ಬಕ್ಕ ತಲೆಗೆ ಕೊನೆಗೂ ಸಿಕ್ಕಿದೆ ಮದ್ದು!

20 Nov

(ನಗೆ ನಗಾರಿ ಜಾಹೀರಾತು ವಿಭಾಗ)

cover1

ಬಹು ದಿನಗಳಿಂದ ನಾಡಿನ ಹಾಸ್ಯಪ್ರಿಯರೆಲ್ಲರೂ ಎದುರುನೋಡುತ್ತಿದ್ದ ‘ವಾರೆ ಕೋರೆ’ ಎಂಬ ಹಾಸ್ಯ ಪತ್ರಿಕೆಯನ್ನು ಪ್ರಕಾಶ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರಾಯೋಗಿಕ ಸಂಚಿಕೆಯ ಕೆಲವು ಸ್ಯಾಂಪಲ್ ಪುಟಗಳನ್ನು ತಮ್ಮ ಬ್ಲಾಗಿನಲ್ಲಿ ಹಾಕಿದ್ದಾರೆ.

‘ಬಕ್ಕ ತಲೆಗೆ ಬಕ್ರಿ ಮೂತ್ರ’ ಎಂಬುದು ಈ ಸಂಚಿಕೆ ಸ್ಪೆಷಲ್. ‘ವಾರೆ ಕೋರೆಯ’ವ ವಿಶೇಷ ವರದಿಗಾರ ಖಾಲಿ ತಲೆಮಾರ್, ಬಕ್ರೂರು ಎಂಬ ಗುಡ್ಡಕಾಡು ಪ್ರದೇಶಕ್ಕೆ ಸುಮಾರು ೪೦ ಕಿ.ಮೀ ದೂರ ನಡೆದಾಡಿ ಈ ವರದಿಯನ್ನು ಸಂಗ್ರಹಿಸಿದ್ದಾರೆ ಎನ್ನುತ್ತಾರೆ ಸಂಪಾದಕರು.

ಅಲ್ಲದೆ ಹಿಂದೆ ‘ಸುಧಾ’ದ ‘ವಾರೆನೋಟ’ ಅಂಕಣದಲ್ಲಿ ಬರುತ್ತಿದ್ದ ಆನಂದರನ್ನು ಬಹಳ ಕಷ್ಟದಲ್ಲಿ ಪತ್ತೆ ಹಚ್ಚಿ ಮತ್ತೆ ಬರೆಸಿದ್ದಾರೆ. ವ್ಯಂಗ್ಯಚಿತ್ರಕಾರರಿಗೆಲ್ಲ ಸ್ವಾಮಿ ಸ್ಥಾನದಲ್ಲಿರುವ ಕೆ.ಆರ್. ಸ್ವಾಮಿ ಅವರ ವ್ಯಂಗ್ಯಚಿತ್ರಗಳನ್ನು ಕಾಣದೆ ಕೆಲ ಕಾಲಗಳಾಗಿದ್ದವು. ‘ವಾಕೋ’ದಲ್ಲಿ ಸ್ವಾಮಿಯವರ ‘ಮಕ್ ಬ್ಯಾಕ್’ ಆಗಿದೆಯಂತೆ. ‘ತರಂಗ’ ಖ್ಯಾತಿಯ ಹರಿಣಿಯನ್ನು ಬ್ಲಾಗ್, ಸೈಟುಗಳಲ್ಲಿ ಮಾತ್ರ ಕಾಣುವಂತಾಗಿತ್ತು, ಅವರಿನ್ನು ಪ್ರತಿ ಸಂಚಿಕೆಯಲ್ಲೂ ವಿಜೃಂಭಿಸಲಿದ್ದಾರೆ. ‘ಲಂಕೇಶ್ ಪತ್ರಿಕೆ’ಯ ಗುಜ್ಜಾರ್‌ರವರ ವ್ಯಂಗ್ಯಚಿತ್ರಗಳು ಈ ಸಂಚಿಕೆಯ ತೂಕ ಹೆಚ್ಚಿಸಿವೆಯಂತೆ.  ಎಸ್.ಎಸ್. ಆನಂದ್, ಶ್ರೀಧರ್, ಪಾಂಡುರಂಗರಾವ್, ಸತೀಶ್ ಶೃಂಗೇರಿ, ನಾಗನಾಥ್, ವೆಂಕಟ್ ಭಟ್, ವಿ.ಗೋಪಾಲ್ ಮೊದಲಾದ ಘಟಾನುಘಟಿ ವ್ಯಂಗ್ಯಚಿತ್ರಕಾರರು ತಮ್ಮ ಕೈಚಳಕ ತೋರಿದ್ದಾರಂತೆ.

‘ಈ ಟಿವಿ’ಯ ಮಾಜಿ, ಜಿ,ಎನ್,ಮೋಹನ್ ‘ಕೋಡಂಗಿಗೆ ಕೆಲಸವಿಲ್ಲ’ ಎಂಬ ಕವನದೊಂದಿಗೆ ನಗಿಸುತ್ತಾರಂತೆ. ಹಾಸ್ಯಕ್ಕೆ ಸಂಬಂಧಿಸಿದ ಎಲ್ಲರೂ ನಮಗೆ ಬೇಕು ಎನ್ನುವ ಸಂಪಾದಕರು ಮಾತನಾಡುವ ಗೊಂಬೆಯ ಖ್ಯಾತಿಯ ಶ್ರೀಕಾಂತರ ಸಂದರ್ಶನ ಮಾಡಿಸಿದ್ದಾರೆ. ಆದರೆ ಸಂದರ್ಶನ ಮಾಡಿದವರು ಯಾರು ಎಂಬುದು ಸಸ್ಪೆನ್ಸ್ ಅಂತೆ. ತುಳು ನಾಡಿನ ಸೂಪರ್ ಬಂಪರ್ ನಾಟಕಕಾರ ದೇವದಾಸ್ ಕಾಪಿಕಾಡ್‌ರನ್ನು ಪರಿಚಿಯಿಸಿದ್ದಾರೆ.

ಇನ್ನು ಡೊಂಕು ಅಂಕಣಗಳು ‘ವಾಕೋ’ದ ಘಮ ಘಮ ಖಾದ್ಯಗಳು. ಡುಂಡಿರಾಜರ ‘ಮಿನಿಗವನಗಳು’, ನರೇಂದ್ರ ರೈ ಅವರ ‘ಮಣ್ಣು ಮಸಿ’, ‘ತಿಂಗಳ ಆಸಾಮಿ’, ‘ಅಂತೆಕಂತೆಗಳ ಸಂತೆ’… ಹೀಗೆ ವಿಚಿತ್ರ ಭೋಜನಗಳಿಂದ ಸಮೃದ್ಧವಾಗಿದೆ ‘ವಾರೆ ಕೋರೆಯ’ ಪ್ರಾಯೋಗಿಕ ಸಂಚಿಕೆ.

ಕನ್ನಡದಲ್ಲಿನ ಒಂದು ಅದ್ಭುತ ಸಾಹಸವನ್ನ್ ಉಳಿಸುವುದಕ್ಕೆ, ಬೆಳೆಸುವುದಕ್ಕೆ ಕನ್ನಡಿಗರಿಗೆ ವಿಶಾಲ ಹೃದಯವಿದೆ, ಕನ್ನಡಿಗರಲ್ಲಿ ಅದಕ್ಕೆ ಬೇಕಾದ ಸಂಪತ್ತು ಇದೆ ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂಬುದು ನಗೆ ಸಾಮ್ರಾಟರ ವೀರಾವೇಷದ ಭಾಷಣದ ಸಾರ. ಕೂಡಲೇ ವಾರೆಕೋರೆಗೆ ಚಂದಾದಾರರಾಗಲು ಈ ಪುಟವನ್ನು ನೋಡಿ…

Tags: , , ,

14 Responses to “ಬಕ್ಕ ತಲೆಗೆ ಕೊನೆಗೂ ಸಿಕ್ಕಿದೆ ಮದ್ದು!”

  1. ಪ್ರದೀಪ್ November 21, 2008 at 9:40 am #

    ಹ್ಹೆ.. ಹ್ಹೆ.. ಚೆನ್ನಾಗಿದೆ! ;-)

  2. Nage samrat November 21, 2008 at 4:10 pm #

    ಯಾವುದು? ದೇವೇಗೌಡರ ತಲೆಯೇ? ಹೇರ್ ಸ್ಟೈಲೇ?

    ನಗೆ ಸಮ್ರಾಟ್

  3. shrungara November 22, 2008 at 9:25 am #

    ಗೆಳೆಯರೆ,

    ಈ ಬ್ಲಾಗ್ ಅಂಕಣ ತುಂಬಾ ಚೆನ್ನಾಗಿದೆ…
    ಅಂದ ಹಾಗೆ ಆ ಚಂದಾದಾರ ರಾಗಬೇಕಾದ ಹಿಂಬದಿಯ ಪುಟ ಸ್ಪಷ್ಟ್ವಾಗಿಲ್ಲ, ಅಡ್ರೆಸ್ ಸಿಗಲಿಲ್ಲ…ದಯವಿಟ್ಟು ನೀಡಿ…
    ಅಲ್ಲದೆ, ಕನ್ನಡದಲ್ಲಿ ಶೃಂಗಾರರಸ ಭರಿತ ವಯಸ್ಕರ ಕತೆಗಳಿಗಾಗಿ ನನ್ನ ಬ್ಲಾಗಿಗೆ ಬಂದು ರಿಲ್ಯಾಕ್ಸ್ ಮಾಡಿಕೊಳ್ಳಿ:
    http://shrungara.wordpress.com
    http://shrungara.blogspot.com

    ಇತಿ
    ನಿಮ್ಮ ಆತ್ಮೀಯ ಕತೆಗಾರ.

  4. ವಿಜಯರಾಜ್ ಕನ್ನಂತ November 24, 2008 at 11:13 am #

    maddu nangoo onmchooru kaLisoke kheli …gaudra taleuyashtallavadru…thumbaa koodlu uduri hogide :)

  5. Nage samrat November 25, 2008 at 11:54 pm #

    ನಮ್ಮ ಆತ್ಮೀಯ ಕತೆಗಾರರರೇ,
    ನಿಮ್ಮ ಕತೆಗಳನ್ನು ಶೃಂಗಾರ ಕಥೆಗಳೆಂದದ್ದಕ್ಕೆ ಶಬ್ಧಕೋಶ ಮುನಿಸಿಕೊಂಡಿದೆ. ಅಂದಹಾಗೆ ನಿಮ್ಮ ಈ ಕಥೆಗಳಿಗೆ ಶೀಘ್ರವೇ ಸಾಹಿತ್ಯ ಅಕಾಡೆಮಿ ಬಹುಮಾನ ಬರಲಿ ಎಂದು ಹಾರೈಸುತ್ತೇವೆ.

    ವಾರೆ ಕೋರೆಗೆ ಪ್ರಕಾಶ್ ವಿವರಕ್ಕಾಗಿ ಪ್ರಕಾಶ್ ಶೆಟ್ಟಿಯವರ ಬ್ಲಾಗಿಗೆ ಭೇಟಿ ನೀಡಬಹುದು…

    ನಗೆ ಸಾಮ್ರಾಟ್

  6. Nage samrat November 25, 2008 at 11:56 pm #

    ವಿಜಯರಾಜರೇ,
    ಬೆಂಗಳೂರಿನ ಮದ್ದಿನ ಏಜನ್ಸಿಯನ್ನು ನಾವೇ ತೆಗೆದುಕೊಳ್ಳುವ ಹುನ್ನಾರ ಮಾಡುತ್ತಿದ್ದೇವೆ. ಟ್ರಾಫಿಕ್ಕು, ತರಲೆ, ತಲೆ ನೋವು, ಕಿರಿಕಿರಿಗಳಿಂದ ತಲೆಯಲ್ಲಿ ಕೂದಲು ಕಳೆದುಕೊಂಡವರಿಗೆ ನೆರವಾಗುವ ಉದಾತ್ತ ಧ್ಯೇಯ ನಮ್ಮದು :)

    ನಗೆ ಸಾಮ್ರಾಟ್

  7. shrungara December 23, 2008 at 7:28 pm #

    ಸಾಮ್ರ್ರಾಟರೆ,

    ನಿಮ್ಮ ರಾಜ್ಯಕ್ಕೆ ನನ್ನ ಆಗಮನವನ್ನು ಅನುಮತಿಸಿದಕ್ಕೆ ಧನ್ಯವಾದ…
    ವಯಸ್ಕರಿಗಾಗಿ ಶೃಂಗಾರ ಕತೆಗಳು, ಬಿಸಿಬಿಸಿ ಕತೆಗಳು ಅಂತೆಲ್ಲ ನನ್ನ ಬ್ಲಾಗನ್ನು ವರ್ಣಿಸಿದರೂ ನೀವು ಅಪಹಾಸ್ಯ ಮಾಡುತ್ತೀರಲ್ಲಾ? ಇದು ತರವೆ, ಪ್ರಭುಗಳೆ?
    ..ಸಾಹಿತ್ಯ ಅಕಾಡೆಮಿ, ಪುರಸ್ಕಾರ ಅಂತೆಲ್ಲ ಬರೆಯುವವರು ಉಚಿತವಾಗಿ ಬ್ಲಾಗಿನಲ್ಲಿ ಬರೆಯುವುದಿಲ್ಲಾ..ಅದಕ್ಕೆ ನೀವು ಕೊಂಡು ಓದಬೇಕಾದೀತು…
    ಉಚಿತ ಮಜಾಗೆ ಬರೇ ಪ್ರತಿಕ್ರಿಯೆ ( ಪ್ಲಸ್ ಮತ್ತು ಮೈನಸ್)
    ಗಳೆ ನಮಗೆ ಸಂದ ಪುರಸ್ಕಾರ ಅಂದುಕೊಳ್ಳುವ ಬಡ, ಮಹದಾಸೆ ಇರದ ಲೇಖಕ ನಾನು…

    ಈವಿವರಣೆಯನ್ನು ಪ್ರಕಟಗೊಳಿಸಿ ಉಪಕಾರ ಮಾಡಿರೆಂದು ಭಿನ್ನಪಿಸುವ

    http://shrungara.blogspot.com
    http://shrungara.wordpress.com

    ಇತಿ ನಿಮ್ಮ ಆತ್ಮೀಯ ಕತೆಗಾರ

  8. Nage samrat December 23, 2008 at 7:58 pm #

    ಶೃಂಗಾರ ಕಥೆಗಾರರೇ,
    ನಗೆ ಸಾಮ್ರಾಟರಾದ ನಾವು ಅಪಹಾಸ್ಯವನ್ನು ಮಾಡದೆ ಪಿಎಚ್‌ಡಿ ಅಧ್ಯಯನ ಮಾಡಬೇಕೆನ್ನುವುದು ನಮಗೆ ಮಾಡುವ ಅವಮಾನ :)

    ನಿಮ್ಮ ಬ್ಲಾಗಿನಲ್ಲಿ ವಯಸ್ಕರಿಗಾಗಿ ಹಸಿ ಬಿಸಿ ಕಥೆಗಳು ಎಂಬ ಎಚ್ಚರಿಕೆ ಸಿಗರೇಟು ಪ್ಯಾಕಿನ ಮೇಲೆ ಶಾಸನ ವಿಧಿಸಿದ ಎಚ್ಚರಿಕೆ ಎಂಬಂತೆಯೇ ಇದೆ. ಪಾಪ ಸಿಗರೇಟು ಪ್ಯಾಕಿಗೇನು ಗೊತ್ತಾಗುತ್ತೆ ಅದನ್ನು ಸೇದುವವನು ವಯಸ್ಕನೋ ಇಲ್ಲವೇ ಅಪ್ರಾಪ್ತನೋ ಎಂದು.

    ಉಚಿತವಾಗಿ ಬರೆಯುವುದು ಬಹು ದೊಡ್ಡ ಸಾಧನೆ. ಇದಕ್ಕಾದರೂ ಪುರಸ್ಕಾರ ಬೇಕೇ ಬೇಕು ಬಿಡಿ… :)

    ಪ್ರೀತಿಯಿಂದ
    ನಗೆ ಸಾಮ್ರಾಟ್

  9. shrungara December 24, 2008 at 10:42 pm #

    ನಿಜ,ನಿಜ…,ಈಗ ನೀವು ಈ ಬ್ಲಾಗನ್ನು ನಗೆ ನಗಾರಿ ಎಂದು ಹೆಸರಿಸದಿದ್ದರೆ ಇದು ಹಾಸ್ಯಮಯ ವಾದ ಬ್ಲಾಗ್, ನಾವು ನಗುವುದನ್ನು ಅಪೇಕ್ಶಿಸಲಾಗಿದೆ ಎಂದು ಹೇಗೆ ಓದುಗರಿಗೆ ಅರಿವಾಗಬೇಕು…?ಹಾಗಿದೆ ನಿಮ್ಮ ವಾದಸರಣಿ..
    ಅದಿರಲಿ, ಉಚಿತ ಬರಹಗಾರರಿಗೆ ಪುರಸ್ಕಾರಗಲೇನಾದರೂ ಇದ್ದರೆ ನನಗೂ ಮೊದಲು ಬ್ಲಾಗ್ ಆರಂಭಿಸಿದ ನಿಮಗೇನಾದರೂ ದೊರಕಿದೆಯೆ?..ಅಥವಾ ಆ ನಿಮ್ಮದೂ ನನ್ನಂತೆ “ಪ್ರತಿಫಲಾಪೇಕ್ಷೆಯಿಲ್ಲದ” ನಿಸ್ವಾರ್ಥ ಸೇವೆಯೊ? :( )

    ~ಶೃಂಗಾರ :)

  10. Nage samrat December 25, 2008 at 10:55 am #

    ಶೃಂಗಾರ ಕಥೆಗಾರರು ವ್ಯಂಗ್ಯಾತ್ಮಕವಾಗಿ ಬರೆಯಬಾರದು.
    ನಮ್ಮ ಬ್ಲಾಗಿನಲ್ಲಿ ಎಲ್ಲಿಯೂ ಇದು ನಗುವವರಿಗೆ ಮಾತ್ರ ಎಂದು ಬರೆದುಕೊಂಡಿಲ್ಲ. ತಾವು ವಯಸ್ಕರಿಗೆ ಮಾತ್ರ ಎಂದು ಬರೆದುಕೊಂಡಂತೆ. ತಮ್ಮ ಕಥೆಗಳನ್ನು ಶೃಂಗಾರ ಕಥೆಗಳು ಎನ್ನುವುದು ಶೃಂಗಾರಕ್ಕೆ ಮಾಡುವ ಅವಮಾನ, ಅವನ್ನು ಸೆಕ್ಸ್ ಕಥೆಗಳು ಎಂದರೆ ಸರಿಯಾದ ಗೌರವ ಸಲ್ಲಿಸಿದ ಹಾಗೆ. ತಮ್ಮನ್ನೂ ಸೆಕ್ಸ್ ಕಥೆಗಾರ ಎನ್ನುವುದು ಸೂಕ್ತ ಎಂದು ಸಾಮ್ರಾಟರು ಭಾವಿಸುತ್ತಾರೆ.

    ನಾವು ಉಚಿತವಾಗಿ ಬರೆಯುತ್ತಿದ್ದೇವೆ ಎಂಬುದು ನಿಮ್ಮ ಭ್ರಮೆ. ನಾವು ಯಾವ ಕೆಲಸವನ್ನೂ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದಿಲ್ಲ. ತಮ್ಮದು >> “ಪ್ರತಿಫಲಾಪೇಕ್ಷೆಯಿಲ್ಲದ” ನಿಸ್ವಾರ್ಥ ಸೇವೆಯೊ? :( ) << ಎಂಬುದನ್ನು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು. ಇಂಥ ಜೋಕುಗಳನ್ನು ಹೆಚ್ಚು ಹೆಚ್ಚಾಗಿ ನಮ್ಮ ಬ್ಲಾಗಿನಲ್ಲಿ ನೀಡುತ್ತಿರಿ.

    ಅಂದಹಾಗೆ ನಮ್ಮ ಬ್ಲಾಗಿನ ಎಲ್ಲಾ ಕಥೆಗಳ ನಾಯಕರು ನಾವೇ ಆಗಿರುವತೆ ನಿಮ್ಮ ಕಥೆಗಳ ನಾಯಕರು ನೀವೇನಾ :)

    ನಗೆ ಸಾಮ್ರಾಟ್

  11. Hema December 26, 2008 at 4:29 pm #

    ರೀ ಮಿಸ್ಟರ್ ಶೃಂಗಾರ್,
    ನಿಮ್ಮ ಹೆಸರನ್ನ ವಲ್ಗರ್ ಅಂತ ಬದಲಿಸಿಕೊಳ್ಳಿ, ಕನ್ನಡ ಬ್ಲಾಗ್ ಲೋಕವನ್ನೇಕೆ ಹೊಲಸಿಡಿಸುತ್ತಿದ್ದೀರಿ? ನಿಮಗೆ ನಿಮ್ಮ ರೀತಿಯ ಶೃಂಗಾರದ ಬಗ್ಗೆ ಬರೆಯಲು ಅಷ್ಟೊಂದು ಮನಸ್ಸಿದ್ದರೆ, ನಿಮ್ಮ ಹೆಸರಿನಲ್ಲೇ ಒಂದು ಪುಸ್ತಕ ಬರೆದು ಬಿಡುಗಡೆ ಮಾಡಿಕೊಳ್ಳಿ, ನಿಮ್ಮ ಹಾಗೆ ಅಧಿಕ ’ಶೃಂಗಾರ’ ಆಸಕ್ತಿಯಿರುವವರು ಅದನ್ನೋದಿ ಖುಷಿಪಡುವರೇನೋ, ಹೀಗೆ ನೆಮ್ಮದಿಯಾಗಿರುವ ಬ್ಲಾಗ್ ಲೋಕಕ್ಕೆ ನಿಮ್ಮ ವಲ್ಗಾರಿಟಿಗಳನ್ನೆಲ್ಲಾ ತಂದು ತುಂಬಬೇಡಿ. ಸಾಮ್ರಾಟರೇ ಕ್ಷಮಿಸಿ ಶೃಂಗಾರರಿಗೆ ಕಮೆಂಟಿಸಲು ನಿಮ್ಮ ಬ್ಲಾಗನ್ನು ಬಳಸಿಕೊಂಡೆ, (ಶೃಂಗಾರ ಅದಿನ್ನೆಂತಾ ಬ್ಲಾಗ್ ಎಂದರೆ ಅಲ್ಲಿ ಕಮೆಂಟ್ ಮಾಡಲೂ ಅಸಹ್ಯವೆನಿಸಿತು. ನೀವು ತಪ್ಪುತಿಳಿಯುವುದಿಲ್ಲವೆಂದುಕೊಂಡಿರುವೆ.)

    ಹೇಮ

  12. Nage samrat December 26, 2008 at 7:37 pm #

    ಹೇಮಾರವರೇ,

    ಶೃಂಗಾರ ಕಥೆಗಾರರಿಗೆ ಇನ್ನೂ ಹೆಚ್ಚು ಇಂಥದ್ದೇ ಪುರಸ್ಕಾರ ಲಭ್ಯವಾಗಲಿ ಎಂಬ ಹಾರೈಕೆ ನಮ್ಮದು.
    ನೀವು ಕೊಟ್ಟ ಬಹುಮಾನದಂಥದ್ದನ್ನೇ ಹೆಚ್ಚೆಚ್ಚು ಮಂದಿ ನೀಡಿದರೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಬಹುದು ಎಂಬ ಹೋಪು.

    ನಗೆ ಸಾಮ್ರಾಟ್

  13. naviluagri December 27, 2008 at 10:41 am #

    ಮಾನ್ಯ ಶೃಂಗಾರ(?) ಕಥೆಗಾರರೇ..ಅಲ್ಲಿರುವ ಕೆಲವು ಪೋಸ್ಟುಗಳಿಗೆ ಒಪ್ಪುವ ಹಾಗೆ ನಿನ್ನ ಮೆನೆಯವರದ್ಯಾರಾದ್ರೂ ಪೋಟೋಗಳಿದ್ದರೆ ಹಾಕಿಕೋ…ಕನ್ನಡ ಬ್ಲಾಗ್ ಪ್ರಪಂಚವನ್ನೇ ಕುಲಗೆಡಿಸೋಕೆ ಬಂದಂತ ನೀಚ ಸಂಸ್ಕೃತಿಯ ಹೀನ ಕುಲದವನು ನೀನು ಅನ್ನಿಸುತ್ತಿದೆ..ನಾಚಿಕೆಯಾಗಬೇಕು ನಿನಗೆ.

  14. ದರಿದ್ರ ನಾರಾಯಣ ಬ.ಬ. May 22, 2010 at 10:50 pm #

    ಶೃಂಗಾರ ಕತೆಗಾರರ ಯೋಗ್ಯತೆ, ಅ-ಯೋಗ್ಯತೆಗಳು ಹೇಗೆಯೇ ಇರಲಿ, ನಗೆಸಾಮ್ರಾಟರಿಗೆ ಅನ್ ಏಕ ವರ್ಷಗಳ ನಂತರ ಅಯವತ್ತು ಸಾಸಿರ ವದೆಗಳು ಸಿಕ್ಕರೆ, ಶೃಂಗಾರ ತಾಣಕ್ಕೆ ಕದ್ದು ಮುಚ್ಚಿ, ಹಿಂ ಬಾಲಿಸಿ ಹೋದವರ ಸಂಖ್ಯೆ ಬ್ಲಾಗ್ಸ್ಪಾಟ್ ನಲ್ಲಿ ಇನ್ನೂರ ಏಳು ಸಾವಿರ ಮತ್ತು ವರ್ಡ್ ಪ್ರೆಸ್ ನಲ್ಲಿ ಇನ್ನೂರ ಅರವತ್ತು ಸಾವಿರ.

    ಕನ್ನಡಿಗರಿಗೆ ನಗೆಯ ಬಗೆಗಿಂತ ಕಾಮಾತುರವೇ ಜಾಸ್ತಿ ಎಂಬುದು ಖಚಿತವಾಯಿತು.

    ಇದೇನೂ ಹೊಸದಲ್ಲ. ಅಯವತ್ತು ವರುಷ ಹಿಂದೆಯೇ, “ಕೊರವಂಜಿ” ಯನ್ನು ಕಾಡಿಗೆ ಕಳಿಸುವಾಗ ಕನ್ನಡಿಗ ಉದ್ಗರಿಸಿದ್ದನಂತೆ: ” ನೀನಿದ್ದದ್ದೆ ಗೊತ್ತಾಗಲಿಲ್ಲವಲ್ಲೇ!”

    ಹಾಗೆ, ನಗೆಗೊಂದು ರಾಜ್ಯವುಂಟು, ಅದಕ್ಕೊಬ್ಬ ಸಾಮ್ರಾಟರುಂಟು ಎಂಬುದರ ಕಲ್ಪನೆಯೇ ಕನ್ನಡಿಗರಿಗೆ ಗೊತ್ತಿಲ್ಲವೇನೋ!

    ಬೇಸರದಲ್ಲೂ ಸಂತಸವೆಂದರೆ, ಕನ್ನಡಿಗರ ಅತೀವ ಕಾಮಾಸಕ್ತಿ ಅವರು ಷಂಡರಲ್ಲ ವೆನ್ನುವುದನ್ನು ಸಾಬೀತು ಮಾಡುತ್ತದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 38 other followers