Archive for the ‘ಸಂಪಾದಕೀಯ’ Category

ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…

ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ [...]

Continue reading »

ಸಂತಾಪಕೀಯ: ಕೈ ತಪ್ಪಿದ ಪ್ರಧಾನಿ ಪಟ್ಟ ಹಾಗೂ ನಮ್ಮ ನಾಪತ್ತೆ ಪ್ರಸಂಗ!

‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ್ನೂ ಕರ್ನಾಟಕದಲ್ಲಿ ಮಾಡುತ್ತೇವೆ’ ಎನ್ನುವ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರ ಹೇಳಿಕೆ, ‘ಇವತ್ತೇ ಕೊನೆ ಇನ್ನು ಕುಡಿಯುವುದಿಲ್ಲ, ಎಡಗೈ ಕಿರು ಬೆರಳಲ್ಲೂ ಮದ್ಯದ ಬಾಟಲ್ ಮುಟ್ಟುವುದಿಲ್ಲ’ ಎನ್ನುವ [...]

Continue reading »

ಸಂಪಾದಕೀಯ: ಶ್ರೀರಾಮ ಸೇನೆಗೆ ನಮ್ಮ ಬೇಷರತ್ ಬೆಂಬಲ

ಪಬ್ ಎಂಬ ಮಾದಕತೆಯ, ಮೈಮರೆಯುವಿಕೆಯ ಅಡ್ಡೆಯಲ್ಲಿ ಅಪ್ಪ ಅಮ್ಮನ ದುಡ್ಡಿನ ನ್ಯಾಯಸಮ್ಮತ ಹಮ್ಮಿನಲ್ಲಿ ಕುಣಿದು ನಲಿದು, ಜಗತ್ತಿನ ಸಂಕಟ ಕಡಿಮೆ ಮಾಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಗಂಡು ಹುಡುಗರ ಮೇಲೆ ಕೈ ಮಾಡಿ ಸಂಸ್ಕೃತಿಯ ರಕ್ಷಕರು ಎಂದು ವಯ್ಯಕ್ತಿಕ ಬಿರುದು ಪಡೆದು, ಕರ್ನಾಟಕದ ತಾಲೀಬಾನಿಕರಣ ಎಂದು ತಮ್ಮ ಕೆಲಸಕ್ಕೆ ದೊಡ್ಡ ಹೆಸರಿನ ಮೊಹರನ್ನು ದೊಡ್ಡವರ ಒಡೆತನದ ದೊಡ್ಡ ಇಂಗ್ಲೀಷ್ ಟಿವಿ ಚಾನಲುಗಳಿಂದ ಪಡೆದು ಜಗತ್ಪ್ರಸಿದ್ಧರಾಗಿರುವ ಶ್ರೀರಾಮ ಸೇನಯ ಸೈನಿಕರು ಫೆಬ್ರವರಿ ಹದಿನಾಲ್ಕರಂದು ಆಚರಿಸುವ ವ್ಯಾಲಂಟೈನ್‌ನ ದಿನದಂದು [...]

Continue reading »

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…

 
ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ [...]

Continue reading »

ಸಂಪಾದಕೀಯ: ೨೦೦೮ಕ್ಕೆ ಗುಡ್ ಬೈ

 
ಹೆದರಬೇಡಿ.ಮೊದಲೇ ಹೇಳಿಬಿಡುತ್ತೇವೆ, ನಮ್ಮ ದಿನಪತ್ರಿಕೆಗಳ ಘನಗಂಭೀರ ಸಂಪಾದಕರು ಮಾಡುವಂತೆ  ನಾವು ವರ್ಷದ ಕೊನೆಯ ದಿನ ಕುಳಿತು ಚಾರ್ಟೆಡ್ ಅಕೌಂಟೆಂಟ್ ಥರ ಕಳೆದ ಮುನ್ನೂರ ಅರವತ್ನಾಲ್ಕು ದಿನಗಳು ಚಿಲ್ಲರೆ ಘಂಟೆಗಳಲ್ಲಿ ಮಾಡಿದ ಸಾಧನೆಗಳು, ಕಟ್ಟಿದ ಮಹಲುಗಳು, ಬೀಳಿಸಿದ ಮಳಿಗೆಗಳ ಲೆಕ್ಕ ಹಾಕುತ್ತಾ ಕೂರುವುದಿಲ್ಲ. ಇಲ್ಲವೇ ನಮ್ಮ ಹೈ ಫೈ ಟೈಮ್ಸಾಫಿಂಡಿಯಾದಂತೆ ನೀವು ಹೊಸ ವರ್ಷದ ರಾತ್ರಿಯನ್ನು ನಿಶೆಯಲ್ಲಿ ಕಳೆಯಲು ಬೆಂಗಳೂರಿನ ಯಾವ ಯಾವ ಮೂಲೆಯನ್ನು ಸೇರಬೇಕು ಎಂಬುದರ ವಿವರ ಕೊಡಲು ಹೋಗುವುದಿಲ್ಲ. ಬದುಕುವುದನ್ನು ಕಲಿಸುವುದಕ್ಕಾಗಿ ಬದುಕುತ್ತಿರುವ ಗುರುಗಳ ಹಾಗೆ [...]

Continue reading »

ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ [...]

Continue reading »

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ ಪಡಬೇಕಿಲ್ಲ. ಉದಾಹರಣೆಗೆ ಎಸ್.ಎಸ್.ಎಸ್.ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದುಕೊಳ್ಳಿ. ನೀವು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದರೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿಕೊಂಡು ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಬಹುದು. ನಿಮ್ಮನ್ನು ವೈಯಕ್ತಿಕವಾಗಿ ಬಲ್ಲವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ಅದನ್ನು ಅಲ್ಲಗಳೆಯುವುದಿಲ್ಲ. ಒಂದು ವೇಳೆ ನೀವು ಪತ್ರಿಕೆಯನ್ನು ಹಿಡಿದು [...]

Continue reading »

ನಗಾರಿಯ ಸಂಚಿಕೆ ಹೇಗಿತ್ತು?

ಅಸಲಿಗೆ ನಗೆ ನಗಾರಿ ಡಾಟ್ ಕಾಮ್ ಎಂಬ ವಿಚಿತ್ರ ಹೆಸರಿನ ಬ್ಲಾಗನ್ನು ತೆರೆದು ಹತ್ತಿರ ಆರು ತಿಂಗಳುಗಳು ಕಳೆದಿವೆ. ಆದರೂ ಪೂರ್ಣ ಪ್ರಮಾಣದ ಸಂಚಿಕೆಯನ್ನು ರೂಪಿಸಲು ಸಾಧ್ಯವಾಗಿರಲಿಲ್ಲ. ಎಲ್ಲಾ ವಿಭಾಗಗಳಲ್ಲೂ ಬರಹಗಳನ್ನು ದಾಖಲಿಸಲು ನಮ್ಮಿಂದ ಆಗಿರಲಿಲ್ಲ. ಮೊದಲು ಇದನ್ನು ವಾರಕ್ಕೊಮ್ಮೆ ಅಪ್‌ಡೇಟ್ ಮಾಡುವ ಇರಾದೆ ನಮ್ಮದಾಗಿತ್ತಾದರೂ ಅದು ಸುಲಭದ ಕೆಲಸವಲ್ಲ ಎಂದುಕೊಂಡು ಸುಮ್ಮನಾದೆವು. ಆದರೆ ಈಗ ಹದಿನೈದು ದಿನಕ್ಕೊಮ್ಮೆ ಬ್ಲಾಗಿನ ಸಂಚಿಕೆಯನ್ನು ರೂಪಿಸಬಹುದು ಎಂಬ ಧೈರ್ಯ ಬಂದಿದೆ. ಅದಕ್ಕೇ ಪ್ರಾಯೋಗಿಕವಾಗಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಹಿಂದಿನ [...]

Continue reading »

ನಗಾರಿ ಸದ್ದಿಗೆ ಪತರಗುಟ್ಟಿದವರು!

ಆಗಾಗ ನಗೆ ಸಾಮ್ರಾಟರು ಹಾಸ್ಯವನ್ನು ಅಷ್ಟು ಲೈಟಾಗಿ ನೋಡಬೇಡಿ ಅಂತ ಸೀರಿಯಸ್ಲೀ ಸೀರಿಯಸ್ಸಾಗಿ ಯೋಚಿಸುತ್ತಾ ಕುಳಿತುಬಿಡುತ್ತಾರೆ. ಆಗ ನಗಾರಿಯ ಸಾರಥ್ಯವಹಿಸುವುದಕ್ಕಾಗಿ ಅಂತಲೇ ಸಾಮ್ರಾಟರು ಮತ್ತೊಂದು ದೇಹ ಧರಿಸಿ ಅವತರಿಸುತ್ತಾರೆ. ಒಂದೇ ವ್ಯತ್ಯಾಸವೆಂದರೆ ಈ ದೇಹದಲ್ಲಿ ಮಿದುಳು ಮಿಸ್ಸಾಗಿರುತ್ತದೆ. ಹಾಗಂತ ಇವರನ್ನು ಸಂಪಾದಕರು ಅನ್ನದೇ ಇರಲಾದೀತೇ? ಹೀಗೆ ಮಿದುಳೇ ಇಲ್ಲದ ಕೋಟಿ ಕೋಟಿ ಮಂದಿಯನ್ನು ನಾವು ಅಧಿಕಾರದ ಗಾದಿಯ ಮೇಲೆ ಕೂರಿಸಿಲ್ಲವೇ?

ಅದು ಜನವರಿ ಇಪ್ಪತ್ತಾರರ ಮಧ್ಯರಾತ್ರಿ. ದೇಶವಿಡೀ ಗಣತಂತ್ರದಿನ ಮುಗಿಸಿ ಸುಸ್ತಾಗಿ ಮಲಗಿದೆ. ಬೇರೆ ಬೇರೆ ವರ್ಗದ ಜನರ [...]

Continue reading »