…………………………………….
ಮರಳಿ ಯತ್ನವ ಮಾಡು
ಎನ್ನುವುದು ನಿಮ್ಮ ಸಿದ್ಧಾಂತವಾಗಿದ್ದರೆ
ಸ್ಕೈ ಡೈವಿಂಗ್ ನಿಮಗೆ
ಹೇಳಿ ಮಾಡಿಸಿದ್ದಲ್ಲ!
…………………………………….
(ಇಂಥವೇ ಹಳೆಯವು)
Archive for the ‘ವಾರದ ವಿವೇಕ’ Category
26 Sep
ವಾರದ ವಿವೇಕ 33
31 Aug
ವಾರದ ವಿವೇಕ 32
…………………………………….
ಯಾರನ್ನಾದರೂ ಟೀಕಿಸುವ ಮನಸ್ಸಾದರೆ ನೀವು ಅವರ ಬೂಟುಗಳಲ್ಲಿ ಕಾಲಿಟ್ಟು ಒಂದು ಮೈಲಿ ನಡೆಯಿರಿ. ಇದರ ಲಾಭವೆಂದರೆ ನೀವು ಆತನಿಂದ ಮೈಲು ದೂರ ಇರುತ್ತೀರಿ, ಜತೆಗೆ ಒಂದು ಜೊತೆ ಬೂಟು ಹೊಂದಿರುತ್ತೀರಿ.
…………………………………….
16 Aug
ವಾರದ ವಿವೇಕ 31
…………………………………..
ನೀವು ಬದುಕಿರುವಿರೋ ಸತ್ತಿರುವಿರೋ ಎಂದು ಯಾರೂ ಕೇರ್ ಮಾಡುತ್ತಿಲ್ಲ ಅನ್ನಿಸಿದಾಗ ಕರೆಂಟ್ ಬಿಲ್ ಕಟ್ಟುವುದನ್ನು ಮರೆತು ನೋಡಿ.
…………………………………..
1 Aug
ವಾರದ ವಿವೇಕ 30
……………………………………
ಮದುವೆಯ ನಿರರ್ಥಕ
ಸಂಸಾರ ಬಂಧನ, ಮೋಕ್ಷಕ್ಕೆ
ತಡೆ ಎಂದು ಭಾಷಣ ಕುಟ್ಟುವ ಮೊದಲು
ಎಚ್ಚರ ವಹಿಸಿ: ಸೆಕ್ಷನ್ 377 ವ್ಯಾಖ್ಯಾನ ಬದಲಾಗಿದೆ!
……………………………………
15 Jul
ವಾರದ ವಿವೇಕ 29
……………………………….
ನೀವಂದುಕೊಂಡದ್ದು
ಸಿಗದಿದ್ದಾಗ
ಸಿಕ್ಕಿದ್ದು ಅನುಭವ
ಅಂದುಕೊಳ್ಳುವುದು ಜಾಣತನ.
……………………………….
16 Jun
ವಾರದ ವಿವೇಕ 28
……………………………………………………
ಮುಚ್ಚಿದ ಬಾಯಿ ಹೆಚ್ಚು
ಕಾಲುಗಳನ್ನು ಸಂಪಾದಿಸುವುದಿಲ್ಲ. (ತಿಳಿಯಿತೇ?)
……………………………………………………
1 Jun
ವಾರದ ವಿವೇಕ 27
………………………………………………………
ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ.
ಕದಿಯುವುದಿದ್ದರೆ ಆನೆ ಕದ್ದು ಬಿಡಿ,
ನಿಮ್ಮ ಮನೆಯ ಅಡಿಕೆ ಯಾರೋ ಕದ್ದರು ಎಂದು ಗುಲ್ಲೆಬ್ಬಿಸಿ.
- ನಗೆ ಸಾಮ್ರಾಟ್
………………………………………………………
6 May
ವಾರದ ವಿವೇಕ 26
………………………………
ತಪ್ಪನ್ನಾಡುವವರೆಗೂ ನಿಮ್ಮ ಮಾತನ್ನು ಯಾರೂ ಆಲಿಸುತ್ತಿರುವುದಿಲ್ಲ!
………………………………
4 Mar
ವಾರದ ವಿವೇಕ 25
…………………………………………………………
ಸೆಕ್ಸ್ ಎಂಬುದು ಗಾಳಿ ಇದ್ದ ಹಾಗೆ.
ಎಲ್ಲಿಯವರಗೆ ಅದು ಲಭ್ಯವಿರುತ್ತದೆಯೋ
ಅಲ್ಲಿಯವರೆಗೆ ಅದರ ಪ್ರಾಮುಖ್ಯತೆ
ತಿಳಿಯುವುದಿಲ್ಲ.
-ಯಾರೋ
…………………………………………………………
16 Feb
ವಾರದ ವಿವೇಕ 24
……………………………………………………………………
ಕೆಲವರು ಜ್ಞಾನದ ಕಾರಂಜಿಯಲ್ಲಿ ಮೊಗೆಮೊಗೆದು ನೀರು ಕುಡಿಯುತ್ತಾರೆ ಮತ್ತೆ ಕೆಲವರು ಬಾಯಿ ಮುಕ್ಕಳಿಸಿ ಎದ್ದು ಹೋಗುತ್ತಾರೆ.
-ಅನಾಮಿಕ
……………………………………………………………………
Recent Comments