Archive for the ‘ರಾಜಕೀಯ’ Category

ದೊರೆ ನಗುವುದಕ್ಕೆ ಏನು ಮಾಡಬೇಕು?

(ನಗೆ ನಗಾರಿ ನಗದು ಬ್ಯೂರೋ)
ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ ತ್ಯಾಗಗಳು ಅಪಾರ. ರಾಜ ಪ್ರಭುತ್ವವಿದ್ದಾಗಲೇ ಈ ಸಂಸ್ಕೃತಿಗೆ ಓನಾಮ ಹಾಕಿದವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ. ಡ್ರೈ ಕ್ಲೀನರ್ ಒಬ್ಬನ ಮಾತಿಗೆ ಮಡದಿಗೇ ಡೈವೋರ್ಸ್ ನೀಡುವ ಅತಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯದ ಮಾತೇ? ಈ ನಿರ್ಧಾರಕ್ಕೆ ಯಾವ ವಿಧದಲ್ಲೂ ಕನಿಷ್ಠವಲ್ಲದ ನಿರ್ಧಾರವನ್ನು ಕರ್ನಾಟಕವೆಂದ ರಾಜ್ಯದ ದೊರೆಯು ತೆಗೆದುಕೊಂಡಿದ್ದಾನೆ. ಜನತೆಯ ಆಶೋತ್ತರಗಳಿಗಾಗಿ ಹಿಂದೆ ಯಾರೂ ಮಾಡದ ತ್ಯಾಗವನ್ನು ನಾಡಿನ ಅಧಿಪತಿ ಮಾಡಲು ಮುಂದಾಗಿದ್ದಾನೆ. [...]

Continue reading »

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

 
(ನಗೆ ನಗಾರಿ ಅಂತರಾಷ್ಟ್ರೀಯ ಕ್ಯಾತೆ ಬ್ಯೂರೋ)
ಶಾಲೆಗೆ ಸೇರಿದ ಹುಡುಗನೊಬ್ಬನ ಮಾತು, ಪ್ರಶ್ನೆಗಳಿಗೆ ಆತ ನೀಡುವ ಉತ್ತರಗಳು ಆಕರ್ಷಕವಾಗಿದ್ದರೆ ಅವನ್ನೆಲ್ಲ ಕಂಡು ಆತ ತುಂಬಾ ಬುದ್ಧಿವಂತ ಇರಬೇಕು ಎಂದೆನ್ನಿಸುವುದು ಸಾಮಾನ್ಯ. ಆದರೆ ಹಾಗಂತ ಪರೀಕ್ಷೆ ನಡೆಸುವ ಮೊದಲೇ ಆತನಿಗೆ ಮೊದಲ ರ್ಯಾಂಕ್ ಕೊಟ್ಟುಬಿಡಲು ಸಾಧ್ಯವೇ?
ಅಧಿಕಾರಕ್ಕೆ ಬಂದು ಒಂದು ವರ್ಷವೂ ಆಗಿರದ, ಬರಾಕ್ ಒಬಾಮರಿಗೆ ವಿಶ್ವ ಶಾಂತಿ ನೊಬೆಲ್ ಬಹುಮಾನ ಕೊಟ್ಟಿರುವುದನ್ನು ಕಂಡು ಅನೇಕರು ಹೀಗೆ ಮೂಗೆಳೆಯುತ್ತಿದ್ದಾರೆ. ಯುದ್ಧ ದಾಹಿ ಅಮೇರಿಕಾ ದೇಶದ ಶಬ್ಧಕೋಶದಲ್ಲಿಯೂ ಸಹ ಶಾಂತಿ [...]

Continue reading »

ಸೌಧ ದಿಗ್ಭಂದನದ ತಾಜಾ ವರದಿ!

(ನಗೆ ನಗಾರಿ ದಿಗ್ಭಂದನ ನಿಗ್ರಹ ಬ್ಯೂರೊ)
ಕರ್ನಾಟಕದ ಆಡಳಿತ ಶಕ್ತಿ ಕೇಂದ್ರವೆಂದು ವಿಧಾನ ಸೌಧವನ್ನು ಕರೆಯುವುದು ವಾಡಿಕೆ. ಸರಳ ಬಾಯಿಮಾತಿನಲ್ಲಿ ವಿಧಾನ ಸೌಧವು ‘ಶಕ್ತಿ ಕೇಂದ್ರ’. ದೇವಸ್ಥಾನಗಳು ಭಕ್ತಿ ಕೇಂದ್ರವಾದವು ಅಂದ ಮಾತ್ರಕ್ಕೆ ಅದರಲ್ಲಿರುವವರೆಲ್ಲರೂ ಭಕ್ತರೇ ಎನ್ನಲಾಗುತ್ತದೆಯೇ? ಬ್ಯಾಂಕನ್ನು ವಿತ್ತ ಕೇಂದ್ರ ಎಂದ ತಕ್ಷಣ ಬ್ಯಾಂಕಿಗರೆಲ್ಲ ಲಕ್ಷ್ಮಿಪತಿಗಳು ಎಂದು ಭಾವಿಸುವುದು ಸಾಧುವೇ? ಶಕ್ತಿ ಕೇಂದ್ರದಲ್ಲಿ ಇರುವವರು ಎಂದ ಮಾತ್ರಕ್ಕೆ ರಾಜಕಾರಣಿಗಳೆಲ್ಲರೂ ಶಕ್ತಿವಂತರಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ರಸ್ತೆಯ ಮೇಲೆ ಉರುಳಾಡುವ, ನಾಲ್ಕು ಮಂದಿ ಖಾಕಿಧಾರಿಗಳ ಕೈಲಿ ಎತ್ತಿಸಿಕೊಂಡು ಹೊರಕ್ಕೆ ಹಾಕಿಸಿಕೊಳ್ಳುವ, [...]

Continue reading »

ಅಂದಿಗಿಂತ ಇಂದು ನಾವು ಹೆಚ್ಚು ಸ್ವತಂತ್ರರೇ?

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಇಂದಿಗೆ ನಾವು ಸ್ವತಂತ್ರರಾಗಿ ಸರಿಯಾಗಿ ಅರವತ್ತೆರಡು ವರ್ಷಗಳು ಕಳೆದವು. ನಾವು ಹುಟ್ಟಿಯೇ ಅಷ್ಟು ವರ್ಷಗಳಾಗಿಲ್ಲ ಎಂದು  ಗಾಬರಿಯಾಗುವ ಅಗತ್ಯವಿಲ್ಲ. ನಾವು ಎಂದರೆ ಭಾರತೀಯರು, ಭಾರತ ದೇಶ. ಅದು ಸ್ವತಂತ್ರವಾಗಿ ಅರವತ್ತೆರಡು ವರ್ಷಗಳಾದವು.
‘ನಾವು ಅವರನ್ನು ಸ್ವತಂತ್ರವಾಗಿ ಬಿಟ್ಟು ಕಾಲ್ತೆಗೆಯಬಾರದು. ನಾವು ಹಾಗೆ ಬಿಟ್ಟರೆ ಅವರು ಕಿತ್ತಾಡಿಕೊಂಡು ಸರ್ವನಾಶವಾಗಿ ಹೋಗುತ್ತಾರೆ’ ಎಂದು ಅಮೇರಿಕನ್ನರು ಇರಾಕಿನ ಬಗ್ಗೆ ಹೇಳುತ್ತಿರುವಂತೆಯೇ ಅಂದು ಭಾರತದ ಬಗ್ಗೆ ಮಾತಾಡಿದ್ದ ಚರ್ಚಿಲ್ ಬಹುಶಃ ನಮ್ಮ ಅರವತ್ತೆರಡನೆಯ ಸ್ವಾತಂತ್ರ್ಯ ದಿನಾಚರಣೆಯ ಕೆಂಪುಕೋಟೆಯ ಮೇಲಿನ [...]

Continue reading »

ಅಪ್ಪ ಅಪ್ಪ ಬಿಜೆಪಿಗೆ ಓಟ್ ಹಾಕಪ್ಪ!

ನೊಣ ಹೊಡೆಯುವ ಕೆಲಸವನ್ನು ಶ್ರದ್ಧಾ ಭಕ್ತಿಗಳಿಂದ ಪೂರೈಸಿ ಆಫೀಸಿನ ಬಾಗಿಲು ಮುಚ್ಚಿಕೊಂಡು ಮನೆಗೆ ಬಂದು ಸೋಫಾದ ಮೇಲೆ ಕುಕ್ಕರಿಸಿ ‘ಮುಸ್ಸಂಜೆ ಮನೆಗೆ ಬಂದು ಯಾರ್ಯಾರ ಬಯ್ಯಲಿ’ ಎಂದು ಗುನುಗುತ್ತಾ ಅತ್ತಿತ್ತ ಕಣ್ಣಾಡಿಸುತ್ತಿದ್ದೆವು. ಮಗ ಶಾಲೆಯಿಂದ ಬಂದು ಸೈಕಲನ್ನು ಗೇಟಿನೊಳಗೆ ಇಟ್ಟುಕೊಂಡಿದ್ದ, ಶೂ ಸಾಕ್ಸುಗಳನ್ನು ಅವವುಗಳ ಜಾಗದಲ್ಲಿ ಇರಿಸಿದ್ದ, ಚೀಲವನ್ನು ಸೋಫಾದ ಮೇಲೆ ಎಸೆಯದೆ ನೀಟಾಗಿ ತನ್ನ ರೂಮಿನಲ್ಲಿಟ್ಟಿದ್ದ, ಹಾಳು ಕಾರ್ಟೂನು ನೋಡುತ್ತ ಬಿದ್ದಿರದೆ ಹೋಂ ವರ್ಕ್ ಮಾಡುತ್ತಿದ್ದ. ನಾವು ವಿಪರೀತ ಏಕಾಗ್ರತೆಯಿಂದ, ವಿರೋಧ ಪಕ್ಷದ ನಾಯಕನ ಚಾಲಾಕಿನಿಂದ [...]

Continue reading »

ಈಸ್ವರಪ್ಪನವರ ಮನದಾಳದ ನೋವು

(ನಗೆ ನಗಾರಿ ರಾಜಕೀಯ ಅನುಕಂಪ ಬ್ಯೂರೋ)
ಅಧಿಕಾರ ಮನುಷ್ಯನನ್ನು ಭ್ರಷ್ಟನಾಗಿಸುತ್ತದೆ, ಸರ್ವಾಧಿಕಾರ ಸಂಪೂರ್ಣ ಭ್ರಷ್ಠನಾಗಿಸುತ್ತದೆ ಎಂದ ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್. ಆದರೆ ಅಧಿಕಾರ ಮನುಷ್ಯನನ್ನು ಬುದ್ಧಿ ಭ್ರಷ್ಟನನ್ನಾಗಿಸುತ್ತದೆ, ವಚನ ಭ್ರಷ್ಟನನ್ನಾಗಿಸುತ್ತದೆ ಎನ್ನುವ ಹೊಸ ವಿಚಾರವನ್ನು ಫ್ರಾಯ್ಡ್ ಹಿಂಬಾಲಕರು, ನೀಶೆ ಮುಂಬಾಲಕರು, ಶಾಲಾ ಕಾಲೇಜು ಬಾಲಕರು ಕರ್ನಾಟಕವನ್ನು ನೋಡಿ ತಿಳಿದುಕೊಳ್ಳಬೇಕಿದೆ.
ರಾಜಕಾರಣದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದು ಕ್ಲೀಶೆಯಾಗಿ ಹೋಗಿರುವ ಮಾತು. ಇಂದು ಶತ್ರುವಾದವ ಅನಾಯವಾಸವಾಗಿ ಒಂದು ಆಪರೇಶನ್ ಮಾಡಿಸಿಕೊಂಡು ಬಿಟ್ಟರೆ (ಅದೂ [...]

Continue reading »

ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)
ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು [...]

Continue reading »

ಬೂಟು ಎಸೆದ ವೀರನಿಗೆ ತಕ್ಕ ಸಜೆ!

(ನಗಾರಿ ಅಂತರಾಷ್ಟ್ರೀಯ ಸಮಾಚಾರ ಬ್ಯೂರೊ)
ಅವಧಿ ಮುಗಿಯುವ ಮುನ್ನ ತಾನು ಹಾಳು ಮಾಡಿದ ಇರಾಕಿಗೆ ಪ್ರೀತಿ ಪೂರ್ವಕವಾಗಿ ಗುಡ್ ಬೈ ಹೇಳಲು ಬಂದಿದ್ದ ಬುಶ್ ಮಹಾಶಯನನ್ನು ಏಳು ನಂಬರಿನ ಎರಡು ಬೂಟುಗಳನ್ನು ಎಸೆಯುವುದರ ಮೂಲಕ, ‘ನಾಯಿ’ ಎಂದು ವಿಶ್ ಮಾಡುವುದರ ಮೂಲಕ ಬರಮಾಡಿಕೊಂಡಿದ್ದ ಇರಾಕಿನ ಪತ್ರಕರ್ತ ಜೈದಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷ ಕಾರಾಗೃಹ ಸಜೆ ವಿಧಿಸಿದೆ.ತಾನು ಇರಾಕಿನ ಮುಗ್ಧರನ್ನು ಹತ್ಯೆಗೈದ ಬುಶ್‌ನನ್ನು ಕಂಡಾಗ ಭಾವೋದ್ರೇಕಕ್ಕೊಳಗಾಗಿ ಬೂಟು ಎಸೆದೆ ಎಂದು ತಪ್ಪೊಪ್ಪಿಕೊಂಡರೂ ನ್ಯಾಯಾಲಯ ಆತನಿಗೆ ದಂಡನೆ ನೀಡಿದೆ. [...]

Continue reading »

ಮುಷ್ಕರ ಪ್ರತಿಭಟನೆಗಳ ನಾಡಿನಲ್ಲಿ ಒಂದು ದಿನ!

 
(ನಗೆ ನಗಾರಿ ಮುಷ್ಕರ ವಿರೋಧಿ ಬ್ಯೂರೊ)
ಲಾರಿಗಳ ಮುಷ್ಕರ ಏಳನೆಯ ದಿನ ಪೂರೈಸಿದೆ. ತೈಲ ಕಂಪೆನಿಗಳ ಮುಷ್ಕರ ಮೂರು ದಿನ ನಡೆದಿದೆ. ಸ್ಟೇಟ್ ಬ್ಯಾಂಕ್ ನೌಕರರ ಮುಷ್ಕರವನ್ನು ನಾವು ಕಂಡಿದ್ದೇವೆ. ದಿನಗೂಲಿ ನೌಕರರ ಮುಷ್ಕರ ದಿನಪತ್ರಿಕೆಗಳಲ್ಲಿ ಸರ್ವೇ ಸಾಮಾನ್ಯ ಎಂಬ ಸ್ಥಿತಿ ನಮ್ಮಲ್ಲಿದೆ. ಆಕಾಶದಲ್ಲಿ ಹಾರುವ ವಿಮಾನಗಳ ಪೈಲಟ್‌ಗಳು ಅವನ್ನು ಸುರಕ್ಷಿತವಾಗಿ ಭೂಮಿಯ ಮೇಲಿಳಿಸಿ ಮುಷ್ಕರ ಶುರು ಮಾಡುತ್ತಾರೆ. ವೈದ್ಯರು ಆಸ್ಪತ್ರೆ ಮುಚ್ಚಿ ಮುಷ್ಕರ ಮಾಡುತ್ತಾರೆ. ವೈದ್ಯ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿ ಮುಷ್ಕರ ಮಾಡುತ್ತಾರೆ. ವೈದ್ಯ ವಿದ್ಯಾರ್ಥಿಗಳ ವಿರುದ್ಧ [...]

Continue reading »

ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

– ನಗೆ ಸಾಮ್ರಾಟ್

ತುಂಬಾ ದಿನಗಳಿಂದ ನಮ್ಮ ಕನ್ನಡದ ಪತ್ರಿಕಗಳನ್ನು, ಸುದ್ದಿ ವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದರೂ ಒಂದೇ ಒಂದು ಕ್ಷಣಕ್ಕಾದರೂ ಬೆಳಕಿನ ಕಿರಣಗಳು ಮೂಡಬಹುದೇನೋ ಎಂದು!

ಇಡೀ ದೇಶವೇ ಸಮೂಹ ಸನ್ನಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು,ನಮ್ಮ ಸುತ್ತ ಮುತ್ತಲಿನ ಜನರೆಲ್ಲರೂ ಯಾವುದೋ ಹಿಪ್ನಾಟಿಸಂಗೆ ಒಳಗಾದವರಂತೆ ವರ್ತಿಸುತ್ತಿರುವಾಗ ಈ ಭೂಮಿಯ ಮೇಲೆ ಆ ದೇವರು ಸ್ಯಾಂಪಲ್ಲಿಗಾಗಿಯಾದರೂ ಇರಲಿ ಎಂದು ಸೃಷ್ಟಿಸಿದ ವಿವೇಕಿಗಳು ಎಲ್ಲಿಹೋದರು ಎಂದು ಹುಡುಕುತ್ತಿದ್ದೆವು. ಸಮೂಹ [...]

Continue reading »