ನಗೆ ನಗಾರಿ ಡಾಟ್ ಕಾಮ್ ವಾರ್ಷಿಕೋತ್ಸವ ವಿಶೇಷಾಂಕಕ್ಕಾಗಿ ಖ್ಯಾತ ಪತ್ರಕರ್ತ, ಪತ್ರಿಕೋದ್ಯಮಿ, ರೇಡಿಯೋ ಜಾಕಿ, ಟಿವಿ ಆಂಕರ್, ನಟ, ನಿರ್ದೇಶಕ, ನಿರ್ಮಾಪಕ, ತಮ್ಮ ಸಿನೆಮಾದ ಏಕೈಕ ವೀಕ್ಷಕರಾದ ಗವಿ ಬಿಳಿಗೆರೆ ಬರೆದ ಲೇಖನವಿದು.
ನಾನು ಬೆಂಗಳೂರನ್ನು ಬಿಟ್ಟು ಹೋಗುವುದು ಬಂಗಾರಪ್ಪ ಒಂದು ಪಕ್ಷ ಬಿಟ್ಟು ಹೋಗುವಷ್ಟೇ ಸಾಮಾನ್ಯ. ಪತ್ರಿಕೆಯ ಕೆಲಸವನ್ನೆಲ್ಲಾ ಮಾಡಿ ಮುಗಿಸಿ ದಣಿದ ಬೆರಳುಗಳನ್ನು ಲೈಟ್ ಆಗಿ ಮಸಾಜ್ ಮಾಡುವುದಕ್ಕೆ ರವೀಶನಿಗೆ ಬಿಟ್ಟುಬಿಡುತ್ತೇನೆ.
ರವೀಶ ನನಗೆ ಬೆನ್ನಲ್ಲಿ ಹುಟ್ಟಿದ ತಮ್ಮನಂಥ ಹುಡುಗ. ವರದಿಯೊಂದಕ್ಕೆ ಸಂಬಂಧಿಸಿದ ಇನ್ಪರ್ಮೇಶನ್ ಪಡೆಯುವುದಕ್ಕಾಗಿ [...]
Archive for the ‘ನಗಾರಿ ವಾರ್ಷಿಕೋತ್ಸವ ವಿಶೇಷ’ Category
21 Aug
ಗವಿ ಬಿಳಿಗೆರೆ ಲೇಖನ: ಸಿಗರೇಟಿನ ಮೊನೆಗೆ ಬೆಂಕಿ ತಾಗಿಸುವ ಹೊತ್ತಲ್ಲಿ ಕಂಡ ಮುಖದ ಕುರಿತು…
1 Apr
ನಗೆ ನಗಾರಿ ಮಾಸಪತ್ರಿಕೆ ಮಾರುಕಟೆಯಲ್ಲಿ!
ನಗೆ ನಗಾರಿಯ ಸಾಮ್ರಾಜ್ಯದ ಸಮಸ್ತ ಪ್ರಜೆಗಳಿಗೂ ಸಂತಸದ ಸುದ್ದಿ.
ನಗೆ ನಗಾರಿ ಡಾಟ್ ಕಾಮ್ ತನ್ನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲೇ ಈ ಸವಿ ಸುದ್ದಿಯನ್ನು ಹಂಚಿಕೊಳ್ಳಬೇಕಿತ್ತು. ಆದರೆ ಸಿದ್ಧತೆಯ ಕೊರತೆಯಿಂದ ಪ್ರಕಟಿಸಲು ಹಿಂದುಮುಂದು ನೋಡಿದೆವು. ಆದರೀಗ ಬಹುತೇಕ ನಿಶ್ಚಿತವಾಗಿದೆ. ‘ನಗೆ ನಗಾರಿ’ ಮಾಸಪತ್ರಿಕೆ ಇಂದಿನಿಂದ ನಿಮಗೆ ರಾಜ್ಯದ ಎಲ್ಲಾ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ.
ನಗೆ ನಗಾರಿಯ ಬ್ಲಾಗಿನಲ್ಲಿನ ವೈವಿಧ್ಯಮಯ ಹಾಸ್ಯದ ಸರಕನ್ನು ಆನಂದಿಸಿದ ಪ್ರತಿಯೊಬ್ಬರಿಗೂ ಈ ಪತ್ರಿಕೆಯ ನಮ್ಮ ಪ್ರಯತ್ನ ಆವಶ್ಯಕವಾಗಿ ಸಂತೋಷ ನೀಡುತ್ತದೆ [...]
6 Feb
ನಗಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಸುರಿಮಳೆ!
ನಗೆ ನಗಾರಿ ಡಾಟ್ ಕಾಮ್‌ನ ವಾರ್ಷಿಕೋತ್ಸವ ಸಮಾರಂಭದ ಬಗ್ಗೆ ಸವಿರವಾದ ವರದಿಯನ್ನು ನೀಡಬೇಕಿದ್ದ ತೊಣಚಪ್ಪ ಹಾಗೂ ಕುಚೇಲರು ಪಾರ್ಟಿಯಲ್ಲಿನ ಪ್ರಸಾದ, ತೀರ್ಥದಿಂದ ‘ಸಮಾಧಿ’ ಸ್ಥಿತಿಯನ್ನು ತಲುಪುವುದರಿಂದ ಸಾಮ್ರಾಟರಾದ ನಾವೇ ಕುದುರೆಗಳ ಲಗಾಮು ಹಿಡಿಯಬೇಕಿದೆ. ಹೀಗಾಗಿ ವರದಿ ಕೊಂಚ ತಡವಾಗಲಿದೆ. ಆದರೆ ನಮ್ಮಹಾಗೂ ನಮ್ಮ ಪತ್ರಿಕೆಯ ಹುಟ್ಟು ಹಬ್ಬಕ್ಕೆ ನಮ್ಮ ಭಕ್ತ ವೃಂದವು ಪ್ರತಿಕ್ರಿಯಿಸಿರುವ ರೀತಿಯನ್ನು ನೆನೆಯದಿದ್ದರೆ ನಮಗೆ ಮನಃಶಾಂತಿ ಲಭ್ಯವಾಗುವುದಿಲ್ಲ.
ಗಣೇಶ್.ಕೆ
mareyabahudemba bhayadinda eegale abhinandisuttiddene.
aadare neevu nageyanna nandisabedi anta kelikolluttene.
ಪ್ರಸಾದ್
ನೂರ್ಕಾಲ ಬೆಳಗಲಿ ನಗೆಯ ದೀವಿಗೆ
ಅನುಗಾಲವೂ ಹರಿಯಲಿ [...]
29 Jan
ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…
ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ [...]
28 Jan
ಆಂಡ್ ದಿ ವಿನ್ನರ್ ಈಸ್…
ನಗೆ ನಗಾರಿ ಡಾಟ್ ಕಾಮ್‌ನ ಮೊದಲನೇ ವರ್ಷದ ಹುಟ್ಟುಹಬ್ಬ ಭಾರಿ ಸಂಭ್ರಮ, ಸಡಗರದಿಂದ ನಡೆಯಿತು. ಕಾರ್ಯಕ್ರಮಕ್ಕೆ ಹಾಜರಾಗಿದ್ದ ಎಲ್ಲರೂ ಸಾಮ್ರಾಟರ ಪ್ರತಿಭೆಯನ್ನು ಹಾಡಿ ಹೊಗಳಿ ಅವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದ ನಂತರ ಆಯೋಜಿಸಲಾಗಿದ್ದ ಭೂರಿ ಭೋಜನವನ್ನು ಸಾಂಗವಾಗಿ ಪೂರೈಸಿದ ಗಣ್ಯರು ಅಡುಗೆ ಭಟ್ಟನಾಗಿದ್ದ ಕುಚೇಲನನ್ನೂ ಹೊಗಳಿದ್ದು ಸಾಮ್ರಾಟರನ್ನು ಕೆರಳಿಸಿತು. ಕಾರ್ಯಕ್ರಮದ ಬಗ್ಗೆ ನಮ್ಮ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪನವರು ಸವಿವರವಾದ ವರದಿಯನ್ನು ನೀಡಲಿದ್ದಾರೆ. ನಾವು ಈಗ ನಮ್ಮ ಸ್ಪರ್ಧೆಗಳ ವಿಜೇತರನ್ನು ಘೋಷಿಸಲಿದ್ದೇವೆ…
ಮೊದಲ ಬಹುಮಾನ
[...]
24 Jan
ಮೂರು ದಿನ ರಜೆ!
ನಗೆ ನಗಾರಿಯ ಏಕ ಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಕಳೆದ ವರ್ಷ ಜನವರಿ ಇಪ್ಪತ್ನಾಲ್ಕರಿಂದ ಮುನ್ನೂರ ಅರವತ್ತೈದು ದಿನವೂ ಅವಿರತವಾಗಿ ದುಡಿದಿದ್ದಾರೆ. ತಮ್ಮ ಸುಖ, ದುಃಖಗಳನ್ನು, ಸಂಕಟಗಳನ್ನು ಮರೆತು ನಗೆ ನಗಾರಿಯೆಂಬ ಯಾಗದಲ್ಲಿ ತಮ್ಮ ಸಮಯವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ನಗದವರನ್ನು ನಗಿಸುವ ಯತ್ನದಲ್ಲಿ ದುಡಿದು ದಣಿದಿದ್ದಾರೆ. ಬರುವ ಇಪ್ಪತ್ತೇಳಕ್ಕೆ ನಗೆ ನಗಾರಿ ಡಾಟ್ ಕಾಮಿನ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಲಿದೆ. ಕಾರ್ಯಕ್ರಮ ನಡೆಯುವ ಜಾಗ, ಸಮಯ, ಅದಕ್ಕೆ ಆಹ್ವಾನಿತರಾದವರ ವಿವರ, ಕಾರ್ಯಕ್ರಮದ ರೂಪು ರೇಷೆಗಳೆಲ್ಲ ಗುಪ್ತವಾಗಿಡಲು [...]
22 Jan
ನಗೆ ನಗಾರಿ ಕಛೇರಿಗೆ ಸಿಬಿಐ ದಾಳಿ!
ಅಗ್ನಿ ಪರೀಕ್ಷೆಯಲ್ಲಿ ಸೀತಾ ಮಾತೆ ಡಿಸ್ಟಿಂಕ್ಷನ್ ಪಡೆದು ಪಾಸಾದ ಹಾಗೆಯೇ ಸಾಮ್ರಾಟರು ಸಿಬಿಐ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಬಹುಮಾನವನ್ನು ಗಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮೆಲ್ಲಾ ವಿರೋಧಿಗಳಿಗೆ ನಾವು ಒಂದು ವಿಷಯ ಸ್ಪಷ್ಟ ಪಡಿಸಲು ಇಚ್ಚಿಸುತ್ತೇವೆ: ನಮ್ಮಲ್ಲಿಲ್ಲದ ಅಪ್ರಮಾಣಿಕತೆಯನ್ನು, ವಂಚನೆ ಬುದ್ಧಿಯನ್ನು ಇದೆ ಸಾಬೀತು ಮಾಡುವುದಕ್ಕೆ ಸ್ವತಃ ಆ ರಾಮಲಿಂಗ ರಾಜುವಿಗೂ ಸಾಧ್ಯವಿಲ್ಲ!
20 Jan
‘ಜೋಕು’ಮಾರ ಸ್ಪರ್ಧೆ
ನಗೆ ನಗಾರಿ ಡಾಟ್ ಕಾಮ್ ಎಂಬ ವಿಶ್ವದ ನಂಬರ್ ಒನ್ ಕನ್ನಡ ಹಾಸ್ಯ ಬ್ಲಾಗಿನ ಮೊದಲ ವಾರ್ಷಿಕೋತ್ಸದ ಅಂಗವಾಗಿ ನಾವು ಅನೇಕ ಸ್ಪರ್ಧೆಗಳನ್ನು, ವಿಶೇಷಗಳನ್ನು ಹಮ್ಮಿಕೊಂಡಿರುವುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಈ ಪ್ರಕ್ರಿಯೆಯ ಮೊದಲ ಭಾಗವಾಗಿ ನಾವು ಶುರು ಮಾಡಿದ ವಿತ್ರ ಗುಪ್ತ ಸ್ಪರ್ಧೆಯಲ್ಲಿ ನಾವು ಎಣಿಸಿದ್ದಕ್ಕಿಂತ ಸರಿಯಾಗಿ ನಾಲ್ಕೂವರೆ ಪಟ್ಟು ಸ್ಪರ್ಧಿಗಳು ಭಾಗವಹಿಸಿ ನಮಗೆ ಅಚ್ಚರಿ ಮೂಡಿಸಿದ್ದಾರೆ. ಹಾಗೆಯೇ ಈ ಸ್ಪರ್ಧೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಭಾಗವಹಿಸಿ ಸಾಮ್ರಾಟರಿಗೆ ಹೃದಯಾಘಾತ ಉಂಟು ಮಾಡಬೇಕಾಗಿ ವಿನಂತಿ!
‘ಜೋಕು’ಮಾರ ಸ್ಪರ್ಧೆ
ದಿನವೊಂದರಲ್ಲಿ [...]
18 Jan
ಬ್ಲಾಗ್ ಬೀಟ್ 16
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
……………………………………
ವಾರೆ ಕೋರೆ
ಫೆಬ್ರವರಿಯಿಂದ ಪ್ರಕಾಶ್ ಶೆಟ್ಟಿಯವರು ತಮ್ಮ ಪಂಚನ್ನೆಲ್ಲಾ ಸೇರಿಸಿ ವಾರೆ ಕೋರೆಯ ಹೆಸರಿನಲ್ಲಿ ನಾಡಿನ ಜನತೆಗೆ ದಯಪಾಲಿಸುವ ಭರವಸೆಯಿತ್ತಿದ್ದಾರೆ. ಸಕಲ ಹಾಸ್ಯಾಭಿಮಾನಿಗಳು ಹಾಗೂ ನಗಲೇ ಬಾರದು ಎಂದು ಹೊಸ ವರ್ಷದ ರೆಸೊಲ್ಯೂಶನ್ ಮಾಡಿಕೊಂದಿರುವವರು ವಾರೆ ಕೋರೆಯನ್ನು ಎದುರು ನೋಡುತ್ತಿರುವುದು ತಿಳಿಯದ ಸಂಗತಿಯೇನಲ್ಲ.
ಹೊಸ ವರ್ಷದ ಶುಭಾಶಯಗಳನ್ನು ನಮ್ಮಷ್ಟು ಪ್ಲೇನ್ [...]
15 Jan
ಹೀಗೊಂದು ಸ್ಪಷ್ಟನೆ!
‘ಚಿತ್ರ’ಗುಪ್ತ ಸ್ಪರ್ಧೆಯನ್ನು ಆಯೋಜಿಸಿ ಒಂದೂ ದಿನವಾಗಿಲ್ಲ ಆಗಲೇ ಪ್ರತಿಕ್ರಿಯೆಗಳ ಸುರಿ ಮಳೆಯಾಗತೊಡಗಿದೆ. ನಗೆ ನಗಾರಿಯ ಹಿತಾಕಾಂಕ್ಷಿಗಳು, ದ್ವೇಷಿಗಳು, ಅನ್ವೇಷಿಗಳು ಭಾರಿ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಆದರೆ ಒಬ್ಬರು ಸ್ಪರ್ಧೆಯ ಬಹುಮಾನದ ಬಗ್ಗೆ ಸ್ಪಷ್ಟನೆ ಕೋರಿ ನಮಗೆ ಪತ್ರಿಸಿದ್ದಾರೆ:
“ಸಾಮ್ರಾಟರಿಗೆ ಅಡ್ಡಬಿದ್ದೆ,
ಸಾಮ್ರಾಟರೇ ನಿಮ್ಮ ಚಿತ್ರಗುಪ್ತ ಸ್ಪರ್ದೆ ನೋಡಿದೆ, ಅಲ್ಲಿ ಗೆದ್ದವರಿಗೆ, ಸೋತವರಿಗೆಬಹುಮಾನವೇನು ಅಂತ ತಿಳಿಸೇ ಇಲ್ಲ ನೀವು, ಅದಕ್ಕೆ ಈ ಪರ್ಸನಲ್ ಮೇಲು.
ಭಾಗವಹಿಸಿದರೇ ನಮಗೇನು ಲಾಭ?
ಅಟ್ರಾಕ್ಟಿಂಗ್ ಬಹುಮಾನಗಳಿದ್ದರೆ ನಮಗೂ ಹುರುಪು ಹೆಚ್ಚುತ್ತದೆ ನೋಡಿ. ಹಾಗೆಲ್ಲಜ್ಞಾನವನ್ನು ಸುಮ್ಮ ಸುಮ್ಮನೆ ಖರ್ಚು ಮಾಡಲು ಬರುವುದಿಲ್ಲ…” [...]
Recent Comments