ನಗು ಸಹಜವೋ, ಗಾಂಭೀರ್ಯ ಸಹಜವೋ?
ಇದೊಂದು ಸರಳವಾದ ಪ್ರಶ್ನೆ. ಸಣ್ಣಸಣ್ಣದಕ್ಕೂ ನಗುತ್ತಾ, ಮುಸಿಮುಸಿ ಎಂದು ಹಲ್ಕಿರಿಯುತ್ತಾ, ವಿನಾಕಾರಣ ನಗುವ ಮಕ್ಕಳು ಕೊಂಚ ಬೆಳೆಯುತ್ತಿದ್ದಂತೆಯೇ ಅವರಿಗೆ ದೊಡ್ಡವರು ‘ಸ್ವಲ್ಪ ಗಂಭೀರವಾಗಿರುವುದನ್ನು ಕಲಿತುಕೋ’ ಎಂದು ಉಪದೇಶಿಸತೊಡಗುತ್ತಾರೆ. ಸಣ್ಣ ವಯಸ್ಸಿನಲ್ಲೇ ಮುಖದ ಮೇಲಿನ ತುಂಟಾಟಗಳಿಗೆಲ್ಲಾ ಟಾಟಾ ಹೇಳಿ ಅಲ್ಲಿ ದೊಡ್ಡವರ ಗಾಂಭೀರ್ಯಕ್ಕೆ ವಾಸ್ತವ್ಯ ಕಲ್ಪಿಸಿದ ಹುಡುಗ ಇಡೀ ‘ಹುಡುಗು ಕುಲ’ದ ಆದರ್ಶವಾಗುತ್ತಾನೆ.
ಮೂಗಿನ ಕೆಳಗೆ ಮೀಸೆ ಮೂಡಿ, ಅದರ ಗಡಿಯಾಚೆಗೆ ಹುಲುಸಾಗಿ ಗಡ್ಡ ಹರವಿಕೊಂಡು ಬೆಳೆದು ನೆತ್ತಿ ವಿಶಾಲವಾಗುತ್ತಾ, ಕಪ್ಪು ಕೂದಲ ರಾಶಿಯ ಮಧ್ಯೆ ಬೆಳ್ಳಿಯ ಗೆರೆಗಳು ಕಾಣಿಸಿಕೊಳ್ಳುತ್ತಿದ್ದ ಹಾಗೆ ವೈದ್ಯನೆಂಬ ನಾರಾಯಣ ನೆನಪಾಗುತ್ತಾನೆ. ವೈದ್ಯ ತನ್ನ ಫೀಸನ್ನು ವಸೂಲು ಮಾಡಿಕೊಂಡು, ‘ತೀರಾ ಇಷ್ಟು ಗಂಭೀರವಾಗಿರಬೇಡಿ. ಸ್ವಲ್ಪ ನಗುನಗುತ್ತಾ ಇರಿ. ನಿಮ್ಮ ರಕ್ತದೊತ್ತಡ ಹೆಚ್ಚಾಗಿದೆ ಎನ್ನುತ್ತಾನೆ’ ನಗುವುದಕ್ಕೆ ಪ್ರಯತ್ನ ಶುರುವಾಗುತ್ತದೆ.
ಗಾಂಭೀರ್ಯ ಸಹಜವಾದದ್ದಾ ಇಲ್ಲವೇ ನಗು ಸಹಜವಾದದ್ದಾ? ಗಾಂಭೀರ್ಯ ಸಹಜವಾದದ್ದೇ ಆದರೆ ಮಕ್ಕಳು ನಮ್ಮ ನಗೆಯನ್ನು ಹೂತುಹಾಕಿ ಅದರ ಮೇಲೇಕೆ ಗಾಂಭೀರ್ಯದ ಮಹಲನ್ನು ಕಟ್ಟಬೇಕು? ನಗು ಸಹಜವೆನ್ನುವುದೇ ಆದಲ್ಲಿ ನಗಲು ಪ್ರಯತ್ನಿಸುವುದು ಏತಕ್ಕೆ?
ನಮ್ಮ ದೇಹವನ್ನೇ ಗಮನಿಸಿ. ಅಲರ್ಟ್ ಆಗಿರುವುದು ಅವುಗಳ ಸಹಜವಾದ ಲಕ್ಷಣವಲ್ಲ. ಮುಷ್ಠಿ ಬಿಗಿ ಹಿಡಿದು ಎಷ್ಟು ಕಾಲ ಕೂರಲಾದೀತು? ಅವುಗಳ ಸಹಜ ಸ್ಥಿತಿ ಸಡಿಲವಾಗಿರುವುದು. ಆದರೆ ಆ ಸಡಿಲತೆ ಆಲಸ್ಯವಾಗಿ ತಿರುಗಬಹುದು. ಸಡಿಲತೆಯಲ್ಲಿ ಆಲಸ್ಯದ ಹೊಗೆ ಕಾಣುತ್ತಿದ್ದ ಹಾಗೆ ಬಿಗಿತ ತಂದು ಕೊಳ್ಳುತ್ತಾ, ಬಿಗಿತ ಅತಿಯಾಯಿತು ಎನ್ನುತ್ತಿದ್ದ ಹಾಗೆ ಸಡಿಲತೆಗೆ ಬಿಟ್ಟರೆ ಸ್ನಾಯುಗಳು ಬಲಿಷ್ಠವಾಗುತ್ತವೆ. ಹೀಗೆ ಏಕೆ ಇರಬಾರದು ನಮ್ಮ ಬದುಕು?
Posted by ಬಾಲ on August 22, 2008 at 2:50 am
ನಗೆ ಸಾಮ್ರಾಟರೇ,
ನಿಮ್ಮಿಂದ ಇಡೀ ರಾಷ್ಟ್ರಕ್ಕೇ ಅನ್ಯಾಯವಾಗಿದೆ!!??
ಅಲ್ಲಾ ಇಷ್ಟು ಲೇಟಾಗಾ ನೀವು ಈ ಲೇಖನವನ್ನು ಬರೆಯುವುದು??
ನೀವು ಹೇಳಿರುವ ಸ್ನಾಯುಗಳನ್ನು ಬಲಿಷ್ಟವಾಗಿಸುವ ವಿಧಾನವನ್ನ ನಮ್ಮ ಒಲಂಪಿಕ್ಸ್ ಆಟಗಾರರಿಗೆ ಹೇಳಿಕೊಟ್ಟಿದ್ದರೆ ನಾವು ಮೆಡಲ್ ಗಳನ್ನ ಗೋಣೀಚೀಲದಲ್ಲಿ ತುಂಬಿ ತರಬಹುದಿತ್ತು ಅಲ್ಲವೇ?
ಹೊಗಲೀ ಬಿಡಿ, ಈಗ ಗಾಂಭೀರ್ಯವಾಗಿ ಹೇಳುತಿದ್ದೇನೆ (ನಿಮ್ಮ ಅದೃಷ್ಟ ನನ್ನ ಗಾಂಭೀರ್ಯವಾದ ಮೂತಿಯನ್ನು ನೀವು ನೋಡಬೇಕಾಗಿಲ್ಲ, ನೋಡಿದ್ದರೆ ಬಿದ್ದು ಬಿದ್ದು ನಗ್ತಾ ಇರ್ತಿದ್ರಿ), ನಗುವೇ ಸಹಜ ಎಂಬುದಕ್ಕೆ ನನ್ನ ಮತ!
-ಬಾಲ
Posted by Nage samrat on August 22, 2008 at 7:25 am
ಹೌದಲ್ಲವೇ? ಈ ರಹಸ್ಯವನ್ನು ಇನ್ನೂ ಮೊದಲೇ ನಾವು ಪ್ರಕಟಿಸಿಬಿಡಬೇಕಿತ್ತು. ಆಲಿಂಪಿಕ್ಸಿನಲ್ಲಿ ಇನ್ನೂ ಒಂದಷ್ಟು ಚೆನ್ನ, ಬೆಳ್ಳಿ ಬರ್ತಿತ್ತು. ಅದೇನೂ ಬರದಿದ್ದರೂ ನಮ್ಮ ಆಟಗಾರರಿಗೆ ಒಂದಿಷ್ಟು ಖುಶಿಯಾದ್ರೂ ಸಿಗುತ್ತಿತ್ತು. ನಮ್ಮ ಅಪರಾಧವನ್ನು ಮನ್ನಿಸಿ, ಮುಂದಿನ ಸಲ ಆವಶ್ಯಕವಾಗಿ ಮೊದಲೇ ಪ್ರಕಟಿಸುತ್ತೇವೆ (ಅಲ್ಲಿಯವರೆಗೆ ನಾವು ಬದುಕಿರುತ್ತೇವಾ ಅಂತ ಸಂಶಯವಲ್ಲ, ಭಾರತದ ಆಲಿಂಪಿಕ್ಸ್ ಅಕಾಡೆಮಿ ಬದುಕಿರುತ್ತದಾ ಎಂಬ ಸಂಶಯ!)
ನಿಮ್ಮ ಗಂಭೀರ ಮುಖವನ್ನು ನೋಡುವ ಅವಕಾಶದಿಂದ ನಮ್ಮನ್ನು ವಂಚಿಸುವುದಕ್ಕಾಗಿ ನಿಮ್ಮ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂದು ನಮ್ಮ ವಿದೂಷಕರ ಮೀಟಿಂಗಿನಲ್ಲಿ ತೀರ್ಮಾನಿಸಲಾಗುವುದು!
nage saamrat
Posted by prasad on August 23, 2008 at 11:58 am
nage samrata gurugale,
mathe thamma lekahanakke sharanu sharanayya.
“naguve jeevana sakashathkara” vembo maha mantramam updeshisi khyathiyam peththa thamage jayavagali.
dhanyavadagalondige,
Prasad
Posted by Nage samrat on August 30, 2008 at 11:36 am
ಮರವೇನೋ ದೊಡ್ಡದಾಗಿಯೇ ಇದೆ. ಆದರೆ ನನಗಂಥಾ ದೊಡ್ಡ ಮರ ಏರಿ ಅಭ್ಯಾಸವಿಲ್ಲ ಬಿಡಿ. ನಾವಿಲ್ಲೇ ಕಾಂಗ್ರೆಸ್ ಗಿಡವೋ, ತುಂಬೇ ಗಿಡವನ್ನೋ ನೋಡಿಕೊಳ್ಳುತ್ತೇವೆ.
ಧನ್ಯವಾದಗಳು
ನಗೆಸಾಮ್ರಾಟ್