ನಗೆ ಸಾಮ್ರಾಟರ ತದ್ರೂಪು ಭಾರಿ ಹುರುಪಿನಲ್ಲಿದ್ದಾನೆ. ಮಾಧ್ಯಮ ಪ್ರತಿನಿಧಿಯೊಂದಿಗೆ ಮಾಡಿದ ಕಳೆದ ಸಂದರ್ಶನವನ್ನು ಕಂಡು ಮನಸಾರೆ ಕೊಂಡಾಡಿದ ನಗೆ ಸಾಮ್ರಾಟರು ಹೀಗೇ ಮುಂದುವರೆಯಲು ಸೂಚಿಸಿರುವುದು ಆತನಿಗೆ ನೆಲದ ಮೇಲೆ ಕಾಲು ನಿಲ್ಲದ ಹಾಗೆ ಮಾಡಿದೆ.
ಮುಂದಿನ ಸಂಚಿಕೆಗಾಗಿ ಈತ ಯುವ ಬ್ಲಾಗಿಗನೊಬ್ಬನನ್ನು ಸಂದರ್ಶಿಸಿ ಬಂದಿದ್ದಾನೆ. ಬ್ಲಾಗು ಎಂಬ ಅಮೂರ್ತ ಜಗತ್ತು ನಡೆಯುವುದು ಹೇಗೆ? ಬ್ಲಾಗುಗಳಿಗೆ ಬರೆಯುವುದು ಹೇಗೆ? ನೂರಾರು ಪ್ರತಿಕ್ರಿಯೆ ಪಡೆಯುವುದರ ಹಿಂದಿನ ರಹಸ್ಯವೇನು? ಬ್ಲಾಗು ಜಗತ್ತಿನ ಅಂತರಾಳದ ಗುಸು ಗುಸು ಪಿಸಪಿಸ ಏನು? ಎಂದೆಲ್ಲಾ ರೋಚಕವಾದ ಪ್ರಶ್ನೆಗಳೊಂದಿಗೆ ಸಂದರ್ಶನ ತಯಾರಾಗಿದೆ.
ಇನ್ನೇನಿದ್ದರೂ ಮುಂದಿನ ಸಂಚಿಕೆಗೆ ಕಾಯುವ ಕೆಲಸವನ್ನು ನೀವು ಮಾಡಬಹುದು, ಬೇರೇನೂ ಇಲ್ಲದಿದ್ದರೆ!

2 responses so far ↓
Tina // July 10, 2008 at 10:02 am |
ನಗೆ ಸಾಮ್ರಾಟರೆ, ನೀವು ಉದ್ದೇಶಪೂರ್ವಕವಾಗಿ ’ಯುವ ಬ್ಲಾಗಿಗ’ರ ಲಿಂಕನ್ನ ಸರಿಯಾಗಿ ಕೊಟ್ಟಿಲ್ಲವೊ ಅಥವಾ ನಿಜವಾಗಿ ತಪ್ಪಾಗಿದೆಯೊ ತಿಳಿಯದೆ ತೊಳಲಾಟ ಶುರುವಾಗಿದೆ. ಆಮೇಲೆ “ಬ್ಲಾಗು ಎಂಬ ಅಮೂರ್ತ ಜಗತ್ತು ನಡೆಯುವುದು ಹೇಗೆ? ಬ್ಲಾಗುಗಳಿಗೆ ಬರೆಯುವುದು ಹೇಗೆ? ನೂರಾರು ಪ್ರತಿಕ್ರಿಯೆ ಪಡೆಯುವುದರ ಹಿಂದಿನ ರಹಸ್ಯವೇನು? ಬ್ಲಾಗು ಜಗತ್ತಿನ ಅಂತರಾಳದ ಗುಸು ಗುಸು ಪಿಸಪಿಸ ಏನು?” – ಇಂಥ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತಾವು ಮಾಹಿತಿ ಸಂಗ್ರಹ ಮಾಡುತ್ತಿರುವುದು ನಮ್ಮಂಥ ಹ್ಯಾಪುಬ್ಲಾಗಿಗರಿಗೆ ಅಪೂರ್ವ ಸಂತಸ ನೀಡಿದೆ. ನಗೆಸಾಮ್ರಾಟರಿಗೆ ಜಯವಾಗಲಿ!!
Nage samrat // July 10, 2008 at 11:54 am |
ಹೀಗೆ ಲಿಂಕಿನ ಕೊಂಡಿಯ ಸಮಸ್ಯೆಯನ್ನು ಅಧ್ವಾನಿಗೊಳಿಸಿ ಓದುಗರನ್ನು ತೊಳಲಾಟಕ್ಕೆ ನೂಕುವುದೂ ಒಂದು ಯಶಸ್ಸಿನ ದಾರಿ ಎಂದು ಯುವ ಬ್ಲಾಗಿಗರು ನಮಗೆ ತಿಳಿಸಿಕೊಟ್ಟಿದ್ದಾರೆ!
ಸಾಮ್ರಾಟರ ಅಪ್ರಬುದ್ಧ ಆಲೋಪವನ್ನು ಆಧ್ಯಾತ್ಮಿಕ ವಿಷಯವಾಗಿಸಿದ ನಿಮ್ಮಂಥ ಟಾಪು ಬ್ಲಾಗಿಗರಿಗೆ ಈ ಹ್ಯಾಪು ಬ್ಲಾಗಿಗನ ಕ್ಯಾಪು ಆಫ್!
ನಗೆ ಸಾಮ್ರಾಟ್