತದ ನಗು, ಜೋಕು ಕೇಳಿ ತಡೆಯಲಾಗದು ಪಕ್ಕೆಲುಬು ಹಿಡಿದುಕೊಂಡು ಉರುಳಾಡಿ ನಕ್ಕ ನಗು, ಸಮಸ್ಯೆಗಳೆಲ್ಲಾ ಪರಿಹಾರವಾದಾಗ ನಿಟ್ಟುಸಿರಿನ ಸಂಗಡ ಹೊರಬಂದ ನಗು, ಸವಾಲನ್ನು ಕಂಡು ಸಿನಿಕತೆಯಿಂದ ಹುಟ್ಟಿದ ನಗು, ದೊಡ್ಡ ವರ ಮೂರ್ಖತನವನ್ನು ಕಂಡು ಹುಟ್ಟಿದ ನಗು, [...]

Continue reading »

ನಗೆಯ ಚಿತ್ರ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:

ಈ ಪ್ರಪಂಚದ ಬಗ್ಗೆ ತಲೆ ಕೆಡಿಸ್ಕೊಂಡು ಸಾಕಾಗೋಯ್ತು!

Continue reading »

ಚರ್ಚೆ: ನಗುವುದು ಅಷ್ಟು ಕಷ್ಟವೇ!

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್ ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು. ಹೌದು! ನಗುವುದು ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ?
ನಮ್ಮ ಬದುಕಿನ ಗತಿಯನ್ನ ಹೇಗೆ ಮಾರ್ಪಾಟುಗೊಳಿಸಿಕೊಂಡಿದ್ದೇವೆ ಎಂಬುದನ್ನು ಗಮನಿಸಿದರೆ ನಮಗೆ ನಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಅರಿವಾಗುತ್ತದೆ. ಮೂರು ನಾಲ್ಕು ಮಂದಿ ಕಲೆಯಬೇಕು, ಒಬ್ಬರ ಕಾಲನ್ನೊಬ್ಬರು ಎಳೆಯುವ ಕೆಲಸದಲ್ಲಿ ತೊಡಗಿಕೊಳ್ಳಬೇಕು, [...]

Continue reading »

ನಗುವುದಕ್ಕೆ ಕಾರಣ ಬೇಕಿತ್ತಾ?

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ ವ್ಯಂಗ್ಯ ಕುಚೇಷ್ಟೆ ದಡ್ಡತನ ಅನ್ನಿಸುತ್ತದೆ, ನಗುವ ಅವಕಾಶಗಳು ಬಂದಾಗ ಅವುಗಳನ್ನು ಅನುಮಾನಿಸಿ ನೋಡುತ್ತಾರೆ. ನಗುವಂಥ ಸಂದರ್ಭ ಬಂದರೂ ನೋಡಿದವರಿಗೆ ತಮ್ಮದು ವಿವೇಕ ಪೂರ್ಣವಾದ ಮಂದ ಹಾಸ, ಮಿಲಿಯನ್ ಡಾಲರ್ ಸ್ಮೈಲ್ ಎನ್ನಿಸುವಂತೆ ಹಲ್ಕಿರಿಯುತ್ತಾರೆ. ಇವರಿಗೆ ಕಾರಣವಿಲ್ಲದೆ ನಗುವುದೆಂದರೆ ಏನು [...]

Continue reading »

ಚರ್ಚೆ: ನಮ್ಮ ಹಾಸ್ಯ ಪ್ರಜ್ಞೆ ಎಂಥದ್ದು?

ಚರ್ಚೆ
ಅದ್ಯಾವುದೋ ಹಲ್ಪುಡಿಯ ಜಾಹೀರಾತಿನಲ್ಲಿ ತೋರಿಸುತ್ತಾರೆ: ಪುಟ್ಟ ಹುಡುಗಿ ತನ್ನಪ್ಪನ ಬಹುಮುಖ್ಯವಾದ ಕಾಗದ ಪತ್ರವನ್ನು ಮುಲಾಜಿಲ್ಲದೆ ಪರ್ರ್ ಅಂತ ಹರಿದು ಹಾಕಿಬಿಡುತ್ತಾಳೆ. ಅದನ್ನು ಹುಡುಕುತ್ತಿದ್ದ ಅಪ್ಪ ಆಕೆಯನ್ನು ನೋಡುತ್ತಾಳೆ. ಆ ಮಗು ತನ್ನ ಹಾಲು ಹಲ್ಲುಗಳನ್ನು ತೋರಿಸಿ ಮುಗ್ಧವಾಗಿ ನಗುತ್ತದೆ. ಅಪ್ಪನಿಗೆ ಸಿಟ್ಟು ಮರೆವೆಯಾಗುತ್ತದೆ, ದುಗುಡ, ಟೆನ್ಷನ್ ಮಾಯವಾಗಿ ಮುಖದಲ್ಲಿ ಅಂಥದ್ದೇ ನಗೆ ಅರಳುತ್ತದೆ.

ನಗು ಅಂದರೆ ವಿಕಟ ಹಾಸ್ಯ ಮಾತ್ರವಾ? ಜೋಕುಗಳಿಗೆ ಬಿದ್ದು ಬಿದ್ದು ನಗುವುದೇ ಹಾಸ್ಯ ಪ್ರಜ್ಞೆ ಎನ್ನಿಸಿಕೊಳ್ಳುತ್ತದೆಯಾ? ಖಂಡಿತಾ ಇಲ್ಲ. ನಮ್ಮ ವ್ಯಕ್ತಿತ್ವದ ಪ್ರತಿಯೊಂದು ತಿರುವು, [...]

Continue reading »

‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)
ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು ಕೆಮರಾದ ಫ್ಲಾಶುಗಳಿಗೆ ಫೋಸುಕೊಡುತ್ತಿದ್ದ ನಮ್ಮ ಸದಾನಂದ ಗೌಡರೆಂದರೆ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಅಚ್ಚುಮೆಚ್ಚು. ರಾಜಕಾರಣಿಗಳು ಎಂದರೆ ಮಾನ, ಮರ್ಯಾದೆ ಹಾಗೂ ಆತ್ಮ ಸಾಕ್ಷಿಯನ್ನು ಬಿಟ್ಟವರು ಎಂದು ಜನರು ಒಪ್ಪಿಕೊಂಡು ಆಗಿದೆ. ಆದರೆ ಅವರು ನಗುವನ್ನೂ ಬಿಟ್ಟು ಸರ್ವ ಪರಿತ್ಯಕ್ತರಾಗುತ್ತಿರುವ ಅನಾರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸದಾನಂದ ಗೌಡರು ಮುಖದ ಮೇಲೆ ಸದಾ ಸಾವಿರ ವೋಲ್ಟ್ ಬಲ್ಬಿನ ಕಾಂತಿಯನ್ನು ಹೊತ್ತು ಆಯಾಸವಿಲ್ಲದೆ ಓಡಾಡುತ್ತಿದುದು [...]

Continue reading »

ವಾರದ ವಿವೇಕ 13

………………………………………………………………
ಕಾರಣವಿರಲಿ,
ಕಾರಣವಿಲ್ಲದೆ ಇರಲಿ,
ನಗಿ, ಆಗ ನಿಮ್ಮನ್ನು ನೋಡಿ
ಇತರರೂ ನಗುತ್ತಾರೆ.
- ಟಿ.ಪಿ.ಕೈಲಾಸಂ
………………………………………………………………

Continue reading »

ಚರ್ಚೆ: ಕಲ್ಲು ನಗುವ ಸಮಯ!

ನಮ್ಮ ವೇಗದ ನಗರದ ಬದುಕಿನಲ್ಲಿ ಎಲ್ಲವೂ ಕಮಾಡಿಟಿಗಳಾದ ಹಾಗೆಯೇ ನಗುವೂ ಒಂದು ಪ್ರಾಡಕ್ಟ್ ಆಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ. ಜನರಿಗೆ ನಗುವುದಕ್ಕೆ ಕಾರಣಗಳು ಬೇಕು. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಜೋಕುಗಳನ್ನು ಹುಡುಕಲು ಶುರು ಮಾಡುತ್ತಾರೆ. ಜೋಕ್ ಪುಸ್ತಕಗಳನ್ನು ಕೊಳ್ಳುತ್ತಾರೆ. ನೂರಾರು ರುಪಾಯಿ ಶುಲ್ಕ ಕಟ್ಟಿ ಲಾಫಿಂಗ್ ಕ್ಲಬ್ಬುಗಳಿಗೆ ಸೇರಿಕೊಂಡು ನಗುತ್ತಾರೆ. ಕೆಲವರು ತುಂಬಾ ಪರಿಶ್ರಮ ವಹಿಸಿ ನಗುವುದರಲ್ಲಿ ಗಂಭೀರವಾದ ಸಾಧನೆ ಮಾಡುತ್ತಾರೆ. ನಗುವುದು ಎಂದರೇನೇ ಎಲ್ಲಾ ಪ್ರಯತ್ನಪೂರ್ವಕ ಕ್ರಿಯೆಗಳನ್ನು ಮರೆಯುವುದು, ಜನರು ನಗುವುದನ್ನೂ ಪ್ರಯತ್ನ [...]

Continue reading »

ಚರ್ಚೆ: ಬುದ್ಧ ನಗಲಿಲ್ಲ…

ನಮ್ಮ ಧರ್ಮಗಳು ಯಾಕೆ ಜೀವ ವಿರೋಧಿಯಾದವು ಎಂಬುದು ತತ್ವಜ್ಞಾನಿಗಳ, ದಾರ್ಶನಿಕರ, ಧರ್ಮ ಭೀರುಗಳ ಅವಗಾಹನೆಗೆ ಬಿಟ್ಟ ವಿಚಾರ. ಆದರೆ ಅವುಗಳು ನಮ್ಮ ಸಹಜವಾದ ಸಂತಸವನ್ನು ಕಿತ್ತುಕೊಳ್ಳುವಷ್ಟು ಕ್ರೂರ ಹಾಗೂ ಕುಟಿಲವಾದದ್ದು ಏಕೆ ಎಂಬುದನ್ನು ನಾವೆಲ್ಲರೂ ಆಲೋಚಿಸಲೇಬೇಕು.
ನಗುವುದನ್ನು ಸಹಿಸಿಕೊಳ್ಳುವುದಕ್ಕೆ ಯಾವ ಧರ್ಮದಿಂದಲೂ ಸಾಧ್ಯವಾಗಿಲ್ಲ. ಮುಗುಳ್ನಗೆಯೇ ತುಂಬಾ ದುಬಾರಿಯಾಗಿರುವ ಸಂದರ್ಭದಲ್ಲಿ ಬಿದ್ದು ಬಿದ್ದು ನಗುವುದು, ಹೊಟ್ಟೆ ಕುಣಿಸಿಕೊಂಡು ನಗುವುದು, ನೆಲದ ಮೇಲೆ ಉರುಳಾಡಿ ನಗುವುದು, ತೊಡೆ ತಟ್ಟಿಕೊಂಡು ಪುಟಿದಾಡುತ್ತಾ ನಗುವುದು, ಹೊಟ್ಟೆ ಹಿಡಿದುಕೊಂಡು ನಗುವುದು ಎಲ್ಲವೂ ನಮಗೆ ದೇವ-ದೇವತೆಯರ ವಿಚಾರದಲ್ಲಿ [...]

Continue reading »