ನಗೆ ನಗಾರಿ ಡಾಟ್ ಕಾಮ್

ಬ್ಲಾಗ್ ಬೀಟ್ 12

August 1, 2008 · Leave a Comment

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

ಮಜಾವಾಣಿ

ತಮ್ಮ ವೃತ್ತಿಪ್ರರತೆ ಹಾಗೂ ‘ವಸ್ತು’ನಿಷ್ಠತೆಯಿಂದ ಹೆಸರುವಾಸಿಯಾಗುತ್ತಿರುವ ‘ಮಜಾವಾಣಿ’ ತಮ್ಮ ಪತ್ರಿಕೆಯಲ್ಲಿನ ಉತ್ಕೃಷ್ಟ ಗುಣಮಟ್ಟದ ‘ಛಾಯಾ’ಚಿತ್ರಗಳಿಂದಾಗಿ ತನ್ನ ‘ಸಹೋದರಿ’ ಪತ್ರಿಕೆಗೇ ಮುಳುವಾಗುತ್ತಿರುವ ಸುದ್ದಿ ಸಾಮ್ರಾಟರನ್ನು ತಲುಪಿದೆ.
ಇದಕ್ಕೆ ಕಾರಣ, ‘ದಿ ಗೋಬಿ ಮಂಚೂರಿಯನ್ ಕ್ಯಾಂಡಿಡೇಟ್’ ಎಂಬ ಆಸ್ಕರ್‌ಗೆ ‘ಸ್ಕರ್ಟ್’ಲಿಸ್ಟ್ ಆಗಿರುವ ಚಿತ್ರದ ಪ್ರೀಮಿಯರ್ ಶೋಗೆ ಯಾವ ಪತ್ರಿಕೆಯ ಸೊಂಪಾದಕರನ್ನೂ ಆಹ್ವಾನಿಸದೆ ಕೇವಲ ವಾರ್ತಾ ವಿದೂಷಕರನ್ನು ಆಹ್ವಾನಿಸಿದ್ದು. ಮಜಾವಾಣಿಯಲ್ಲಿ ಮಾತ್ರ ಆ ಸಿನೆಮಾ ವಿಮರ್ಶೆ ವಿಮರ್ಶಾ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಬೊಗಳೆ ರಗಳೆ

ಎಲ್ಲೆಲ್ಲೋ ಬಾಂಬು ಸಿಡಿಯುತ್ತಿವೆ. ಬೊಗಳೆ ಬ್ಯೂರೋ ದೇಶದ ಬಗೆಗಿನ ನೈಜ ಕಾಳಜಿಯಿಂದ ಸತ್ಯದರ್ಶನದ ವರದಿಗಳನ್ನು ಮಾಡುತ್ತಿದೆ. ಇತ್ತೀಚಿನ ವ’ರದ್ದಿ’ಯ ಪ್ರಕಾರ ಅಖಿಲ ಭಾರತ ಓಟು ಓಲೈಕೆ ಪಕ್ಷ ಪೋಲೀಸ್ ನಿಷ್ಕ್ರಿಯ ದಳ ಸ್ಥಾಪನೆಗೆ ಆಲೋಚಿಸುತ್ತಿರುವ ಭಯಾನಕ ಸುದ್ದಿ ಸ್ಫೋಟಗೊಂಡಿದೆ.
ದೇಶದ ಬೇರೆ ಬೇರೆ ಪ್ರಮುಖರು ಬಾಂಬ್ ಸ್ಫೋಟದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಬೇರಾವ ಪತ್ರಿಕೆಯೂ ಪ್ರಕಟಿಸಿದ ರೀತಿಯಲ್ಲಿ ಬೊಗಳೆ ವರದಿ ಮಾಡಿದೆ.

ಪ್ರಕಾಶ್ ಶೆಟ್ಟಿ ಪಂಚ್

ನಮ್ಮದು ಬಾಂಬ್ ನಿಷ್ಕ್ರಿಯ ದಳವೋ ಅಥವಾ ಕೇವಲ ನಿಷ್ಕ್ರಿಯ ದಳವೋ? ಯಾಕೆ ಸಂಶಯ ಅಂತೀರಾ? ಚಮ್ಮಾರನೊಬ್ಬ ಬರಿಗೈಲಿ ನಿಷ್ಕ್ರಿಯಗೊಳಿಸಿದ್ದ ಬಾಂಬನ್ನೇ ಮತ್ತೆ ನಿಷ್ಕ್ರಿಯ ಗೊಳಿಸಲಿಕ್ಕೆ ನಮ್ಮ ದಳದ ಹದಿಮೂರು ಮಂದಿ ನಲವತ್ತು ನಿಮಿಷ ಮಣ್ಣು ಹೊತ್ತರಂತೆ!

ಪಂಚ್ ಲೈನ್

ಬಿಜೆಪಿಯವರು ತಮ್ಮನ್ನು ತಾವು ಶಿಸ್ತು, ತತ್ವ ಸಿದ್ಧಾಂತದ ಪಕ್ಷ ಎಂದು ಕರೆದುಕೊಳ್ಳುತ್ತಲೇ ಅವನ್ನೆಲ್ಲಾ ಗಾಳಿಗೆ ತೂರುತ್ತಿರುವುದರ ಹಿಂದಿನ ಮರ್ಮವೇನು? ಉತ್ತರಿಸಿದ್ದಾರೆ ಪಂಚ್ ಲೈನ್ ಗಣೇಶ್.

ಸುದ್ದಿ ಕ್ಯಾತ

ಇದೊಂದು ಆಘಾತದ ಹಾಗೂ ನಿರಾಶೆಯ ಸುದ್ದಿ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಭಾರತದ ಸಂಸತ್ತನ್ನು ಹಿಂದಿಕ್ಕಿ ಮುಂದೆ ನಡೆದು ಬಿಟ್ಟಿದೆ. ನಮ್ಮ ಸಂಸದರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಏನಕ್ಕೆ ಅಂತೀರಾ? ಸುದ್ದಿ ಕ್ಯಾತನ ಡೈಲಿ ಬೀಟ್ ನೋಡಿ…

Categories: ಬ್ಲಾಗ್ ಬೀಟ್
Tagged: , , , , , , , , , ,

0 responses so far ↓

  • There are no comments yet...Kick things off by filling out the form below.

Leave a Comment