12
Mar
Posted by Nage samrat in ಹಾಸ್ಯ ಲೇಖನ. Tagged: ಆಯುರ್ವೇದ, ಕೂದಲು, ಕೂದಲು ಉದುರುವಿಕೆ, ಕೇಶ, ಕೇಶವಾ, ಬುರುಡೆ, ಸಂಪದ, ಸುಮಂತ್ ಶ್ಯಾನುಭಾಗ್, ಹಾಸ್ಯ ಲೇಖನ. Leave a Comment
ಮೆಕ್ಯಾನಿಕಲ್ ಇಂಜಿನಿಯರಿಂಗಿನಲ್ಲಿ ಬಿ.ಇ ಮಾಡಿ ಪ್ರಸ್ತುತ ಮುಂಬೈನ ಟಿಸಿಎಸ್‌ನಲ್ಲಿರುವ ಕುಂದಾಪುರದ ವಿ.ಸುಮಂತ ಶಾನುಭಾಗರು ಕವಿಗಳೂ ಹೌದು, ವಿಕಟಕವಿಗಳೂ ಹೌದು. ಅವರ ಇತ್ತೀಚಿನ ಹಾಸ್ಯ ಲೇಖನ ಸಂಪದದಲ್ಲಿ ಪ್ರಕಟವಾಗಿತ್ತು. ಅದು ನಗೆ ನಗಾರಿಯ ಓದುಗರಿಗಾಗಿ ಇಲ್ಲಿದೆ.
ಲೋ ಸುಮಂತಾ …… ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ [...]
Continue reading »
2
Mar
Posted by Nage samrat in ಹಾಸ್ಯ ಲೇಖನ. Tagged: ಇದೂ ಮುಗಿಯುತ್ತೆ, ಕುಚೇಲ, ಮಂಡಿಯೂರಿ. 2 Comments
(ಇಲ್ಲೀವರ್ಗೂ ಏನಾಗಿತ್ತು ಅಂದ್ರೆ….)
ಮಂಡಿಯೂರಿಯವರ ಮಾತಿನ ಮಾಂತ್ರಿಕ ಮೋಡಿಗೆ ಒಳಗಾದ ಕುಚೇಲನಿಗೆ ತಾನು ಕುರಿಯಲ್ಲ ಹುಲಿ ಎಂಬ ಆತ್ಮವಿಶ್ವಾಸ ಮೂಡಿತು. ಇಷ್ಟು ದಿನ ತನ್ನೊಳಗಿದ್ದ ಶಕ್ತಿಯನ್ನು ಕಾಣದೆ ಸಂಕಟ ಪಟ್ಟದ್ದಕ್ಕೆ ಆತನಿಗೆ ದುಃಖವಾಯಿತು. ಇನ್ನು ಮುಂದೆ ಮಂಡಿಯೂರಿಯವರ ಈ ಸೂಪರ್ ಫಾರ್ಮುಲಾವನ್ನು ಅಳವಡಿಸಿಕೊಂಡು ಬದುಕನ್ನು ಸುಖದ ಬೀಡಾಗಿಸಿಕೊಳ್ಳಬೇಕು ಎಂದುಕೊಂಡು ಜೇಬಿನಲ್ಲಿ ಉಳಿದಿದ್ದ ಚಿಲ್ಲರೆ ಕಾಸನ್ನೆಲ್ಲಾ ಮಂಡಿಯೂರಿಯವರ ಎದುರು ಇಟ್ಟು ಮಂಡಿಯೂರಿ ಬಾಗಿ ನಮಸ್ಕರಿಸಿ ಅಲ್ಲಿಂದ ಹೊರಟ.
ಮುಂದೆ ದಿನನಿತ್ಯದ ಬದುಕಿನಲ್ಲಿ ಯಾವುದೇ ಕಷ್ಟ ಬಂದರೂ ‘ಈ ಕಷ್ಟ ಶಾಶ್ವತವಲ್ಲ. ಇದು [...]
Continue reading »
26
Feb
Posted by Nage samrat in ಹಾಸ್ಯ ಲೇಖನ. 5 Comments
ಸೋಲೆಂಬುದು ಪದೇ ಪದೇ ಕಂಗೆಡಿಸತೊಡಗಿದಾಗ ಕುಚೇಲ ಕುಗ್ಗಿ ಹೋಗಿದ್ದ. ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರ ಮೂದಲಿಕೆಯ ದಾಳಿಗೆ ಈಡಾಗಿಯೂ ಅಳಿದುಳಿದ ಆತನ ಆತ್ಮವಿಶ್ವಾಸ ಸರ್ಕಾರಿ ಇಂಜಿನಿಯರುಗಳು ಕಟ್ಟಿದ ಸೇತುವೆಯ ಹಾಗೆ ಕುಸಿದು ಬೀಳತೊಡಗಿತ್ತು. ಜೀವನದಲ್ಲಿ ಉತ್ಸಾಹವೇ ಇಲ್ಲವಾಗಿ ದುಃಖದ ಸಾಗರದಲ್ಲಿ ಬಿದ್ದಂತೆ ಭಾಸವಾಗುತ್ತಿತ್ತು. ಇನ್ನಷ್ಟು ದಿನ ಇದೇ ಮನಸ್ಥಿತಿಯಲ್ಲಿದ್ದರೆ ಒಂದೋ ಹುಚ್ಚು ಹಿಡಿಯಬಹುದು ಇಲ್ಲವೇ ತನ್ನ ಕಣ್ಣೀರಿನ ಸುನಾಮಿಗೆ ಇಡೀ ಜಗತ್ತೇ ಬಲಿಯಾಗಬಹುದು ಅನ್ನಿಸಿದ್ದರಿಂದ ಕುಚೇಲ ತನ್ನ ಜಗತ್ತೇ ಆಗಿದ್ದ ನಾಲ್ಕು ಗೋಡೆಗಳ ಪುಟ್ಟ ಕೋಣೆಯಿಂದ ಹೊರಬಂದ. [...]
Continue reading »
1
Feb
Posted by Nage samrat in ಹಾಸ್ಯ ಲೇಖನ. Tagged: ಒದೆಯುವುದು, ಕುಚೇಲ, ಕ್ರೈಸ್ತರು, ನಗೆ ಸಾಮ್ರಾಟ್, ಮಕ್ಕಳು, ಮುಸಲ್ಮಾನರು, ಹೆಂಡತಿ. 2 Comments
ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ ನಮಿಸಿಯೋ, ಕೋಣೆಯಲ್ಲಿ ನೇತು ಹಾಕಿಕೊಂಡ ದೇವರ ಪಟಕ್ಕೆ ಕೈ ಮುಗಿಯುತ್ತಲೋ, ಎಡ ಮಗ್ಗುಲಲ್ಲಿ ಎದ್ದೆವಾ ಎಂದು ಗಾಬರಿಯಾಗುತ್ತಲೋ, ರಾತ್ರಿಯ ಗುಂಡು ಜಾಸ್ತಿಯಾಯಿತಾ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಲೋ, ನಿದ್ರೆ ಕೆಡಿಸಿ ಎಚ್ಚರಿಸಿದ ಹಾಲಿನವನನ್ನೋ, ಪೇಪರ್‌ನವನನ್ನೋ ಬೈದುಕೊಳ್ಳುತ್ತಲೋ, ಇಷ್ಟು ಬೇಗ ಬೆಳಕಾಯಿತಾ ಎಂದು ಅಚ್ಚರಿಗೊಳ್ಳುತ್ತಲೋ, ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸುತ್ತಲೋ, ದೂರದಲ್ಲಿರುವ [...]
Continue reading »
31
Jan
Posted by Nage samrat in ಹಾಸ್ಯ ಲೇಖನ. Tagged: ಜಾಮೂನು, ನಗೆ ನಗಾರಿ ಡಾಟ್ ಕಾಮ್, ಬೊಂಡಾ, ಹೆಣ್ಣು ನೋಡಲು ಬಂದ ಗಂಡು, ಹೇಮಾ ಪವಾರ್, ಹೇಮಾಂತರಂಗ. Leave a Comment
“ಬೆಂಗಳೂರು ಹುಡುಗೀರಂದ್ರೆ, ತಮ್ಮ ತೂಕ, ತಮ್ಮ ಮೇಕಪ್, ಫ್ಯಾಶನ್ ಮ್ಯಾಗಸೀನ್, ಫಿಲ್ಮಿ ಗಾಸಿಪ್ಸ್ ಗಳಲ್ಲೇ ಕಳೆದು ಹೋಗಿರುವ, ಕನ್ನಡದ ಗಂಧವೇ ಗೊತ್ತಿಲ್ಲದವರಂತೆ ಇಂಗ್ಲಿಷನ್ನೇ ತಮ್ಮ ಮಾತೃ ಭಾಷೆಯನ್ನಾಗಿಸಿಕೊಂಡಿರುವವರು ಎಂಬ ಕಲ್ಪನೆ ದಟ್ಟವಾಗಿರುವಾಗ ಬರೆಯುವ ಸಾಹಸಕ್ಕೆ ಕೈ ಹಾಕಲು ತುಸು ಹಿಂಜರಿಕೆ ಆಗುತ್ತಿದೆ. ಆದರೂ ಇನ್ನು ಬರೆಯದೇ ಇರುವುದಕ್ಕಾಗುವುದಿಲ್ಲವೆನಿಸಿ ಬ್ಲಾಗಿಂಗ್ ಶುರುವಿಟ್ಟುಕೊಂಡಿದ್ದೇನೆ!” ಎಂದೆನ್ನುತ್ತಾ ಹೇಮಾಂತರಂಗ ಬ್ಲಾಗು ತೆರೆದಿರುವ ಮಿಸ್ ಹೇಮಾ ಪವಾರ್ “ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ. ಭೋರ್ಗರೆವ ಭಾವಗಳಿಗೆ ಅಕ್ಷರಗಳ ಬೊಗಸೆಯೊಡ್ಡಿ ಬ್ಲಾಗಿನ [...]
Continue reading »
22
Dec
Posted by Nage samrat in ಹಾಸ್ಯ ಲೇಖನ. 7 Comments
- ಗಣೇಶ್
ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ
ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.
ಗಮನಿಸಿ ನೋಡಿದಾಗ ಗೊತ್ತಾಯಿತು-ಅದು ಆಮೀರ್ ಖಾನ್‌ನ ಘಜನಿ ಚಿತ್ರದ ಪೋಸ್ಟರ್-ನನ್ನ ಬೆಡ್‌ನ ಎದುರಿನ ಗೋಡೆಯಲ್ಲಿತ್ತು. ಬೆಳ್ಳಂಬೆಳಗ್ಗೆ ಏಳುವಾಗ ನೋಡಲು ಲಕ್ಷ್ಮಿ ಫೋಟೋ, ಹೋಗಲಿ ಕತ್ರೀನಾಳಾದ್ದಾದರೂ ಹಾಕಬಾರದೆ. (ಹೆಗಲಿನ ಮಟ್ಟಕ್ಕೆ ಬೆಳೆದ ಮಕ್ಕಳಿರುವಾಗ ಇದನ್ನೆಲ್ಲಾ ಯೋಚನೆ ಮಾಡಬಾರದು. ಶಾಂತಂ ಪಾಪಂ.)
ಬರೀ ಮೇಲ್ಮೈ(ಮೇಲಿನ+ಮೈ), ಕೆಟ್ಟ ನೋಟ, ತಲೆಯಲ್ಲಿ ಕಾಫೀತೋಟದ ರಸ್ತೆ ತರಹ ಅಡ್ಡಾದಿಡ್ಡಿ ಗೆರೆ-ಈ ಪೋಸ್ಟರ್ ನನ್ನ ಕೋಣೆಯಲ್ಲಿ [...]
Continue reading »
26
Apr
Posted by Nage samrat in ಹಾಸ್ಯ ಲೇಖನ. Tagged: ಟಿವಿ ನೈನ್, journalism, news channel, tabloidism, tv9. 6 Comments
(ನಗಾರಿ ತನಿಖಾ ಬ್ಯೂರೋ)
‘ಉತ್ತಮ ಸಮಾಜಕ್ಕಾಗಿ’ ಎಂಬ ಪಂಚಿಂಗ್ ಹಾಗೂ ಪರಿಣಾಮಕಾರಿ ಸ್ಲೋಗನ್ನನ್ನು ಹೊತ್ತುಕೊಂಡು ಕನ್ನಡದಲ್ಲಿ ಕಣ್ತೆರದದ್ದು ಟಿವಿ ೯ ಸುದ್ದಿ ಚಾನಲ್ಲು. ಇದು ಶುರುವಾಗಿ ಈಗಾಗಲೇ ತುಂಬಾ ದಿನಗಳು ಕಳೆದಿವೆ. ಈ ಸಂದರ್ಭದಲ್ಲಿ ಈ ಚಾನಲ್ಲಿನಿಂದ ಸಮಾಜ ಎಷ್ಟು ‘ಉತ್ತಮ’ವಾಗಿದೆ ಎಂಬುದನ್ನು ಪತ್ತೆಹಚ್ಚುವುದಕ್ಕೆ ನಗೆ ಸಾಮ್ರಾಟರು ತಮ್ಮ ಪತ್ತೇದಾರಿಕೆಯ ಚೇಲ ಕುಚೇಲನನ್ನು ಕಟ್ಟಿಕೊಂಡು ಅಜ್ಞಾತ ಪ್ರದೇಶಕ್ಕೆ ಪಲಾಯನಗೈದಿದ್ದಾರೆ.
‘ರಾಜಕಾರಣಿಗಳೇ ಎಚ್ಚರ..! ಮಾತಾಡುವ ಮುನ್ನ ಯೋಚಿಸಿ’ ಎಂದು ಚುನಾವಣೆಯ ಕಾವು ಜ್ವರದಂತೆ ಏರುತ್ತಿರುವ ಸಂದರ್ಭದಲ್ಲಿ ರೋಫ್ ಹಾಕುತ್ತಿರುವ ಈ ಸುದ್ಧಿ [...]
Continue reading »
28
Mar
Posted by Nage samrat in ಹಾಸ್ಯ ಲೇಖನ. Tagged: april first, fools day, humor. Leave a Comment
ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು ‘ಮೂರ್ಖ’ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ. ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ. ‘ವ್ಯಾಲೆಂಟೈನ್ಸ್ ಡೇ’ ಅಂತೆ, ‘ಮದರ್ಸ್ ಡೇ’ ಅಂತೆ, ‘ಫಾದರ್ಸ್ ಡೇ’ (ಇದನ್ನು Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ [...]
Continue reading »
13
Mar
Posted by Nage samrat in ಹಾಸ್ಯ ಲೇಖನ. Tagged: ಶಿಸ್ತು, ಸಡಗರ, ಹಾಸ್ಯ ಲೇಖನ, descipline. Leave a Comment
ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾ ಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.
ಇದು ಈ ಅಂಕಣಕಾರರ ಐದನೆಯ ಲೇಖನ. ಹಿಂದಿನ ಲೇಖನ ಇಲ್ಲಿದೆ.
ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು [...]
Continue reading »
11
Mar
Posted by Nage samrat in ಹಾಸ್ಯ ಲೇಖನ. 2 Comments
‘ಸಂಪದ’ಕನ್ನಡ ಸಮುದಾಯದ ಬರಹಗಾರರು ಯಲ್ಲಾಪುರದ ಗುರುರಾಜ ಕೋಡ್ಕಣಿ. ಕ್ಯಾತೆ-ಕಾದಂಬರಿ ಕುರಿತಾದ ವಿವಾದ, ಚರ್ಚೆ ಹೆಸರಿನ ಜಗಳ, ವಿಮರ್ಶೆ ಹೆಸರಿನ ವಿಕೃತಿಯ ಬಗ್ಗೆ ಇಲ್ಲಿ ಈ ಲೇಖನದ ಮೂಲಕ ಬೆಳಕು ಚೆಲ್ಲಿದ್ದಾರೆ.
“ಯಾರ್ರೀ,ಅವನು ಶ್ರೀಪತಿರಾವ್ …ಅವನೂ ಒಬ್ಬ ಸಾಹಿತಿ ಏನ್ರಿ..ಅವನ ಹೊಸ ಕಾದ೦ಬರಿ ‘ಕೆಟ್ಟ ಸ೦ಸ್ಕೃತಿ ‘ ಕಾದ೦ಬರಿಯೇ ಅಲ್ಲ ,ಅದೊ೦ದು ಕೀಳು ಸಾಹಿತ್ಯ,ಬರಿ ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಬಿಟ್ಟರೆ ಇನ್ನೇನೂ ಇಲ್ಲ ಅದರಲ್ಲಿ.ಈ ಶ್ರೀಪತಿರಾವ್ ಒಬ್ಬ ಕೋಮುವಾದಿ ಅಷ್ಟೇ ,ಅವನ ಅನುಯಾಯಿಗಳು ಮಾತ್ರ ಓದಬೇಕು ಆ [...]
Continue reading »
Recent Comments