Archive for the ‘ಸಾಹಿತ್ಯ’ Category

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

ಇದು ಹೊಸ ಅಂಕಣ.

ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.

……………………..
ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದ ಭಾವಗೀತೆ ಯನ್ನು [...]

Continue reading »

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

(ಮೊದಲ ಭಾಗ)
೪. ಗುರಿಯ ಸ್ಪಷ್ಟತೆಯಿರಲಿ
ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ ಮನದಟ್ಟು ಮಾಡಿಕೊಳ್ಳಬೇಕು. ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ ಲೇಖನದಲ್ಲಿ [...]

Continue reading »

ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

ಈ ಹಿಂದೆ ನಾವು ಉತ್ತಮ ಕವಿಯಾಗಲು ನೀಡಿದ್ದ ಪಂಚ ಸೂತ್ರಗಳನ್ನು ಬಳಸಿ ಅತ್ಯಂತ ಯಶಸ್ವಿ ಕವನಗಳನ್ನು ಗೀಚಿ ಕವಿಯಾದ ಅನೇಕರು ನಮ್ಮನ್ನು ಅಭಿನಂದಿಸಿದ ಹಿನ್ನೆಲೆಯಲ್ಲಿ ಅಂದು ಶುರು ಮಾಡಿದ್ದ ಸಾಹಿತ್ಯ ಅಭಿಯಾನವನ್ನು ಮುಂದುವರೆಸಲು ನಿರ್ಧರಿಸಿದ್ದೇವೆ.
ಈ ಮಾಲಿಕೆಯ ಎರಡನೆಯ ಆವೃತ್ತಿಯಲ್ಲಿ ನಾವು ಅತಿ ಸಾಮಾನ್ಯ ಬರಹಗಾರ ಕೂಡ ‘ಪ್ರಖ್ಯಾತ ಅಂಕಣಕಾರನಾಗುವುದು ಹೇಗೆ?’ ಎಂದು ತಿಳಿಸಿಕೊಡುತ್ತೇವೆ. ಎಂದಿನಂತೆ ನಮ್ಮ ಸಲಹೆ ಸೂಚನೆಗಳು ಅತ್ಯಂತ ಚುಟುಕಾಗಿಯೂ, ಸ್ಪುಟವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತವೆಂಬುದನ್ನು ನೆನಪಿಸಬೇಕಿಲ್ಲ. ಹಾಗಾದರೆ, ಭಯ, ಭಕ್ತಿ, ಶ್ರದ್ಧೆಗಳಿಂದ ನಮ್ಮ ಉಪದೇಶ ಕೇಳಲು [...]

Continue reading »

ಉತ್ತಮ ಕವಿಯಾಗಲು ಪಂಚ ಸೂತ್ರಗಳು!

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಜಗತ್ತಿನ ಎಲ್ಲಾ ವೃತ್ತಿಗಳನ್ನು ಯಶಸ್ವಿಯಾಗಿ ಮಾಡುವುದಕ್ಕೆ ಆವಶ್ಯಕವಾದ ಸೂತ್ರಗಳನ್ನು ರೂಪಿಸುತ್ತಾ ಅವುಗಳನ್ನು ಜಗತ್ತಿನಾದ್ಯಂತ ಹೇಳಿಕೊಡುತ್ತಾ ಹೆಸರುವಾಸಿಯಾದ ಸಾಮ್ರಾಟರು ನಗೆ ನಗಾರಿಯ ಕಛೇರಿಗೆ ಭೇಟಿಯಿತ್ತಾಗ ಅವರಿಗೆ ‘ಉತ್ತಮ ಕವಿಯಾಗುವುದಕ್ಕೆ ನಿಮ್ಮ ಸಲಹೆ ಏನು?’ ಎಂದು ಒಬ್ಬ ಉದಯೋನ್ಮುಖ ಕವಿ ಹಾಗೂ ಹಿರಿಯ ಪತ್ರಕರ್ತರು ಕೇಳಿದರು. ಕೆಲ ಸಮಯ ಗಾಢವಾದ ಆಲೋಚನೆಯಲ್ಲಿ ಮುಳುಗಿ ಎದ್ದ ಸಾಮ್ರಾಟರು ಉತ್ತಮ ಕವಿಗೆ ಆವಶ್ಯಕವಾದ ಪಂಚ ಸೂತ್ರಗಳನ್ನು ನೀಡಿದರು.

೧. ಮುಖವೇ ಪ್ರತಿಭೆಯ ಕನ್ನಡಿ

ನಮ್ಮೊಳಗಿನ ಪ್ರತಿಭೆಯು ಎಂಥದ್ದು ಎಂಬುದು ನಮ್ಮ ಮುಖ್ವಾನ್ನು [...]

Continue reading »

ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

(ನಗೆ ನಗಾರಿ ವ್ಯಕ್ತಿತ್ವ ವಿಕಸನ ಬ್ಯೂರೋ)
ನಾಡಿನ ಹೆಸರಾಂತ ಪತ್ರಿಕೆಯ ಅಂಕಣಕಾರರು ನೀಡಿದ ‘ಭಾರತವನ್ನು ಬೈಯಿರಿ ಬುಕರ್ ಪಡೆಯಿರಿ’ ಎಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ನಗೆ ಸಾಮ್ರಾಟರು ಆ ನಿಟ್ಟಿನಲ್ಲಿ ಅಗಾಧವಾದ ಸಂಶೋಧನೆಯನ್ನು ಮಾಡಿ ಬಹುದೊಡ್ಡ ಗ್ರಂಥವನ್ನು ಬರೆಯುವಂತೆ ತಮ್ಮ ಚೇಲ ಕುಚೇಲನಿಗೆ ತಾಕೀತು ಮಾಡಿದ್ದಾರೆ. ತನ್ನ ಶಿಷ್ಯನಿಗೆ ಬುಕರ್ ಬಂದಿತು ಎಂದು ಹೇಳಿಕೊಳ್ಳುವ ಹೆಮ್ಮೆಯಷ್ಟೇ ತನಗೆ ಸಾಕು ಎಂದು ಹೇಳಿರುವ ಸಾಮ್ರಾಟರನ್ನು ಜಗದ್ಗುರುವಿನ ಪಟ್ಟಕ್ಕೆ ಕಟ್ಟಬೇಕು ಎಂದು ಹಲವರು ಯೋಚಿಸುತ್ತಿರುವುದು ಸುಳ್ಳು ಎಂದು ನಮ್ಮ ಮೂಲಗಳು ಸ್ಪಷ್ಟಪಡಿಸಿವೆ. [...]

Continue reading »

ನೂರು ವರ್ಷ ಕವನಗಳನ್ನು ಬ್ಯಾನ್ ಮಾಡಿ

(ನಗೆ ನಗಾರಿ ಸಾಹಿತ್ಯ ಬ್ಯೂರೋ)
ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಕ್ರಾಂತಿಕಾರಕ ಶಿಫಾರಸ್ಸನ್ನು ಮಾಡಿದ್ದಾರೆ. ಪುಸ್ತಕ, ಪತ್ರಿಕೆ, ಸಿನೆಮಾ, ಸಿನೆಮಾ ಹಾಡು, ಸಿನೆಮಾ ಹಾಡಿನ ಸಾಹಿತ್ಯದಲ್ಲಿ ಸಾಲು ಹೀಗೆ ಯಾವುದಾದರೊಂದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುತ್ತಾ ಓಡಾಡುತ್ತಿದ್ದ ಪುಡಿ ಸಂಘಟನೆಗಳೆಲ್ಲವೂ ಪಾಪಣ್ಣನವರ ಮಾತನ್ನು ಕೇಳಿ ಬೆಚ್ಚಿ ಬಿದ್ದು ಎದ್ದು [...]

Continue reading »

‘‘ಕೆಂಪಾ’ ಪೊಯೆಟ್ಟಾ ಅಂಕಲ್?”

(ನಗೆ ನಗಾರಿ ಭಾಷೆ – ಸಾಹಿತ್ಯ ಬ್ಯೂರೋ)
ಕನ್ನಡ ಸಾಹಿತ್ಯ ಲೋಕವನ್ನು ಸದಾ ಸುದ್ದಿಯಲ್ಲಿಟ್ಟಿರಬೇಕು ಎಂಬುದನ್ನು ಕೆಲವು ಕವಿಗಳು ಮಾಜಿ ಸಾಹಿತಿಗಳು ತಪ್ಪಾಗಿ ಅರ್ಥೈಸಿಕೊಂಡು ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಗಳ ವಾಚಕರ ವಾಣಿ ಎಂಬ ನಿರಪರಾಧಿ ಅಂಕಣವನ್ನು ರಣಾಂಗಣವಾಗಿಸಿಕೊಂಡು ಮುದಿ ಹೋರಿಗಳಂತೆ ಒಬ್ಬರನ್ನೊಬ್ಬರು ಮೊಂಡಾದ ಕೊಂಬಿನೊಂದಿಗೆ ತಿವಿದುಕೊಳ್ಳುತ್ತಾ, ತಾವೇ ಹಾಕಿದ ಸಗಣಿಯನ್ನು ಕೆದರುತ್ತಾ ಹೊಲಸೆಬ್ಬಿಸುತ್ತಾ ಅದನ್ನು ಕನ್ನಡದ ಕಂಪು ಎಂದು ಭ್ರಮಿಸುತ್ತಿರುವುದನ್ನು ಕಂಡು ನಗೆ ಸಾಮ್ರಾಟರಿಗೆ ಎಲ್ಲಿಲ್ಲದ ಕನಿಕರ.
ಮುರುಘ ಸ್ವಾಮಿಗಳು ಆಶೀರ್ವಚನ ಕೊಡುತ್ತಾ ಚಪ್ಪಲಿ [...]

Continue reading »