ನಗೆ ನಗಾರಿ ಡಾಟ್ ಕಾಮ್ ಎಂಬ ವಿಶ್ವದ ನಂಬರ್ ಒನ್ ಕನ್ನಡ ಹಾಸ್ಯ ಬ್ಲಾಗಿನ ಮೊದಲ ವಾರ್ಷಿಕೋತ್ಸದ ಅಂಗವಾಗಿ ನಾವು ಅನೇಕ ಸ್ಪರ್ಧೆಗಳನ್ನು, ವಿಶೇಷಗಳನ್ನು ಹಮ್ಮಿಕೊಂಡಿರುವುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಈ ಪ್ರಕ್ರಿಯೆಯ ಮೊದಲ ಭಾಗವಾಗಿ ನಾವು ಶುರು ಮಾಡಿದ ವಿತ್ರ ಗುಪ್ತ ಸ್ಪರ್ಧೆಯಲ್ಲಿ ನಾವು ಎಣಿಸಿದ್ದಕ್ಕಿಂತ ಸರಿಯಾಗಿ ನಾಲ್ಕೂವರೆ ಪಟ್ಟು ಸ್ಪರ್ಧಿಗಳು ಭಾಗವಹಿಸಿ ನಮಗೆ ಅಚ್ಚರಿ ಮೂಡಿಸಿದ್ದಾರೆ. ಹಾಗೆಯೇ ಈ ಸ್ಪರ್ಧೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಭಾಗವಹಿಸಿ ಸಾಮ್ರಾಟರಿಗೆ ಹೃದಯಾಘಾತ ಉಂಟು ಮಾಡಬೇಕಾಗಿ ವಿನಂತಿ!
‘ಜೋಕು’ಮಾರ ಸ್ಪರ್ಧೆ
ದಿನವೊಂದರಲ್ಲಿ ನಾವು ಹತ್ತಾರು ಜೋಕುಗಳನ್ನು ಕೇಳುತ್ತೇವೆ. ಮೂರ್ನಾಲ್ಕು ಜೋಕುಗಳನ್ನು ಕಟ್ ಮಾಡಿರುತ್ತೇವೆ. ಆದರೆ ಇವ್ಯಾವೂ ಸಹ ನಮ್ಮವಾಗಿರುವುದಿಲ್ಲ ಎಂಬುದು ಎಂಥ ದೊಡ್ಡ ಜೋಕ್ ಅಲ್ಲವೇ? ಜೋಕುಗಳು ಹುಟ್ಟುವುದು ಎಲ್ಲಿಂದ ಎಂದು ಮೂಲ ಹುಡುಕಿ ಹೊರಟವರು ಇನ್ನೂ ವಾಪಸ್ಸು ಬಂದು ಉತ್ತರ ಹೇಳಿಲ್ಲವಾದ್ದರಿಂದ ಆ ಪ್ರಶ್ನೆಯನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತೇವೆ.
ನಿಮ್ಮದೇ ಒಂದು ಜೋಕನ್ನು ಸೃಷ್ಟಿ ಮಾಡಲು ನಿಮಗೆ ಸಾಧ್ಯವೇ? ನಿಮ್ಮಲ್ಲಿ ಅಡಗಿ ಕೂತಿರುವ ಜೋಕೆಂಬ ಒಸಾಮ ಬಿನ್ ಲಾಡನನ್ನನ್ನು ಹೊರಗಟ್ಟಲು ಸಾಧ್ಯವೇ? ಹಾಗಾದರೆ ತಡ ಮಾಡಬೇಡಿ, ನಮ್ಮ ಜೋಕುಮಾರ ಸ್ಪರ್ಧೆಯಲ್ಲಿ ಭಾಗವಹಿಸಿ. ನಿಮ್ಮ ಸ್ವಂತದ ಜೋಕನ್ನು ಜಗತ್ತಿಗೆ ಅರ್ಪಿಸಿ ಪುಣ್ಯ ಕಟ್ಟಿಕೊಳ್ಳಿ.
(ಜೋಕುಗಳು ಸ್ವಂತದ್ದಲ್ಲ, ಕದ್ದವು ಎಂಬುದು ಸಾಬೀತಾದರೆ ಅಪರಾಧಿಗಳನ್ನು ಅತ್ಯುಗ್ರವಾಗಿ ಶಿಕ್ಷಿಸಲಾಗುವುದು!)
- ನಗೆ ಸಾಮ್ರಾಟ್
Tags: ಕನ್ನಡದ ನಂಬರ್ ಒನ್ ಹಾಸ್ಯ ಬ್ಲಾಗ್, ಜೋಕುಗಳು, ಜೋಕುಮಾರ, ನಗೆ ನಗಾರಿ

ಜೋಕನ್ನು ಒಸಾಮ ಬಿನ್ ಲಾಡೆನ್ ನೊಡನೆ ಹೋಲಿಸಿ ಸರ್ವರ ಎದೆಹುತ್ತದೊಳಗಿನ ನಗೆಸಾಮ್ರಾಟರಿಗೆ ಬುಷ್ ಬುಷ್ ಅನ್ನುವಷ್ಟು ಸಿಟ್ಟು ಬರಿಸಿದಿರಲ್ಲಾ!
ಬುಷ್ ಬುಷ್ ಎಂದು ಬುಸುಗುಡುವ ಅಧ್ಯಕ್ಷರು ಮನೆಗೆ ಹೋಗಿ ಆಯ್ತಲ್ಲ ಅಡಿಗರೇ, ಈಗ ನಮ್ ಒಬಾಮನ ಶಕೆ…
ನಗೆ ಸಾಮ್ರಾಟ್
nage nagari dariyallu bavishya hudukora sankye TUMBA Tumbane ide. Alri avrige kattikolloke barada bavishyavanna kandakanallella hudukodu enta nageya sangati alve? Ellinada nagbeku intora utsukakke? Adyaro feese kelde kottiro bavishyavantu bramhandavanne merisutte. papada jana enta nagepataligeedaktare ree bavisya hudukoke hogi. Nannanta bevaras(i)ugalanna nodri namge bavisyane bekilla. Ella namma kaiyalle. Enta bhootagalanna gotta navu nodirodu. Ketta bhootagalanna nodida vartamanigarige yava bhavisyanoo hedarisokagallari. Be PRESENT. ille iri. bhavisyakke hogle byadi. Baduku bangaravagutte. Hyapmore hakkondu bavisya kaykondu kuntre lifu kettogutte kanri. Lifenane!