ವರ್ಷದ ವ್ಯಕ್ತಿಯನ್ನು ಆರಿಸುವ ಕೆಲಸವನ್ನು ಬಹುತೇಕ ಉಸಿರಿರುವ ಎಲ್ಲಾ ಪತ್ರಿಕೆಗಳೂ, ಸುದ್ದಿ ವಾಹಿನಿಗಳೂ ಮಾಡುತ್ತವೆ. ಹಾಗೆಯೇ ನಗಾರಿಯಲ್ಲಿ ಏಪ್ರಿಲ್ ಒಂದರಂದು ಅಂತಹ ವಿಶೇಷ ವ್ಯಕ್ತಿಯನ್ನು ಪುರಸ್ಕರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಪಟ್ಟಿಯಲ್ಲಿದ್ದ ಹಲವರಲ್ಲಿ ಕಡೆಗೂ ಆಯ್ಕೆಯಾದವರು ಯಾರು? 
ಏಪ್ರಿಲ್ ೨೦೦೮ರ ಬರಹದ ತುಣುಕು ಇಲ್ಲಿದೆ:
ಏಪ್ರಿಲ್ ಒಂದು ಮೂರ್ಖರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿ ಸಂತೋಷ ಪಡುತ್ತಾ ಅವರ ಸಾಧನೆಯನ್ನು ಕೊಂಡಾಡುವ ದಿನ.
ವರ್ಷದ ವ್ಯಕ್ತಿ, ತಿಂಗಳ ವ್ಯಕ್ತಿ, ವಾರದ ವ್ಯಕ್ತಿ, ದಿನದ ವ್ಯಕ್ತಿ ಎಂದೆಲ್ಲಾ ಬೇಕಾ ಬಿಟ್ಟಿಯಾಗಿ ಪ್ರಶಸ್ತಿಗಳನ್ನು ಕೊಡುವ, ಬೀದಿ ಬದಿಯ ಸುಂದರಿಯನ್ನು ಕರೆದುಕೊಂಡು ಬಂದು ಆಕೆಯನ್ನು ಇಡೀ ಕೇರಿಯ ‘ವಿಶ್ವ ಸುಂದರಿ’ಯನ್ನಾಗಿ ಘೋಷಿಸುವ ಸಂಘಗಳು ನಮ್ಮ ನಡುವೆ ಇವೆ. ಆದರೆ ಏಪ್ರಿಲ್ ಒಂದರ ವ್ಯಕ್ತಿ ಎಂದು ಒಂದು ನೈಜ ಪ್ರತಿಭೆಯನ್ನು, ಒಬ್ಬ ಸಾಧಕ/ಸಾಧಕಿಯನ್ನು ಗುರುತಿಸಿ, ಗೌರವಿಸುವ ಸಾಹಸಕ್ಕೆ ಯಾರೂ ಕೈಯನ್ನು ಮಾತ್ರ ಹಾಕದಿರುವುದು ವಿಷಾದದ ಸಂಗತಿ. ಈ ಕೊರಗನ್ನು ನೀಗಿಸುವತ್ತ ನಗೆ ನಗಾರಿ ದಾಪುಗಾಲು ಹಾಕುತ್ತಿದೆ. ಯಾರೂ ಮಾಡದ ಘನ ಕಾರ್ಯವನ್ನು ನಗಾರಿಯ ಸಾರಥಿ ನಗೆ ಸಾಮ್ರಾಟರು ಮಾಡಲು ಮನಸ್ಸು ಮಾಡುವ ಮೂಲಕ ಹೊಸ ಕ್ರಾಂತಿಯನ್ನು ಮಾಡುತ್ತಿದ್ದಾರೆ.
ಪೂರ್ಣ ಬರಹಕ್ಕಾಗಿ ಇಲ್ಲಿಗೆ ಭೇಟಿ ಕೊಡಿ: ಏಪ್ರಿಲ್ ಒಂದರ ವ್ಯಕ್ತಿ ಯಾರು?
Tags: ಏಪ್ರಿಲ್ ಒಂದರ ವ್ಯಕ್ತಿ, ಹಳೆಕಂತೆ

ಇತ್ತೀಚಿನ ಪ್ರಜಾ ಉವಾಚ