ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
………………………………………………………………
ಇವರನ್ನು ನೂರು ದನಿಯ ಮನುಷ್ಯ ಎಂದೇ ಕರೆಯಬಹುದು. ಧ್ವನಿಯಲ್ಲೇ ನೂರಾರು ವ್ಯಕ್ತಿತ್ವಗಳನ್ನು ಆವಾಹಿಸಿಕೊಳ್ಳುವ ಇವರನ್ನು ಸಿಂಪಲ್ಲಾಗಿ ಹೇಳಬೇಕೆಂದರೆ ಮಿಮಿಕ್ರಿ ಕಲಾವಿದ ಎನ್ನ ಬಹುದು. ಹೌದು, ಕನ್ನಡದಲ್ಲಿ ಮಿಮಿಕ್ರಿ ಎಂಬ ಪದಕ್ಕೆ ಪರ್ಯಾಯವಾಗಿರುವವರು ಮಿಮಿಕ್ರಿ ದಯಾನಂದ್.
ಮಿಮಿಕ್ರಿ ಕಲಾವಿದರೆಂಬುವವರು ಹೆಸರಾಂತ ನಾಯಕರ ಅಗ್ಗದ ಅನುಕರಣೆಯಲ್ಲೇ ತೊಡಗಿಕೊಂಡು ಮನರಂಜನೆಯ ಹೆಸರಿನಲ್ಲಿ ಮನೋವೇದನೆಯನ್ನು ಕೊಡುತ್ತಾ, ಮಿನಿ-ಕ್ರಿಮಿಗಳಾಗಿರುವುದು ಟಿವಿಗಳಲ್ಲಿ, ಸ್ಟೇಜ್ ಶೋಗಳಲ್ಲಿ ದಿನೇ ದಿನೇ ಸಾಬೀತಾಗುತ್ತಿದೆ. ಮಿಮಿಕ್ರಿ ಎಂಬುದು ಕೇವಲ ಅನುಕರಣೆಯಲ್ಲ ಅದೂ ಸಹ ಒಂದು ಕಲೆ ಎಂಬುದನ್ನು ದಯಾನಂದ್ ತುಂಬಾ ಬೇಗ ಮನದಟ್ಟು ಮಾಡಿಕೊಂಡಿದ್ದಾರೆ. ಅನುಕರಣೆ ಮಾಡುತ್ತಲೇ ಮಾಡುತ್ತಲೇ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುವ ಅನೇಕ ಕಲಾವಿದರು ಗಮನಿಸಬೇಕಾದ ಅಂಶವಿದು.
ಹಾಸ್ಯಕ್ಕೆ ಮಿಮಿಕ್ರಿ ಬಹುದೊಡ್ಡ ಸಲಕರಣೆಯಾಗಿ ಬಳಕೆಯಾಗಬಲ್ಲದು ಎಂಬುದಕ್ಕೆ ದಯಾನಂದ್ ನಡೆಸಿಕೊಟ್ಟಿರುವ ಇದುವರೆಗಿನ ೬೮೦ ಟಿವಿ ಶೋಗಳು, ೨೭೦ ಲೈವ್ ಪ್ರದರ್ಶನಗಳೇ ಸಾಕ್ಷಿ. ಇಂಥ ವ್ಯಕ್ತಿಯೊಬ್ಬರ ಪರಿಚಯ ಹಾಗೂ ಪ್ರೊಫೈಲ್ ಅಂತರ್ಜಾಲದಲ್ಲಿ ಲಭ್ಯವಿದೆ. ಅವರದೇ ಆದ ಬ್ಲಾಗ್ ಇದೆ, ಆದರೆ ಅದು ಅಪಡೇಟ್ ಆಗಿಲ್ಲವಷ್ಟೇ. ಮಾಸ್ಟರ್ ಹಿರಣ್ಣಯ್ಯನವರ ಪ್ರೊಫೈಲ್‌ನ್ನು ಹಿಂದೆ ಪರಿಚಯಿಸಿದ್ದೆವು. ಈ ಬಾರಿ ದಯಾನಂದ್‌ಗೆ ದಾರಿಬಿಡಿ!
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

0 responses so far ↓
There are no comments yet...Kick things off by filling out the form below.