Archive for the ‘ಕ್ರೀಡೆ’ Category

ಕಳೆದು ಹೋಗಿದೆ ಹುಡುಕಿ ಕೊಡಿ…

(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)
ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು.
ಹುಡುಕುವುದರ ಕಷ್ಟ ಅದನ್ನು [...]

Continue reading »

ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

 
(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)
ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ [...]

Continue reading »

ಸಚಿನ್‌ಗೆ ಪ್ಯಾಡು ದೋಷ

(ನಗೆ ನಗಾರಿ ಕಿರ್ ಕಿರಿಕೆಟ್ಟು ಬ್ಯೂರೋ)
ಶ್ರೀಲಂಕಾದ ವಿರುದ್ಧ ನಡೆಯುತ್ತಿರುವ ಐದು ಏಕ ದಿನ ಪಂದ್ಯಗಳ ಮೊದಲ ಮೂರೂ ಪಂದ್ಯಗಳಲ್ಲಿ ಭಾರತದ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಹೆಚ್ಚು ರನ್ ಗಳಿಸದೆ ಔಟಾಗಿದ್ದಾರೆ. ಮೂರೂ ಪಂದ್ಯಗಳಲ್ಲಿ ಎಲ್.ಬಿ.ಡಬ್ಲ್ಯು (ವಿಕೆಟ್ ಮುಂದೆ ಕಾಲು) ಕಾರಣಕ್ಕೆ ಔಟಾಗಿದ್ದಾರೆ. ಶ್ರೀಲಂಕಾದ ಕುಮಾರ ಧರ್ಮಸೇನಾ,ಗಾಮಿನಿ ಸಿಲ್ವಾ, ದಕ್ಷಿಣಾ ಆಫ್ರಿಕಾದ ಬ್ರಯಾನ್ ಜರ್ಲಿಂಗ್ – ಈ ಮೂವರೂ ಅಂಪೈರ್‌ಗಳು ಸಚಿನ್ ವಿರುದ್ಧ ತಪ್ಪು ತೀರ್ಪು ನೀಡಿದ್ದಾರೆ. ಬೌಲರ್‌ಗಳ ಯಾರ್ಕರ್, ಬೌನ್ಸರ್, ಗೂಗ್ಲಿ, ದೂಸ್ರಾಗಳ ಜೊತೆಗೆ [...]

Continue reading »

ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ)

ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಪ್ರತಿಕ್ರಿಯೆಗಳು, ರಿಟೈರ್ ಮೆಂಟ್ ನಂತರದ ಯೋಜನೆಗಳು ಇವುಗಳ ಬಗ್ಗೆ ಎಲ್ಲಾ ತುಂಬಾ ಕೂಲಂಕುಶವಾಗಿ ಅಧ್ಯಯನ ಮಾಡಿ ಬಹುದೊಡ್ಡ ಗ್ರಂಥಗಳನ್ನು ಬರೆದು, ಭೀಷಣ ಭಾಷಣಗಳನ್ನು ಕೊರೆದು ಹೆಸರು ಮಾಡಿದವರು ಅನೇಕರಿದ್ದಾರೆ.ದುಡಿಯುವಾಗಲೇ, ಮದುವೆಯಾಗುವ ಮುನ್ನವೇ, ಚಿಗುರು ಮೀಸೆ ಒತ್ತೊತ್ತಾಗಿ ವ್ಯಾಪಿಸಿಕೊಳ್ಳುವ ಮುಂಚಿನಿಂದಲೇ ರಿಟೈರ್ ಮೆಂಟ್ ಬಗ್ಗೆ ಆಲೋಚಿಸಿ ಸೂಕ್ತವಾಗಿ [...]

Continue reading »

ಜಯವರ್ಧನೆಗೆ ಒಂದು ಪತ್ರ!

ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜಯ‘ವರ್ಧನೆ’ಗೆ ಅಮೂಲ್ಯವಾದ ಸಲಹೆಯನ್ನು ಮಾಡಿ ಕಳುಹಿಸಿದ ಇ-ಮೇಲಿನ ಪ್ರತಿ ಇಲ್ಲಿದೆ:

ಪ್ರಿಯ ಜಯವರ್ಧನೆ,
ಶ್ರೀಲಂಕವೆಂಬ ಪುಟ್ಟ ದ್ವೀಪದಲ್ಲಿ ಅಜಂತ ಮೆಂಡಿಸ್ ಎಂಬ ಮತ್ತೊಬ್ಬ ಮಾಂತ್ರಿಕನ್ನು ಹುಡುಕಿಕೊಂಡು ಬರುವುದರಲ್ಲಿ ಯಶಸ್ವಿಯಾದದ್ದಕ್ಕೆ ಅಭಿನಂದನೆಗಳು. ನಮ್ಮ ದೇಶದಲ್ಲೂ ಅಂಥಾ ಪ್ರತಿಭೆಗಳು ಇಲ್ಲವೆಂದಲ್ಲ. ಆದರೆ ನಮ್ಮ ದೇಶ ದೊಡ್ಡದು ನೋಡು ಅದಕ್ಕೇ [...]

Continue reading »

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್

(ನಗೆ ನಗಾರಿ ಕ್ರೀಡಾ ಬ್ಯೂರೋ)
ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ [...]

Continue reading »

ಐಪಿಎಲ್ (ಇಂಡಿಯನ್ ಪೇಮೆಂಟ್ ಲೀಗ್) ವಿಶೇಷ

(ನಗಾರಿ ಕ್ರೀಡಾ ಬ್ಯೂರೋ)
ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ…
ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು [...]

Continue reading »

ಸ್ಕೂಪ್: ಆಸ್ಟ್ರೇಲಿಯಾದಿಂದ ದೀಪಿಕಾ ಬುಕ್ಕಿಂಗ್!

(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೋ)
ಈ ಸ್ಫೋಟಕವಾದ ಹಾಗೂ ನೆಲಬಿರಿಯುವಂತಹ ಸುದ್ದಿಯನ್ನು ‘ನಗೆ ನಗಾರಿ’ ಅತಳ, ಸುತಳ, ಪಾತಾಳಗಳನ್ನು ಜಾಲಾಡಿ ಹೆಕ್ಕಿ ಕೊಂಡು ಬಂದು ನಿಮ್ಮ ಮುಂದೆ ಕುಕ್ಕುತ್ತಿದೆ. ಈ ತನಿಖಾ ವರದಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ವಿವಾದಗಳು ಏಳಬಹುದೆಂಬ ಮುನ್ಸೂಚನೆಯನ್ನು ನಮ್ಮ ಹವಾಮಾನ ಇಲಾಖೆ ಕೊಟ್ಟಿರುವುದರಿಂದ ಯಾರೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ.
ಕ್ರಿಕೆಟ್ ಎಂಬ ‘ಮೆಂಟಲ್ ಮನ್’ಗಳ ಆಟವನ್ನು ಹುಟ್ಟಿಸಿದ ಇಂಗ್ಲೆಂಡಿನ ತಂಡ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ನೂರೆಂಟು ವಿಧಾನಗಳು ಎಂಬ ಪುಸ್ತಕವನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, [...]

Continue reading »

ಸ್ಪೀಡ್ ಗವರ್ನರ್ ಕಡ್ಡಾಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯ

(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೊ)

ಭಾರಿ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ಹೈಕೋರ್ಟಿನ ತೀರ್ಪಿನ ಬಗೆಗೆ ಅಪಾರವಾದ ಬೆಂಬಲ ವ್ಯಕ್ತವಾಗಿದೆ. ಹೀಗೆ ಬೇಷರತ್ತಾದ ಬೆಂಬಲವನ್ನು ನೀಡಿರುವವರು ಲಾರಿ ಮಾಲೀಕರೂ ಅಲ್ಲ, ಟ್ಯಾಕ್ಸಿ ಸಂಘದವರೂ ಅಲ್ಲ, ಅಖಿಲ ವಿಶ್ವ ರಕ್ಷಣಾತ್ಮಕ ದಾಂಡಿಗರ ಸಂಘದ ಅಧ್ಯಕ್ಷರು!

‘ವೇಗವೆಂಬುದು ಅಂತ್ಯಂತ ಅಪಾಯಕಾರಿಯಾದ ಸಂಗತಿ. Speed thrills, but kills ಎಂಬುದಾಗಿ ಜಗತ್ತಿನ ಅತ್ಯಂತ ವೇಗದ ಫೆರಾರಿ ಚಾಲಕ ಮೈಕೆಲ್ ಶೂಮಾಕರ್ ಹೇಳಿರುವುದು ಇಲ್ಲಿ ಪ್ರಸ್ತುತ. ವೇಗದಿಂದಾಗಿ ಅನಾಹುತ ಸಂಭವಿಸುತ್ತವೆ, ವೇಗದಿಂದಾಗಿ ಹಾನಿಯಾಗುತ್ತದೆ, ವೇಗ ಸೈತಾನನಿದ್ದಂತೆ‘ [...]

Continue reading »

ಭಾರತದ ಗೆಲುವಿಗೆ ‘ಕೋತಿ’ಯಾಟ ಕಾರಣ!

(ಜಾಗತಿಕ ಕಿರಿಕಿರಿಕೆಟ್ಟು ಬ್ಯೂರೊ)
ಪರ್ತ್, ಆಸ್ಟ್ರೇಲಿಯಾ: ತಮ್ಮ ಪಾಲಿಗೆ ಅಬೇಧ್ಯವಾದ ಕೋಟೆಯಂತಿದ್ದ ‘ಪರ್ತ್’ನಲ್ಲಿ ಭಾರತದ ಕ್ರಿಕೆಟ್ ಕಲಿಗಳು, ಪೇಪರ್ ಹುಲಿಗಳು ಹೀನಾಯಮಾನವಾಗಿ ಸೋಲಿಸಿರುವುದರಬಗ್ಗೆ ಆಸ್ಟ್ರೇಲಿಯಾ ತೀವ್ರ ಮುಖಭಂಗವನ್ನು ಅನುಭವಿಸುತ್ತಿತ್ತು. ಆಸ್ಟ್ರೇಲಿಯಾ ಎಂಬ ಕ್ರಿಕೆಟ್ ತಂಡದ ಪರ್ಯಾಯ ಹೆಸರೇ ಗೆಲುವು ಎಂದು ಸಾರಿ ಹೇಳಿದ ಆಸ್ಟ್ರೇಲಿಯಾದ ನಾಯಕ ರಿಕಿಕಿರಿ ಪೇಂಟಿಂಗ್ ಕ್ರಿಕೆಟ್ಟಿನಲ್ಲಿ ತಮ್ಮ ಮೇಲೆ ಗೆಲ್ಲಲ್ಲು ಖುದ್ದು ಆ ದೇವರಿಗೂ ಸಾಧ್ಯವಿಲ್ಲವೆಂದೂ, ಹನ್ನೊಂದು ಮಂದಿ ಆಡುವ ಆಟದಲ್ಲಿ ತಾವು ಮೂರು ಮಂದಿ ಅಂಪೈರುಗಳನ್ನು ಕಷ್ಟಪಟ್ಟು ಸೇರಿಸಿಕೊಂಡು ಒಟ್ಟು ಹದಿನಾಲ್ಕು ಮಂದಿ [...]

Continue reading »