(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)
ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು.
ಹುಡುಕುವುದರ ಕಷ್ಟ ಅದನ್ನು [...]
Posts Tagged ‘ಕ್ರಿಕೆಟ್’
30 Sep
ಕಳೆದು ಹೋಗಿದೆ ಹುಡುಕಿ ಕೊಡಿ…
16 Jun
ಅವರಿವರ ಭಯಾಗ್ರಫಿ
ಅವರು ನಮಗಿಂತ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬರಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.
ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:
ಹುಡುಗೀರು ಏನು ಮಾಡ್ತಿದ್ರು?
[...]
15 Mar
ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು
(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)
ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ [...]
6 Nov
ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!
(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ)
ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಪ್ರತಿಕ್ರಿಯೆಗಳು, ರಿಟೈರ್ ಮೆಂಟ್ ನಂತರದ ಯೋಜನೆಗಳು ಇವುಗಳ ಬಗ್ಗೆ ಎಲ್ಲಾ ತುಂಬಾ ಕೂಲಂಕುಶವಾಗಿ ಅಧ್ಯಯನ ಮಾಡಿ ಬಹುದೊಡ್ಡ ಗ್ರಂಥಗಳನ್ನು ಬರೆದು, ಭೀಷಣ ಭಾಷಣಗಳನ್ನು ಕೊರೆದು ಹೆಸರು ಮಾಡಿದವರು ಅನೇಕರಿದ್ದಾರೆ.ದುಡಿಯುವಾಗಲೇ, ಮದುವೆಯಾಗುವ ಮುನ್ನವೇ, ಚಿಗುರು ಮೀಸೆ ಒತ್ತೊತ್ತಾಗಿ ವ್ಯಾಪಿಸಿಕೊಳ್ಳುವ ಮುಂಚಿನಿಂದಲೇ ರಿಟೈರ್ ಮೆಂಟ್ ಬಗ್ಗೆ ಆಲೋಚಿಸಿ ಸೂಕ್ತವಾಗಿ [...]
7 Jul
ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್
(ನಗೆ ನಗಾರಿ ಕ್ರೀಡಾ ಬ್ಯೂರೋ)
ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ [...]
28 May
ಐಪಿಎಲ್ (ಇಂಡಿಯನ್ ಪೇಮೆಂಟ್ ಲೀಗ್) ವಿಶೇಷ
(ನಗಾರಿ ಕ್ರೀಡಾ ಬ್ಯೂರೋ)
ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ…
ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು [...]
26 Apr
ಸೀರಿಯಲ್ ರಕ್ಕಸನ ಸಾವು?!
(ನಗಾರಿ ಮನೋರಂಜನಾ ಬ್ಯೂರೋ)
ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. [...]
13 Mar
ಸ್ಕೂಪ್: ಆಸ್ಟ್ರೇಲಿಯಾದಿಂದ ದೀಪಿಕಾ ಬುಕ್ಕಿಂಗ್!
(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೋ)
ಈ ಸ್ಫೋಟಕವಾದ ಹಾಗೂ ನೆಲಬಿರಿಯುವಂತಹ ಸುದ್ದಿಯನ್ನು ‘ನಗೆ ನಗಾರಿ’ ಅತಳ, ಸುತಳ, ಪಾತಾಳಗಳನ್ನು ಜಾಲಾಡಿ ಹೆಕ್ಕಿ ಕೊಂಡು ಬಂದು ನಿಮ್ಮ ಮುಂದೆ ಕುಕ್ಕುತ್ತಿದೆ. ಈ ತನಿಖಾ ವರದಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ವಿವಾದಗಳು ಏಳಬಹುದೆಂಬ ಮುನ್ಸೂಚನೆಯನ್ನು ನಮ್ಮ ಹವಾಮಾನ ಇಲಾಖೆ ಕೊಟ್ಟಿರುವುದರಿಂದ ಯಾರೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ.
ಕ್ರಿಕೆಟ್ ಎಂಬ ‘ಮೆಂಟಲ್ ಮನ್’ಗಳ ಆಟವನ್ನು ಹುಟ್ಟಿಸಿದ ಇಂಗ್ಲೆಂಡಿನ ತಂಡ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ನೂರೆಂಟು ವಿಧಾನಗಳು ಎಂಬ ಪುಸ್ತಕವನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, [...]
Recent Comments