Archive for the ‘ಆಧ್ಯಾತ್ಮ’ Category

ಇಗೋ ಇಲ್ಲಿದೆ ನಿಮ್ಮ ಭವಿಷ್ಯ!

(ನಗೆ ನಗಾರಿ ಭವಿಷ್ಯ ವಿತರಣಾ ಬ್ಯೂರೋ)
ಕನ್ನಡ ಪತ್ರಿಕೋದ್ಯಮ ಹಿಂದೆಂದೂ ಕಂಡರಿಯದ ಪ್ರಮಾಣದ ಬದ್ಧತೆಯನ್ನು ತೋರಿ ‘ರದ್ದಿಮನೆ’ಯ ಹಿರಿತಲೆಗಳ ಹಳೆಯ ಹೃದಯದ ಸ್ತಂಭನಕ್ಕೆ ನಗೆ ನಗಾರಿ ಡಾಟ್ ಕಾಮ್ ಕಾರಣವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಸರ್ವವೇದ್ಯವಾದ ಸಾಧನೆಯನ್ನು ಪುನರುಚ್ಛರಿಸುವುದಕ್ಕೆ ಕಾರಣವಿದೆ.
ಮನುಷ್ಯ ಬಹುವಾಗಿ ಹೆದರುವ ಮೂರು ಸಂಗತಿಗಳಲ್ಲಿ ಮೂರನೆಯದು ಕಾಲ. ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಹೆಂಡತಿ ಹಾಗೂ ಜಿರಲೆ ದಕ್ಕಿಸಿಕೊಂಡಿವೆ. ಕಾಲಗಳಲ್ಲಿ ಅತಿ ಸರಳವಾದ ಹಾಗೂ ತಿಳಿದುಕೊಳ್ಳಲು ಅತ್ಯಂತ ಸುಲಭ ಎಂದು ಭಾಸವಾಗುವ ಗತಕಾಲದ ಬಗ್ಗೆಯೇ [...]

Continue reading »

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಾವು ನಾಡಿನ ಅನೇಕ ಗಣ್ಯರನ್ನು ಖಾಸಗಿಯಾಗಿ ಸಂದರ್ಶಿಸಿದೆವು. ತಾವು ನೋಡಿರದ ನಗೆ ನಗಾರಿಯಲ್ಲಿ ಕಂಡು ಬಂದ ಕೊರತೆಗಳನ್ನು, ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಲು ಬೇಡಿಕೊಂಡೆವು. ನಮ್ಮ ಬೇಡಿಕೆಯ ಮೇರೆಗೆ ಅವರು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೊದಲ ಕಂತಿನ ಭಾಗವಾಗಿ ಈ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.
- ನಗೆ ಸಾಮ್ರಾಟ್

ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ [...]

Continue reading »

ಬುದ್ಧಿ ಜೀವಿಯಾಗುವುದು ಹೇಗೆ?

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)

ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾಡೆಂಬ ಭೂಲೋಕದ ಸ್ವರ್ಗದ ರಾಜಧಾನಿಯಲ್ಲಿ  ಕರುಣಾಜನಕ ವಿಧಿಯವರು ‘ಬುದ್ಧಿಜೀವಿಯಾಗುವುದು ಹೇಗೆ?’ ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ  ನಡೆಸಿಕೊಟ್ಟಿದ್ದಾರೆ. ಈ ಕಾರ್ಯಾಗಾರದಲ್ಲಿ ಸಾಮಾನ್ಯರಲ್ಲಿ ಅತೀ ಸಾಮಾಯರಾದವರು ಕೂಡ ಹೇಗೆ ಕೆಲವೇ ಕೆಲವು ಪರಿಣಾಮಕಾರಿ ಹಾಗೂ ಸತ್ವಯುತ ಉಪಾಯಗಳನ್ನು ಬಳಸುವ ಮೂಲಕ ಖ್ಯಾತಿವೆತ್ತ ಬುದ್ಧಿಜೀವಿಯಾಗಿ ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಮಿಂಚಬಹುದು [...]

Continue reading »

ವಿನಾಯಕನ ಇ-ಮೇಲ್!

(ನಗೆ ನಗಾರಿ ವೈಯಕ್ತಿಕ ವಿಭಾಗ)
ಇದೀಗ ತಾನೆ ಬಂದ ಇ-ಮೇಲ್ ಸಂದೇಶವೊಂದರಿಂದ ನಗೆ ನಗಾರಿಯ ಇಡೀ ಕಛೇರಿ ವಿಸ್ಮಿತವಾಗಿದೆ. ನಗೆ ಸಾಮ್ರಾಟರು ತನ್ನ ಹೆಸರಿಸಲು ಇಚ್ಚಿಸದ ಮೂಲಗಳಿಂದ ಕಂಡು ಕೊಂಡ ಸಂಗತಿಯೆಂದರೆ ಈ ಇಮೇಲ್ ಸಂದೇಶವನ್ನು ನಾಡಿನ ಎಲ್ಲಾ ಮಾಧ್ಯಮಗಳ ಕಛೇರಿಗಳಿಗೂ ರವಾನಿಸಲಾಗಿದೆ. ಅದರಲ್ಲೂ ದಿನದ ಇಪ್ಪತ್‌ನಾಲ್ಕೂ ಗಂಟೆ ವಾರ್ತೆಯ ಹೆಸರಿನಲ್ಲಿ ಬೇರೇನೇನನ್ನೆಲ್ಲಾ ಪ್ರಸಾರ ಮಾಡುವ ಸುದ್ದಿ ಸಂಸ್ಥೆಗಳಿಗೆ ಮೊದಲ ಆದ್ಯತೆಯಲ್ಲಿ ಈ ಇ-ಮೇಲ್ ರವಾನೆಯಾಗಿದೆ. ನಗೆ ನಗಾರಿಯ ಕಛೇರಿಯನ್ನು ಕೊನೆಯ ಘಳಿಗೆಯಲ್ಲಿ ಈ ಇ-ಮೇಲ್ ತಲುಪಿದ್ದು ನಮ್ಮ [...]

Continue reading »

ಬಾಬಾ ತೆರೆದದ್ದು ಒಂದೇ ಕಣ್ಣೇ?!

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)
ಬೆಂಗಳೂರಿನ ಬಸವನಗುಡಿಯ ಸಮೀಪದ ಗವಿಗಂಗಾಧರೇಶ್ವರ ನಗರದ ಮನೆಯೊಂದರಲ್ಲಿ ವಿಸ್ಮಯ ನಡೆದಿರುವುದು ವರದಿಯಾಗಿದೆ. ಶಿರಡಿ ಸಾಯಿ ಬಾಬಾರ ಮಣ್ಣಿನ ಮೂರ್ತಿಯೊಂದು ಸರಿಯಾಗಿ ಗುರುವಾರದ ಗುರು ಪೌರ್ಣಮಿಯಂದು ಎಡಗಳನ್ನು ತೆರೆದಿದೆ! ಅದನ್ನು ಸಾಯಿಬಾಬಾ ಕೃಪಾಕಟಾಕ್ಷ ಎಂದುಕೊಂಡು ಭಕ್ತರು ದಾಂಗುಡಿ ಇಡುತ್ತಿದ್ದಾರೆ, ನಾಸ್ತಿಕರು ಉಡಾಫೆಯಿಂದಲಾದರೂ ಒಮ್ಮೆ ನೋಡಿಕೊಂಡು ಬರಲು ಸಾಲು ನಿಂತಿದ್ದಾರೆ. ಟಿವಿ ಚಾನಲ್‌ಗಳು ಸಿಕ್ಕಿತೆಮಗಿಂದು ರಸಗವಳ ಎಂದುಕೊಂಡು ನಾಲ್ಕು-ಐದು ತಾಸು ತಮ್ಮನ್ನು ಹರಾಜು ಹಾಕಿಕೊಂಡಿವೆ. ಪತ್ರಿಕೆಗಳು ಜನಮರುಳೋ, ಜಾತ್ರೆ ಮರುಳೋ ಸಂಪಾದಕರಿಗೆ ಮರುಳೋ ತಿಳಿಯದೆ ಕಂಗಾಲಾಗಿವೆ. [...]

Continue reading »

ಮಾನವನಿಗೆ ದೇವನ ಮೊರೆ!

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)
ಜಗತ್ತಿನ ಸಮಸ್ತ ಲೌಕಿಕ ಸಂಗತಿಗಳ ಬಗ್ಗೆ ಹೆಕ್ಕಿ, ಹರಡಿ ವರದಿ ಮಾಡುವ ನಗೆ ಸಾಮ್ರಾಟರಿಗೆ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತು. ಯಾವುದೋ ಅಪರೂಪದ ವರದಿಯಿರಬೇಕೆಂದು ನಗೆ ಸಾಮ್ರಾಟರು ಹಿಗ್ಗಿದರು. ಹೀಗೆ ಅನಾಮಧೇಯ, ಅವಿಶ್ವಾಸನೀಯ, ಅಗೋಚರ ಸುದ್ದಿ ಮೂಲಗಳಿಂದ ಪಡೆದ ಸುದ್ದಿಯನ್ನು ರಸವತ್ತಾಗಿ ಪ್ರಕಟಿಸಿ ಕೊನೆಗೆ ಇದು ನಮ್ಮ ‘ನಂಬಲರ್ಹ’ ಮೂಲಗಳಿಂದ ಬಂದದ್ದು ಎಂದು ಹೇಳುವ ಸಂಪ್ರದಾಯವನ್ನು ಸಾಮ್ರಾಟರು ನಮ್ಮ ಮುಖ್ಯವಾಹಿನಿಯ ಸುದ್ಧಿ ಮಾಧ್ಯಗಳಿಂದ ಕಲಿತುಕೊಂಡಿದ್ದಾರೆ. ಗುರುವಿಲ್ಲದೆಯೇ, ಏಕಲವ್ಯನ ಥರ.

‘ಪ್ರಿಯ ಸಾಮ್ರಾಟ್!’ ಎಂದಿತು [...]

Continue reading »