ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.………………………………………………………………
ಪಂಚ್ ಲೈನ್
‘ಪುತ್ರ’ಕರ್ತರಾಗಿಯೂ, ‘ಪತ್ರ’ಕರ್ತರಾಗಿಯೂ ಖ್ಯಾತರಾದ, ರಾಜಕೀಯ ಮೇಧಾವಿ ಎಂದು ಕುಖ್ಯಾತರಾಗಿರುವ ಶ್ರೀಯುತ ದೇವೇಗೌಡರು ಆತ್ಮಕತೆಯನ್ನು ಬರೆದರೆ ಅದಕ್ಕೆ ಹೆಸರನ್ನೇನಿಡಬಹುದು ಎಂದು ಕೇಳುತ್ತಾರೆ ಪಂಚ್ ಲೈನ್ ಗಣೇಶ್.
ಪ್ರಕಾಶ್ ಶೆಟ್ಟಿ ಪಂಚ್
ರಾಜ್ಯದ ಕುದುರೆ ವ್ಯಾಪಾರ, ಕೇಂದ್ರದ ಕೋಣದ ವ್ಯಾಪಾರ, ಪಾಕಿಸ್ತಾನದ ಅವಾಂತರ ಎಲ್ಲವೂ ಶೆಟ್ಟಿಯವರ ಕುಂಚದ ಪಂಚಿನಲ್ಲಿ ಅರಳಿರುವ ಮೋಡಿಯನ್ನು ಓದೇ ಸವಿಯಬೇಕು…
ಬೊಗಳೆ
ಮಿತ್ರರೊಂದಿಗೆ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದವರಲ್ಲಿ ಒಬ್ಬ ವ್ಯಕ್ತಿ ದಿಢೀರನೇ ಸಂಸಾರ ಸಾಗರಕ್ಕೆ ಧುಮುಕಿದ ಆತಂಕಕಾರಿ ಘಟನೆಯೊಂದನ್ನು ಬೊಗಳೆ ವರದಿ ಮಾಡಿದೆ.
ಕೇಂದ್ರದಲ್ಲಿ some- ಸದರ ಸೆಳೆಯಲು, ಗಾಳ ಹಾಕಲು ಗಣಿ ಧೂಳಿನ ಧಣಿಗಳಿಗೆ ಬೇಡಿಕೆ ಬಂದಿರುವುದನ್ನು ಬೊಗಳಿದ್ದಾರೆ. ಈ ಮಧ್ಯೆ ಅಸತ್ಯ ಅನ್ವೇಶಿಗಳು ‘ಬ್ಲಾಗ್’ ಎಂಬ ಆಂಗ್ಲಪದಕ್ಕೆ ಕನ್ನಡದ ಪದವನ್ನು ಸೂಚಿಸಿ ಎಂದು ಅನ್ವೇಷಣೆಗೆ ತೊಡಗಿದ್ದಾರೆ. ಬೊಗಳೆ ಎಂಬುದೇ ಸೂಕ್ತವಾದದ್ದು ಎಂಬುದು ಸಾಮ್ರಾಟರ ಅಭಿಪ್ರಾಯ.
ಸುದ್ದಿ ಕ್ಯಾತ
ಕ್ಯಾತೆ ತೆಗೆಯಲು ಸುದ್ದಿಯನ್ನು ಹುಡುಕಿಕೊಂಡು ಹೊರಟ ಕ್ಯಾತ ಜಗತ್ತಿನ ವಿವಿಧ ದೇಶಗಳ ಜನರು ಸ್ನಾನ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ‘ಸ್ನಾನ ಮಾಡುವವರು’ ನಡೆಸಿರುವ ಅಧ್ಯಯನವನ್ನು ವರದಿ ಮಾಡಿದ್ದಾನೆ.
ಬ್ರಿಟೀಷರು ‘ಕೊಳಕಾಗಿ’ ಸ್ನಾನ ಮಾಡಿ ಸ್ವಚ್ಛವಾಗುತ್ತಾರಂತೆ. ಭಾರತೀಯರಂತೂ ಸ್ನಾನದ ಗೋಜಿಗೇ ಹೋಗುವುದಿಲ್ಲ. ವರದಿ ಓದಿ..
0 responses so far ↓
There are no comments yet...Kick things off by filling out the form below.