Archive for the ‘ಸಂದರ್ಶನ’ Category

ಅನಾಮಿಕ ಬ್ಲಾಗ್ ಜೀವಿಯ ವಿಶೇಷ ಸಂದರ್ಶನ!

(ವಿಶೇಷ ಅತಿಥಿಯೊಂದಿಗಿನ ಈ ವಿಶಿಷ್ಟ ಸಂದರ್ಶನಕ್ಕಾಗಿ ನಗೆ ಸಾಮ್ರಾಟರಾದ ನಾವು ಖುದ್ದು ವಹಿಸಿದ ಕಾಳಜಿಯನ್ನು, ಅನುಭವಿಸಿದ ಕಷ್ಟಗಳನ್ನು ಈಗಾಗಲೇ ನಮ್ಮ ನಾಡಿನ ಪ್ರಜೆಗಳ ಗಮನಕ್ಕೆ ತಂದಿದ್ದೇವೆ. ಈ ಅಪರೂಪದ ಅತಿಥಿ: ಅನಾಮಿಕ ಬ್ಲಾಗ್/ ಕಮೆಂಟ್ ಜೀವಿಯ ಸಂದರ್ಶನ ಇದೋ ನಿಮಗಾಗಿ!)

ನಗೆ ಸಾಮ್ರಾಟ್: ನಮಸ್ಕಾರ.
ಅನಾಮಿಕ: ಹು, ಹೇಳಿ ಏನಾಗ್ಬೇಕು?
ನ.ಸಾ: ನೀವು ಯಾವಾಗಲೂ ಹೀಗೇ ಇರುತ್ತೀರಾ?
ಅನಾಮಿಕ: ಹೇಗೆ?
ನ.ಸಾ: ಹೀಗೆ ಈ ಡಬ್ಬಿಯೊಳಗೆ ಕೂತು, ಬರೀ ನಿಮ್ಮ ಎರಡು ಕೈಗಳು ಹೊರಗೆ ಒಳಗೆ ಆಡುವಷ್ಟು ಸ್ಥಳಾವಕಾಶ ಮಾಡಿಕೊಂಡು ಹೀಗೇ ಕೂರುವಿರಾ? [...]

Continue reading »

ಖ್ಯಾತ ನಟಿ ‘ಬಂದ್ರೆ ತಾರೇ’ರೊಂದಿಗೆ ‘ಸಂ’‘ದರ್ಶನ’

(ಖ್ಯಾತ ನಟಿ ಬಂದ್ರೆ ತಾರೇ  ಸಂದರ್ಶನಕ್ಕೆ ಹೋಗಿದ್ದ ಸಾಮ್ರಾಟರ ಆಲ್ಟರ್ ಈಗೋ ಕಳೆದ ಕೆಲವು ದಿನಗಳು ನಾಪತ್ತೆಯಾಗಿದ್ದು ನಮ್ಮ ಅನೇಕ ನಿಷ್ಠಾವಂತ ಓದುಗರಲ್ಲಿ ಆತಂಕವನ್ನೂ, ಸಂಶಯವನ್ನೂ ಮೂಡಿಸಿತ್ತು. ಸಾಮ್ರಾಟರ ಆಲ್ಟರ್ ಈಗೋದ ಆರೋಗ್ಯದ ಕಾಳಜಿ ಹೊಂದಿರುವವರಿಗೆ ಆತಂಕ ಉಂಟಾಗಿದ್ದರೆ, ಆ ಈಗೋದ ‘ಚಾರಿತ್ರ್ಯ’ದ ಮೇಲೆ ಕಾಳಜಿ ಇದ್ದವರಿಗೆ ಸಂಶಯ ಮೂಡಿತ್ತು. ಕಡೆಗೆ ಸಾಮ್ರಾಟರು ಈ ಆತಂಕ, ಸಂಶಯಗಳ ಮುಸುಕನ್ನು ಸರಿಸಲು ನಿರ್ಧರಿಸಿ ತಮ್ಮ ಚೇಲ ಕುಚೇಲನನ್ನು ಅಟ್ಟಿದರು. ಕುಚೇಲ ನಗೆ ಸಾಮ್ರಾಟರ ಆಲ್ಟರ್ ಈಗೋವನ್ನೂ, ಅದರ ಸಂದರ್ಶನವನ್ನೂ [...]

Continue reading »

ಖ್ಯಾತ ನಟಿ ‘ಬಂದ್ರೆ ತಾರೇ’ರೊಂದಿಗೆ ‘ಸಂ’ ‘ದರ್ಶನ’

ಇಷ್ಟು ದಿನ ಸಾಮ್ರಾಟರ alter ego ಅವರಿಗೆ ಮುಜುಗರವಾಗುವಷ್ಟರ ಮಟ್ಟಿಗೆ ಬಹು ಘನ ಗಂಭೀರವಾದ ವ್ಯಕ್ತಿಗಳನ್ನು ಕರೆದು ತಂದು ಸಂದರ್ಶನ ನಡೆಸುತ್ತಿತ್ತು. ಇದರಿಂದ ಬೇಸರಗೊಂಡ ಸಾಮ್ರಾಟರು ತಮ್ಮ alter egoವನ್ನು ಗಾಂಧಿ ನಗರದ ಗಲ್ಲಿಗೆಳಿಗೆ ಅಟ್ಟಿದರು. ಅದರ ಫಲವಾಗಿ ಕಳೆದ ಸಂಚಿಕೆಯಲ್ಲಿ ಶ್ರೀಮಾನ್ ಚೂರಿಯವರ ಸಂದರ್ಶನ ಮೂಡಿ ಬಂದಿತು.
ಈ ನಡುವೆ ಸಾಮ್ರಾಟರು, ಅವರ ಅತ್ಯಾಪ್ತ ಚೇಲ ಕುಚೇಲನೂ, ಅವರ ಗತಕಾಲದ ಗೆಳೆಯ ತೊಣಚಪ್ಪನವರೂ ಸ್ತ್ರೀ ದ್ವೇಷಿಗಳು. ನಗೆ ನಗಾರಿಯಲ್ಲಿ ಸ್ತ್ರೀ ಸಮಾನತೆ ಇಲ್ಲವೆಂಬ ಆರೋಪಗಳು ಮಾರ್ದನಿಸತೊಡಗಿದ್ದು [...]

Continue reading »

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’ ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ [...]

Continue reading »

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2

(ಇಲ್ಲಿಂದ ಮುಂದುವರೆದದ್ದು)
ನ.ಸಾ: ಅಲ್ಲ ಗುರುಗಳೇ, ದೇವರು ಇದ್ದಾನೆ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡುವುದು ನಿಮ್ಮ ಕರ್ತವ್ಯವಲ್ಲವೇ? ಜನರು ಪ್ರಶ್ನಿಸಲೇ ಬಾರದು ಎಂದರೆ ವೈಜ್ಞಾನಿಕ ಮನೋಭಾವೆನೆ ಹೇಗೆ ಬೆಳೆಯಲು ಸಾಧ್ಯ?
ಧರ್ಮಶ್ರೀ: ದೇವರು ಇದ್ದಾನೆ ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ಸಾಕ್ಷಾತ್ ಆ ಪರಮಾತ್ಮನೇ ತಾನು ಈ ಜಗತ್ತನ್ನು ಸೃಷ್ಟಿಸಿದ್ದೇನೆ, ತಾನೇ ಈ ಜಗತ್ತನ್ನು ನಡೆಸುವವನು, ನಾಶ ಮಾಡುವವನು ಎಂದು ಹೇಳಿಲ್ಲವೇ? ಆತನಿಂದ ಬಂದ ಧಾರ್ಮಿಕ ಗ್ರಂಥಗಳಂತಹ ಸಾಕ್ಷಿಗಳು ಸಾಕಾಗುವುದಿಲ್ಲವೇ? ವೈಜ್ಞಾನಿಕ ಮನೋಭಾವ ಎಂಬ ಹೆಸರಿನಲ್ಲಿ ಸೈತಾನ ಆಳ್ವಿಕೆ ನಡೆಸುತ್ತಾನೆ. [...]

Continue reading »

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು ಎಂಬ ವದಂತಿಗಳನ್ನು ಹರಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಾಮ್ರಾಟರನ್ನು ದೇವಲೋಕದಿಂದ ಒದ್ದೋಡಿಸಿದಾಗ ಅವರು ನಗೆ ನಗಾರಿಯ ಡ್ರೈವರ್ ಸೀಟಿಗೆ ಬಂದು ಕುಳಿತು ತಮ್ಮ alter ego ಎಲ್ಲಿ ಎಂದು ಹುಡುಕಿದರು. ಆತ ಎಲ್ಲೂ ಕಾಣಲಿಲ್ಲ. ಕಡೆಗೆ ತಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಅಟ್ಟಿ ಆತನ ಇಹಪರಗಳನ್ನು ಪತ್ತೆ ಹಚ್ಚಲು ಓಡಿಸಿದರು. ಆಗ ತಿಳಿಯಿತು, ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡ [...]

Continue reading »

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗೆ

ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು. ತಮ್ಮ ಚೇಲ ಕುಚೇಲನನ್ನೂ ತಮ್ಮ ಆಲ್ಟರ್ ಈಗೋವನ್ನೂ ವಿನಾಯಕನ ಸಂದರ್ಶನಕ್ಕೆ ಅಟ್ಟಿದರು. ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಕೊಟ್ಟ. ಸಂದರ್ಶನದ ಪೂರ್ಣ ಪಾಠ [...]

Continue reading »

ಯುವ ಬ್ಲಾಗಿಗನ ಸಂದರ್ಶನ(2)

(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)
ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ [...]

Continue reading »

ಯುವ ಬ್ಲಾಗಿಗನ ಸಂದರ್ಶನ

ನಗೆ ಸಾಮ್ರಾಟರ alter ego ಕಳೆದ ಬಾರಿಯ ಸಂದರ್ಶನದಿಂದ ಉತ್ಸಾಹಗೊಂಡು ಈ ಸಂಚಿಕೆಯ ನಗೆ ನಗಾರಿಗಾಗಿ ಒಬ್ಬ ಯುವ ಹಾಗೂ ಯಶಸ್ವೀ ಬ್ಲಾಗಿಗನನ್ನು ಸಂದರ್ಶಿಸಿದೆ. ಈ ಸಾಮ್ರಾಟರ ಮಾನಸ ಪುತ್ರ ಸಾಮ್ರಾಟರ ಬೆನ್ತಟ್ಟುವಿಕೆಗಾಗಿ ಕಾಯುತ್ತಾ ನಿಂತಿದ್ದಾನೆ.
ಸಂದರ್ಶನ ನಿಮ್ಮ ಮುಂದಿದೆ:
ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?
ಯುವ ಬ್ಲಾಗಿಗ: Fine dude. How are you?
ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.
ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ [...]

Continue reading »

ವಿಶೇಷ ಸಂದರ್ಶನ: ಸುದ್ದಿ ಮಾಧ್ಯಮ ಪ್ರತಿನಿಧಿಯೊಂದಿಗೆ

ಬಹು ಹಿಂದೆ ಸಾಮ್ರಾಟರ alter ego ವೈಕುಂಟದ ಶ್ರೀ ಕೃಷ್ಣನನ್ನೂ, ಮಹಾರಾಷ್ಟ್ರದಿಂದ ಕನ್ನಡ ನಾಡಿಗೆ ಅವತರಿಸಿದ ಎಸ್.ಎಂ.ಕೃಷ್ಣರನ್ನೂ ಒಟ್ಟಿಗೇ ಕೂರಿಸಿಕೊಂಡು ಸಂದರ್ಶನ ಮಾಡಿಬರುತ್ತೇನೆ ಎಂದು ಹೋಗಿದ್ದು ನಿನ್ನೆ ರಾತ್ರಿ ಬರಿಗೈಯಲ್ಲಿ ನಗೆ ನಗಾರಿ ಕಛೇರಿಗೆ ವಾಪಸ್ಸಾಯಿತು. ವೈಕುಂಟಕ್ಕೆ ಸಾಗುವ ದಾರಿ ಮಧ್ಯದಲ್ಲಿ ಭಾರಿ ಅಪಘಾತವುಂಟಾಗಿ ನಗೆ ಸಾಮ್ರಾಟರ ‘ತದ್ರೂಪು’ ಮದ್ಯದ ದೊರೆ ಮಲ್ಯನ ಕಿಂಗ್ ಫಿಶರಿನ ರೆಕ್ಕೆಯ ಮೇಲೆ ಹಾರಿ ಒಳಕ್ಕೆ ತೂರಿಕೊಂಡು ಬಿಟ್ಟಿತು. ಅಲ್ಲಿನ ಗಗನ ಸಖಿಯರ ಸ್ಕರ್ಟಿನ ಜೊತೆಗೆ ಡಾ|| ವಿಜಯ ಮಲ್ಯರ ಟಾನಿಕ್ಕಿನ [...]

Continue reading »