ಒಂದು ಕಾಲದ ಅಮೇರಿಕಾದ ಅತಿ ಶ್ರೀಮಂತ ಸ್ಟ್ಯಾಂಡ್ ಅಪ್ ಕಮಿಡಿಯನ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಜೆರ್ರಿ ಸೈನ್ ಫೆಲ್ಡ್‌ನದ್ದು ದಿನನಿತ್ಯದ ಘಟನೆಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ಹುಡುಕಿ ಅವುಗಳಲ್ಲಿ ಅಡಗಿರುವ ಅಸಂಬದ್ಧತೆ, ವಕ್ರತೆ, ವ್ಯಂಗ್ಯವನ್ನು ಹೊರತೆಗೆದು ನಗಿಸುವ ವಿಶಿಷ್ಟ ಹಾಸ್ಯ.
ಅಮೇರಿಕನ್ನರ ದೈನಂದಿನ ಬದುಕಿನಲ್ಲಿ ಅತಿ ಯಾಂತ್ರಿಕ ಭಾಗವಾದ ವಾಶಿಂಗ್ ಮಶೀನಿನೊಂದಿಗೆ ಕಳೆಯುವ ಸಮಯವನ್ನು ಕೂಡ ಹಾಸ್ಯದ ವಸ್ತುವನ್ನಾಗಿಸಿಕೊಳ್ಳಬಲ್ಲ. “ವಾಶಿಂಗ್ ಮಶೀನು ಬಟ್ಟೆಗಳ ಪಾಲಿಗೆ ನೈಟ್ ಪಾರ್ಟಿ ಇದ್ದ ಹಾಗೆ. ಬಟ್ಟೆಗಳಲ್ಲೆ ಒಟ್ಟಿಗೆ ಸೇರುವುದು ಅಲ್ಲಿ ಮಾತ್ರ. [...]
Posts Tagged ‘ನಗಾರಿ ರೆಕಮಂಡೇಶನ್’
2 Oct
ನಗಾರಿ ರೆಕಮಂಡೇಶನ್ 25
1 Sep
ನಗಾರಿ ರೆಕಮಂಡೇಶನ್ 24
ಅಂತರ್ಜಾಲವೆಂಬ ಸಾಗರದಲ್ಲಿ ಈಜಿ ಅಪರೂಪದ ದ್ವೀಪಗಳನ್ನು ತಲುಪಿಕೊಳ್ಳುವುದು ಪ್ರಯಾಸದ ಕೆಲಸ. ಒಮ್ಮೆ ಹಾಗೆ ಕಂಡ ನಗೆ ದ್ವೀಪಗಳನ್ನು ಸಹಮನಸ್ಕರಿಗೆ ಪರಿಚಯಿಸುವ ಘನೋದ್ದೇಶದಿಂದ ಸಾಮ್ರಾಟರು ತೆರೆದಿರುವ ಅಂಕಣವಿದು.
ಐವತ್ಮೂರು ವರ್ಷದ ಅಮೇರಿಕಾದ ಕಮಿಡಿಯನ್ ಬಿಲ್ ಮಹರ್ ಒಳ್ಳೆಯ ರಾಜಕೀಯ ವಿಶ್ಲೇಷಕನೂ ಹೌದು. ಇತ್ತೀಚೆಗೆ ಎಚ್.ಬಿ.ಒ ಚಾನೆಲ್ಲಿಗಾಗಿ ರಿಯಲ್ ಟೈಮ್ ಎನ್ನುವ ಟಿವಿ ಕಾರ್ಯಕ್ರಮ ಮಾಡಿಕೊಡುತ್ತಿರುವ ಮಹರ್, ಅದರಲ್ಲಿ ಸಮಕಾಲೀನ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ಹಾಗೂ ವಿಡಂಬನೆ ಮಾಡುತ್ತಾನೆ.
೧೯೫೬ರ ಜನವರಿ ಇಪ್ಪತ್ತರಂದು ಅಮೇರಿಕಾದಲ್ಲಿ ಜನಿಸಿದ ಈತ [...]
20 Feb
ನಗಾರಿ ರೆಕಮಂಡೇಶನ್ 18 – have a chuckle
ಹೌದು, ಇವು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….
‘ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಿನ್ನ ಮನಸ್ಸನ್ನು ತೆರೆದು ಸ್ವೀಕರಿಸು’ ಎಂದಿದ್ದಾರೆ ನಮ್ಮ ಹಿರಿಯರು. ಹಾಗೆಯೇ ಖುಶಿಯಾಗಿರುವುದಕ್ಕೆ, ನಗುನಗುತ್ತಿರುವುದಕ್ಕೆ ಅವಕಾಶ ಎಲ್ಲಿಂದ ಸಿಕ್ಕರೂ ನಾವದನ್ನು ಮುಕ್ತವಾಗಿ ಸ್ವಾಗತಿಸಬೇಕು. ದಿನ ಪತ್ರಿಕೆಗಳಲ್ಲಿ, ಮ್ಯಾಗಝೀನುಗಳಲ್ಲಿ, ಎಸೆಮ್ಮೆಸ್ಸುಗಳಲ್ಲಿ ತಿರುಗಿ ತಿರುಗಿ ದಣಿಸು ಬಸವಳಿದ ಜೋಕುಗಳಿಗೆ ಸ್ವಲ್ಪ ಕಾಲ ರೆಸ್ಟ್ ಕೊಟ್ಟು ಒಂದಷ್ಟು ಹೊಸ [...]
3 Feb
ನಗಾರಿ ರೆಕಮಂಡೇಶನ್ಸ್ 17
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
……………………………………
ಟಿವಿ ಶೋಗಳು ಹಾಗೂ ಶೋ ಆಂಕರ್‌ಗಳು ಅಮೇರಿಕಾದ ಟಿವಿ ಜಗತ್ತಿನಲ್ಲಿ ಸ್ಥಾಪಿಸಿರುವ ಸ್ಥಾನವು ಬಹಳ ಪ್ರಮುಖವಾದದ್ದು. ಒಬ್ಬೊಬ್ಬ ಟಿವಿ ಆಂಕರ್ ಪ್ರಸಿದ್ಧಿಯಲ್ಲಿ ಸಹ ಹಾಲಿವುಡ್ ಹಿರೋನ ಎತ್ತರ ಏರಿರುವುದು, ಅವರೂ ಸಹ ಸೆಲೆಬ್ರಿಟಿಗಳಾಗಿರುವುದು ಕಂಡು ಬರುತ್ತದೆ. ಭಾರತದ ಟಿವಿ ಚಾನೆಲ್ಲುಗಳಲ್ಲೂ ಸಹ ಇಂತಹ ಕೆಲವು ಉದಾಹರಣೆಗಳಿವೆಯಾದರೂ ಆಸಕ್ತರು [...]
22 Jan
ನಗೆ ನಗಾರಿ ರೆಕಮಂಡೇಶನ್ 16
ರಾಜಕೀಯ ವಿಡಂಬನೆ ಎನ್ನುವುದು ಮಾಧ್ಯಮ ರಂಗದ ಮೊನಚಾದ ಅಸ್ತ್ರ. ನಾಡನ್ನು ಆಳುವವರನ್ನು ಚುಚ್ಚುವ ಸೂಕ್ತವಾದ ಸೂಜಿ. ತಪ್ಪು ಮಾಡಿದವರನ್ನು ಗೇಲಿ colbertಮಾಡುವುದು, ಅವರ ಅಪರಾಧಕ್ಕಾಗಿ ಬೆಲೆ ತೆರೆವಂತೆ ಮಾಡುವುದು ಸಹ ಅತ್ಯಂತ ಜವಾಬ್ದಾರಿಯುತ ಪತ್ರಿಕೋದ್ಯಮವೇ. ಕನ್ನಡದ ಪತ್ರಿಕೆಗಳಲ್ಲಿ ರಾಜಕೀಯ ವಿಡಂಬನೆಗೆ ಕೊರತೆಯಿಲ್ಲ. ಪ್ರತಿದಿನ ತಪ್ಪದೆ ಪ್ರಕಟವಾಗುವ ವ್ಯಂಗ್ಯಚಿತ್ರಗಳು ಆಳುವವರನ್ನು, ಅವರ ನೀತಿಗಳನ್ನು, ವರ್ತನೆಗಳನ್ನು ಲೇವಡಿ ಮಾಡುವುದನ್ನು ನಾವು ಕಾಣುತ್ತೇವೆ. ಟೈಮ್ಸಾಫಿಂಡಿಯಾದ ಟ್ರೇಡ್ ಮಾರ್ಕ್ ಆದ ಆರ್.ಕೆ.ಲಕ್ಷ್ಮಣ್ ಕಾರ್ಟೂನುಗಳಿಂದ ಹಿಡಿದು ಪ್ರಜಾವಾಣಿಯ ಮಹಮ್ಮದ್‌ರ ಕಾರ್ಟೂನುಗಳವರೆಗೆ ನಮ್ಮ ನಾಡಿನ ರಾಜಕೀಯವನ್ನು ಸೀಳಿ ನೋಡುವ, ಹುಳುಕನ್ನು ಬಯಲು ಮಾಡುವ ಹುಮ್ಮಸ್ಸು ಕಾಣುತ್ತದೆ.
19 Nov
ನಗಾರಿ ರೆಕಮಂಡೆಶನ್ 14
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….
ನಮ್ಮ ದೇಶದ ಪ್ರಧಾನಿಯವರ ಬ್ಲಾಗಿದು. ಹ್ಹ! ಆಶ್ಚರ್ಯ ಚಕಿತರಾಗಿ ಉಸಿರು ಗಂಟಲಲ್ಲಿ ಸಿಕ್ಕಿಸಿಕೊಂಡು ಒದ್ದಾಡುವ ಮುನ್ನ ಸ್ವಲ್ಪ ಗಮನಿಸಿ. ಇದು ನಮ್ಮ ದೇಶದ ಪ್ರಧಾನಿಯವರ ಶೇ ನೂರರಷ್ಟು ಅನಧಿಕೃತವಾದ ಬ್ಲಾಗು.
ಬ್ಲಾಗಿನ ಬಗ್ಗೆ ಪರಿಚಯ ನೀಡುತ್ತಾ ಪ್ರಧಾನಿಯವರು ಹೀಗೆ ಬರೆಯುತ್ತಾರೆ: “ನಾನು ಕೆಲ ಸಮಯದ ಹಿಂದೆ ಅಟಲ್ ಬಿಹಾರಿ [...]
1 Nov
ನಗಾರಿ ರೆಕಮಂಡೆಶನ್ 13
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….
ಎಲ್ಲವನ್ನೂ ಎಲ್ಲಾ ವರ್ಗದರಿಗೂ ಕೊಡುವ ಉದ್ದೇಶದಿಂದ ಕನ್ನಡದಲ್ಲಿ ಹಲವಾರು ಪೋರ್ಟಲುಗಳು, ಅಂತರ್ಜಾಲ ಪತ್ರಿಕೆಗಳು,ವೆಬ್ ಸೈಟುಗಳು ಕೆಲಸ ಮಾಡುತ್ತಲಿವೆ. ಅಡುಗೆ ಮಾಡುವ ವಿಧಾನದಿಂದ ಹಿಡಿದು ಆಧ್ಯಾತ್ಮ ಸಾಧನೆಯವರೆಗೆ ಎಲ್ಲಾ ವಿಷಯಗಳನ್ನು ಒಳಗೊಳ್ಳುವಂತೆ ಅವನ್ನು ರೂಪಿಸಿರಲಾಗುತ್ತದೆ. ನಾವು ಪೌರಾತ್ಯರ ಅಭಿರುಚಿಯೇ ಹೀಗೇನೋ, ಒಂದೇ ಸಿನೆಮಾದಲ್ಲಿ ಕಾಮಿಡಿ, ಟ್ರ್ಯಾಜಿಡಿ, ಎಮೋಶನ್ನು, ಫೈಟು, ಸೀನರಿ [...]
17 Jun
ನಗಾರಿ ರೆಕಮಂಡೇಶನ್ 9
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
………………………………………………………………
ಮಾಸ್ಟರ್ ಹಿರಣ್ಣಯ್ಯ ನಮಗೆ ಇಷ್ಟವಾಗುವುದು ಅವರು ನಮ್ಮ ಪರವಾಗಿ ಪಟ್ಟಭದ್ರರನ್ನು, ಭ್ರಷ್ಟ ರಾಜಕಾರಣಿಗಳನ್ನು, ಲಂಚಾವತಾರಿ ಅಧಿಕಾರಿಗಳನ್ನು ಬೈಯ್ಯುತ್ತಾರೆ ಎನ್ನುವ ಕಾರಣಕ್ಕೆ. ಜನಸಾಮಾನ್ಯರು ಯಾರ್ಯಾರನ್ನೆಲ್ಲಾ ಬೈಯ್ಯುವುದಕ್ಕೆ ತುಂಬಾ ಸಮಯದಿಂದ ಕಾಯುತ್ತಿರುತ್ತಾರೋ ಅಂಥವರನ್ನೆಲ್ಲಾ ಬೈಯ್ಯುತ್ತಾ ಹೋಗುವ ಹಿರಣ್ಣಯ್ಯ ಎಷ್ಟೋ ಸಲ ನಮ್ಮೊಳಗಿನ ಕ್ರೋಧದ ದನಿಯಾಗಿಬಿಡುತ್ತಾರೆ, ಜನರೊಳಗಿನ ಜ್ವಾಲಾಮುಖಿಯ ಮುಖವಾಗಿಬಿಡುತ್ತಾರೆ.
ಇವರು ಭ್ರಷ್ಟರನ್ನು ಕೆಣಕಲು, [...]
Recent Comments