( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)
ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ [...]
Archive for the ‘ಸಿನೆಮಾ’ Category
3 Oct
ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!
29 Jul
ನಗೆಸಾಮ್ರಾಟರ ಸಚ್ ಕಾ ಸಾಮ್ನಾ!
ಮೊನ್ನೆ "ಸಚ್ ಕಾ ಸಾಮ್ನಾ" ಕಾರ್ಯಕ್ರಮಕ್ಕೆ ನಮ್ಮ ನಗೆಸಾಮ್ರಾಟರೂ ಹೋಗಿದ್ದರು.
ಅವರಿಗೆ ಕೇಳಲಾದ ಮೊದಲ ಪ್ರಶ್ನೆ "ಚಿತ್ರಮಂದಿರದ ಒಳಹೋಗುವ ಮುನ್ನ ನೀವೇನು ಮಾಡುತ್ತೀರಿ?
ಕೊಂಚವೂ ಗೊಂದಲವಿಲ್ಲದೇ ನಗೆಸಾಮ್ರಾಟರು "ನನ್ನ ಲಾಜಿಕ್ಕುಗಳನ್ನು ಜೇಬಿನಲ್ಲಿಡುತ್ತೇನೆ" ಎಂದಾಗ ನಿರೂಪಕ ಗಲಿಬಿಲಿ!
ಸುಧಾರಿಸಿಕೊಂಡು "ನಗೆಸಾಮ್ರಾಟರು ನೀಡಿದ ಉತ್ತರ ಸರಿಯೋ ತಪ್ಪೋ ನೋಡೋಣ" ಅಂತ ಪಾಲಿಗ್ರಾಫ್ ಮೆಶೀನ್ ನಲ್ಲಿ ಬಂದ ಉತ್ತರ ನೋಡಿದರೆ ಅದು ಸತ್ಯ ಎಂದಾಗಿತ್ತು!
ಮುಂದಿನ ಪ್ರಶ್ನೆ," ಶಿವರಾಜ್ ಕುಮಾರ್ ಅಭಿನಯದ "ಓಂ" ಚಿತ್ರಕ್ಕೂ ಅವರದೇ ಅಭಿನಯದ "ತವರಿಗೆ ಬಾ ತಂಗಿ" ಚಿತ್ರಕ್ಕೂ ಇರುವ ಸಾಮ್ಯತೆ ಏನು?"
ಅದರಲ್ಲಿ [...]
17 Jul
ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!
ಇದು ಹೊಸ ಅಂಕಣ.
ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.
……………………..
ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದ ಭಾವಗೀತೆ ಯನ್ನು [...]
6 Feb
ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!
ಸಂಪದಿಗ ಗಣೇಶರ ಬರಹವನ್ನು ಅಲ್ಲಿಂದ ನೇರವಾಗಿ ಹೈಜ್ಯಾಕ್ ಮಾಡಿ ಇಲ್ಲಿ ಹಾಕಿದ್ದೇವೆ.
- ನಗೆ ಸಾಮ್ರಾಟ್
ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ…(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ ? -ನಮ್ಮದು ಡಿಫರೆಂಟೂ.. ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ.. ‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ.., [...]
24 Jan
ನಮ್ಮ ಸಂಗೀತವಿರುವುದು ಪ್ರಜೆಗಳಿಗಾಗಿ!
(ನಗೆ ನಗಾರಿ ಪಾಪ್ ಸಂಗೀತ ಬ್ಯೂರೋ)
ಸಂಗೀತದ ನಾನಾ ಉಪಯೋಗಗಳ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದರೆ, ಇನ್ನು ಮುಂದೆ ನಮ್ಮ ಹೈಸ್ಕೂಲು, ಪ್ರೈಮರಿ ಸ್ಕೂಲುಗಳ ಮಕ್ಕಳು ತಾವು ಉರು ಹೊಡೆದ ಹತ್ತಾರು ಉಪಯೋಗಗಳ ಜೊತೆಗೆ ಇದನ್ನೂ ಸೇರಿಸಬಹುದು. ಸಂಗೀತದ ಸಾಮಾಜಿಕ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿ ತಮ್ಮ ಹೆಸರನ್ನು ಒಂದಕ್ಷರ ಉದ್ದ ಮಾಡಿಕೊಳ್ಳಲಿಚ್ಚಿಸುವವರಿಗೆ(‘ಡಾ’ ಸೇರಿಸಿಕೊಂಡು!) ಬಿಸಿ ಬಿಸಿ ವಿಷಯವಾಗಿಯೂ ಇದು ಬಳಕೆಯಾಗಬಲ್ಲದು. ಹಾಗೆ ನೋಡಿದರೆ ಪಾಪ್, ಹಿಪ್ ಹಾಪ್ ಹಾಗೂ ರಾಕ್ ಸಂಗೀತಗಳಿಂದ ಹಾಗೂ ಕೆಲವು ಸ್ವದೇಶಿ ಪ್ರತಿಭೆಗಳ [...]
5 Nov
ಹೀಗೂ ಒಂದು ರಿಯಾಲಿಟಿ ಶೋ!
(ನಗೆ ನಗಾರಿ ಮನರಂಜನಾ ಬ್ಯೂರೋ)
ತಮ್ಮ ರಿಯಲ್ ಬದುಕಿನ ಕಷ್ಟ – ಸಂಕಟಗಳನ್ನು, ಉಪದ್ವಾಪ್ಯಗಳನ್ನು ಮರೆಯುವುದಕ್ಕಾಗಿ ಕ್ಷಣಮಾತ್ರಕ್ಕೆ ತಮ್ಮೆಲ್ಲಾ ದುಃಖಗಳಿಂದ ಬಿಡುವನ್ನು ಪಡೆಯುವುದಕ್ಕಾಗಿ, ಹಗಲಿನ ದುಡಿಮೆಯಿಂದ ಆದ ದಣಿವನ್ನು ತಣಿಸುವುದಕ್ಕಾಗಿ ಮನುಷ್ಯನು ಮನರಂಜನೆಯನ್ನು ಕಂಡುಕೊಂಡ ಎಂದು ಸಣ್ಣ ಮಗುವಾದರೂ ಯೋಚಿಸಿ ಹೇಳಬಹುದು. ಸಣ್ಣಗೆ ತಮಟೆಯನ್ನು ಬಡಿಯುತ್ತಾ, ಬೆಂಕಿಯ ಸುತ್ತ ಕುಣಿಯುತ್ತಾ, ಅಜ್ಜ-ಮುತ್ತಜ್ಜನ ಕಾಲದ ರಾಜ, ರಾಕ್ಷಸ, ರಾಜಕುಮಾರಿಯರ ಕಥೆಯನ್ನು ಕೇಳುತ್ತಾ, ತಾವೇ ಕಟ್ಟಿಕೊಂಡ ಹಾಡು ಹಾಡುತ್ತಾ ಬೆಳೆದವರನ್ನು ಕಂಡು ನಮ್ಮ ವಿಜ್ಞಾನಕ್ಕೆ ಭಾರೀ ಅನುಕಂಪ ಮೂಡಿತು. ಮನರಂಜನೆಯ ಹೆಸರಿನಲ್ಲಿ [...]
22 Jul
ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?
(ನಗೆ ನಗಾರಿ ಸಿನೆಮಾ ಬ್ಯೂರೋ)
‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.
ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ [...]
9 Jul
ಹಿರಿಯ ನಾಯಕರ ಮೀಸಲಾತಿಗೆ ಆಗ್ರಹ
( ನಗೆ ನಗಾರಿ ಸಿನಿಮಾ ಬ್ಯೂರೋ)
‘ಕನ್ನಡದ ಹಿರಿಯ ನಾಯಕ ನಟರುಗಳಿಗೆ ಇತ್ತೀಚೆಗೆ ತೀರಾ ಅವಮಾನವಾಗುತ್ತಿದೆ. ಸಿನೆಮಾಗಳಿಗೆಲ್ಲಾ ಶಾಲಾ ಕಾಲೇಜು ಹುಡುಗರು ನಾಯಕರಾಗುತ್ತಿದ್ದಾರೆ. ವರ್ಷಕ್ಕೆ ಡಬ್ಬಾದಿಂದ ಹೊರಬರುವ ಚಿತ್ರಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಯುವ ನಾಯಕರೇ ಹೆಚ್ಚಾಗಿದ್ದಾರೆ. ಇದು ಚಿತ್ರರಂಗದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ವ ಸಮಾನತೆಯ ಸಿದ್ಧಾಂತದ ಮೇಲೆ ಸಿನೆಮಾಗಳು ತಯಾರಾಗಬೇಕು. ಹೀಗಾಗಿ ನಾವು ಹಿರಿಯ ನಾಯಕರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ಪರ್ಸೆಂಟ್ ಸಿನೆಮಾಗಳಲ್ಲಾದರೂ ಹೀರೋ ಪಾತ್ರವನ್ನು ಮೀಸಲು ಇಡಬೇಕು ಎಂದು ಒತ್ತಾಯ ಪಡಿಸುತ್ತಿದ್ದೇವೆ.’ ಎನ್ನುತ್ತದೆ ಚಿತ್ರರಂಗದಲ್ಲಿ [...]
28 Mar
ಖುಸಿ ಸಿಗದಿದ್ದರೆ ಕಾಸು ವಾಪಸ್!
(ನಗಾರಿ ಸಿನಿ-ಸಿನಿ ಬ್ಯೂರೋ)
ಅವ್ರನ್ನ ಉದಯ್ ಅಂದರೆ ಯಾರು ಉದಯ್ ಕುಮಾರಾ ಅಂತ ಕೆಲವರು ಕೇಳಬಹುದು. ಆದರೆ ಉದಯ್ ಜಾದೂಗಾರ್ ಅಂದರೆ ಯಾರಿಗೂ ಕನ್ ಫೂಸ್ ಆಗೋದಿಲ್ಲ. ಜಾದೂಗಾರ್ ಮ್ಯಾಜಿಕ್ ಮಾಡಿದ್ರು, ಜನ ಚಪ್ಪಾಳೆ ತಟ್ಟಿದ್ರು. ಮ್ಯಾಜಿಕ್ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆ ಮಾಡಿದರೆ ಜನ ಹಣ ಸುರಿದು ಮೋಡಿ ಕಲಿತರು. ಅವರು ಸುಡೋಕು ಹಿಡಿದರು, ಅದನ್ನ ಬಿಡಿಸಲಿಕ್ಕೆ ಅಂತಲೇ ಒಂದು ಡಬ್ಬಿ ಮಾಡಿದರು ಜನ ಭಲೇ ಮೆಚ್ಚಿಕೊಂಡರು. ಈಗವರು ಎಲ್ಲಾ ಬಿಟ್ಟು ದರೋಡೆ ಮಾಡೋಕೆ ನಿಂತಿದ್ದಾರೆ, ಬಹುಪಾಲು ಅದು [...]
14 Feb
ಸರಕಾರದ್ದು ಮಲತಾಯಿ ಧೋರಣೆ: ರಿಮೇಕರು
(ಸಿನೆಮಾ ರಿಮೇಕರು ಜೋಕರು ಬ್ಯೂರೊ)
ಕೇವಲ ಸ್ವಮೇಕ್ ಸಿನೆಮಾಗಳಿಗೆ ಸಬ್ಸಿಡಿ ಕೊಡುವುದು ಹಾಗೂ ಸ್ವಮೇಕ್ ಸಿನೆಮಾಗಳನ್ನು ಮಾತ್ರ ಅಪ್ಪಿ ಮುದ್ದಾಡುವ ಸರಕಾರದ ಧೋರಣೆಯನ್ನು ರಿಮೇಕ್ ನಿರ್ಮಾಪಕರು ಖಂಡ ತುಂಡವಾಗಿ ಖಂಡಿಸಿದ್ದಾರೆ. ಸರಕಾರ ಎಂಬುದು ತಾಯಿಯ ಹಾಗಿರಬೇಕು. ಅದಕ್ಕೆ ತನ್ನ ಎಲ್ಲಾ ಮಕ್ಕಳು ಒಂದೇ ಸಮನಾಗಿರಬೇಕು. ಆದರೆ ಸರಕಾರ ಈಗ ಮಲತಾಯಿ ಧೋರಣೆಯನ್ನು ತೋರ್ಪಡಿಸುತ್ತಿರುವುದು ವಿಷಾದದ ಸಂಗತಿ ಎಂದಿದ್ದರೆ ಹೆಸರು ಹೇಳಲಿಚ್ಚಿಸಿದ (ಹೆಸರಿಲ್ಲದ) ನಿರ್ಮಾಪಕರು.
ತಾಯಿ ತನ್ನ ಬುದ್ಧಿವಂತ ಮಗನಿಗೂ, ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕುಬಿದ್ದ ಮಗನಿಗೂ ಒಂದೇ ಸಮನಾದ ಪ್ರೀತಿಯನ್ನು [...]
Recent Comments