Archive for the ‘ಸೀರಿಯಸ್ಲೀ ಸೀರಿಯಸ್ಸು’ Category

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: [...]

Continue reading »

ನಗಾರಿಯಲ್ಲಿ ಪ್ರತಿಕ್ರಿಯೆಗಳೇಕಿಲ್ಲ?

ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಗೆ ನಗಾರಿಯ ತಾಣಕ್ಕೆ ದಿನವೊಂದಕ್ಕೆ ಐವತ್ತರಿಂದ ನೂರು ಮಂದಿ ಮೌಸು ಚಿಟುಕಿಸಿ ಹೋಗುತ್ತಾರೆ. ಇಲ್ಲಿನ ಹಾಸ್ಯದ ಅಬ್ಬರಕ್ಕೆ ನವಿರಾಗಿ ನಲುಗಿ ಮನಸಾರೆ ನಗುತ್ತಾರೆ. ಆದರೆ ಕೆಲವೇ ಕೆಲವರು ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆ. ಧ್ವನಿಗೆ ಪ್ರತಿಧ್ವನಿಯನ್ನು ಸೇರಿಸುತ್ತಾರೆ. ಯಾಕೆ ಹೀಗೆ?
ಇದಕ್ಕೆ ಮುಖ್ಯ ಕಾರಣ ನಮ್ಮ ‘ನಗೆ ಸಾಮ್ರಾಟ್’ ಎಂಬ ಅವತಾರ ಎನ್ನುತ್ತಾರೆ ನಮ್ಮ ಹಿತೈಷಿಗಳು. ನಮ್ಮ ಅ‘ನಾಮ’ಧೇಯತೆಯೇ ಓದುಗರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುವಂತೆ ಮಾಡುತ್ತಿದೆ. ನಮ್ಮ ಗುರುತಿಲ್ಲದ, ಪರಿಚಯವಿಲ್ಲದ ವಿವರವೇ ಪ್ರತಿಸ್ಪಂದನೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ [...]

Continue reading »

ನಗಾರಿ ಸದ್ದು ಮಾಡಲು ತೊಡಗಿದ್ದು ಅದಕ್ಕೇ!

‘ಸೀರಿಯಸ್ಲೀ ಸೀರಿಯಸ್’. ತಾವು ಹೇಳುವುದೆಲ್ಲವನ್ನೂ ಜನ ತುಂಬಾ ಲೈಟ್ ಆಗಿ ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯಲ್ಲಿ ಸಾಮ್ರಾಟರು ಕೊಂಚ ಗಂಭೀರವಾಗಿ ಆದರೆ ಎಲ್ಲೂ ‘ನಗೆ ರಹಿತ’ವಾಗದಂತೆ ಹಾಸ್ಯದ ಬಗೆಗಿನ ಚಿಂತನಯೋಗ್ಯ ಸಂಗತಿಗಳನ್ನು ಇಲ್ಲಿ ನಿವೇದಿಸಿಕೊಳ್ಳುತ್ತಾರೆ.

(‘ಸೀರಿಯಸ್ಲೀ ಸೀರಿಯಸ್’ ಸಂಪಾದಕೀಯ)
ಇಂತಹ ಒಂದು ಪ್ರಯತ್ನವನ್ನು ಮಾಡಬೇಕು ಎಂದು ನಿಶ್ಚಯಿಸಿದಾಗಲೆಲ್ಲಾ ನನ್ನೆದುರು ಎದ್ದು ನಿಲ್ಲುತ್ತಿದ್ದ ಪ್ರಶ್ನೆ -ಹಾಸ್ಯಕ್ಕೆ ಅಂತಲೇ ಒಂದು ಬ್ಲಾಗು ತೆರೆಯಬೇಕೆ? ಹಾಸ್ಯವನ್ನು ಅಷ್ಟು ಪ್ರಾಮುಖ್ಯತೆಯಿಂದ ಕಾಣುವ ಮನಸ್ಥಿತಿ ನಮ್ಮ ಜನರಿಗಿದೆಯೇ- ಎಂಬ ಸಂಶಯ ನನ್ನನ್ನು ಕೊಂಚ ಕಾಲದವರೆಗೆ ಈ ಪ್ರಯತ್ನಕ್ಕೆ ಕೈ [...]

Continue reading »