ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ ಘೋಷಣೆಯಾಗಿದೆ. ಸಾಮ್ರಾಜ್ಯದಲ್ಲಿ ಬಹಳಾ ಕಾಲದಿಂದ ಸುಪ್ತವಾಗಿ ನಡೆಯುತ್ತಿದ್ದ ಆಂತರಿಕ ಕಲಹ ಕಳೆದ ಕೆಲವು ದಿನಗಳಲ್ಲಿ ತಾರಕಕ್ಕೇರಿದೆ. ಇಡೀ ಸಾಮ್ರಾಜ್ಯವೇ ಎರಡು ಗುಂಪಾಗಿ ಒಡೆದು ಹೋಳಾಗಿ ಪರಸ್ಪರ ಭೀಕರವಾಗಿ ಹೋರಾಡುತ್ತಿವೆ. ಇದರಿಂದ ಸಾಮ್ರಾಟರ ನೆಮ್ಮದಿ ಭಗ್ನವಾಗಿದೆ. ಸಾಮ್ರಾಜ್ಯದೆಲ್ಲೆಡೆ ಅರಾಜಕತೆ ಸ್ಥಾಪಿತವಾಗಿದೆ.
ಸಾಮ್ರಾಟರ ಭಾಗವೇ ಆಗಿರುವ ಸಾಮ್ರಾಜ್ಯದಲ್ಲಿ ಆಂತರಿಕ ಕಲಹ ಸ್ಪೋಟಗೊಂಡು ಸಾಮ್ರಾಟರು ಕಳವಳಗೊಂಡಿದ್ದರು. ಎರಡೂ ಪಾಳಯದವರು ಹೆಚ್ಚು ಹೆಚ್ಚು ಹೋರಾಡಿದಷ್ಟೂ ಸಾಮ್ರಾಟರು ದುರ್ಬಲರಾಗಲು ತೊಡಗಿದ್ದಾರೆ. ಸಮಯವೆಷ್ಟು ಉರುಳಿದರೂ ಯಾವೊಂದು ಪಾಳಯವೂ ಸೋಲುವ [...]
Archive for the ‘ಇತರೆ’ Category
11 Nov
ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ!
4 Nov
ನಗೆ ಸಾಮ್ರಾಜ್ಯದಲ್ಲಿ ಕಾಡುತ್ತಿರುವ ಸಾಮ್ರಾಜ್ಞಿಯ ಕೊರತೆ!
ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು ವರದಿಯ ಸಂವಾದ ಮುಂದುವರೆದಿದೆ. ಸನ್ಮಾನ್ಯ ದರಿದ್ರ ನಾರಾಯಣ ಬಟಾಬತ್ತಲ್ ನಮ್ಮ ಅತ್ಯಾಪ್ತ ಚೇಲ ಕುಚೇಲನ ಮೇಲೆ ಗುರುತರವಾದ ಆರೋಪವನ್ನು ಮಾಡುವುದರ ಜೊತೆಗೆ ನಗೆ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯ ಅಗತ್ಯವಿದೆಯೆಂದು ಗಟ್ಟಿ ದನಿಯಲ್ಲಿ ಘೋಷಿಸಿದ್ದಾರೆ. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ. ಸಂವಾದಕ್ಕೆ ಹೊಸದಾಗಿ ಮುಖ ತೋರಿದವರು ಇಲ್ಲಿ ಹೋಗಿ ಬಂದರೆ ಇದರ ಹಿನ್ನೆಲೆ ತಿಳಿದೀತೆಂಬ ಧೈರ್ಯವನ್ನು ಹೊಂದಬಹುದು.
ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು [...]
16 Oct
ದರಿದ್ರ ನಾರಾಯಣರ ಲಂಗದ ಮೋಹ!
ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚಿನ ಕುರಿತು ನಾವು ಪ್ರಕಟಿಸಿದ ವರದಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪೂರ್ಣ ದಿಗಂಬರರಾಗಿರುವ ದರಿದ್ರ ನಾರಾಯಣರು ತಾವು ಸಂಪೂರ್ಣ ದಿಗಂಬರರು ಎಂದು ತೋರಿಸಿಕೊಡುವುದರ ಜೊತೆಗೆ ನಮ್ಮ ವರದಿಯಲ್ಲಿ ಚರ್ಚಾಸ್ಪದವಾದ ಸಂಗತಿಯಿದೆ ಎಂದು ತೋರಿದರು.
ನಮ್ಮ ಸಾಮ್ರಾಜ್ಯದ ಪ್ರಜೆಗಳ ಅನುಕೂಲಕ್ಕಾಗಿ ಅವರ ಪ್ರತಿಕ್ರಿಯೆಯನ್ನು ಅದಕ್ಕೆ ನಾವು ನೀಡಿದ ಸಮಾಧಾನಗಳೆರಡನ್ನೂ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು ಪ್ರಕಟಿಸುತ್ತಿಲ್ಲ.
ನಗೆಸಾಮ್ರಾಟರೇ, ನಿಮ್ಮ ಮತ್ತು ನಿಮ್ಮ ಕು-ಚೇಲರ [...]
2 Oct
ಸ್ಪೋಟಕ ಸಂದರ್ಶನಕ್ಕೆ ತಯಾರಾಗಿ!
ಕನ್ನಡ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ ಹೆಸರಾಂತ ಬ್ಲಾಗಿಗರೊಬ್ಬರ ಸಂದರ್ಶನ ಶೀಘ್ರವೇ ನಗೆ ನಗಾರಿಯಲ್ಲಿ ಮೂಡಿಬರಲಿದೆ!
ಈ ಅತಿ ಸೂಕ್ಷ್ಮ ಸಂದರ್ಶನವನ್ನು ಖುದ್ದು ಸಾಮ್ರಾಟರೇ ಮಾಡಿಕೊಂಡು ಬಂದಿದ್ದಾರೆ!
ಬ್ಲಾಗ್ ಅಂಗಳದಲ್ಲಿ ಕೋಲಾಹಲ ಹುಟ್ಟಿಸುವಂತಹ ಅಂಶಗಳು ಈ ಸಂದರ್ಶನದಲ್ಲಿ ಅಡಗಿವೆ!
ಸ್ಪೋಟಕ ಸತ್ಯಗಳು ಇದರಲ್ಲಿ ಬಯಲಾಗಿವೆ!
ಈ ಅಪರೂಪದ ಸಂದರ್ಶನಕ್ಕಾಗಿ ನಗೆ ನಗಾರಿಯನ್ನು ತಪ್ಪದೇ ಓದುತ್ತಿರಿ.
(ಒರಿಜಿನಲ್ ಸಂದರ್ಶನ ಪ್ರಕಟವಾಗುವ ಮುನ್ನವೇ ಚೀನಾ ಮಾರ್ಗವಾಗಿ ಚಲಿಸಿ ಪ್ರಕಟವಾಗುವ ಅಗ್ಗದ ನಕಲಿ ಸಂದರ್ಶನವನ್ನು ಓದಿ ಮರುಳಾಗದಿರಿ!)
- ನಗೆ ಸಾಮ್ರಾಟ್
26 Sep
ತುಟಿಯರಳಿಸುವ ಕೆಮರಾ
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆ ಸ್ಯಾಂಪಲ್:
ದೇವರನ್ನು ಕಾಣುವ ಸುಲಭ ಉಪಾಯ!
20 Aug
ನಗೆಜ್ವರ!
ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ [...]
18 Aug
ಹಳೆಯ ಕಂತೆ: ಲಾರ್ಡ್ ವಿನಾಯಕನ ಸಂದರ್ಶನ
ಪ್ರತಿ ವರ್ಷದಂತೆ ಭೂಲೋಕ ಯಾತ್ರೆಗೆ ಬಂದಿದ್ದ ಲಾರ್ಡ್ ವಿನಾಯಕ ಕಳೆದ ವರ್ಷ ನಗೆನಗಾರಿಗಾಗಿ ವಿಶೇಷ ಸಂದರ್ಶನವೊಂದನ್ನು ನೀಡಿದ್ದ. ದೇವಲೋಕದ, ಮಾನವಲೋಕದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಸಂದರ್ಶನ ಹಳೆಯ ಕಂತೆಯಿಂದ ಹೆಕ್ಕಿ ತಂದಿರುವವನು ನಮ್ಮ ಆಪ್ತ ಚೇಲ ಕುಚೇಲ.
ಆ ಸಂದರ್ಶನದ ತುಣುಕು ನಿಮ್ಮ ನಾಲಿಗೆ ಚಪ್ಪರಿಕೆಗೆ:
ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ…
ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ [...]
17 Aug
ಗೆರೆಗಳಲ್ಲಿ ನಗೆ
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ
ಈ ಸಂಚಿಕೆ ಸ್ಯಾಂಪಲ್:
ಸೋಂಕು ರಹಿತ ಪ್ರೀತಿ!
5 Aug
ನಗೆಚಿತ್ರ
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ
ಈ ಸಂಚಿಕೆ ಸ್ಯಾಂಪಲ್:
ಹುಹ್! ಇನ್ನೆಷ್ಟು ಕಾಲ ಈ ಮನುಷ್ಯನನ್ನ ಸಹಿಸಬೇಕೋ…
3 Aug
ಲಾಲೂ ರಾಬ್ರಿ ನಗೆ ರಾಬರಿ!
- ‘ಸವಿತೃ’
ಒಮ್ಮೆ (?!) ಲಾಲು ಸಾಯ್ತಾನೆ.
ಹೆಂಡ್ತಿ ರಾಬ್ರಿಗೆ ಚಿಂತೆ…..ತನ್ಗನ್ಡ ಸ್ವರ್ಗುಕ್ಕೊದ್ನೋ ಅತ್ವ ನರ್ಕುಕ್ಕೊದ್ನೋ ಅಂತ !
ಅದಕ್ಕವಳು ಅವ್ಳಗಂಡನ ಆತ್ಮನೊಮ್ಮೆ ಮಾತಾಡ್ಸ್ಬೇಕು ಅನ್ಕೊತಾಳೆ…. ಆದ್ರೆ ಹೆಂಗ್ಮಾಡೋದು?! ಸರಿ ಇಲ್ಲೇ ಯಾರೋ ಸಂಪದಿಗರು ಒಂದೈಡಿಯ ಕೊಡ್ತಾರೆ. ಕರ್ನಾಟಕದಲ್ಲಿ ಒಬ್ರು ವಿವೇಕಾನಂದರ ಭಕ್ತ್ರಿದಾರೆ… ಅವರತ್ರ ಒಂದು ಪ್ಲಾನ್ಚೆಟ್ಟು ಅಂತಾ ಐತಿ… ಅದ್ರ ಮೂಲ್ಕಾನೆ ಯಾವಾಗ್ಲೂ, ಯಾವಾಗಲೋ ಸತ್ತಿರೋ ವಿವೇಕಾನಂದರ ಹತ್ರ ಮಾತಾಡ್ತಾ ಇರ್ತಾರೆ… ದುಡ್ಡು ಕೊಟ್ರೆ ಉಪದೇಶನೂ ಕೊಡುಸ್ತಾರೆ …. ಅವರತ್ರ [...]
Recent Comments