Archive for the ‘ತೊಣಚಿ ಸಂಸಾರ’ Category

ತೊಣಪ್ಪನ ಡೈರಿ

ಕಾಪಾಡಿದ್ದು ಯಾರು?
 
ನೀವ್ ಅದೆಷ್ಟೇ ವಿನಯವಂತ್ರಾಗಿರ್ಬೋದು, ಆದ್ರೆ ಕೆಲ್ವೊಂದ್ಸಲ ನೀವ್ ಮಾಡಿದ ಕೆಲ್ಸಕ್ಕೆ ತಕ್ಕ ಕ್ರೆಡಿಟ್ಸು ಪಡೀಲೇಬೇಕಾಗುತ್ತೆ. ‘ಈ ಮಗುವಿನ ತಂದೆ ಯಾರು?’, ‘ಈ ಟೀ ಕಪ್ಪು ಒಡೆದದ್ದು ಯಾರು?’, ‘ನನ್ನ ಮಗಳಿಗೆ ಲವ್ ಲೆಟರ್ ಕೊಟ್ಟಿದ್ದು ಯಾರು?’, `ಬಹುಮಾನ ಬಂದ ಈ ಲಾಟರಿ ಟಿಕೆಟ್ ನಿಮ್ದಾ?’ ಅನ್ನೋ ಪ್ರಶ್ನೆಗಳೆದ್ದಾಗ ನಿಮ್ಮೆಲ್ಲಾ ವಿನಯವಂತಿಕೆ ಬಿಟ್ಟು ನಿಮ್ ಕೆಲ್ಸದ್ ಬಗ್ಗೆ ನೀವು ಕ್ರೆಡಿಟ್ಸ್ ತೆಗ್ದುಕೊಳ್ಳಬೇಕಾಗುತ್ತೆ.
ಪಾಪ ಈ ಸೀಕ್ರೇಟು ಆ ಹೆಲಿಕಾಪ್ಟರಿಗೆ ಗೊತ್ತಿರ್ಲಿಲ್ಲ! ವರ್ಷವಿಡೀ ನದಿ ಅನ್ನೋ [...]

Continue reading »

ತೊಣಚಿ ಡೈರಿ: ನಕ್ಸಲರ ಗರ್ಭನಿರೋಧಕಗಳು

ಅಪಘಾತ ಬಸ್ಸಿಗೆ ಬೆಂಕಿ: ಸುದ್ದಿ
ಅಪಘಾತಗಳು ಸಂಭವಿಸಿದಾಗ್ಲೆಲ್ಲಾ ಬಸ್ಸಿಗೆ, ಲಾರಿಗೆ, ಕಾರಿಗೆ, ಬೈಕಿಗೆ ಬೆಂಕಿ ಹಚ್ಚೋದು ವಾಡಿಕೆಯಾಗ್ಬಿಟ್ಟಿದೆ. ಇದ್ನೆಲ್ಲಾ  ಗಮ್ನಿಸೊವಾಗ ಅಪಘಾತ ಮಾಡಿದ್ದು ನಿಜ್ಕೂ ಆ ವಾಹ್ನವಾ ಅಥ್ವಾ ಅದ್ನ ಓಡಿಸೋವ್ನಾ ಅಂತ ಡೌಟು ಬರತ್ತೆ. ಬೇಜವಾಬ್ದಾರಿಯಿಂದ ವಾಹನ ಓಡಿಸಿ ಅಪಘಾತ ಮಾಡ್ದವ್ನ ಹಿಡಿದು ಚಚ್ಚುವುದನ್ನ ಒಪ್ಕೊಬೌದು. ಆದ್ರೆ ಪಾಪದ್ದು ವಾಹನ ಬೆಂಕಿ ತಿನ್ನಾಂಥದ್ದು ಏನು ಮಾಡಿರತ್ತೆ? ಎಡವಿದ್ದ ಕಲ್ಲಿಗೆ ಒದೆಯುವ ಅಭ್ಯಾಸ ಬೆಳೆಸಿಕೊಂಡಿರೋ ಜನ್ರಿಗೆ ಎಡವಿದ್ದು ಕಲ್ಲಲ್ಲ, ತಮ್ಮ ಕಾಲು ಅನ್ನೋದು ತಿಳಿಯೋದೇ ಇಲ್ಲ!
ಆಟಗಾರರಿಗೆ [...]

Continue reading »

ತೊಣಚಪ್ಪನ ಡೈರಿ

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ
ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ ಪಕ್ಸಗಳೂ ಸೇರ್ಕಂಡು ‘ದುಡ್ಡಿದೋರ್, ದುಡ್ ಹೊಡೆಯೋರ್ ಪಕ್ಷ’ ಮಾಡ್ಕಂಡು ಬಿಟ್ರೆ ಒಳ್ಳೇದಲ್ವಾ? ಜನ್ಕೂ ಯಾವ್ ಪಕ್ಸಕ್ಕೆ ಓಟ್ ಒತ್ತದು ಅನ್ನೋ ಟೆನ್ಷನ್ ಕಡಿಮಿ ಆಗ್ತದೆ. ಈ ಟಿವಿ, ಪೇಪರ್‌ನೋರ್ ಯಾರ್ ಗೆಲ್ತಾರೆ ಯಾರ್ [...]

Continue reading »

ತೊಣಚಪ್ಪನ ಡೈರಿ

ಸಿಎಂ ಪತ್ನಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ: ಬಂಗಾರಪ್ಪ
ಮಾಡಬೇಕಾದ ತನಿಖೆಗಳನ್ನು ಪೂರೈಸುವುದಕ್ಕೇ ಸಿಬಿಐಗೆ ಸಮಯ ಸಾಲುತ್ತಿಲ್ಲ ಹೀಗಿರುವಾಗ ನಮ್ಮ ನಾಡಿನ ಮೆಚ್ಚಿನ ನಾಯಕರ ಹೆಂಡತಿಯರ ಸಾವು, ಹೆಂಡತಿಯರ ಸಂಖ್ಯೆ, ಅಧಿಕೃತ – ಅನಧಿಕೃತ ಕುಟುಂಬಗಳ ತನಿಖೆಯನ್ನು ಅವರಿಗೆ ಹೊರಿಸಿದರೆ ಅವನ್ನು ಮುಗಿಸುವುದು ಈ ಸೌರಮಂಡಲ ಕರಗಿದ ಮೇಲೆಯೇ! ಹೀಗಾಗಿ ನಾನು ವೈಯಕ್ತಿಕವಾಗಿ ನಮ್ಮ ನಾಡಿನ ಪ್ರಜ್ಞಾವಂತರನ್ನು ಕೇಳಿಕೊಳ್ತೇನೆ, ನಮ್ ಸಾಮ್ರಾಟನ ಚೇಲ ಕುಚೇಲನಿಗೆ ಈ ತನಿಖೆಗಳನ್ನು ವಹಿಸಿ. ಕೆಲ್ಸ ಇಲ್ದೆ ನೊಣ ಹೊಡೀತ ‘ಕೀಟ ದಯಾ ಸಂಘ’ದವರ [...]

Continue reading »

ಸಾಮ್ರಾಟರ ಗತಕಾಲದ ಗೆಳೆಯನಿಗೆ ಸ್ವಾಗತ

 
ಸಾಮ್ರಾಟರು ತಮ್ಮ ಅದ್ವಿತೀಯ ಬಾಲ್ಯವನ್ನು ಅನೇಕ ಮೇರು ವ್ಯಕಿಗಳೊಂದೊಗೆ ಕಳೆದಿದ್ದಾರೆ. ಚಡ್ಡಿ ಹಂಚಿಕೊಳ್ಳುವುದಕ್ಕೂ ಮೊದಲೇ ಭೂಮಿಯನ್ನೂ ಆಕಾಶವನ್ನೂ ಸಮಾನವಾಗಿ ಹಂಚಿಕೊಂಡು ಗೆಳೆತನದ ಧೀಮಂತ ಆದರ್ಶವಾಗಿದ್ದಾರೆ. ಊರಿನ ಮಂದಿ ಸಾಮ್ರಾಟರ ಸಾಧನೆಗಳನ್ನು, ಸಾಹಸಗಳನ್ನು ಕಂಡು ಹೊಟ್ಟೆ ಉರಿದುಕೊಂಡು, ಕಣ್ಣು ಕೆಂಪಗೆ ಮಾಡಿಕೊಂಡು ಊರಿನಿಂದ ಓಡಿಸಿದಾಗ ವಿಧಿಲಿಖಿತದಂತೆ ಅವರ ಗೆಳೆಯರ ಬಳಗ ದೂರಾಯಿತು. ಆದರೆ ಸಾಮ್ರಾಟರು ತಮ್ಮ ಪ್ರತಿಭೆಯನ್ನು ಜಾವದಲ್ಲಿ ಅರಳಿದ ಮಲ್ಲಿಗೆಯ ಕಂಪಿನ ಹಾಗೆ ಆರೂ ದಿಕ್ಕುಗಳಲ್ಲಿ (ಮೇಲೆ ಹಾಗೂ ಕೆಳಗೆ ಎರಡು ದಿಕ್ಕುಗಳಿವೆ ಎಂಬ ಜ್ಞಾನೋದಯ ಸಾಮ್ರಾಟರಿಗೆ [...]

Continue reading »