ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ!

ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ ಘೋಷಣೆಯಾಗಿದೆ. ಸಾಮ್ರಾಜ್ಯದಲ್ಲಿ ಬಹಳಾ ಕಾಲದಿಂದ ಸುಪ್ತವಾಗಿ ನಡೆಯುತ್ತಿದ್ದ ಆಂತರಿಕ ಕಲಹ ಕಳೆದ ಕೆಲವು ದಿನಗಳಲ್ಲಿ ತಾರಕಕ್ಕೇರಿದೆ. ಇಡೀ ಸಾಮ್ರಾಜ್ಯವೇ ಎರಡು ಗುಂಪಾಗಿ ಒಡೆದು ಹೋಳಾಗಿ ಪರಸ್ಪರ ಭೀಕರವಾಗಿ ಹೋರಾಡುತ್ತಿವೆ. ಇದರಿಂದ ಸಾಮ್ರಾಟರ ನೆಮ್ಮದಿ ಭಗ್ನವಾಗಿದೆ. ಸಾಮ್ರಾಜ್ಯದೆಲ್ಲೆಡೆ ಅರಾಜಕತೆ ಸ್ಥಾಪಿತವಾಗಿದೆ.

ಸಾಮ್ರಾಟರ ಭಾಗವೇ ಆಗಿರುವ ಸಾಮ್ರಾಜ್ಯದಲ್ಲಿ ಆಂತರಿಕ ಕಲಹ ಸ್ಪೋಟಗೊಂಡು ಸಾಮ್ರಾಟರು ಕಳವಳಗೊಂಡಿದ್ದರು. ಎರಡೂ ಪಾಳಯದವರು ಹೆಚ್ಚು ಹೆಚ್ಚು ಹೋರಾಡಿದಷ್ಟೂ ಸಾಮ್ರಾಟರು ದುರ್ಬಲರಾಗಲು ತೊಡಗಿದ್ದಾರೆ. ಸಮಯವೆಷ್ಟು ಉರುಳಿದರೂ ಯಾವೊಂದು ಪಾಳಯವೂ ಸೋಲುವ ಸಂಭವ ಕಾಣುತ್ತಿಲ್ಲ. ಎರಡೂ ಪಾಳಯಗಳಲ್ಲಿ ಶಕ್ತಿ ಸಂವರ್ಧನೆಯಾಗುತ್ತ ಹೋಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

ತಮ್ಮ ಆಪ್ತ ಸಲಹೆಗಾರರ ನಿರ್ದೇಶನದ ಮೇರೆಗೆ ಸಾಮ್ರಾಟರು ನಗೆ ಸಾಮ್ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ತಮ್ಮ ಸಾಮ್ರಾಜ್ಯದ ಪ್ರತಿ ಸದಸ್ಯನ ಸ್ವಾತಂತ್ರ್ಯವನ್ನೂ ಕಸಿದುಕೊಂಡು ಸರ್ವಾಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾರೆ. ತಮ್ಮ ಅಂತರಂಗದ ಭಾಗವೇ ಆಗಿರುವಂತಹ ಪ್ರಜೆಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು, ಅವರ ಅಭಿವ್ಯಕ್ತಿಯ, ಪ್ರತಿಭಟನೆಯ ಶಕ್ತಿಯನ್ನೇ ದಮನಿಸುವುದು ಸಾಮ್ರಾಟರಿಗೆ ಅತ್ಯಂತ ದುಃಖ ಕೊಡುವ ಕೆಲಸ. ಆದರೂ ಸಾಮ್ರಾಜ್ಯದ ನೆಮ್ಮದಿಯ ರಕ್ಷಣೆಯ ದ್ರುಷ್ಟಿ ಯಿಂದ ಈ ಕ್ರಮ ಅನಿವಾರ್ಯವಾಗಿದೆ.

ಸಾಮ್ರಾಜ್ಯದಲ್ಲಿ ತಾಂಡವವಾಡುತ್ತಿರುವ ಆಂತರಿಕ ಕಲಹ, ಅರಾಜಕತೆ ತಣ್ಣಗಾಗುವವರೆಗೆ ನಗೆ ನಗಾರಿ ಸದ್ದನ್ನು ಸಹ ನಿರ್ಬಂಧಿಸಲಾಗಿದೆ!

3 Responses to this post.

  1. ನೀವು ನಿರ್ಬಂಧಿಸಬಹುದು ನಗೆ ನಗಾರಿಯ ಸದ್ದನ್ನು
    ನಿರ್ಬಂಧಿಸಲಾರಿರಿ ನೀವು ನಮ್ಮ ನಗೆಯ ಸದ್ದನ್ನು

    ನೀವು ಹೀಗೆ ತುರ್ತು ಪರಿಸ್ಥಿತಿ ಘೋಷಿಸಿದ್ದಾದರೂ ಯಾಕೆ
    ಆ ಸಲಹೆ ನೀಡಿದ ಆ ಸಲಹೆಗಾರನನು ಆಪ್ತರೆನ್ನುವೇರೇಕೆ

    ಆತನನ್ನು ಕೂಡಲೇ ವರ್ಗಾವಣೆ ಮಾಡಿ ನೋಡಿ
    ಹೊಸಬರ ನಿರ್ದೇಶನವೂ ಬೇರೆ ಇದ್ದೀತು ನೋಡಿ

    :)

    Reply

  2. ಇನ್ನೆಷ್ಟು ದಿನ ತುರ್ತುಪರಿಸ್ಥಿತಿ ಸಾಮ್ರಾಟರೇ?

    Reply

  3. Posted by Harsha on December 1, 2009 at 1:05 pm

    ನಗಾರಿಯಿಲ್ಲದೆ ರಾಜ್ಯದಲ್ಲಿ ಹಾಹಾಕಾರ ಉಂಟಾಗಿದೆ. ದಯವಿಟ್ಟು emergency ಅನ್ನು ಅಂತ್ಯಗೊಳಿಸಿ

    Reply

Respond to this post