Archive for the ‘ನಗಾರಿ ರೆಕಮಂಡೇಶನ್’ Category

ನಗಾರಿ ರೆಕಮಂಡೇಶನ್ 25

ಒಂದು ಕಾಲದ ಅಮೇರಿಕಾದ ಅತಿ ಶ್ರೀಮಂತ ಸ್ಟ್ಯಾಂಡ್ ಅಪ್ ಕಮಿಡಿಯನ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಜೆರ್ರಿ ಸೈನ್ ಫೆಲ್ಡ್‌ನದ್ದು ದಿನನಿತ್ಯದ ಘಟನೆಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ಹುಡುಕಿ ಅವುಗಳಲ್ಲಿ ಅಡಗಿರುವ ಅಸಂಬದ್ಧತೆ, ವಕ್ರತೆ, ವ್ಯಂಗ್ಯವನ್ನು ಹೊರತೆಗೆದು ನಗಿಸುವ ವಿಶಿಷ್ಟ ಹಾಸ್ಯ.
ಅಮೇರಿಕನ್ನರ ದೈನಂದಿನ ಬದುಕಿನಲ್ಲಿ ಅತಿ ಯಾಂತ್ರಿಕ ಭಾಗವಾದ ವಾಶಿಂಗ್ ಮಶೀನಿನೊಂದಿಗೆ ಕಳೆಯುವ ಸಮಯವನ್ನು ಕೂಡ ಹಾಸ್ಯದ ವಸ್ತುವನ್ನಾಗಿಸಿಕೊಳ್ಳಬಲ್ಲ. “ವಾಶಿಂಗ್ ಮಶೀನು ಬಟ್ಟೆಗಳ ಪಾಲಿಗೆ ನೈಟ್ ಪಾರ್ಟಿ ಇದ್ದ ಹಾಗೆ. ಬಟ್ಟೆಗಳಲ್ಲೆ ಒಟ್ಟಿಗೆ ಸೇರುವುದು ಅಲ್ಲಿ ಮಾತ್ರ. [...]

Continue reading »

ನಗಾರಿ ರೆಕಮಂಡೇಶನ್ 24

ಅಂತರ್ಜಾಲವೆಂಬ ಸಾಗರದಲ್ಲಿ ಈಜಿ ಅಪರೂಪದ ದ್ವೀಪಗಳನ್ನು ತಲುಪಿಕೊಳ್ಳುವುದು ಪ್ರಯಾಸದ ಕೆಲಸ. ಒಮ್ಮೆ ಹಾಗೆ ಕಂಡ ನಗೆ ದ್ವೀಪಗಳನ್ನು ಸಹಮನಸ್ಕರಿಗೆ ಪರಿಚಯಿಸುವ ಘನೋದ್ದೇಶದಿಂದ ಸಾಮ್ರಾಟರು ತೆರೆದಿರುವ ಅಂಕಣವಿದು.

ಐವತ್ಮೂರು ವರ್ಷದ ಅಮೇರಿಕಾದ ಕಮಿಡಿಯನ್ ಬಿಲ್ ಮಹರ್ ಒಳ್ಳೆಯ ರಾಜಕೀಯ ವಿಶ್ಲೇಷಕನೂ ಹೌದು. ಇತ್ತೀಚೆಗೆ ಎಚ್.ಬಿ.ಒ ಚಾನೆಲ್ಲಿಗಾಗಿ ರಿಯಲ್ ಟೈಮ್ ಎನ್ನುವ ಟಿವಿ ಕಾರ್ಯಕ್ರಮ ಮಾಡಿಕೊಡುತ್ತಿರುವ ಮಹರ್, ಅದರಲ್ಲಿ ಸಮಕಾಲೀನ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ಹಾಗೂ ವಿಡಂಬನೆ ಮಾಡುತ್ತಾನೆ.
೧೯೫೬ರ ಜನವರಿ ಇಪ್ಪತ್ತರಂದು ಅಮೇರಿಕಾದಲ್ಲಿ ಜನಿಸಿದ ಈತ [...]

Continue reading »

ನಗಾರಿ ರೆಕಮಂಡೇಶನ್ 23

ಅವನದೆಂತಹ ಶ್ರೇಷ್ಠ ವಿಜ್ಞಾನಿಯೇ ಆಗಲಿ, ಆತನಿಂದ ಕಾಲ್ಪನಿಕ ವ್ಯಕ್ತಿಯನ್ನು, ವಸ್ತುವನ್ನು ಇಲ್ಲ ಎಂದು ಸಾಬೀತು ಮಾಡಲಿಕ್ಕೆ ಸಾಧ್ಯವಿಲ್ಲ ಎನ್ನುತ್ತದೆ ತರ್ಕ.
ಇದನ್ನು ವಿವರಿಸಲು ಖ್ಯಾತ ದಾರ್ಶನಿಕ ಬರ್ಟ್ರಂಡ್ ರಸೆಲ್ ಭೂಮಿಯ ಸುತ್ತಲಿನ ಕಕ್ಷೆಯಲ್ಲಿ ಟೀ ಪಾಟ್ ಒಂದು ಸುತ್ತುತ್ತಿದೆ ಎಂದ. ಅದನ್ನು ಅಲ್ಲಗಳೆಯಲು ಸಾಧವೇ ಇರಲಿಲ್ಲ. ಆದರೆ ಮನುಷ್ಯ ಅಂತರಿಕ್ಷಕ್ಕೆ ಜಿಗಿಯುವಲ್ಲಿ ಸಫಲನಾಗಿ, ಭೂಕಕ್ಷೆಯಲ್ಲಿ ಟೀ ಪಾಟ್ ಅಷ್ಟೇ ಏಕೆ ದೊಡ್ಡ ಉಪಗ್ರಹವನ್ನೇ ಇಡಬಲ್ಲವನಾದಾಗ ರಸೆಲ್ ಮಾತನ್ನು ಸುಳ್ಳು ಎಂದು ಸಾಬೀತು ಮಾಡಲು ಅವಕಾಶವಾಯಿತು.
ಆದರೆ ರಸೆಲ್ [...]

Continue reading »

ನಗಾರಿ ರೆಕಮಂಡೇಶನ್ 22

ವಿಲಿಯಂ ಹೆನ್ರಿ ಬಿಲ್ ಕಾಸ್ಬಿ ಅಮೇರಿಕಾದ ಖ್ಯಾತ ನಗೆಗಾರ, ನಟ, ಲೇಖಕ, ಟಿವಿ ನಿರ್ಮಾಪಕ, ಸಂಗೀತಗಾರ ಹಾಗೂ ಹೋರಾಟಗಾರ. ಅಮೇರಿಕಾ ತನ್ನ  ವರ್ಣನೀತಿಯನ್ನು ಬದಲಾಯಿಸಿಕೊಂಡು ಸರ್ವರಿಗೂ ಸಮಬಾಳೆಂಬ ತತ್ವವನ್ನು ಜಾರಿಗೆ ತಂದಾಗ ತಮ್ಮ ಕನಸುಗಳನ್ನು ನನಸಾಗಿಸಿಕೊಂಡ ಅನೇಕ ಆಫ್ರಿಕನ್ ಅಮೇರಿಕನ್ ಕಲಾವಿದರಲ್ಲಿ ಕಾಸ್ಬಿ ಒಬ್ಬ.
ತನ್ನ ವೃತ್ತಿ ಜೀವನವನ್ನು ಸ್ಟ್ಯಾಂಡ್ ಅಪ್ ಕಾಮಿಡಿಯಿಂದ ಶುರು ಮಾಡಿದ ಕಾಸ್ಬಿಗೆ ಅತಿ ಹೆಚ್ಚಿನ ಪ್ರಸಿದ್ಧಿ ಸಿಕ್ಕಿದ್ದು ಜೇಮ್ಸ್ ಬಾಂಡ್ ಸಿನೆಮಾಗಳನ್ನು ಹೋಲುವ ‘ಐ ಸ್ಪೈ’ ಎಂಬ ಟಿವಿ ಶೋ ನಲ್ಲಿನ ಪಾತ್ರದಿಂದ.
ಮುಂದೆ [...]

Continue reading »

ನಗಾರಿ ರೆಕಮಂಡೇಶನ್ – 21

 
ಅಂತರ್ಜಾಲವೆಂಬ ಮಾಹಿತಿಯ ಆಗರದಲ್ಲಿ ಅಲೆದಾಡುವ ನಮಗೆ ಕಂಡ ನಗೆ ಬುಗ್ಗೆಗಳನ್ನು ನಮ್ಮ ಸಾಮ್ರಾಜ್ಯದ ವಿನಮ್ರ ಪ್ರಜೆಗಳೊಂದಿಗೆ ಹಂಚಿಕೊಳ್ಳುವ ಅಂಕಣವಿದು. ನೀವು ಕಂಡ ನಗೆಯುಕ್ಕಿಸುವ ಸಂಗತಿಗಳನ್ನು (ಅವು ವೆಬ್ ಸೈಟ್ ಆಗಿರಬಹುದು, ಯು ಟ್ಯೂಬಿನ ವಿಡಿಯೋಗಳಾಗಿರಬಹುದು) ಹಂಚಿಕೊಳ್ಳಲು ಇಲ್ಲೊಂದು ಕಮೆಂಟು ಹಾಕಿ ಸಾಕು.
ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲದೆ ಹಾಯ್ ಬೆಂಗಳೂರು, ಕಸ್ತೂರಿ, ಸುದ್ದಿ ಸಂಗಾತಿಗಳಲ್ಲಿ ಹಾಸ್ಯ ಅಂಕಣಗಳನ್ನು ನಿರ್ವಹಿಸುತ್ತಿದ್ದ ಎಚ್. ಆನಂದರಾಮ ಶಾಸ್ತ್ರಿಯವರ  ಬ್ಲಾಗ್ ಅಕೌಂಟು ‘ಸಂಪದ’ದಲ್ಲಿದೆ.
ಹಾಸ್ಯದ ಬಗ್ಗೆ ಶಾಸ್ತ್ರಿಯವರು ಬರೆದ  ಸೊಗಸಾದ [...]

Continue reading »

ನಗಾರಿ ರೆಕಮಂಡೇಶನ್ 20

ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್!
ಹ್ಹ! ನಿಲ್ಲಿ ನಾವು ಆತನ ಹೆಸರು, ಆತನ ಪೋಷಾಕು, ಆತನ ವಿಗ್ರಹ ಬಳಸಿ ಯಾವುದೇ ವಿವಾದ ಪಡೆಯುವ ಹುನ್ನಾರ ನಡೆಸುತ್ತಿಲ್ಲ. ಆ ರೀತಿಯ ವಿವಾದ ಸೃಷ್ಟಿಸಿ ಈಗಾಗಲೇ ನಿರ್ವಹಿಸಲಾಗದಷ್ಟು ಬೆಳೆದು ನಿಂತಿರುವ ನಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನೂ ಹೊಂದಿಲ್ಲ.
ಕರ್ನಾಟಕದಲ್ಲಿ ಹುಟ್ಟಿ ರಾಜ್ ಕುಮಾರ್ ಹೆಸರು ಕೇಳಿಲ್ಲ, ಭಾರತದಲ್ಲಿ ಹುಟ್ಟಿ ಗಾಂಧಿ ತಾತ ಗೊತ್ತಿಲ್ಲ ಎನ್ನುವವರನ್ನು ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ಜಾಗತಿಕ ‘ನಗೆ ಸಾಮ್ರಾಟ’ಚಾಪ್ಲಿನ್‌ನ ಬಗ್ಗೆ ಕೇಳದವರು ನಮಗೆ ಸಿಕ್ಕುವುದಿಲ್ಲ. [...]

Continue reading »

ನಗಾರಿ ರೆಕಮಂಡೇಶನ್ಸ್ 19 – ಟೂನಂಗಡಿ

ಹೌದು, ಇವು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….

ರೇಖೆಗಳ ಮೂಲಕ ಮಾತನಾಡುವ ಕಾರ್ಟೂನಿಸ್ಟುಗಳ ಖದರೇ ಬೇರೆ. ಒಂದೇ ಕ್ಷಣದಲ್ಲಿ ಓದುಗನ ಗಮನವನ್ನು ಸೆಳೆದು ಹೇಳಬೇಕಾದುದನ್ನೆಲ್ಲಾ ಹೇಳಿ ಮುಗಿಸಿಬಿಡುವ ಕಾರ್ಟೂ‘ನಿಷ್ಟ’ರ ಕೌಶಲ ನಿಜಕ್ಕೂ ಅದ್ಭುತ. ದಿನಪತ್ರಿಕೆಯೊಂದರಲ್ಲಿ ಸಂಪಾದಕ ಕೂಡ ತನ್ನ ಕೊರೆತ ಶುರುಹಚ್ಚಲು ಓದುಗನ ಅನುಮತಿ ಪಡೆಯಲು ಕಾದು ಮಧ್ಯದ ಪುಟದಲ್ಲಿ ವಿರಮಿರಿಸಬೇಕು, ಖ್ಯಾತ, ಪ್ರಖ್ಯಾತ ಅಂಕಣಕಾರರೂ ಕ್ಯೂನಲ್ಲಿ [...]

Continue reading »

ನಗಾರಿ ರೆಕಮಂಡೇಶನ್ 18 – have a chuckle

ಹೌದು, ಇವು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
…………………………………….

 
‘ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಿನ್ನ ಮನಸ್ಸನ್ನು ತೆರೆದು ಸ್ವೀಕರಿಸು’ ಎಂದಿದ್ದಾರೆ ನಮ್ಮ ಹಿರಿಯರು. ಹಾಗೆಯೇ ಖುಶಿಯಾಗಿರುವುದಕ್ಕೆ, ನಗುನಗುತ್ತಿರುವುದಕ್ಕೆ ಅವಕಾಶ ಎಲ್ಲಿಂದ ಸಿಕ್ಕರೂ ನಾವದನ್ನು ಮುಕ್ತವಾಗಿ ಸ್ವಾಗತಿಸಬೇಕು. ದಿನ ಪತ್ರಿಕೆಗಳಲ್ಲಿ, ಮ್ಯಾಗಝೀನುಗಳಲ್ಲಿ, ಎಸೆಮ್ಮೆಸ್ಸುಗಳಲ್ಲಿ ತಿರುಗಿ ತಿರುಗಿ ದಣಿಸು ಬಸವಳಿದ ಜೋಕುಗಳಿಗೆ ಸ್ವಲ್ಪ ಕಾಲ ರೆಸ್ಟ್ ಕೊಟ್ಟು ಒಂದಷ್ಟು ಹೊಸ [...]

Continue reading »

ನಗಾರಿ ರೆಕಮಂಡೇಶನ್ಸ್ 17

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
……………………………………

ಟಿವಿ ಶೋಗಳು ಹಾಗೂ ಶೋ ಆಂಕರ್‌ಗಳು ಅಮೇರಿಕಾದ ಟಿವಿ ಜಗತ್ತಿನಲ್ಲಿ ಸ್ಥಾಪಿಸಿರುವ ಸ್ಥಾನವು ಬಹಳ ಪ್ರಮುಖವಾದದ್ದು. ಒಬ್ಬೊಬ್ಬ ಟಿವಿ ಆಂಕರ್ ಪ್ರಸಿದ್ಧಿಯಲ್ಲಿ ಸಹ ಹಾಲಿವುಡ್ ಹಿರೋನ ಎತ್ತರ ಏರಿರುವುದು, ಅವರೂ ಸಹ ಸೆಲೆಬ್ರಿಟಿಗಳಾಗಿರುವುದು ಕಂಡು ಬರುತ್ತದೆ. ಭಾರತದ ಟಿವಿ ಚಾನೆಲ್ಲುಗಳಲ್ಲೂ ಸಹ ಇಂತಹ ಕೆಲವು ಉದಾಹರಣೆಗಳಿವೆಯಾದರೂ ಆಸಕ್ತರು [...]

Continue reading »

ನಗೆ ನಗಾರಿ ರೆಕಮಂಡೇಶನ್ 16

ರಾಜಕೀಯ ವಿಡಂಬನೆ ಎನ್ನುವುದು ಮಾಧ್ಯಮ ರಂಗದ ಮೊನಚಾದ ಅಸ್ತ್ರ. ನಾಡನ್ನು ಆಳುವವರನ್ನು ಚುಚ್ಚುವ ಸೂಕ್ತವಾದ ಸೂಜಿ. ತಪ್ಪು ಮಾಡಿದವರನ್ನು ಗೇಲಿ colbertಮಾಡುವುದು, ಅವರ ಅಪರಾಧಕ್ಕಾಗಿ ಬೆಲೆ ತೆರೆವಂತೆ ಮಾಡುವುದು ಸಹ ಅತ್ಯಂತ ಜವಾಬ್ದಾರಿಯುತ ಪತ್ರಿಕೋದ್ಯಮವೇ. ಕನ್ನಡದ ಪತ್ರಿಕೆಗಳಲ್ಲಿ ರಾಜಕೀಯ ವಿಡಂಬನೆಗೆ ಕೊರತೆಯಿಲ್ಲ. ಪ್ರತಿದಿನ ತಪ್ಪದೆ ಪ್ರಕಟವಾಗುವ ವ್ಯಂಗ್ಯಚಿತ್ರಗಳು ಆಳುವವರನ್ನು, ಅವರ ನೀತಿಗಳನ್ನು, ವರ್ತನೆಗಳನ್ನು ಲೇವಡಿ ಮಾಡುವುದನ್ನು ನಾವು ಕಾಣುತ್ತೇವೆ. ಟೈಮ್ಸಾಫಿಂಡಿಯಾದ ಟ್ರೇಡ್ ಮಾರ್ಕ್ ಆದ ಆರ್.ಕೆ.ಲಕ್ಷ್ಮಣ್ ಕಾರ್ಟೂನುಗಳಿಂದ ಹಿಡಿದು ಪ್ರಜಾವಾಣಿಯ ಮಹಮ್ಮದ್‌ರ ಕಾರ್ಟೂನುಗಳವರೆಗೆ ನಮ್ಮ ನಾಡಿನ ರಾಜಕೀಯವನ್ನು ಸೀಳಿ ನೋಡುವ, ಹುಳುಕನ್ನು ಬಯಲು ಮಾಡುವ ಹುಮ್ಮಸ್ಸು ಕಾಣುತ್ತದೆ.

Continue reading »